- Friday 06 Dec 2019
ಅಂಚೆಯಣ್ಣ ಬಂದ, ತಾಜಾ ಹಣ್ಣು ತಂದ!
Team Udayavani, Jul 12, 2019, 7:33 AM IST
ಬೆಂಗಳೂರು: ಇದುವರೆಗೂ ಪತ್ರಗಳ ಜತೆಗೆ ಮಾವಿನ ಹಣ್ಣುಗಳನ್ನು ಹೊತ್ತು ತರುತ್ತಿದ್ದ ನಿಮ್ಮ ಅಂಚೆ ಅಣ್ಣ ಮುಂದಿನ ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ನೀವು ಬಯಸಿದ ತಾಜಾ ಹಣ್ಣುಗಳನ್ನು ತಂದು ಕೊಡಲಿದ್ದಾನೆ.
ಅಂಚೆಯಣ್ಣನ ಮುಲಕ ಹಣ್ಣು ತರಿಸಿಕೊಳ್ಳಲು ಬಯಸುವವರು ‘ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮತ್ತು ಮಾರುಕಟ್ಟೆ ನಿಗಮ’ದ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮಗೆ ಬೇಕಾದ ಹಣ್ಣುಗಳನ್ನು ಆರ್ಡರ್ ಮಾಡಿದರೆ ಒಂದೆರಡು ದಿನಗಳಲ್ಲಿ ತಾಜಾ ಹಣ್ಣುಗಳೊಂದಿಗೆ ಪೋಸ್ಟ್ ಮ್ಯಾನ್ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ.
ಈಗಾಗಲೇ ಮಾವು ಬೆಳೆಗಾರರಿಗೆ ಅಂಚೆ ಮೂಲಕ ಮಾರುಕಟ್ಟೆ ಸೃಷ್ಟಿಸಿದ್ದ ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮತ್ತು ಮಾರುಕಟ್ಟೆ ನಿಗಮ, ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ. ಇದೀಗ ವಿವಿಧ ಹಣ್ಣು ಬೆಳೆಗಾರರಿಗೆ ಅಂಚೆ ಮಾರುಕಟ್ಟೆ ಪ್ರಯೋಜನ ನೀಡಲು ಮುಂದಾಗಿದೆ.
ಸದ್ಯದಲ್ಲೇ ಮಾವಿನ ಹಣ್ಣಿನ ಸೀಜನ್ ಮುಗಿಯಲಿದ್ದು, ಇದಾದ ಬಳಿಕ ವಿವಿಧ ಹಣ್ಣುಗಳನ್ನು ಅಂಚೆ ಮೂಲಕ ಮಾರಾಟ ಮಾಡುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್‌ನಲ್ಲಿ ಬೆಂಗಳೂರು, ತುಮಕೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿ ಪ್ರಯೋಗಿಕವಾಗಿ ಮಾರಾಟ ಆರಂಭವಾಗಲಿದೆ. ಇದು ಯಶಸ್ವಿಯಾದರೆ ಮುಂದಿನ ದಿಗಳಲ್ಲಿ ರಾಜ್ಯಾದ್ಯಂತ ವಿಸ್ತರಣೆ ಮಾಡುವ ಆಲೋಚನೆಯಿದೆ.
ಮಂಡಳಿ ಸಭೆಯಲ್ಲಿ ಚರ್ಚೆ: ಇತ್ತೀಚೆಗೆ ನಡೆದ ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮತ್ತು ಮಾರುಕಟ್ಟೆ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಅಂಚೆ ಮೂಲಕ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವ ಕುರಿತಂತೆ ಚರ್ಚೆ ನಡೆದಿದೆ. ಯಾವ ಹಣ್ಣುಗಳನ್ನು ಮಾರಾಟ ಮಾಡಬಹುದು ಎಂಬ ವಿಷಯ ಕೂಡ ಪ್ರಸ್ತಾಪವಾಗಿದೆ. ಈಗಾಗಲೇ ಕೆಲವು ಹಣ್ಣುಗಳ ಪಟ್ಟಿ ಮಾಡಲಾಗಿದ್ದು, ಅಂಜೂರ, ಸೇಬು, ಲಿಚಿ, ಪೇರಲೆ ಹಣ್ಣುಗಳು ಈ ಪಟ್ಟಿಯಲ್ಲಿವೆ. ಮತ್ತಷ್ಟು ಹಣ್ಣುಗಳು ಪಟ್ಟಿ ಸೇರಲಿದ್ದು, ಸದ್ಯದಲ್ಲೇ ನಿಗಮವು ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಲಿದೆ.
ಪಾರ್ಸೆಲ್ ಎಷ್ಟು ಕೆ.ಜಿ. ಇರಬೇಕು?: ಈ ಹಿಂದೆ ಕನಿಷ್ಠ ಮೂರು ಕೆ.ಜಿ ಹಾಗೂ ಮೇಲ್ಪಟ್ಟ ತೂಕದ ಆರ್ಡರ್‌ಗಳನ್ನು ಮಾತ್ರ ನಿಗಮ ಸ್ವೀಕರಿಸಿ ಅಂಚೆ ಮೂಲಕ ಗ್ರಾಹಕರಿಗೆ ತಲುಪಿಸುತ್ತಿತ್ತು. ಈಗ ಅಂಜೂರ, ಪೇರಲೆ, ಒಣ ದ್ರಾಕ್ಷಿ ಸೇರಿದಂತೆ ಇನ್ನಿತರ ಹಣ್ಣುಗಳನ್ನು ಕನಿಷ್ಠ ಥವಾ ಗರಿಷ್ಠ ಎಷ್ಟು ಕೆ.ಜಿ ಕೊಳ್ಳಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಸದ್ಯದಲ್ಲೇ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ನಿಗಮದ ಪ್ರಧಾನ ವ್ಯವಸ್ಥಾಪಕರಾದ ಎಲ್.ಲಲಿತಾ ಮಾಹಿತಿ ನೀಡಿದ್ದಾರೆ.
‘ಉದಯವಾಣಿ’ ಜತೆ ಮಾತನಾಡಿದ ಲಲಿತಾ ಅವರು, ಈಗಾಗಲೇ ಅಂಚೆ ಮೂಲಕ ಗ್ರಾಹಕರಿಗೆ ಮಾವಿನ ಹಣ್ಣುಗಳನ್ನು ಪೂರೈಸಲಾಗಿದೆ. ಆ ಯಶಸ್ಸಿನ ಹಿನ್ನೆಲೆಯಲ್ಲಿ ವಿವಿಧ ಹಣ್ಣುಗಳ ಮಾರಾಟಕ್ಕೆ ಆಲೋಚನೆ ನಡೆಸಲಾಗಿದೆ. ಈ ಬಗ್ಗೆ ಹಣ್ಣು ಬೆಳೆಗಾರರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಒಂದೆಡೆ 95 ವರ್ಷದ ವೃದ್ಧೆ ಸ್ವತಃ ಸ್ಕೂಟರ್ ಓಡಿಸಿಕೊಂಡು ಬಂದು ಮತಚಲಾಯಿಸಿದರು. ಇನ್ನೊಂದೆಡೆ ಯುವಕರು ಮತಗಟ್ಟೆಯಿಂದ ದೂರ ಉಳಿದರು. ಕೆಲವರು ದೂರದ...
-
ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಗೇಟ್ 1ರ ಮೂಲಕ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಕರು ಬರುತ್ತಿದ್ದು, ಈ ಭಾಗದಲ್ಲಿ...
-
ಬೆಂಗಳೂರು: ಕೋರ್ಟ್ ಬಹಳ ವಿಳಂಬವಾಗಿ ತೀರ್ಪು ನೀಡಿದೆ. ಚಿದಂಬರಂ ಮೂರು ತಿಂಗಳಿಂದ ಜೈಲು ವಾಸ ಮಾಡಿದ್ದಾರೆ. ಅವರು ಒಬ್ಬ ಆರ್ಥಿಕ ತಜ್ಞ, ರಾಜಕೀಯ ಧುರೀಣ, ಕಾನೂನು...
-
ಬೆಂಗಳೂರು: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ್ ಮೂರ್ತಿ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ...
-
ಬೆಂಗಳೂರು: ಹುಳಿಮಾವು ಕೆರೆಯ ಏರಿ ಒಡೆದು ಅನಾಹುತ ಸೃಷ್ಟಿಯಾಗಿ ಒಂದು ವಾರವಾದರೂ, ಇಲ್ಲಿಯವರೆಗೆ ಯಾವುದೇ ಇಲಾಖೆಯ ಒಬ್ಬ ಅಧಿಕಾರಿಯ ಮೇಲೂ ಕ್ರಮವಾಗಿಲ್ಲ. ಸಾರ್ವಜನಿಕರ...
ಹೊಸ ಸೇರ್ಪಡೆ
-
ಚಿಕ್ಕಬಳ್ಳಾಪುರ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಹಾಗೂ ನೌಕರರ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸಿಐಟಿಯು ನೇತೃತ್ವದಲ್ಲಿ...
-
ಚಿಂತಾಮಣಿ: ತಮ್ಮ ಮಾಲೀಕತ್ವದ ಖಾಲಿ ನಿವೇಶನ ಅಳೆಯಲು ಕಳೆದ ಎರಡು ವರ್ಷ ಗಳಿಂದ ಮನವಿ ನೀಡಿ, ಕಚೇರಿಗೆ ಅಲೆದಾಡಿದರೂ ಸ್ಪಂದಿಸದ ಕಾಗತಿ ಗ್ರಾಪಂ ಅಧಿಕಾರಿಗಳ ವಿರುದ್ಧ...
-
ಚಾಮರಾಜನಗರ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ, ಯುಕೆಜಿ ತರಗತಿ ಆರಂಭಿಸಬೇಕು. ವೇತನ ಬಾಕಿ ನೀಡಬೇಕು. ಮಾತೃಪೂರ್ಣ ಯೋಜನೆ ಯಶಸ್ಸಿಗೆ ಹೆಚ್ಚುವರಿ ಸಹಾಯಕಿಯರನ್ನು...
-
ಶರತ್ ಭದ್ರಾವತಿ ಶಿವಮೊಗ್ಗ: ಕಲೆ, ಸಂಸ್ಕೃತಿಗೆ ಶ್ರೀಮಂತವಾದ ಮಲೆನಾಡಿನಲ್ಲಿ ತಲೆ ಎತ್ತಿದ್ದ ಬಯಲು ರಂಗಮಂದಿರ ಕಳೆದ ಐದು ವರ್ಷಗಳಿಂದ ತನ್ನದೇ ಆದ ಸಮಸ್ಯೆಯಿಂದ...
-
ಹೈದರಾಬಾದ್/ನವದೆಹಲಿ: ಪಶುವೈದ್ಯೆ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ನಾಲ್ವರು ಆರೋಪಿಗಳನ್ನು...