Udayavni Special

ಏಪ್ರಿಲ್‌ನಿಂದ ಪಡಿತರ ಚೀಟಿಗೆ ಅಕ್ಕಿ ಕಡಿತ, ರಾಗಿ ಭಾಗ್ಯ


Team Udayavani, Apr 1, 2021, 2:38 PM IST

padithara issue

ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯಡಿ ರಾಜ್ಯಸರ್ಕಾರ ಅಕ್ಕಿಯನ್ನು ದಿನೇ ದಿನೆ ಕಡಿತ ಮಾಡುತ್ತಿದೆಯೆಂಬ ಗ್ರಾಹಕರ ಅಸಮಾಧಾನದ ನಡುವೆಯೇ ,ಏಪ್ರಿಲ್‌ನಲ್ಲಿ ಮತ್ತೂಮ್ಮೆ 3 ಕೆ.ಜಿ.ಅಕ್ಕಿ ಕಡಿತಗೊಳಿಸಲು ನಿರ್ಧರಿಸಲಾಗಿದೆ.

ಅದರ ಬದಲಿಗೆ ರಾಗಿ ನೀಡುವಯೋಜನೆ ಜಾರಿಗೊಳಿಸಲು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿಬೆಂಬಲ ಬೆಲೆ ನೀಡಿ ರಾಗಿ ಖರೀದಿಸಲಾಗಿದ್ದು ಅದನ್ನುಏಪ್ರಿಲ್‌ನಲ್ಲಿ ಪಡಿತರ ಕಾರ್ಡುದಾರರಿಗೆ ನೀಡಲುಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿಪಿಎಲ್‌ಪಡಿತರ ಚೀಟಿ ಹೊಂದಿರುವ ಗ್ರಾಹಕರು ಪ್ರತಿ ಯುನಿಟ್‌ಗೆ 5 ಕೆ.ಜಿ.ಅಕ್ಕಿ ಪಡೆದುಕೊಳ್ಳುತ್ತಿದ್ದರು. ಆದರೆ ಏಪ್ರಿಲ್‌ನಲ್ಲಿಅನ್ನಭಾಗ್ಯ ಯೋಜನೆಯಡಿ ಅಕ್ಕಿಗೆ ಕತ್ತರಿ ಬೀಳಲಿದ್ದು ಪ್ರತಿಸದಸ್ಯರಿಗೆ 2 ಕೆ.ಜಿ.ಅಕ್ಕಿ ಲಭಿಸಲಿದೆ.

ಕಡಿತಗೊಂಡಿರುವಅಕ್ಕಿ ಬದಲಾಗಿ 3 ಕೆ.ಜಿ.ರಾಗಿ ಭಾಗ್ಯ ಒದಗಿ ಬರಲಿದೆ.ಜಿಲ್ಲೆಯಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿರುವಕುಟುಂಬ ಸದಸ್ಯರಿಗೆ ತಲಾ 2 ಕೆ.ಜಿ.ಅಕ್ಕಿ 3 ಕೆ.ಜಿ.ರಾಗಿಹಾಗೂ 1 ಪಡಿತರ ಚೀಟಿಗೆ 2 ಕೆ.ಜಿ.ಗೋಧಿ ವಿತರಿಸಲುಯೋಜನೆ ರೂಪಿಸಲಾಗಿದೆ. ಅಂತ್ಯೋದಯ ಪಡಿತರಚೀಟಿಗೆ 15 ಕೆ.ಜಿ. ಅಕ್ಕಿ ಹಾಗೂ 20 ಕೆ.ಜಿ. ರಾಗಿ ದೊರೆಯಲಿದೆ. ಎಪಿಎಲ್‌ ಕಾರ್ಡ್‌ ಗ್ರಾಹಕರಿಗೆ 5 ಕೆ.ಜಿ.ಅಕ್ಕಿ (ಕೆಜಿತಲಾ 15 ರೂ.ಗಳಂತೆ ವಿತರಿಸಲಾಗುತ್ತದೆ). ಒಂದಕ್ಕಿಂತಹೆಚ್ಚು ಸದಸ್ಯರು ಹೊಂದಿದ್ದಲ್ಲಿ ಕೇವಲ 10 ಕೆ.ಜಿ. ಮಾತ್ರನೀಡಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದಿಂದ ಆದೇಶ ಬಂದಿದೆಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 3 ಪಟ್ಟು ಹೆಚ್ಚಾಗಿ ರಾಗಿ ಖರೀದಿಸಲಾಗಿದೆ. ಅದನ್ನು ಪಡಿತರ ಚೀಟಿ ಹೊಂದಿರುವಗ್ರಾಹಕರಿಗೆ ನೀಡಲು ಸರ್ಕಾರ ನಿರ್ಧರಿಸಿದೆ.

ಏಪ್ರಿಲ್‌ನಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬ ಸದಸ್ಯರಿಗೆ2 ಕೆ.ಜಿ. ಅಕ್ಕಿ ಹಾಗೂ 3 ಕೆ.ಜಿ. ರಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ 3 ತಿಂಗಳು ಅಕ್ಕಿ ಬದಲಿಗೆ ರಾಗಿನೀಡಲಾಗುತ್ತದೆ ಎಂದು ಆಹಾರ ಇಲಾಖೆ ಉಪನಿರ್ದೇಶಕಿ ಪಿ.ಸವಿತಾ ತಿಳಿಸಿದ್ದಾರೆ.

ಎಂ.ಎ.ತಮೀಮ್‌ ಪಾಷಾ

ಟಾಪ್ ನ್ಯೂಸ್

gjhgfds

ಓಟಿಟಿಯಲ್ಲಿ ‘ಸಲಗ’ ದರ್ಶನವಿಲ್ಲ

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಜಿ ಶಾಸಕ ಎಂ‌.ಪಿ. ಕರ್ಕಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಮಾಜಿ ಶಾಸಕ ಎಂ‌.ಪಿ. ಕರ್ಕಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ ಸಚಿವ ನಾರಾಯಣಗೌಡ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ ಸಚಿವ ನಾರಾಯಣಗೌಡ

11

ಬೆಂಗಳೂರಿನಲ್ಲಿ ರೋಬೋಟಿಕ್‌ ಹೈಟೆಕ್‌ ಆಸ್ಪತ್ರೆ

ಪತ್ನಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

An incident at Poorneshwara Nagar police station

ಕೊಲೆಗೈದು ಶವ ಸಮೇತ ಠಾಣೆಗೆ ಬಂದ್ರು

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

gjhgfds

ಓಟಿಟಿಯಲ್ಲಿ ‘ಸಲಗ’ ದರ್ಶನವಿಲ್ಲ

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಲಸಿಕೆ ಪಡೆಯದ ಬಾಲಿವುಡ್‌ ನಟಿ ಪೂಜಾ ಬೇಡಿಗೆ ಕೋವಿಡ್ ದೃಢ

ಲಸಿಕೆ ಪಡೆಯದ ಬಾಲಿವುಡ್‌ ನಟಿ ಪೂಜಾ ಬೇಡಿಗೆ ಕೋವಿಡ್ ದೃಢ

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.