ಹೈಕೋರ್ಟ್‌ ಅಂಗಳದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿವಾದ


Team Udayavani, Oct 31, 2019, 3:06 AM IST

highcourt2

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿವಾದ ಇದೀಗ ಹೈಕೋರ್ಟ್‌ ಅಂಗಳಕ್ಕೆ ತಲುಪಿದ್ದು, ಪ್ರಭಾತ್‌ ಆರ್ಟ್ಸ್ ಇಂಟರ್‌ನ್ಯಾಷನಲ್‌ ಸಂಸ್ಥೆ, ಉದ್ಯಮಿಗಳಾದ ಕೆ.ಪ್ರಕಾಶ್‌ ಶೆಟ್ಟಿ ಹಾಗೂ ಡಾ.ವಿಜಯ್‌ ಸಂಕೇಶ್ವರ್‌ ಅವರನ್ನು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಈ ಕುರಿತು ಬೆಂಗಳೂರಿನ ವಿಜಯನಗರ ಮೂಲದ ಸಾಮಾಜಿಕ ಕಾರ್ಯಕರ್ತ ಕೇಶವ ಗೋಪಾಲ್‌ ತಕರಾರು ಅರ್ಜಿ ಸಲ್ಲಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಶಸ್ತಿ ಪರಿಶೀಲನಾ ಸಮಿತಿ ಸದಸ್ಯರಾಗಿದ್ದ ನಿರುಪಮಾ ರಾಜೇಂದ್ರನ್‌, ಪ್ರಭಾತ್‌ ಆರ್ಟ್ಸ್ ಇಂಟರ್‌ನ್ಯಾಷನಲ್‌ ಮತ್ತು ಉದ್ಯಮಿಗಳಾದ ಕೆ.ಪ್ರಕಾಶ್‌ ಶೆಟ್ಟಿ ಮತ್ತು ಡಾ.ವಿಜಯ ಸಂಕೇಶ್ವರ್‌ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಅರ್ಜಿದಾರರು ರಾಜ್ಯೋತ್ಸವ ಪ್ರಶಸ್ತಿಯ ಆಕಾಂಕ್ಷಿಯಾಗಿದ್ದರು. ಆದರೆ, ಅವರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಿಲ್ಲ. ಇನ್ನು ಪ್ರಸಕ್ತ ಸಾಲಿನ ರಾಜ್ಯೊತ್ಸವ ಪ್ರಶಸ್ತಿ ಆಯ್ಕೆ ಪರಿಶೀಲನಾ ಸಮಿತಿಯಲ್ಲಿದ್ದ ಬಹುತೇಕ ಸದಸ್ಯರು ಆಡಳಿತಾರೂಢ ಬಿಜೆಪಿಗೆ ಸೇರಿದವರಾಗಿದ್ದರು. ಪ್ರಶಸ್ತಿ ಆಯ್ಕೆಯಲ್ಲಿ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೆ, ಪ್ರಶಸ್ತಿ ಪರಿಶೀಲನಾ ಸಮಿತಿ ಸದಸ್ಯರಾಗಿದ್ದ ನಿರುಪಮಾ ರಾಜೇಂದ್ರನ್‌ ಅವರು, ತಾವು ಸ್ಥಾಪಿಸಿದ ಪ್ರಭಾತ್‌ ಆರ್ಟ್ಸ್ ಇಂಟರ್‌ ನ್ಯಾಷನಲ್‌ಗೆ ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಈ ಕುರಿತು ಅವರೇ ನೀಡಿರುವ ಹೇಳಿಕೆಗಳ ಕುರಿತ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇನ್ನು ಉದ್ಯಮಿಯಾದ ಕೆ.ಪ್ರಕಾಶ್‌ ಶೆಟ್ಟಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರ ಆಪ್ತರಾಗಿದ್ದಾರೆ. ಡಾ.ವಿಜಯ ಸಂಕೇಶ್ವರ್‌ ಅವರು ಬಿಜೆಪಿಗೆ ಸೇರಿದವರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಆದ್ದರಿಂದ ಉದ್ಯಮಿಗಳಾದ ಕೆ.ಪ್ರಕಾಶ್‌ ಶೆಟ್ಟಿ, ಡಾ.ವಿಜಯ್‌ ಸಂಕೇಶ್ವರ್‌ ಮತ್ತು ಪ್ರಭಾತ್‌ ಆರ್ಟ್ಸ್ ಇಂಟರ್‌ ನ್ಯಾಷನಲ್‌ ಸಂಸ್ಥೆಗೆ ಪ್ರಸ್ತಕ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವುದನ್ನು ತಡೆ ಹಿಡಿಯಬೇಕು. ರಾಜಕೀಯ ಪಕ್ಷಕ್ಕೆ ಸೇರಿದವರನ್ನು ರಾಜ್ಯೋತ್ಸವ ಪ್ರಶಸ್ತಿ ಪರಿಶೀಲನಾ ಸಮಿತಿಯ ಸದಸ್ಯರನ್ನಾಗಿ ನಿಯೋಜಿಸಬಾರದು. ಜತೆಗೆ, ಅರ್ಜಿದಾರರ ಹೆಸರನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಟಾಪ್ ನ್ಯೂಸ್

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

1-d-s-sfsf

ಬೆಂಗಳೂರಿನಲ್ಲಿ ಐಕಿಯ ಸ್ಟೋರ್:ಸಿಇಓ ಜೆಸ್ಪರ್ ಬ್ರಾಡಿನ್ ಜತೆ ಸಿಎಂ ಚರ್ಚೆ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

1-fsfdf

ಹೆಚ್ಚುತ್ತಿರುವ ಮಂಕಿ ಪಾಕ್ಸ್ ಸೋಂಕಿನ ಪ್ರಮಾಣ : ಸಲಿಂಗಕಾಮಿಗಳಿಗೆ ಎಚ್ಚರಿಕೆ

1-dfdffds

ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

dk shi 2

ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಸ್ಕೆಟ್‌ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್

ಬಿಸ್ಕೆಟ್‌ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್

Untitled-1

ಕ್ರಿಕೆಟ್‌  ಬೆಟ್ಟಿಂಗ್‌: ಸಾಲ ತೀರಿಸಲು ಬೈಕ್‌ ಕಳ್ಳತನ; ಆರೋಪಿ ಬಂಧನ

ಶಾಲೆ ಬಳಿ ಸಾರಿ.. ಸಾರಿ.. ಬರಹ: ಮುನಿಸಿಕೊಂಡ ಪ್ರಿಯತಮೆಯ ಓಲೈಕೆಗೆ ಪಾಗಲ್ ಪ್ರೇಮಿಯ ಕೃತ್ಯ?

ಶಾಲೆ ಬಳಿ ಸಾರಿ.. ಸಾರಿ.. ಬರಹ: ಮುನಿಸಿಕೊಂಡ ಪ್ರಿಯತಮೆಯ ಓಲೈಕೆಗೆ ಪಾಗಲ್ ಪ್ರೇಮಿಯ ಕೃತ್ಯ?

Untitled-1

ಶೋಕಿ ಜೀವನಕ್ಕಾಗಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ; ಮೂವರ ಬಂಧನ

ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!

ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!

MUST WATCH

udayavani youtube

ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

ಹೊಸ ಸೇರ್ಪಡೆ

fire-fighters

ಅತಿವೃಷ್ಟಿಯಲ್ಲಿ ಆಪದ್ಭಾಂಧವನಾದ ಅಗ್ನಿಶಾಮಕ ದಳ!

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

Untitled-1

ಶಿಥಿಲಗೊಂಡ ಸರಕಾರಿ ಶಾಲೆಗಳ ಅಭಿವೃದ್ಧಿಪಡಿಸಿ

huvinahadagali

ರೈತರ ಹೊಲಗಳಿಗೆ ಕಲುಷಿತ ನೀರು ತಡೆಗೆ ಮನವಿ

17

ಪಶು ಆಸ್ಪತ್ರೆಗೆ ಸಿಬ್ಬಂದಿ ನೇಮಿಸಲು ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.