ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸಲು ತೆರೆದ ಪುಸ್ತಕ ಪರೀಕ್ಷೆ ಪೂರಕ

Team Udayavani, Aug 3, 2018, 7:00 AM IST

ಬೆಂಗಳೂರು: ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲವನ್ನೂ ಮಕ್ಕಳ ಮೇಲೆ ಹೇರುವಂತಹ ಪರಿಸ್ಥಿತಿಯಿದ್ದು, ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸಬೇಕೆಂಬ ಉದ್ದೇಶದಿಂದ ತೆರೆದ ಪುಸ್ತಕ ಪರೀಕ್ಷೆ ನಡೆಸುವ ಚಿಂತನೆ ಹೊಂದಿದ್ದೆವು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎನ್‌.ಮಹೇಶ್‌ ಹೇಳಿದ್ದಾರೆ.

ಕರ್ನಾಟಕ ರಂಗಶಿಕ್ಷಣ ಪದವೀಧರರ ಸಂಘದ ವತಿಯಿಂದ ಗುರುವಾರ ನಗರದ ತರಳಬಾಳು ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳನ್ನು ದೇವಾಲಯಗಳೆಂದು ಕರೆಯುತ್ತಾರೆ. ಆದರೆ, ಇವತ್ತಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಪೈಶಾಚಿಕ ವಿಚಾರಗಳನ್ನು ತಲೆಗೆ ತುಂಬಲಾಗುತ್ತಿದ್ದು, ಸಂಜೆ ವೇಳೆಗೆ ಮಕ್ಕಳು ಶಾಲೆಯಿಂದ ಹೊರಗೆ ಬರುವಾಗ ಜೈಲಿನಿಂದ ಹೊರಗೆ ಬರುವಂತಿರುತ್ತಾರೆ ಎಂದು ತಿಳಿಸಿದರು.

ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಯಾವ ಪ್ರಶ್ನೆಗಳಿಗೆ ಯಾವ ಉತ್ತರ ಬರೆಯಬೇಕು ಎಂಬ ನೋಟ್ಸ್‌ ನೀಡುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ಪ್ರಶ್ನೆಗಳಿಗೆ ಉತ್ತರವನ್ನು ಬೋಧಿಸಲಾಗುತ್ತದ್ದು, ಇತ್ತೀಚಿನ ದಿನಗಳಲ್ಲಿ ಪಠ್ಯ ಪುಸ್ತಕಗಳಲ್ಲಿಯೇ ಇಂತಹ ಪ್ರಶ್ನೆಗೆ ಇದೇ ಉತ್ತರ ಎಂದು ಮಾರ್ಕ್‌ ಮಾಡಿಕೊಡಲಾಗುತ್ತಿದೆ. ಪಠ್ಯ ಪುಸ್ತಕದಲ್ಲಿರುವುದು ಯಥಾವತ್ತಾಗಿ ಬರೆಯುವುದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ತಿಂಗಳಿಗೊಮ್ಮೆ ನಡೆಸುವಂತಹ ತರಗತಿ ಪರೀಕ್ಷೆಗಳಲ್ಲಿ ಮಾತ್ರ ತೆರೆದ ಪುಸ್ತಕ ಪರೀಕ್ಷಾ ವಿಧಾನ ಜಾರಿಗೊಳಸಬೇಕೆಂಬ ಚಿಂತನೆಯಿತ್ತು. ಶಿಕ್ಷಕರು ಮಕ್ಕಳಿಗೆ ಗೊಂದಲಮಯ ಪ್ರಶ್ನೆಗಳನ್ನು ಕೊಟ್ಟು ಪಠ್ಯ ಪುಸ್ತಕ ನೋಡಿ ಉತ್ತರ ಬರೆಯಿರಿ ಎಂದು ಹೇಳಿದಾಗ, ಮಕ್ಕಳು ಪಠ್ಯವನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಒಂದೊಮ್ಮೆ ತಿಳಿಯದಿದ್ದರೆ, ಪಕ್ಕದ ವಿದ್ಯಾರ್ಥಿಗಳನ್ನು ಕೇಳಿ ಬರೆಯಲು ಅವಕಾಶ ನೀಡಿದರೆ, ಇಬ್ಬರಿಗೂ ವಿಷಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ಸಾಧ್ಯವಾಗುತ್ತದೆ ಎಂಬುದು ಇದರ ಉದ್ದೇಶವಾಗಿದೆ ಎಂದು ಮಹೇಶ್‌ ಹೇಳಿದರು.

ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ
ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಇಂಗ್ಲಿಷ್‌ ಅಗತ್ಯವಾದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೂ ನ್ಪೋಕನ್‌ ಇಂಗ್ಲಿಷ್‌ ತರಬೇತಿ ಕೊಡಿಸಬೇಕೆಂಬ ಚಿಂತನೆ ಸರ್ಕಾರದ ಮುಂದಿದೆಯೇ ಹೊರತು, ಸಂಪೂರ್ಣ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂಬ ಚಿಂತನೆಯಿಲ್ಲ ಹಾಗೂ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸಚಿವ ಎನ್‌.ಮಹೇಶ್‌ ಸ್ಪಷ್ಟನೆ ನೀಡಿದರು.

ದೇಶದಲ್ಲಿ ಒಂದು ದೇಶ-ಒಂದು ಕಾನೂನು, ಒಂದು ದೇಶ-ಒಂದು ತೆರಿಗೆ ಎಂಬ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಒಂದು ದೇಶ-ಒಂದು ಶಿಕ್ಷಣ ವ್ಯವಸ್ಥೆ ಎಂಬುದು ಜಾರಿಯಾಗಿಲ್ಲ. ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾದ ಶಿಕ್ಷಣ ವ್ಯವಸ್ಥೆ ರೂಪಿಸಲಾಗಿದ್ದು, ಬಡವರಿಗೊಂದು ರೀತಿಯ ಶಿಕ್ಷಣ ಹಾಗೂ ಶ್ರೀಮಂತರಿಗೊಂದು ರೀತಿಯ ಶಿಕ್ಷಣ ದೊರೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೌತಮ ಬುದ್ಧ ಹಾಗೂ ಬಸವಣ್ಣನವರು ಜನರು ಮಾತನಾಡುವ ಭಾಷೆಯಲ್ಲಿ ಬೋಧನೆ ಮಾಡುತ್ತಿದ್ದರು. ಅದೇ ರೀತಿ ಮಕ್ಕಳು ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿತರೆ ಮಾತ್ರ ಅವರಲ್ಲಿ ಜ್ಞಾನ ವಿಕಸನಗೊಂಡು, ಕ್ರಿಯಾಶೀಲ ಚಿಂತನೆ, ಅಭಿವ್ಯಕ್ತಿ ಹಾಗೂ ಸ್ವಸಾಮರ್ಥಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ