Udayavni Special

ಓರೆಕೋರೆ ತಿದ್ದುವ ಹಾಸ್ಯ ಕಲಾವಿದ ಪ್ರಾಣೇಶ್‌


Team Udayavani, Aug 13, 2018, 12:40 PM IST

orekore.jpg

ಬೆಂಗಳೂರು: ಹಾಸ್ಯ ಚಟಾಕೆಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುತ್ತಿರುವ ಹಾಸ್ಯ ಕಲಾವಿದರಲ್ಲಿ ಗಂಗಾವತಿ ಪ್ರಾಣೇಶ್‌ ಕೂಡ ಒಬ್ಬರಾಗಿದ್ದಾರೆ ಎಂದು ನಟ ಪ್ರೇಮ್‌ ಹೇಳಿದ್ದಾರೆ.

ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ಸಾವಣ್ಣ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್‌ ಅವರ “ನಕ್ಕಾಂವ ಗೆದ್ದಾಂವ’ ಪುಸ್ತಕ ಬಿಡುಗೊಳಿಸಿ ಮಾತನಾಡಿದ ಅವರು, ನಗಿಸುವುದು ಕೂಡ ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಈ ಕಲೆ ಪ್ರಾಣೇಶ್‌ಗೆ ಸಿದ್ಧಿಸಿದ್ದು, ವಿಶ್ವದೆಲ್ಲೆಡೆ ನಗೆಬುಗ್ಗೆ ಚಿಮ್ಮುತ್ತಿದ್ದಾರೆ. ಇವರ ನಗೆಬುಗ್ಗೆ ಜೀವನ, ನಗೆಯ ಹಾಯಿದೋಣಿಯಂತೆ ಸಾಗಿಲಿ ಎಂದರು. 

ನಗರ ಪ್ರದೇಶದಲ್ಲಿ ನಗುವವರ ಸಂಖ್ಯೆ ಕಡಿಮೆಯಾಗಿದು, ಇದು ಜೀವನದ ಜಂಜಾಟವನ್ನು ತಿಳಿಸುತ್ತದೆ. ಹಾಸ್ಯದ ಜತೆ ಲೇಖಕರಾಗಿ ಗುರುತಿಸಿಕೊಂಡಿರುವ ಪ್ರಾಣೇಶ್‌ ಅವರು ನಗುವನ್ನೇ ಮರೆತ್ತಿರುವ ಜನರಿಗೆ ಹಾಸ್ಯದ ಮೂಲಕ ನಗುವಿನ ಔಷಧ ನೀಡುತ್ತಿದ್ದಾರೆ. ಇವರಿಂದ ಮತ್ತಷ್ಟು ಪುಸ್ತಕಗಳು ಹೊರಬರಲಿ ಎಂದು ಆಶಿಸಿದರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಮಾತನಾಡಿ, ಒಂದು ಕಾಲದಲ್ಲಿ ಯಾವುದೇ ಕಾರ್ಯಕ್ರಮಗಳು ಇರಲಿ ಜನ ಸೇರಿಸಬೇಕು ಎನ್ನುವ ಕಾರಣದಿಂದಾಗಿ ಸಿನಿಮಾ ನಟ -ನಟಿಯರನ್ನು ಕರೆಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಪ್ರಾಣೇಶ್‌ ಹಾಸ್ಯನಗೆ ಕಾರ್ಯಕ್ರಮ ಇದೆ ಎಂದರೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ  ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವೇ ಸಾಕ್ಷಿ ಎಂದರು. 

ಗಂಗಾವತಿ ಪ್ರಾಣೇಶ್‌ ಮಾತನಾಡಿ, ತಾನು ಬರಹಗಾರ, ಭಾಷಣಕಾರ ಅಲ್ಲ. ಹೊಟೆಪಾಡಿಗಾಗಿ ಹಾಸ್ಯವೃತ್ತಿ ಆಯ್ಕೆಮಾಡಿಕೊಂಡೆ. ಅದು ತನ್ನ ಕೈಹಿಡಿಯಿತು. ಪುಸ್ತಕವೇ ತನಗೆ ನಿಜವಾದ ಸಂಗಾತಿಯಾಯಿತು. ಪುಸ್ತಕ ಓದು, ತ‌ನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿತು ಎಂದು ಹೇಳಿದರು. ಪತ್ರಕರ್ತ ಜೋಗಿ, ಪ್ರಕಾಶಕ ಜಮೀಲ್‌ ಇತರರು ಉಪಸ್ಥಿತರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ICU

20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಾಲಗೆ ಕತ್ತರಿಸಿದ ದುರುಳರು !

ದುಷ್ಕರ್ಮಿಗಳಿಂದ ವಾಯು ವಿಹಾರಕ್ಕೆ ತೆರಳಿದ ತುಂಬು ಗರ್ಭಿಣಿ ಸೇರಿದಂತೆ ಇಬ್ಬರು ಮಹಿಳೆಯರ ಕೊಲೆ

ವಾಯುವಿಹಾರಕ್ಕೆ ತೆರಳಿದಾಗ ದುಷ್ಕರ್ಮಿಗಳಿಂದ ತುಂಬು ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣ! ಐವರ ಬಂಧನ: ಆರೋಪಿಗಳು ಯಾರು?

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣ! ಐವರ ಬಂಧನ: ಆರೋಪಿಗಳ ವಿವರ ಇಲ್ಲಿದೆ

modi-2

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಯಾವಾಗ ಸಿಗಲಿದೆ ಹೆಚ್ಚಿನ ಮನ್ನಣೆ: ಪ್ರಧಾನಿ ಮೋದಿ ಖಡಕ್ ನುಡಿ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಕರ್ನಾಟಕ ಬಂದ್‌ಗೆ ಉಡುಪಿಯ 14 ಸಂಘಟನೆಗಳಿಂದ ಬೆಂಬಲ

ಕರ್ನಾಟಕ ಬಂದ್‌ಗೆ ಉಡುಪಿಯ 14 ಸಂಘಟನೆಗಳಿಂದ ಬೆಂಬಲ

kkr-srh

ಕೆಕೆಆರ್–ಹೈದರಾಬಾದ್ ಕಾದಾಟ: ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವಾರ್ನರ್ ಪಡೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bng-tdy-5

ಕೋವಿಡ್‌ ಜಾಹೀರಾತು ಪ್ರಕಟಣೆಯಲ್ಲಿ ಷರತ್ತು ಉಲ್ಲಂಘನೆ : ಆದೇಶ ಹಿಂಪಡೆದ ಕೋರ್ಟ್‌

ರಾಜ್ಯದಲ್ಲಿ2 ದಿನ ಯೆಲ್ಲೋ ಅಲರ್ಟ್‌

ರಾಜ್ಯದಲ್ಲಿ 2 ದಿನ ಯೆಲ್ಲೋ ಅಲರ್ಟ್‌

bng-tdy-03

ಅಡಿಕೆ: ಎಂ.ಎಸ್‌.ರಾಮಯ್ಯಗೆ ಸಂಶೋಧನೆ ಹೊಣೆ

ಕ್ಷೇತ್ರಗಳ ಅನುದಾನಕ್ಕೆ ಬೇಡಿಕೆ

ಕ್ಷೇತ್ರಗಳ ಅನುದಾನಕ್ಕೆ ಬೇಡಿಕೆ

ತ್ಯಾಜ್ಯ ವಿಂಗಡಣೆ ಪ್ರಮಾಣದಲ್ಲಿ ಚೇತರಿಕೆ

ತ್ಯಾಜ್ಯ ವಿಂಗಡಣೆ ಪ್ರಮಾಣದಲ್ಲಿ ಚೇತರಿಕೆ

MUST WATCH

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ



ಹೊಸ ಸೇರ್ಪಡೆ

ಮಂಡ್ಯ: ಮೂವರು ಬೈಕ್ ಕಳ್ಳರ ಬಂಧನ ಮತ್ತೊಬ್ಬ ಪರಾರಿ, 7 ಬೈಕ್‌ಗಳ ವಶ ಪಡಿಸಿದ ಪೊಲೀಸರು

ಮಂಡ್ಯ: ಮೂವರು ಬೈಕ್ ಕಳ್ಳರ ಬಂಧನ ಮತ್ತೊಬ್ಬ ಪರಾರಿ, 7 ಬೈಕ್‌ಗಳ ವಶ ಪಡಿಸಿದ ಪೊಲೀಸರು

ICU

20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಾಲಗೆ ಕತ್ತರಿಸಿದ ದುರುಳರು !

ಪುಣೆ: 3,521 ಮಂದಿಗೆ ಸೋಂಕು, 78 ಸಾವು

ಪುಣೆ: 3,521 ಮಂದಿಗೆ ಸೋಂಕು, 78 ಸಾವು

ದುಷ್ಕರ್ಮಿಗಳಿಂದ ವಾಯು ವಿಹಾರಕ್ಕೆ ತೆರಳಿದ ತುಂಬು ಗರ್ಭಿಣಿ ಸೇರಿದಂತೆ ಇಬ್ಬರು ಮಹಿಳೆಯರ ಕೊಲೆ

ವಾಯುವಿಹಾರಕ್ಕೆ ತೆರಳಿದಾಗ ದುಷ್ಕರ್ಮಿಗಳಿಂದ ತುಂಬು ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

ಜಿಲ್ಲಾದ್ಯಂತ ಕೋವಿಡ್ ಪರೀಕ್ಷೆ ಹೆಚ್ಚಿಸಿ

ಜಿಲ್ಲಾದ್ಯಂತ ಕೋವಿಡ್ ಪರೀಕ್ಷೆ ಹೆಚ್ಚಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.