ಜನಸಂಖ್ಯೆ ಹೆಚ್ಚಳ ಶೇ.32; ಬಸ್‌ ಹೆಚ್ಚಳ ಶೇ.7!


Team Udayavani, Mar 14, 2020, 11:11 AM IST

ಜನಸಂಖ್ಯೆ ಹೆಚ್ಚಳ ಶೇ.32; ಬಸ್‌ ಹೆಚ್ಚಳ ಶೇ.7!

ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆಚ್ಚು-ಕಡಿಮೆ ಕಳೆದ ಒಂದು ದಶಕದಲ್ಲಿ ನಗರದ ಜನಸಂಖ್ಯೆ ಶೇ.32ರಷ್ಟು ಏರಿಕೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಬಿಎಂಟಿಸಿ ಬಸ್‌ಗಳ ಹೆಚ್ಚಳ ಪ್ರಮಾಣ ಶೇ.7.89 ಮಾತ್ರ. ಈ ಮಧ್ಯೆ ಕಳೆದ ಬಾರಿಗೆ ಹೋಲಿಸಿದರೆ, ಬಸ್‌ಗಳ ಸಂಖ್ಯೆ ಶೇ.3ರಷ್ಟು ಕುಸಿತ ಕಂಡಿದೆ. ಇನ್ನು ಮೆಟ್ರೋ, ಉಪನಗರ ರೈಲು ಯೋಜನೆಗಳು ಪ್ರಗತಿಯಲ್ಲಿವೆ. ಇದೆಲ್ಲದರ ಪರಿಣಾಮ ನಗರದಲ್ಲಿ ಜನ ಅನಿವಾರ್ಯವಾಗಿ ಖಾಸಗಿ ವಾಹನಗಳತ್ತ ಮುಖಮಾಡಲು ಪ್ರೇರಣೆ ಆಗುತ್ತಿದೆ.

-ಬಿ.ಪ್ಯಾಕ್‌ (ಬೆಂಗಳೂರು ಪಾಲಿಟಿಕಲ್‌ ಆ್ಯಕ್ಷನ್‌ ಕಮಿಟಿ) ಹಾಗೂ ಉಬರ್‌ ಸಂಯುಕ್ತವಾಗಿ ಈಚೆಗೆ ಹೊರತಂದ “ಎಲ್ಲರಿಗೂ ಸುಸ್ಥಿರ ಸಾರಿಗೆ’ ಕುರಿತ ಸಮೀಕ್ಷಾ ವರದಿಯು ನಗರದ ಜನ ಸಮೂಹ ಸಾರಿಗೆಯಿಂದ ಖಾಸಗಿ ವಾಹನಗಳಿಗೆ ವಿಮುಖರಾಗುತ್ತಿರುವುದರ ಮೇಲೆ ಬೆಳಕುಚೆಲ್ಲಿದ್ದಾರೆ. ಸಮೂಹ ಸಾರಿಗೆಯ ಪ್ರಮುಖ ಯೋಜನೆಗಳಾದ “ನಮ್ಮ ಮೆಟ್ರೋ‘ ಎರಡನೇ ಹಂತ ಹಾಗೂ ಉಪನಗರ ರೈಲು ಯೋಜನೆ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲು ಇನ್ನೂ ಹಲವು ವರ್ಷಗಳು ಕಾಯಬೇಕಾಗುತ್ತದೆ.

ಹಾಗಾಗಿ, ತಕ್ಷಣಕ್ಕೆ ಸಂಚಾರ  ದಟ್ಟಣೆ ನಿವಾರಣೆ ಹೊರೆ ಈಗ ಬಿಎಂಟಿಸಿ ಮೇಲಿದೆ. ಆದರೆ, ಅದರ ಸಾಮರ್ಥ್ಯ ಹೆಚ್ಚಿಸುವ ಕೆಲಸ ಕಳೆದ ಏಳೆಂಟು ವರ್ಷಗಳಿಂದ ಆಗಿಲ್ಲ. ಇದರಿಂದ ಜನ ಖಾಸಗಿ ವಾಹನಗಳತ್ತ ಮುಖಮಾಡುತ್ತಿದ್ದು, ಸಂಚಾರ ದಟ್ಟಣೆಗೆ ಇದು ಕಾರಣವಾಗುತ್ತಿದೆ. 2002ರ ಜನವರಿ ಅಂಕಿ-ಅಂಶಗಳ ಪ್ರಕಾರ ಬಿಎಂಟಿಸಿಯಲ್ಲಿ ಸದ್ಯ 6,483 ಬಸ್‌ಗಳಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಶೇ. 3ರಷ್ಟು ಇಳಿಕೆಯಾಗಿದೆ. ಅಲ್ಲದೆ, ಈ ಹಿಂದೆ ಪ್ರತಿ ದಿನ ಒಂದು ಬಸ್‌ ಗರಿಷ್ಠ 230 ಕಿ.ಮೀ. ಕಾರ್ಯಾಚರಣೆ ಮಾಡುತ್ತಿತ್ತು. ಈಗ ಅದು 180 ಕಿ.ಮೀ.ಗೆ ಕುಸಿದಿದೆ. ಪರಿಣಾಮ ಪ್ರಯಾಣಿಕರ ಸಂಖ್ಯೆ 2014-15ರಲ್ಲಿ 51.3 ಲಕ್ಷ ಇದ್ದದ್ದು, 2018-19ಕ್ಕೆ 35.8 ಲಕ್ಷಕ್ಕೆ ಇಳಿಕೆಯಾಗಿದೆ. ಇದು ಬಿಎಂಟಿಸಿ ಬಸ್‌ ಸೇವೆಯಲ್ಲಿ ಗಣನೀಯವಾಗಿ ಇಳಿಮುಖ ಆಗಿದ್ದರ ಸಂಕೇತ ಎಂದು ವರದಿಯಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ಹೀಗೆ ಬಿಎಂಟಿಸಿಯಿಂದ ವಿಮುಖವಾದ ಜನ, ಮತ್ತೂಂದು ಸಮೂಹ ಸಾರಿಗೆ ನಮ್ಮ ಮೆಟ್ರೋದತ್ತ ಮುಖಮಾಡಿದ್ದಾರೆ. ಹಾಗಾಗಿ, ಇಲ್ಲಿ ಕೊರತೆಯಾಗಿದೆ. ಖಾಸಗಿ ವಾಹನಗಳಿಗೆ ಶಿಫ್ಟ್ ಆಗಿದ್ದಾರೆ ಅನ್ನಿಸುವುದಿಲ್ಲ’ ಎನ್ನುವುದು ಬಿಎಂಟಿಸಿ ಅಧಿಕಾರಿಗಳ ಸಮಜಾಯಿಷಿ. ಆದರೆ, ಮೆಟ್ರೋದಲ್ಲಿ ನಿತ್ಯದ ಗರಿಷ್ಠ ಪ್ರಯಾಣಿಕರ ಸಂಚಾರ 4.50 ಲಕ್ಷ ಮಾತ್ರ!

ಶೇ. 31ರಷ್ಟು ಜನ ಸ್ವಂತ ವಾಹನ: ಒಂದು ವೇಳೆ ಸಮೂಹ ಸಾರಿಗೆ ಬಳಸಿದರೂ, ಅಲ್ಲಿ ಮೊದಲ ಮತ್ತು ಕೊನೆಯ ತಾಣ ತಲುಪುವುದು ಮತ್ತೂಂದು ಸವಾಲು ಇದೆ. ಪರಿಣಾಮ ನಿಗದಿತ ಸಮಯಕ್ಕೆ ತಲುಪಲು ಸಮಸ್ಯೆ ಆಗುತ್ತಿದೆ. ಇದೇ ಸಮಸ್ಯೆಯಿಂದಾಗಿ ಶೇ. 31  ರಷ್ಟು ಜನ ಸ್ವಂತ ಕಾರು ಅಥವಾ ಬೈಕ್‌ಗಳನ್ನು ನೆಚ್ಚಿಕೊಳ್ಳುವಂತೆ ಮಾಡುತ್ತಿರುವುದಾಗಿ ಹೇಳಿಕೊಂಡಿ ದ್ದಾರೆ. ಖಾಸಗಿ ವಾಹನ ಇಲ್ಲದವರು ಆ್ಯಪ್‌ ಆಧಾರಿತ ಟ್ಯಾಕ್ಸಿ ಅಥವಾ ಆಟೋ ಮತ್ತು ಬಾಡಿಗೆ ಬೈಕ್‌ಗಳನ್ನು ಬಳಸುತ್ತಿ¨ªಾರೆ. ಮೆಟ್ರೋ, ಬಿಎಂಟಿಸಿ, ಉಪನಗರ ರೈಲು ಬಳಸಲು ಜನರಿಗೆ ಆಸಕ್ತಿ ಇದ್ದರೂ, ನಿಲ್ದಾಣಗಳಲ್ಲಿ ಬಸ್‌ಳಿಗಾಗಿ ಕಾದು ನಿಲ್ಲಬೇಕಾದ ಸ್ಥಿತಿ ಇರುವುದು, ಮನೆಯಿಂದ ಬಸ್ನಿಲ್ದಾಣ ಅಥವಾ ಮೆಟ್ರೊ ನಿಲ್ದಾಣ ತಲುಪಲು ಮತ್ತು ನಿಲ್ದಾಣಗಳಿಂದ ಮನೆಗೆ ತಲುಪಲು ಸಮರ್ಪಕ ಸೌಲಭ್ಯ ಇಲ್ಲದಿರುವುದು ಪ್ರಯಾಣಿಕರು ಸಾರ್ವಜನಿಕ ಸಾರಿಗೆ ಬಳಸಲು ಹಿಂದೇಟು ಹಾಕುವಂತೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

 

ಪರ್ಯಾಯ ಮಾದರಿ :  ಬಿ.ಪ್ಯಾಕ್‌ ನಡೆಸಿದ ಆನ್‌ಲೈನ್‌ ಸಮೀಕ್ಷೆಯಲ್ಲಿ 1,129 ಭಾಗವಹಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಶೇ. 69ರಷ್ಟು ಮಂದಿ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದರೆ. ಇವರಲ್ಲಿ ಶೇ 53ರಷ್ಟು ಮನೆಯಿಂದ ಬಸ್‌ ನಿಲ್ದಾಣಕ್ಕೆ, ರೈಲು ನಿಲ್ದಾಣಕ್ಕೆ ಅಥವಾ ಮೆಟ್ರೊ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದಾರೆ. ನಿಲ್ದಾಣಗಳಿಂದ ಕಚೇರಿಗೂ ಇದನ್ನೇ ಅನುಸರಿಸುತ್ತಿದ್ದಾರೆ. ಇನ್ನು ಶೇ. 18ರಷ್ಟು ಪರ್ಯಾಯ ಮಾದರಿಗಳನ್ನು ಅನುಸರಿಸುತ್ತಿದ್ದಾರೆ.

ಸಮೂಹ ಸಾರಿಗೆ ಅದರಲ್ಲೂ ಅತಿ ಹೆಚ್ಚು ಜನರನ್ನು ಕೊಂಡೊಯ್ಯುವ ಬಿಎಂಟಿಸಿಗೆ ಸರ್ಕಾರ ಆರ್ಥಿಕ ನೆರವು ಸೇರಿದಂತೆ ವಿವಿಧ ರೀತಿಯ ಸೌಲಭ್ಯ ಕಲ್ಪಿಸುವ ಕೆಲಸ ಮಾಡಬೇಕು. ಅದೇ ರೀತಿ, ಬಿಎಂಟಿಸಿ ಕೂಡ ಪರಿಣಾಮಕಾರಿ ಸೇವೆ ಜತೆಗೆ ಪ್ರಯಾಣಿಕರಿಗೆ ಪ್ರೋತ್ಸಾಹಧನ, ರಿಯಾಯ್ತಿಯಂತಹ ಕೊಡುಗೆಗಳ ಮೂಲಕ ಆಕರ್ಷಿಸಬೇಕು. ಇದು ಪರೋಕ್ಷವಾಗಿ ಸಂಚಾರದಟ್ಟಣೆ ತಗ್ಗಿಸಲು ದೊಡ್ಡ ಕೊಡುಗೆ ನೀಡಲಿದೆ. ಎಂ.ವಿ. ಅರ್ಚನಾ, ಸಂಶೋಧನೆ ಮತ್ತು ಕಾರ್ಯಕ್ರಮ ಸಂಯೋಜಕಿ, ಬಿ.ಪ್ಯಾಕ್‌

 

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.