ಅಕ್ರಮ ನಿರ್ಮಾಣದಲ್ಲಿ ಅಧಿಕಾರಿಗಳು ಭಾಗಿ


Team Udayavani, Dec 21, 2017, 10:07 AM IST

blore-1.jpg

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಅಪಾರ್ಟ್‌ಮೆಂಟ್‌ ಹಾಗೂ ವಿಲ್ಲಾಗಳ ಪತ್ತೆಗೆ ಮುಂದಾದ ನಗರ ಯೋಜನೆ ಸ್ಥಾಯಿ ಸಮಿತಿ, ಅನಧಿಕೃತ ಕಟ್ಟಡಗಳ ನಿರ್ಮಾಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಲು ಆಯುಕ್ತರಿಗೆ ಶಿಫಾರಸ್ಸು ಮಾಡಲು ತೀರ್ಮಾನಿಸಿದೆ.

ನಗರದಲ್ಲಿ ನೂರಾರು ಅನಧಿಕೃತ ಅಪಾರ್ಟ್‌ಮೆಂಟ್‌ ನಿರ್ಮಾಣವಾಗುತ್ತಿದ್ದು ಪಾಲಿಕೆಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಕಳೆದ ಬಿಬಿಎಂಪಿ ಕೌನ್ಸಿಲ್‌ ಸಭೆ ಕೇಳಿಬಂದ ಹಿನ್ನೆಲೆಯಲ್ಲಿ ಬುಧವಾರ ಬೊಮ್ಮನಹಳ್ಳಿ ವಲಯದಲ್ಲಿ ಕಾರ್ಯಾಚರಣೆ ನಡೆಸಿದ ಸ್ಥಾಯಿ ಸಮಿತಿ ಅನಧಿಕೃತ ಕಟ್ಟಡಗಳನ್ನು ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಬೊಮ್ಮನಹಳ್ಳಿ ವಲಯದ ಕೂಡ್ಲು ಗೇಟ್‌ ಬಳಿ ಝೆಸ್‌(ಝಡ್‌ಇಯುಎಸ್‌) ಸಂಸ್ಥೆ ಕೆರೆಯ ಬಫ‌ರ್‌ ಜೋನ್‌ ಒತ್ತುವರಿ ಮಾಡಿಕೊಂಡು ಕೋಟ್ಯಂತರ ಮೌಲ್ಯದ ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿದೆ. ಅಲ್ಲಿಗೆ ಭೇಟಿ ನೀಡಿದ ಸ್ಥಾಯಿ ಸಮಿತಿ ಕಾನೂನಿ ಪ್ರಕಾರ 30 ಮೀಟರ್‌ ಬಫ‌ರ್‌ ಜೋನ್‌ ಕಾಯ್ದುಕೊಳ್ಳ ಬೇಕೆಂಬ ನಿಮಯವಿದ್ದರೂ ಸಂಸ್ಥೆಯವರು ಕೇವಲ 2-3 ಮೀಟರ್‌ ಬಿಟ್ಟು ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿದ್ದಾರೆ. ಜತೆಗೆ ಪಾಲಿಕೆಯಿಂದ ಸ್ವಾಧೀನಾನುಭವ ಪತ್ರ ಪಡೆಯದೆ ವಿಲ್ಲಾವನ್ನು 4 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸಮಿತಿ ಸದಸ್ಯರು ಆರೋಪಿಸಿದರು.

ಸಂಸ್ಥೆಯವರು ಕಟ್ಟಡ ನಿರ್ಮಾಣ ಆರಂಭಿಕ ಪ್ರಮಾಣ ಪತ್ರ ಹಾಗೂ ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆಯದೆ ವಿಲ್ಲಾಗಳನ್ನು ಹಂಚಿಕೆ ಮಾಡಲಾಗಿದ್ದು, ಈಗಾಗಲೇ ಎರಡು ಮನೆಗಳಲ್ಲಿ ಜನರು ವಾಸವಿದ್ದಾರೆ. 2011ರಲ್ಲಿಯೇ ಸಂಸ್ಥೆಯವರು ಬಫ‌ರ್‌ ಜೋನ್‌ ಆಕ್ರಮಿಸಿ ಕಟ್ಟಡ ನಿರ್ಮಾಣಿ ಸಿದರೂ ಪಾಲಿಕೆಯ ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಮಿತಿ ಸದಸ್ಯರು ಹರಿಹಾಯ್ದರು.

ಮನಸೋ ಇಚ್ಛೆ ರಾಜಕಾಲುವೆ ತಿರುವು ಸಾವಿರಾರು ಮನೆಗಳನ್ನೊಳಗೊಂಡ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕಾಗಿ ಎಸ್‌ಎನ್‌ಎನ್‌ ಸಂಸ್ಥೆ 30 ಅಡಿಗಳ ರಾಜಕಾಲುವೆಯನ್ನು ತಮಗಿಷ್ಟ ಬಂದ ಹಾಗೆ ತಿರುವುಗೊಳಿಸಿದ್ದಾರೆ. 30 ಅಡಿಗಳ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು 5-8 ಅಡಿಗೆ ಕುಗ್ಗಿಸಿದ್ದು, ಬೊಮ್ಮನಹಳ್ಳಿಯ ನಗರ ಯೋಜನೆ ವಿಭಾಗದಿಂದಲೇ ನಕ್ಷೆ ಪಡೆದುಕೊಂಡಿದ್ದರೂ, ಅಧಿಕಾರಿಗಳು ಒತ್ತುವರಿ ತಡೆಲು ಮುಂದಾಗಿಲ್ಲ ಎಂದು ಸಮಿತಿ ಸದಸ್ಯ ನಾಗರಾಜ್‌ ಆರೋಪಿಸಿದರು.  

ನಿಯಮ ಪಾಲಿಸದಿದ್ದರೂ ಕ್ರಮವಿಲ್ಲ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ಶಕೀಲ್‌ ಅಹಮದ್‌, ಅಪಾರ್ಟ್‌ಮೆಂಟ್‌ ಹಾಗೂ ವಿಲ್ಲಾಗಳ ನಿರ್ಮಾಣಕ್ಕಾಗಿ ಬಿಲ್ಡರ್‌ಗಳು ಕೆರೆ ಹಾಗೂ ರಾಜಕಾಲುವೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆಯಿಂದ 30 ಮೀಟರ್‌ ಬಫ‌ರ್‌ ಜೋನ್‌ ಕಾಯ್ದುಕೊಳ್ಳ ಬೇಕೆಂಬ ಹಳೆಯ ನಿಯಮವನ್ನೂ ಝೆಸ್‌ ಸಂಸ್ಥೆ ಪಾಲಿಸಿಲ್ಲ. ಅದೇ ರೀತಿ ಎಸ್‌ಎನ್‌ಎನ್‌ ಸಂಸ್ಥೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಸಾವಿರಾರು ಮನೆಗಳ ಅಪಾರ್ಟ್‌ಮೆಂಟ್‌ ನಿರ್ಮಿಸಿದೆ. ಆದರೂ, ಪಾಲಿಕೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಸಹಾಯಕ ಎಂಜಿನಿಯರ್‌ ಹಾಗೂ ಕಾರ್ಯಪಾಲಕ ಸಹಾಯಕ ಎಂಜಿನಿಯರ್‌ ಅವರನ್ನು ಅಮಾನತುಗೊಳಿಸುವಂತೆ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಟಾಪ್ ನ್ಯೂಸ್

tdy-1ಗೋವಾ: ಸರ್ಕಾರಿ ಶಾಲೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಲಾಗುವುದು ಸಿಎಂ ಸಾವಂತ್

ಗೋವಾ: ಸರ್ಕಾರಿ ಶಾಲೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಲಾಗುವುದು ಸಿಎಂ ಸಾವಂತ್

siddaramaiah

ಸ್ವಾತಂತ್ರ್ಯ ಹೋರಾಟಕ್ಕಾಗಿ ಬೊಮ್ಮಾಯಿ ಜೈಲುವಾಸ ಅನುಭವಿಸಿದ್ದರಾ?: ಸಿದ್ದರಾಮಯ್ಯ ಪ್ರಶ್ನೆ

ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ

ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ

thumb-3

ಜಾನಪದ ಕಲಾವಿದರೊಂದಿಗೆ ಹೆಜ್ಜೆಹಾಕಿದ ಮಮತಾ ಬ್ಯಾನರ್ಜಿ: ವಿಡಿಯೋ ನೋಡಿ

ಕೊಟ್ಟಿಗೆಹಾರ : ಕಾಡಾನೆ ಪುಂಡಾಟಕ್ಕೆ ವ್ಯಕ್ತಿ ಸಾವು

ಕೊಟ್ಟಿಗೆಹಾರದಲ್ಲಿ ಆನೆ ದಾಳಿಗೆ ರೈತ ಬಲಿ: ಮೃತದೇಹವನ್ನ ಕಾಡಿನಲ್ಲಿ ಎಳೆದಾಡಿದ ಒಂಟಿ ಸಲಗ

news-2

ಸ್ವಾತಂತ್ರ್ಯ ದಿನಾಚರಣೆ; ಅಂಬೇಡ್ಕರ್ ಭಾವಚಿತ್ರ ಮರೆತ ತಾಲೂಕಾಡಳಿತ; ದಲಿತ ಸಂಘನೆಗಳ ಆಕ್ರೋಶ

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಇದ್ದಾರೆ: ಕಾಂಗ್ರೆಸ್‌ ನಾಯಕರಿಗೆ ಸಿಎಂ ತಿರುಗೇಟು

ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಇದ್ದಾರೆ: ಕಾಂಗ್ರೆಸ್‌ ನಾಯಕರಿಗೆ ಸಿಎಂ ತಿರುಗೇಟು

ಉಕ್ಕಿನ ಮೇಲ್ಸೇತುವೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

ಉಕ್ಕಿನ ಮೇಲ್ಸೇತುವೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

ಶಾಸಕ‌ ಬೈರತಿ ಬಸವರಾಜ್ ಗೆ ಪಿತೃ ವಿಯೋಗ

ಶಾಸಕ‌ ಬೈರತಿ ಬಸವರಾಜ್ ಗೆ ಪಿತೃ ವಿಯೋಗ

tdy-3

ವೃದ್ಧೆ ಕೊಂದು ಚಿನ್ನಾಭರಣ ದೋಚಿದ ಹಂತಕರು

ಯುವತಿಯರನ್ನು ಬಳಸಿಕೊಂಡು ನಟನಿಂದ ಉದ್ಯಮಿಗೆ ಹನಿಟ್ರ್ಯಾಪ್‌, ಲಕ್ಷಾಂತರ ರೂ. ಸುಲಿಗೆ  

ಯುವತಿಯರನ್ನು ಬಳಸಿಕೊಂಡು ನಟನಿಂದ ಉದ್ಯಮಿಗೆ ಹನಿಟ್ರ್ಯಾಪ್‌, ಲಕ್ಷಾಂತರ ರೂ. ಸುಲಿಗೆ  

MUST WATCH

udayavani youtube

ವಿಶ್ವದ ಅತೀ ಎತ್ತರದ ಸೇತುವೆ ಮೇಲೆ ಹಾರಿದ ರಾಷ್ಟ್ರಧ್ವಜ

udayavani youtube

Aurobindo Ghoseರ ಕನಸಿನ ಭಾರತ ಹೇಗಿತ್ತು ಗೊತ್ತಾ?

udayavani youtube

ಮಂಗಳೂರು: ಕುದ್ರೋಳಿಯಲ್ಲಿ 900 ಕೆ.ಜಿ ಧವಸ ಧಾನ್ಯದಿಂದ ತಿರಂಗಾ ಕಲಾಕೃತಿ ರಚನೆ |

udayavani youtube

ಮರೆತುಹೋದ ಅಗೆಲು ಸೇವೆಯ ಪ್ರಸಾದದ ಊಟ ಮೂರು ದಿನವಾದ್ರೂ ಹಾಳಾಗಿರಲಿಲ್ಲ.. |ಕೊರಗಜ್ಜ ಸ್ವಾಮಿ

udayavani youtube

ಷೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ

ಹೊಸ ಸೇರ್ಪಡೆ

bxdgnffgn-hf

ಪ್ರಜಾಪ್ರಭುತ್ವ ರಾಜಕಾರಣದ ಹೃದಯ

zdfbhdfxgn

ತಿರಂಗಾ ನಡಿಗೆ ಯಶಸ್ವಿಗೊಳಿಸಿ

safSADgdsfg

ಆರು ಜನ ಹುತಾತ್ಮರ ನೆನಪಿನ್ನೂ ಹಸಿರು

tdy-1ಗೋವಾ: ಸರ್ಕಾರಿ ಶಾಲೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಲಾಗುವುದು ಸಿಎಂ ಸಾವಂತ್

ಗೋವಾ: ಸರ್ಕಾರಿ ಶಾಲೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಲಾಗುವುದು ಸಿಎಂ ಸಾವಂತ್

ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ

ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.