ಗಮನಸೆಳೆದ ಸ್ವಯಂ ಸಾಂಸ್ಕೃತಿಕ ಉತ್ಸವ

Team Udayavani, Apr 20, 2019, 3:00 AM IST

ಮಹದೇವಪುರ: ಅಂತಾರಾಜ್ಯ ಇಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳ ಸಂಸ್ಕೃತಿಕ ಕಲಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿದ ವೈಟ್‌ಫೀಲ್ಡ್‌ನ ಎಂವಿಜೆ ಇಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಶುಕ್ರವಾರ, ಸಾಂಸ್ಕೃತಿಕ ಚಟುವಟಿಕೆಗಳ ರಂಗು ಮನೆಮಾಡಿತ್ತು.

ಅಂತಾರಾಜ್ಯ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ತಮ್ಮಲ್ಲಿನ ಪಠ್ಯೇತರ ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗಿ ಎಂವಿಜೆ ಕಾಲೇಜು ವತಿಯಿಂದ “ಸ್ವಯಂ’ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿತ್ತು. ರಂಗಭೂಮಿ, ಸಂಗೀತ, ನೃತ್ಯ, ಸಾಹಿತ್ಯ, ರೇಖಾಚಿತ್ರ, ಬೀದಿ ನಾಟಕ ಸೆರಿ ಒಟ್ಟಾರೆ 23 ವಿಧದ ಕಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು.

ನಟ ವಿನಯ್‌ ರೈ, ಖ್ಯಾತ ವೀಣಾ ವಾದಕಿ ಡಾ. ಸುಮಾ ಸುಧೀಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದರು. ಈ ವೇಳೆ ಮಾತನಾಡಿದ ಕಾಲೇಜಿನ ವ್ಯವಸ್ಥಾಪಕ ನಿದೇರ್ಶಕ ಬಾಲಚಂದ್ರ, ಸಾಂಸ್ಕೃತಿಕ ಉತ್ಸವದಲ್ಲಿ ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಕಾಲೇಜುಗಳ 1200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು, ತಮ್ಮ ಪ್ರತಿಭೆ ಪ್ರದರ್ಶಿಸಿದರು ಎಂದು ಮಾಹಿತಿ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ