ಎಸ್‌ಐಟಿ ರಚನೆಗೆ 2 ದಿನದಲ್ಲಿ ಶಿಫಾರಸು: ವಿಶ್ವನಾಥ್‌

ಅಕ್ರಮ ದಾಖಲೆ ಸೃಷ್ಟಿಸಿ ನಿವೇಶನ ನೋಂದಣಿ ಸೇರಿ ವಿವಿಧ ಪ್ರಕರಣಗಳ ತನಿಖೆ: ಬಿಡಿಎ ಅಧ್ಯಕ್ಷ

Team Udayavani, Dec 19, 2020, 11:56 AM IST

ಎಸ್‌ಐಟಿ ರಚನೆಗೆ 2 ದಿನದಲ್ಲಿ ಶಿಫಾರಸು: ವಿಶ್ವನಾಥ್‌

ಬೆಂಗಳೂರು: ಸಗಟು ನಿವೇಶನ ಹಂಚಿಕೆಗೆ ಸಂಬಂಧಿಸಿದ ಅಕ್ರಮ ದಾಖಲೆ ಸೃಷ್ಟಿ ಸೇರಿ ವಿವಿಧ ಪ್ರಕರಣಗಳ ತನಿಖೆಗೆ ದಕ್ಷ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಸರ್ಕಾರಕ್ಕೆ ಬಿಡಿಎ ಶಿಫಾರಸು ಮಾಡಲು ನಿರ್ಧರಿಸಿದೆ.

ಇತ್ತೀಚೆಗೆ ಬಿಡಿಎ ದಾಖಲೆಗಳನ್ನು ಅಕ್ರಮವಾಗಿ ಸೃಷ್ಟಿಸಿ ಪಟ್ಟಭದ್ರರಿಗೆ ನಿವೇಶನ ನೋಂದಣಿಮಾಡಿಸಿಕೊಡುವ ಜಾಲ ಪತ್ತೆ ಹಿನ್ನೆಲೆಯಲ್ಲಿಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಇದಲ್ಲದೆ,ನಕಲಿ ದಾಖಲೆ ಸೃಷ್ಟಿ, ಮೂಲೆ ನಿವೇಶನ ಹಂಚಿಕೆ ಮತ್ತಿತರ ಹಗರಣಗಳ ಜಾಲ ವೂ ಇದೆ. ಇದರಪತ್ತೆಗೆ ದಕ್ಷ ಅಧಿಕಾರಿ ನೇತೃತ್ವ ದಲ್ಲಿ ಪ್ರತ್ಯೇಕ ಎಸ್‌ ಐಟಿ ರಚನೆ ಅಗತ್ಯವಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದರು.

ಬಿಡಿಎ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಒಂದೆರಡು ದಿನದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. “ಕಿರು ಅರಣ್ಯ’ ಕಡ್ಡಾಯ: ಸರ್ಕಾರದ ಮಹತ್ವಾ ಕಾಂಕ್ಷಿ “ಮಿಷನ್‌- 2022’ಗೆ ಪೂರಕವಾಗಿ ಇನ್ಮುಂದೆ ಬಿಡಿಎ ಮತ್ತು ಅದರ ಅನುಮೋದಿತ ಬಡಾವಣೆಗಳಲ್ಲಿ ಕಿರು ಅರಣ್ಯ ಅಭಿವೃದ್ಧಿ ಕಡ್ಡಾಯಗೊಳಿಸಲಾಗುವುದು. ಮಿಷನ್‌-2022ರಲ್ಲಿ ಹಸಿರೀಕರಣಕ್ಕೆ ಒತ್ತು ನೀಡಿದೆ. ಇದಕ್ಕೆ ಪೂರಕವಾಗಿ ಬಿಡಿಎ ಅನುಮೋದಿತ ಮತ್ತು ತನ್ನದೇ ಆದ ಬಡಾವಣೆಗಳಲ್ಲಿ ಕಿರು ಅರಣ್ಯ ಕಡ್ಡಾಯ ಗೊಳಿಸಲಿದೆ. ಈ ಕಿರು ಅರಣ್ಯದಲ್ಲಿ ಮಾವು, ಬೇವು, ಹೊಂಗೆ ಸೇರಿದಂತೆ ಮತ್ತಿತರ ಪ್ರಕಾರದ ಮರ ಬೆಳೆಸಲಾಗುವುದು. ಅಲ್ಲದೆ, ಸುತ್ತ ಅಥವಾ ಸೂಕ್ತ ಸ್ಥಳದಲ್ಲಿ ನಾಗರಿಕರ ವಾಯು ವಿಹಾರಕ್ಕೆ ಪ್ರತ್ಯೇಕ ಪಥ ನಿರ್ಮಿಸಲಾಗುವುದೆಂದರು. ಪರಿಸರ ಕಾಳಜಿ:ಇದುವರೆಗೆ ಬಡಾವಣೆಗಳಲ್ಲಿ ಉದ್ಯಾನ ನಿರ್ಮಿಸಿ ನಿರ್ವಹಣೆಗೆ ಪ್ರತಿವರ್ಷ ಪ್ರತ್ಯೇಕ ಸಿಬ್ಬಂದಿ, ಹಣ ವೆಚ್ಚ ಮಾಡಬೇಕಿತ್ತು. ಉದ್ಯಾನಗಳಿಗೆ ಲಾನ್‌, ಅಲಂಕಾರಿಕ ಗಿಡಗಳಿಗೆ ಹೆಚ್ಚಿನ ಹಣ ಭರಿಸುವುದು, ಪ್ರತಿದಿನ ನೀರು, ಗೊಬ್ಬರ, ಆರೈಕೆಗಾಗಿ ಲಕ್ಷಾಂತರ ರೂ.ಖರ್ಚಾ ಗುತ್ತಿತ್ತು. ಇದನ್ನು ತಪ್ಪಿಸುವುದು ಮತ್ತು ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಮೂಡಿಸಲು ಕಿರು ಅರಣ್ಯ ಅಭಿವೃದ್ಧಿಗೆ ನಿರ್ಧರಿಸಲಾಗಿದೆ ಎಂದರು.

ಜತೆಗೆ ಮಾಜಿ ಸೈನಿಕರಿಗೆ ಷರತ್ತಿಗೊಳಪಟ್ಟು ಲಭ್ಯವಿರುವ ಕಡೆ ಉಚಿತ ನಿವೇಶನ ಹಂಚಿಕೆಗೂ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ವಿನಾಯ್ತಿಗೆ ಮನವಿ :

ಬಫ‌ರ್‌ ವಲಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ನೀಡಿರುವ ತೀರ್ಪಿನಿಂದ ಸಾವಿರಾರುಮನೆಗಳಿಗೆ ಸಂಕಷ್ಟ ಎದುರಾಗಿದೆ. ಇದರಿಂದ ಮನೆಗಳ ಮಾಲೀಕರನ್ನು ಪಾರು ಮಾಡಲು ಎನ್‌ಜಿಟಿ ತೀರ್ಪು ನೀಡುವ ಮುನ್ನ ನಿರ್ಮಿಸಿರುವ ಮನೆಗಳಿಗೆ ವಿನಾಯ್ತಿನೀಡುವಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲುಸಭೆಯಲ್ಲಿ ನಿರ್ಧರಿಸಲಾಗಿದೆ ಎಂದೂ ವಿಶ್ವನಾಥ್‌ ತಿಳಿಸಿದರು.

 

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.