ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಗೆ ಪಿ.ಸಿ.ಮೋಹನ್ ಸಂಚಾಲಕ
Team Udayavani, Mar 25, 2018, 6:25 AM IST
ಬೆಂಗಳೂರು: ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ನಿರ್ವಹಣಾ ಸಮಿತಿ ಸಂಚಾಲಕರಾಗಿ ಸಂಸದ ಪಿ.ಸಿ.ಮೋಹನ್ ನೇಮಕಗೊಂಡಿದ್ದಾರೆ.
ಸಹ ಸಂಚಾಲಕರಾಗಿ ಸಂಸದೆ ಶೋಭಾ ಕರಂದ್ಲಾಜೆ, ಎನ್.ರವಿಕುಮಾರ್, ಸುಬ್ಬನರಸಿಂಹ ಅವರನ್ನು ನೇಮಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣಾ ನಿರ್ವಹಣಾ ಸಮಿತಿ ರಚನೆಯಾದ ನಂತರ ಶನಿವಾರ ಮೊದಲ ಸಭೆ ನಡೆಸಿ ಸಂಚಾಲಕ ಹಾಗೂ ಸಹ ಸಂಚಾಲಕರ ನೇಮಕ ಮಾಡಿ ಅವರ ಹೊಣೆಗಾರಿಕೆ ತಿಳಿಸಲಾಯಿತು.
ಮುಂದಿನ ಸಭೆ ಮಾರ್ಚ್ 27 ರಂದು ನಡೆಯಲಿದ್ದು, ಅಂದು ಪ್ರಚಾರ, ಪ್ರಚಾರ ಸಾಮಗ್ರಿ, ಜಾಹೀರಾತು, ನಾಯಕರ ಪ್ರವಾಸ ಆಯೋಜನೆ ಕುರಿತು ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾಬ್ಡೇಕರ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಅರುಣ್ಕುಮಾರ್ ಉಪಸ್ಥಿತರಿದ್ದರು.