ಪೊಲೀಸರ ಮೇಲೆ ಲಾಂಗ್ ಬೀಸಿದ ರೌಡಿಶೀಟರ್ ಮೇಲೆ ಫೈರಿಂಗ್
ಬೆಂಗಳೂರಿನಲ್ಲಿ ಮತ್ತೆ ಕೇಳಿಸಿದ ಪೊಲೀಸ್ ಗುಂಡಿನ ಸದ್ದು
Team Udayavani, Jun 24, 2019, 8:33 AM IST
ಬೆಂಗಳೂರು: ನಗರದಲ್ಲಿ ಇನ್ನೋರ್ವ ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಶನಿವಾರ ತಡರಾತ್ರಿ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನಡೆದಿದೆ.
ರೌಡಿ ಶೀಟರ್ ರಾಹುಲ್ ಅಲಿಯಸ್ ಗೋವಿಂದಎಂಬಾತನನ್ನು ಬಂಧಿಸಲು ತೆರಳಿದ್ದ ವೇಳೆ ಹೆಡ್ ಕಾನ್ಸ್‌ಟೇಬಲ್ ಪ್ರಕಾಶ್ ಅವರ ಮೇಲೆ ಲಾಂಗ್ ಬೀಸಿದ್ದಾನೆ, ತಕ್ಷಣ ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ವಿರೇಂದ್ರ ಪ್ರಸಾದ್ ಅವರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ.
ಜೂನ್ 22 ರಂದು ವೇದಮೂರ್ತಿ ಎನ್ನುವವರ ಕೊಲೆಗೆ ಯತ್ನಿಸಿದ್ದ ಆರೋಪದಲ್ಲಿ ರಾಹುಲ್‌ನನ್ನು ಬಂಧಿಸಲು ತೆರಳಿದ್ದರು. ಈತನ ಮೇಲೆ 11 ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳು ದಾಖಲಾಗಿದ್ದವು.
ಆರೋಪಿ ರಾಹುಲ್ ಮತ್ತು ಗಾಯಗೊಂಡಿರುವ ಪೊಲೀಸ್ ಸಿಬಂದಿ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.