ಕನ್ನಡ ಫ‌ಲಕ ಹಾಕಿ ಅಂತ ಕಿರುಕುಳ ಕೊಡ್ಬೇಡಿ!

Team Udayavani, Dec 8, 2019, 3:09 AM IST

ಬೆಂಗಳೂರು: “ಕನ್ನಡ ನಾಮಫ‌ಲಕ ಅಳವಡಿಸಿಕೊಳ್ಳಿ ಎಂದು ಉದ್ದಿಮೆಗಳಿಗೆ ಕಿರುಕುಳ ನೀಡಬೇಡಿ’ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್‌.ಜನಾರ್ದನ್‌, ಮೇಯರ್‌ ಎಂ.ಗೌತಮ್‌ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ನಗರದಲ್ಲಿ ಮೂಲಸೌಕರ್ಯ ಸಮಸ್ಯೆಗಳು ತಾಂಡವವಾಡುತ್ತಿದ್ದು, ಮೊದಲು ಈ ಸಮಸ್ಯೆಗಳನ್ನು ಪರಿಹರಿಸಿ ಎಂದು ನಗರದ ಸಮಸ್ಯೆಗಳನ್ನು ಪಟ್ಟಿ ಮಾಡಿ ಕಳುಹಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಉದ್ದಿಮೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ಮಾಲ್‌ಗ‌ಳ ನಾಮಫ‌ಲಕಗಳಲ್ಲಿ ಶೇ.60ರಷ್ಟು ಕಡ್ಡಾಯವಾಗಿ ಕನ್ನಡ ಅಳವಡಿಸಿಕೊಳ್ಳಬೇಕು ಎನ್ನುವ ನಿಯಮದ ಹಿನ್ನೆಲೆಯಲ್ಲಿ ಈ ಪತ್ರ ಬರೆದಿರುವ ಅವರು, ಡಾಂಬರೀಕರಣ ಮಾಡಿದ ಒಂದು ವಾರದಲ್ಲಿ ರಸ್ತೆಗಳು ಹಾಳಾಗುವಷ್ಟು ಚೆನ್ನಾಗಿ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದಾರೆ. ಮಳೆ ಅನಾಹುತಗಳನ್ನು ತಡೆಯಲು ಬಿಬಿಎಂಪಿಗೆ ಆಗುತ್ತಿಲ್ಲ ಮೊದಲು ಈ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿ’ ಎಂದು ವ್ಯಂಗ್ಯವಾಡಿದ್ದಾರೆ.

ಉದ್ದಿಮೆಗಳು ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಇದರ ನಡುವೆ ಉದ್ದಿಮೆಗಳಿಗೆ ಕನ್ನಡ ನಾಮಫ‌ಲಕ ಅಳವಡಿಸಿಕೊಳ್ಳುವ ಕಿರುಕುಳ ನೀಡಬೇಡಿ ಎಂದಿದ್ದಾರೆ. ಅಲ್ಲದೆ, ಉದ್ದಿಮೆದಾರರಿಗೆ ಈ ನಿಯಮ ಪಾಲಿಸುವುದಕ್ಕೆ ಸೂಚಿಸುತ್ತೇವೆ. ಆದರೂ ನಗರದಲ್ಲಿ 10 ಲಕ್ಷ ಕೈಗಾರಿಕೋದ್ಯಮಿಗಳು ಹಾಗೂ 20 ಲಕ್ಷ ವ್ಯಾಪಾರೋದ್ಯಮಿಗಳಿದ್ದು, ಈ ನಿಯಮವನ್ನು ಅಳವಡಿಸಿಕೊಳ್ಳಲು 2020ರ ಎಪ್ರಿಲ್‌30ರ ವರೆಗೆ ಕಾಲಾವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಮೊದಲು ಈ ಸಮಸ್ಯೆಗಳತ್ತ ನೋಡಿ: ನಗರದ ಕೆಲವು ಸಮಸ್ಯೆಗಳನ್ನು ಪಟ್ಟಿ ಮಾಡಿರುವ ಎಫ್ಕೆಸಿಸಿ ಅಧ್ಯಕ್ಷರು, ಈ ಸಮಸ್ಯೆಗಳತ್ತ ಗಮನ ನೀಡಿ, ಇದಕ್ಕೆ ಮೊದಲು ಪರಿಹಾರ ಕಂಡುಕೊಳ್ಳಿ ಎಂದು ಮೇಯರ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ರಸ್ತೆ ಗುಂಡಿಗಳಿಂದ ನಗರದಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ ಘನತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ಸಾಂಕ್ರಾಮಿಕ ರೋಗ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಮಳೆ ಬಂದಾಗ ಉಂಟಾಗುವ ಅನಾಹುತಗಳನ್ನು ತಡೆಯುವಲ್ಲಿ ಬಿಬಿಎಂಪಿ ವಿಫ‌ಲವಾಗಿದೆ ಮಳೆ ನೀರು ರಸ್ತೆಗಳಲ್ಲಿನ ಕೊಳಚೆ ನೀರಿನೊಂದಿಗೆ ಸೇರಿಕೊಂಡು ರಸ್ತೆಗಳು ಹೊಂಡವಾಗುತ್ತಿದೆ.

ನಗರದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪಾಲಿಕೆ ನಿಯಮ ರೂಪಿಸಿದೆ. ಈ ನಿಯವನ್ನು ನಾವು ಪಾಲಿಸುತ್ತಿದ್ದೇವೆ. ಇದರಲ್ಲಿ ಕಿರುಕುಳ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕನ್ನಡ ನಾಮಫ‌ಲಕ ಅಳವಡಿಸಿಕೊಳ್ಳಲು ಕಾಲಾವಕಾಶವೂ ನೀಡಲಾಗಿದೆ.
-ವಿಜಯೇಂದ್ರ, ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಶೌಚಗುಂಡಿ ಸ್ವಚ್ಛ ಮಾಡುತ್ತಿದ್ದ ವೇಳೆ ಉಸಿರುಗಟ್ಟಿ ಯುವಕನೊಬ್ಬ ಮೃತಪಟ್ಟಿದ್ದು, ಮತ್ತೂಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇನ್‌ಫೆಂಟ್ರಿ...

  • ಬೆಂಗಳೂರು: ಸ್ವಚ್ಛ ನಗರ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ಬಿಬಿಎಂಪಿ ಸ್ವಚ್ಛ ಸರ್ವೆಕ್ಷಣ್‌ ಅಭಿಯಾನ ಮಾಡುತ್ತಿದ್ದರೆ ಅದಕ್ಕೆ ಪೂರಕವಾಗಿ ಸಾರ್ವಜನಿಕರ ಸ್ಪಂದನೆ...

  • ಬೆಂಗಳೂರು: ಸಮಾಜವು ಗುಲಾಮಗಿರಿಯಿಂದ ಹೊರಬರದ ಹೊರತು ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಅಕ್ಕನಮನೆ ದಶಮಾನೋತ್ಸವ...

  • ಬೆಂಗಳೂರು: ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡಬೇಕಾದರೆ ಕಡ್ಡಾಯವಾಗಿ ಕಸಮುಕ್ತ ನಗರವನ್ನಾಗಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಿ ಸ್ವಚ್ಛತೆ...

  • ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಜೀವ ಬೆದರಿಕೆ ಬಂದಿದ್ದರೆ ಪೊಲೀಸ್‌ ಇಲಾಖೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಬಿಜೆಪಿ...

ಹೊಸ ಸೇರ್ಪಡೆ