Udayavni Special

ನೇಣು ಬಿಗಿದುಕೊಂಡು ಕೈದಿ ಆತ್ಮಹತ್ಯೆ


Team Udayavani, Nov 7, 2019, 3:04 AM IST

hanging-2

ಬೆಂಗಳೂರು: ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹ ಆವರಣದಲ್ಲಿ ಬುಧವಾರ ಮುಂಜಾನೆ ನಡೆದಿದೆ. ನೆಲಮಂಗಲ ಮೂಲದ ವಿ. ಮಂಜುನಾಥ್‌ (48) ಮೃತ ಕೈದಿ. ಬುಧವಾರ ಬೆಳಗ್ಗೆ 6.45ರ ಸುಮಾರಿಗೆ ಡಿ ಬ್ಯಾರಕ್‌ನ ಏಳನೇ ಕೊಠಡಿ ಸಮೀಪದ ಕಬ್ಬಿಣದ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಹತ್ತು ವರ್ಷಗಳ ಹಿಂದೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಮಂಜುನಾಥ್‌, ಜೈಲಿನಲ್ಲಿ ನಡೆಯುವ ಕೆಲ ವಿಭಾಗಗಳ ಮೇಲ್ವಿಚಾರಕರ ಚುನಾವಣೆಯಲ್ಲಿ ಗೆದ್ದು, ಅಡುಗೆ ವಿಭಾಗದ “ಪಂಚ್‌’ (ಮೇಲ್ವಿಚಾರಕ) ಆಗಿದ್ದು, ಪ್ರತಿ ನಿತ್ಯ ಎಲ್ಲ ಕೈದಿಗಳಿಗೆ ಕಾಫಿ, ತಿಂಡಿ ಹಾಗೂ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ. ಜತೆಗೆ ಸ್ವಚ್ಛತಾ ವಿಭಾಗದ ಉಸ್ತುವಾರಿ ಹೊತ್ತಿದ್ದ.

ಪ್ಲಾಸ್ಟಿಕ್‌ ಚೀಲದಲ್ಲಿ ಬಿಗಿದುಕೊಂಡು ಆತ್ಮಹತ್ಯೆ: ಬೆಳಗ್ಗೆ 6.30ಕ್ಕೆ ಎಲ್ಲ ಬ್ಯಾರಕ್‌ಗಳಿಗೆ ಕಾಫಿ ವಿತರಣೆ ಮಾಡಿರುವ ಬಗ್ಗೆ ಪರಿಶೀಲಿಸಿ ಬಂದ ಮಂಜುನಾಥ್‌, ಅಡುಗೆ ಕೊಣೆಗೆ ತರಕಾರಿ ಬರುತ್ತಿದ್ದ ಪ್ಲಾಸ್ಟಿಕ್‌ ಚೀಲವನ್ನು ತನ್ನೊಂದಿಗೆ ಕೊಂಡೊಯ್ದಿದ್ದ. ಅದನ್ನೇ ಹಗ್ಗದ ಮಾದರಿಯಲ್ಲಿ ಸುತ್ತಿಕೊಂಡು 6.45ರ ಸುಮಾರಿಗೆ ಡಿ ಬ್ಯಾರಕ್‌ನ ಕೆಳಮಹಡಿಯಲ್ಲಿರುವ ಏಳನೇ ಕೊಠಡಿ ಬಳಿ ಇರುವ ಕಬ್ಬಿಣದ ಗೇಟ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಂತರ ಮಂಜುನಾಥ್‌ಗಾಗಿ ಇತರೆ ಕೈದಿಗಳು ಹುಡುಕಾಟ ನಡೆಸುತ್ತಿರುವಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಖಿನ್ನತೆಗೊಳಗಾಗಿದ್ದ ಕೈದಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗುವ ಕೈದಿಗಳಿಗೆ ಅವಧಿ ಪೂರ್ಣ ಬಿಡುಗಡೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಮಂಜುನಾಥ್‌ ಸನ್ನಡತೆ ಹೊಂದಿದ್ದರೂ ನಿಯಮದ ಪ್ರಕಾರ ಬಿಡುಗಡೆಗೆ ಅವಕಾಶ ಇರಲಿಲ್ಲ. ಅದರಿಂದ ಖಿನ್ನತೆಗೊಳಗಾಗಿದ್ದ. ಅಲ್ಲದೆ, ಕೆಲ ತಿಂಗಳ ಹಿಂದೆ ಸಜಾ ಬಂಧಿಗಳ ಬಿಡುಗಡೆ ಆಗುತ್ತಿಲ್ಲ ಎಂಬ ಸುದ್ದಿಯನ್ನು ಪ್ರಕಟಿಸಿದ್ದ ದಿನ ಪತ್ರಿಕೆಯೊಂದರ ನಕಲಿ ಪ್ರತಿಯನ್ನು ಇಟ್ಟುಕೊಂಡು, ಈ ಬಗ್ಗೆ ಸಹ ಕೈದಿಗಳ ಜತೆ ಚರ್ಚೆ ನಡೆಸುತ್ತಿದ್ದ.

ತಾವು ಎಷ್ಟೇ ಸನ್ನಡತೆ ಹೊಂದಿದ್ದರು ತಮಗೆ ಬಿಡುಗಡೆ ಆಗುವುದಿಲ್ಲ ಎಂದು ಅಳಲು ತೊಡಿಕೊಂಡಿದ್ದ ಎಂದು ಸಹ ಕೈದಿಗಳು ಹೇಳುತ್ತಿದ್ದರು. ಈ ಮಧ್ಯೆ ಮಂಗಳವಾರವಷ್ಟೇ ಮೂವರು ಅಲ್ಪಾವಧಿ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಎಲ್ಲ ವಿಚಾರಗಳಿಂದ ಆತ ಮಾನಸಿಕವಾಗಿ ನೊಂದಿದ್ದ. ಆತ್ಮಹತ್ಯೆ ಸಂದರ್ಭದಲ್ಲಿಯೂ ಆತನ ಜೇಬಿನಲ್ಲಿ ದಿನ ಪತ್ರಿಕೆಯ ನಕಲಿ ಪ್ರತಿ ಪತ್ತೆಯಾಗಿದೆ ಎಂದು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳು ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಇನ್ನು ಮೂರು ವರ್ಷ ಬಿ.ಎಸ್‌.ವೈ ಅವರೇ ಸಿಎಂ: ಕೆ.ಎಸ್‌.ಈಶ್ವರಪ್ಪ

ಇನ್ನು ಮೂರು ವರ್ಷ ಬಿ.ಎಸ್‌.ವೈ ಅವರೇ ಸಿಎಂ: ಕೆ.ಎಸ್‌.ಈಶ್ವರಪ್ಪ

ಬಿಜೆಪಿ ಸರ್ಕಾರದ ಪತನ ಹಗಲು ಗನಸು: ಅಶ್ವತ್ಥನಾರಾಯಣ

ಬಿಜೆಪಿ ಸರ್ಕಾರದ ಪತನ ಹಗಲು ಗನಸು: ಅಶ್ವತ್ಥನಾರಾಯಣ

ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ: ಉಗ್ರಪ್ಪ

ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ: ಉಗ್ರಪ್ಪ

ಸಿಎಂ ಸಹಿತ ಸಚಿವ, ಶಾಸಕರ ವೇತನ ಭತ್ತೆ ಶೇ. 30 ಕಡಿತ

ಸಿಎಂ ಸಹಿತ ಸಚಿವ, ಶಾಸಕರ ವೇತನ ಭತ್ತೆ ಶೇ. 30 ಕಡಿತ

ಐದು ದಿನದೊಳಗೆ ಗ್ಯಾಂಗ್ ಸ್ಟರ್ ಅರುಣ್ ಗೌಳಿ ಶರಣಾಗಬೇಕು: ಬಾಂಬೆ ಹೈಕೋರ್ಟ್

ಐದು ದಿನದೊಳಗೆ ಗ್ಯಾಂಗ್ ಸ್ಟರ್ ಅರುಣ್ ಗೌಳಿ ಶರಣಾಗಬೇಕು: ಬಾಂಬೆ ಹೈಕೋರ್ಟ್

ಮೈ ಶುಗರ್‌ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಬದ್ಧ

ಮೈ ಶುಗರ್‌ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಬದ್ಧ

ಮೋದಿ, ಶಾ ಮಾತುಕತೆ; ದೇಶದಲ್ಲಿ ಇನ್ನೂ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

ಮೋದಿ, ಶಾ ಮಾತುಕತೆ; ದೇಶದಲ್ಲಿ ಇನ್ನೂ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sabheya bbmp

ಸ್ಫೋಟಗೊಂಡ ಕಿಟ್‌ ಅವ್ಯವಹಾರ ಆರೋಪ

swagramada

ಸ್ವಗ್ರಾಮದ ಕನಸಿಗೆ ಅಂಫಾನ್‌ ಅಡ್ಡಿ

asamadhanadalle

ಅಸಮಾಧಾನದಲ್ಲೇ ಪಿಯು ಪತ್ರಿಕೆ ಮೌಲ್ಯಮಾಪನ

agarda-9-mandi

ನಗರದ ಒಂಬತ್ತು ಮಂದಿಗೆ ಸೋಂಕು

melsetuve

ಮೇಲ್ಸೇತುವೆಗೆ ಸಾವರ್ಕರ್‌ ಹೆಸರು ಇಡುವುದು ಶತಃಸಿದ್ಧ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಇನ್ನು ಮೂರು ವರ್ಷ ಬಿ.ಎಸ್‌.ವೈ ಅವರೇ ಸಿಎಂ: ಕೆ.ಎಸ್‌.ಈಶ್ವರಪ್ಪ

ಇನ್ನು ಮೂರು ವರ್ಷ ಬಿ.ಎಸ್‌.ವೈ ಅವರೇ ಸಿಎಂ: ಕೆ.ಎಸ್‌.ಈಶ್ವರಪ್ಪ

ಬಿಜೆಪಿ ಸರ್ಕಾರದ ಪತನ ಹಗಲು ಗನಸು: ಅಶ್ವತ್ಥನಾರಾಯಣ

ಬಿಜೆಪಿ ಸರ್ಕಾರದ ಪತನ ಹಗಲು ಗನಸು: ಅಶ್ವತ್ಥನಾರಾಯಣ

ಹೈಕೋರ್ಟ್‌ ಸ್ವಯಂ ಪ್ರೇರಿತ ಪಿಐಎಲ್‌: ಕೇಂದ್ರ, ರಾಜ್ಯ ಸರ್ಕಾರಕ್ಕೆ ನೋಟಿಸ್‌

ಹೈಕೋರ್ಟ್‌ ಸ್ವಯಂ ಪ್ರೇರಿತ ಪಿಐಎಲ್‌: ಕೇಂದ್ರ, ರಾಜ್ಯ ಸರ್ಕಾರಕ್ಕೆ ನೋಟಿಸ್‌

ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ: ಉಗ್ರಪ್ಪ

ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ: ಉಗ್ರಪ್ಪ

ಸಿಎಂ ಸಹಿತ ಸಚಿವ, ಶಾಸಕರ ವೇತನ ಭತ್ತೆ ಶೇ. 30 ಕಡಿತ

ಸಿಎಂ ಸಹಿತ ಸಚಿವ, ಶಾಸಕರ ವೇತನ ಭತ್ತೆ ಶೇ. 30 ಕಡಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.