ಸಂಗೀತಾ ಮೊಬೈಲ್ಸ್‌ನಿಂದ ಪ್ರೈಸ್‌ ಚಾಲೆಂಜ್‌ ಮಾರಾಟ


Team Udayavani, Jan 9, 2018, 12:31 PM IST

sangeetha.jpg

ಬೆಂಗಳೂರು: ಮೊಬೈಲ್‌ ಫೋನ್‌ಗಳ ಮಾರಾಟ ಕ್ಷೇತ್ರದ ದಕ್ಷಿಣ ಭಾರತದ ಖ್ಯಾತ ಸಂಗೀತಾ ಮೊಬೈಲ್ಸ್‌ ಪ್ರೈ. ಲಿ., 2018ರ ಹೊಸ ವರ್ಷದ ಕೊಡುಗೆಯಾಗಿ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರುಕಟ್ಟೆ ವಿರುದ್ಧ “ಸಂಗೀತಾ ಪ್ರೈಸ್‌ ಚಾಲೆಂಜ್‌’ ಯೋಜನೆಯನ್ನು ರೂಪಿಸಿದೆ. ಸಂಗೀತಾ ಸಂಸ್ಥೆ ಮೊಟ್ಟ ಮೊದಲ ಬಾರಿಗೆ ದೇಶಾದ್ಯಂತ ಎಲ್ಲ 430 ಸಂಗೀತಾ ಸ್ಟೋರ್‌ಗಳಲ್ಲಿ ಹಾಗೂ ರಾಜ್ಯದ 210ಕ್ಕೂ ಹೆಚ್ಚು ಮಳಿಗೆಗಳಲ್ಲಿ ಆನ್‌ಲೈನ್‌ ಬೆಲೆಗೆ ಸವಾಲೆಸೆಯುವ ಈ ಮಾರಾಟ ಯೋಜನೆಯನ್ನು ಹಮ್ಮಿಕೊಂಡಿದೆ.

ಸಂಗೀತಾ ಮೊಬೈಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್‌. ಸುಭಾಷ್‌ಚಂದ್ರ ಅವರು ಸೋಮವಾರ ಮೈಸೂರಿನ ಫೋರಂ ಮಾಲ್‌ನಲ್ಲಿ ತೆರೆಯಲಿರುವ ಶೋರೂಮ್‌ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಉದಯವಾಣಿ ಜತೆ ಮಾತನಾಡಿದರು. ಯಾರೇ ಆಗಲಿ ಮೊಬೈಲ್‌ ಫೋನ್‌ ಕೊಳ್ಳುವ ಮುನ್ನ ನೇರವಾಗಿ ಮಳಿಗೆಗಳಿಗೆ ಹೋಗಿ ತಮಗಿಷ್ಟವಾದ ಫೋನ್‌ ಅನ್ನು ಆಯ್ಕೆ ಮಾಡಿಕೊಂಡು, ಪರಿಶೀಲಿಸಿ ಅದರ ಉಪಯೋಗ ಮತ್ತು ಸಾಧಕ-ಬಾಧಕಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಆನ್‌ಲೈನ್‌ನಲ್ಲಿ ಕಡಿಮೆ ದರಕ್ಕೆ ಸಿಗುತ್ತದೆಂದು ಬೇಕಾದ ಉತ್ಪನ್ನಗಳನ್ನು ಬುಕ್‌ ಮಾಡಿ, ಪಾರ್ಸೆಲ್‌ ಬಂದ ಮೇಲೆ ಮೋಸ ಹೋಗಿರುವ ಪ್ರಸಂಗಗಳನ್ನು ಕಂಡಿದ್ದೇವೆ. ಆ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಅದೇ ಆನ್‌ಲೈನ್‌ ದರಕ್ಕೆ ನಮ್ಮಲ್ಲಿ ಫೋನ್‌ಗಳು ದೊರೆಯುತ್ತವೆ ಎನ್ನುವುದನ್ನು ತೋರಿಸಲು ಸಂಗೀತಾ ಪ್ರೈಸ್‌ ಚಾಲೆಂಜ್‌ ಯೋಜನೆಯನ್ನು ಪರಿಚಯಿಸಿದೆ. ನಮಗೆ ಇದೊಂದು ದೊಡ್ಡ ಸವಾಲೆನಿಸಿದರೂ ಗ್ರಾಹಕರ ಹಿತದೃಷ್ಟಿಯಲ್ಲಿ ಇದನ್ನು ಡಿ.22 ರಿಂದ ಹಮ್ಮಿಕೊಂಡಿದ್ದೇವೆ ಎಂದರು.

ನಮ್ಮದು ಗ್ರಾಹಕ ಸ್ನೇಹಿ ಸಂಸ್ಥೆ. ನಮ್ಮಲ್ಲಿ ಬರುವ ಗ್ರಾಹಕರಿಗೆ ವರ್ಷಪೂರ್ತಿ ಒಂದಿಲ್ಲೊಂದು ಕೊಡುಗೆ, ಯೋಜನೆಗಳನ್ನು ನೀಡುತ್ತಾ ಬಂದಿದ್ದೇವೆ. ಸಂಗೀತಾ ಪ್ರೈಸ್‌ ಡ್ರಾಪ್‌ ಪ್ರೊಟೆಕ್ಷನ್‌, ಸಂಗೀತಾ ಡ್ಯಾಮೇಜ್‌ ಪ್ರೊಟೆಕ್ಷನ್‌, ಕ್ಯಾಷ್‌ ಬ್ಯಾಕ್‌ ಆಫರ್‌, ಒಂದು ವರ್ಷ ಉಚಿತ ಏರ್‌ ಆ್ಯಂಬುಲೆನ್ಸ್‌ ಸೇವೆ, 250 ರೂ. ಮೌಲ್ಯದ ಬಿಟ್‌ಕಾಯಿನ್‌, ಶೇ.80 ರವರೆಗೆ ಖಚಿತ ಫೋನ್‌ ಬೈ ಬ್ಯಾಕ್‌, ಉಚಿತ ಜಿಯೋ ಸಿಮ್‌ (100ಜಿಬಿ ವರೆಗೆ ಡಾಟಾ), ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ನಲ್ಲಿ ಮೊಬೈಲ್‌ ಕೊಂಡಲ್ಲಿ ಎಕ್ಸ್‌ಟ್ರಾ ಶೇ.5 ರಷ್ಟು ಕ್ಯಾಷ್‌ ಬ್ಯಾಕ್‌ ಮುಂತಾದ ಕೊಡುಗೆಗಳಿರುತ್ತವೆ.

10 ಕೋಟಿ + 5 ಕೋಟಿ ಪರಿಹಾರ: ಸಂಗೀತಾ ಮೊಬೈಲ್ಸ್‌ನ ವಿಶೇಷ ಸಂಗತಿಯೆಂದರೆ ಇದುವರೆಗೆ ಪ್ರೈಸ್‌ ಡ್ರಾಪ್‌ ಪ್ರೊಟೆಕ್ಷನ್‌ನಲ್ಲಿ 10 ಕೋಟಿ ರೂ. ಹಾಗೂ ಡ್ಯಾಮೇಜ್‌ ಪ್ರೊಟೆಕ್ಷನ್‌ನಲ್ಲಿ 5 ಕೋಟಿ ರೂ.ಗಳನ್ನು 1 ಲಕ್ಷ 15 ಸಾವಿರ ಗ್ರಾಹಕರು ಪಡೆದಿರುವುದು ಒಂದು ಮೈಲಿಗಲ್ಲಾಗಿದೆ. ಅಲ್ಲದೆ, ದೇಶದಲ್ಲಿ ಅತಿಹೆಚ್ಚು ಮೊಬೈಲ್‌ ಫೋನ್‌ ಮಾರಾಟ ಮಳಿಗೆಗಳನ್ನು ಹೊಂದಿರುವ ಸಂಗೀತಾ ಮೊಬೈಲ್ಸ್‌ ಈ ಮಾಸಾಂತ್ಯದಲ್ಲಿ ವಾರಣಾಸಿಯಲ್ಲಿ 10 ಶೋರೂಮ್‌ಗಳನ್ನು ತೆರೆಯುವ ಯೋಜನೆಯನ್ನೂ ಹಾಕಿಕೊಂಡಿದೆ ಎಂದು ಅವರು ತಿಳಿಸಿದರು.

ದಕ್ಷಿಣ ಭಾರತದ ಯಾವುದೇ ಮೂಲೆಯ ಸಂಗೀತಾ ಶೋರೂಮ್‌ನಲ್ಲಿ ಮೊಬೈಲ್‌ ಖರೀದಿಸಿದ ಗ್ರಾಹಕರಿಗೆ ತುರ್ತು ಸಂದರ್ಭದಲ್ಲಿ ಆರೋಗ್ಯ ಸೇವೆ ಒದಗಿಸಲು ಉಚಿತ ಏರ್‌ ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಸಂಸ್ಥೆಯ ಅಸಂಖ್ಯಾತ ಗ್ರಾಹಕರ ಆರೋಗ್ಯ ರಕ್ಷಣೆ ಬಗ್ಗೆ ಕಾಳಜಿ ತೋರಲು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತಹ ಸೇವೆ ಆರಂಭಿಸಿದ್ದೇವೆ. ಈ ಸೌಲಭ್ಯವನ್ನು ಒಂದು ವರ್ಷ ಕಾಲ ಉಚಿತವಾಗಿ ನೀಡಲಾಗುವುದು. ಸ್ಮಾರ್ಟ್‌ಫೋನ್‌ ಖರೀದಿಗೆ ಪ್ರತಿಯಾಗಿ ಆರೋಗ್ಯ ಸೇವೆಯ ಪ್ರತ್ಯೇಕ ಕಾರ್ಡ್‌ ವಿತರಿಸ‌ಲಾಗುವುದು.
-ಎಲ್‌. ಸುಭಾಷ್‌ಚಂದ್ರ, ವ್ಯವಸ್ಥಾಪಕ ನಿರ್ದೇಶಕ

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!

Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.