ರಿಲ್ಯಾಕ್ಸ್‌ ಮೂಡಿಗೆ ಜಾರಿದ ನಾಯಕರು


Team Udayavani, May 14, 2018, 6:30 AM IST

Ban1405.jpg

ಸಿಂಗಾಪುರಕ್ಕೆ ತೆರಳಿದ ಕುಮಾರಸ್ವಾಮಿ
ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವಿಶ್ರಾಂತಿಗಾಗಿ ಶನಿವಾರ ರಾತ್ರಿಯೇ ತಮ್ಮ ಪುತ್ರ ನಿಖೀಲ್‌ ಕುಮಾರಸ್ವಾಮಿ ಜತೆಗೆ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದು, ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ವಾಪಸಾಗಲಿದ್ದಾರೆ. 

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅವರು, 3 ತಿಂಗಳ ಹಿಂದೆ ಎರಡನೇ ಬಾರಿ ಹೃದಯ ಶಸOಉಚಿಕಿತ್ಸೆ ಮಾಡಿಸಿಕೊಂಡಿದ್ದರು. ವೈದ್ಯರು ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ ಎಂದಿದ್ದರು. ವಿಶ್ರಾಂತಿ ಜತೆಗೆ ಸಿಂಗಾಪುರದಲ್ಲಿ ಆರೋಗ್ಯ ತಪಾಸಣೆಯನ್ನೂ ಮಾಡಿಸಿಕೊಳ್ಳಲಿದ್ದಾರೆ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, “ಸತತ ಓಡಾಟದಿಂದ ಅವರು ಸುಸ್ತಾಗಿದ್ದಾರೆ. ಅವರಿಗೆ ವಿಶ್ರಾಂತಿ ಬೇಡವೇನ್ರೀ? ಅದಕ್ಕಾಗಿ ಸಿಂಗಾಪುರಕ್ಕೆ ಹೋಗಿದ್ದಾರೆ’ ಎಂದರು.

ಮನೆಯಲ್ಲೇ ಕಾಲಕಳೆದ ಡಿಕೆಶಿ, ಸಿಪಿವೈ
ಕಾಂಗ್ರೆಸ್‌ ಅಭ್ಯರ್ಥಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಭಾನುವಾರ ಮನೆಯಲ್ಲೇ ವಿಶ್ರಾಂತಿ ಪಡೆದುಕೊಂಡರು. ಚನ್ನಪಟ್ಟಣದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಕೂಡ ಮನೆಯಲ್ಲಿ ವಿಶ್ರಾಂತಿ ಪಡೆದರು.

ಕಾಂಗ್ರೆಸ್‌ ಅಭ್ಯರ್ಥಿ ಮೋಹನಕುಮಾರಿ ಬಂಡೀಪುರ ಸಮೀಪದ ಸರಾಯ್‌ ರೆಸಾರ್ಟಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಶನಿವಾರ ರಾತ್ರಿ 8 ಗಂಟೆ ವೇಳೆಗೆ ಪುತ್ರ ಗಣೇಶ್‌ಪ್ರಸಾದ್‌ ಮತ್ತು ಕುಟುಂಬ ಸದಸ್ಯರೊಂದಿಗೆ ರೆಸಾರ್ಟಿಗೆ ತೆರಳಿದ್ದಾರೆ. ಕೋಲಾರದಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್‌ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ಭಾನುವಾರ ತಮ್ಮ ತೋಟಕ್ಕೆ ತೆರಳಿ, ಕೃಷಿ ಚಟುವಟಿಕೆಗಳ ವೀಕ್ಷಣೆಯಲ್ಲಿ ತೊಡಗಿದರು.

ಫಾರ್ಮ್ಹೌಸ್‌ನಲ್ಲಿ ರಾಯರಡ್ಡಿ
ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ರಾಯರಡ್ಡಿ ಧಾರವಾಡದ ತಮ್ಮ ಫಾರ್ಮ್ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್‌ ಅವರು ಶನಿವಾರ ಮತಗಟ್ಟೆಗೆ ಬಂದು ಸಾವನ್ನಪ್ಪಿದ ರುದ್ರಮ್ಮ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಬಳಿಕ ಯಲಬುರ್ಗಾಕ್ಕೆ ತೆರಳಿ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸಿ ರಾಜಕೀಯ ಲೆಕ್ಕಾಚಾರದ ಚರ್ಚೆ ನಡೆಸಿದರು.

ಶಾಸಕ ರಾಜಣ್ಣ ಆಸ್ಪತ್ರೆಗೆ ದಾಖಲು
ಕಳೆದ ಶುಕ್ರವಾರವೇ ಆನಾರೋಗ್ಯಕ್ಕೆ ತುತ್ತಾಗಿದ್ದ ಶಿಡ್ಲಘಟ್ಟದ ಹಾಲಿ ಶಾಸಕ ಎಂ.ರಾಜಣ್ಣ ಅನಾರೋಗ್ಯದ ಕಾರಣ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದರು. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ
ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಂಸದ ಶ್ರೀರಾಮುಲುರಿಂದ
ಇಷ್ಟಲಿಂಗ, ಗೋಪೂಜೆ

ಬಾದಾಮಿ, ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಭಾನುವಾರ ಬೆಳಗ್ಗೆ ಬಳ್ಳಾರಿಯ ಮನೆಯಲ್ಲೇ ಇಷ್ಟಲಿಂಗ ಪೂಜೆ ಹಾಗೂ ಗೋಪೂಜೆ ನೆರವೇರಿಸಿದರು. ಬಳಿಕ ಮನೆಯ ಹೊರಾಂಗಣದಲ್ಲಿ ಕುಳಿತು ಕನ್ನಡದ ಪ್ರಮುಖ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ಬಳಿಕ ಬೆಳಗಿನ ಉಪಾಹಾರ, ಕಾಫಿ ಸೇವಿಸಿದರು. ಈ ವೇಳೆ ಮನೆಯಲ್ಲಿದ್ದ ಐದಾರು ಬಾಲಕಿಯರಿಗೆ ಮತ್ತು ಅರ್ಚಕರಿಗೆ ಸ್ವತಃ ಶ್ರೀರಾಮುಲು ಅವರೇ ಉಪಾಹಾರಬಡಿಸುವ ಮೂಲಕ ಗಮನ ಸೆಳೆದರು. 

ಮುಖಂಡರ ಜತೆ ಸಿಎಂ ಸಮಾಲೋಚನೆ
ಸಿಎಂ ಸಿದ್ದರಾಮಯ್ಯನವರು ಭಾನುವಾರ ಬೆಳಗ್ಗೆ 11 ಗಂಟೆವರೆಗೂ ಮೈಸೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆದರು. ನಂತರ, ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ,  ವಿಶೇಷ  ಹೆಲಿಕಾಪ್ಟರ್‌
ನಲ್ಲಿ ಬೆಂಗಳೂರಿಗೆ ತೆರಳಿದರು.

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ, ಮತದಾನದ ಬಳಿಕ ವಿಶ್ರಾಂತಿಗಾಗಿ ಮೈಸೂರಿನಿಂದ ಮಡಿಕೇರಿಗೆ ತೆರಳಿದರು. ಮಡಿಕೇರಿಯ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಎರಡು ದಿನಗಳ ವಿಶ್ರಾಂತಿ ಬಳಿಕ ಮೇ 14ರಂದು ಸಂಜೆ ಮೈಸೂರಿಗೆ ಹಿಂದಿರುಗಲಿದ್ದಾರೆ. ಮೈಸೂರಿನ ಚಾಮರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪೊ›.ಕೆ.ಎಸ್‌.ರಂಗಪ್ಪ ಅವರು ಫಾರಂಹೌಸ್‌ನಲ್ಲಿ ವಿಶ್ರಾಂತಿ ಪಡೆದರು.

ಕಾರ್ಯಕರ್ತರ ಜತೆ ಬಿಎಸ್‌ವೈ ಚರ್ಚೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ಬೆಳಗ್ಗೆಯಿಂದಲೇ ಬೆಂಗಳೂರಿನ ಡಾಲರ್ ಕಾಲೋನಿಯ ತಮ್ಮ ನಿವಾಸದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಪಕ್ಷದ ಜಿಲ್ಲಾ ಮತ್ತು ತಾಲೂಕು ಘಟಕದ ಅಧ್ಯಕ್ಷರು ಮತ್ತು ಹಿರಿಯ ಪದಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಮತದಾನದ ಅಂಕಿ ಅಂಶಗಳನ್ನು ಪಡೆದರು. ಬಿಜೆಪಿ 120ಕ್ಕೂ ಅಧಿಕ ಕ್ಷೇತ್ರದಲ್ಲಿ ಜಯ ಸಾಧಿಸುವ ಆತ್ಮವಿಶ್ವಾಸದಲ್ಲಿ ಯಡಿಯೂರಪ್ಪ ಅವರಿದ್ದು, ಮೇ 15ರಂದು ಪ್ರಮಾಣ ವಚನದ ದಿನಾಂಕ ನಿಗದಿ ಬಗ್ಗೆ ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಟ್ವೀಟ್‌ಗಳಿಗೆ ವಿಶ್ರಾಂತಿ
ಚುನಾವಣೆ ಸಂದರ್ಭದಲ್ಲಿ ಸರಣಿ ಟ್ವೀಟ್‌ ಮೂಲಕ ಸಿದ್ದರಾಮಯ್ಯ,ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸುತ್ತಿದ್ದ ಯಡಿಯೂರಪ್ಪ, ಭಾನುವಾರ ಅದಕ್ಕೆ ಸ್ವಲ್ಪ ವಿಶ್ರಾಂತಿ ನೀಡಿದ್ದಾರೆ. ಆದರೆ ಟ್ವೀಟ್‌ ಮೂಲಕ ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯ ಹಾಗೂ ರವಿಶಂಕರ ಗುರೂಜಿಯವರಿಗೆ ಶುಭಾಶಯ ಕೋರಿದರು.

ಟಾಪ್ ನ್ಯೂಸ್

ಮಹಾ ಸರ್ಕಾರಕ್ಕೆ 2 ವರ್ಷ: ಖುಷಿ ಹಂಚಿಕೊಂಡ ಸಿಎಂ

ಮಹಾ ಸರ್ಕಾರಕ್ಕೆ 2 ವರ್ಷ: ಖುಷಿ ಹಂಚಿಕೊಂಡ ಸಿಎಂ

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನ ಬಂಧನ

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನ ಬಂಧನ

ವೈನ್‌ ಆರ್ಡರ್‌ ಮಾಡಿದ ನಟಿ ಖಾತೆಯಿಂದ 3 ಲಕ್ಷ ಕದ್ದ ಖದೀಮರು

ವೈನ್‌ ಆರ್ಡರ್‌ ಮಾಡಿದ ನಟಿ ಖಾತೆಯಿಂದ 3 ಲಕ್ಷ ಕದ್ದ ಖದೀಮರು

ಆಕ್ಸ್‌ಫ‌ರ್ಡ್‌ ವಿವಿ ಪದವೀಧರೆಯಾದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ

ಆಕ್ಸ್‌ಫ‌ರ್ಡ್‌ ವಿವಿ ಪದವೀಧರೆಯಾದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ

ದಾನ ಧರ್ಮದ ರಾಯಭಾರಿ ಪುನೀತ್ ರಾಜಕುಮಾರ್: ಆರ್ ಅಶೋಕ್

ದಾನ ಧರ್ಮದ ರಾಯಭಾರಿ ಪುನೀತ್ : ‘ಅಪ್ಪು ಅಮರ’ ಕಾರ್ಯಕ್ರಮದಲ್ಲಿ ಸಚಿವ ಆರ್ ಅಶೋಕ್ ಹೇಳಿಕೆ

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

ಉಸಿರುಗಟ್ಟಿ ಇಬ್ಬರು ಸಾವು, ಓರ್ವ ಗಂಭೀರ : ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ನಡೆದ ಘಟನೆ

ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಾನ ಧರ್ಮದ ರಾಯಭಾರಿ ಪುನೀತ್ ರಾಜಕುಮಾರ್: ಆರ್ ಅಶೋಕ್

ದಾನ ಧರ್ಮದ ರಾಯಭಾರಿ ಪುನೀತ್ : ‘ಅಪ್ಪು ಅಮರ’ ಕಾರ್ಯಕ್ರಮದಲ್ಲಿ ಸಚಿವ ಆರ್ ಅಶೋಕ್ ಹೇಳಿಕೆ

ಉಸಿರುಗಟ್ಟಿ ಇಬ್ಬರು ಸಾವು, ಓರ್ವ ಗಂಭೀರ : ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ನಡೆದ ಘಟನೆ

ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

cm

ಯೋಜನಾಬದ್ಧವಾಗಿ ಬೆಂಗಳೂರಿನ ಅಭಿವೃದ್ಧಿಗೆ ಚಿಂತನೆ : ಮುಖ್ಯಮಂತ್ರಿ

rape

ಮೈಸೂರು ಗ್ಯಾಂಗ್ ರೇಪ್: 1499 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಪೊಲೀಸರು

ಪಾದಯಾತ್ರೆ ಹಿನ್ನೆಲೆ: ಮೇಕದಾಟುವಿಗೆ ಭೇಟಿ ನೀಡಿದ ಡಿಕೆಶಿ

ಪಾದಯಾತ್ರೆ ಹಿನ್ನೆಲೆ: ಮೇಕದಾಟುವಿಗೆ ಭೇಟಿ ನೀಡಿದ ಡಿಕೆಶಿ

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಮಹಾ ಸರ್ಕಾರಕ್ಕೆ 2 ವರ್ಷ: ಖುಷಿ ಹಂಚಿಕೊಂಡ ಸಿಎಂ

ಮಹಾ ಸರ್ಕಾರಕ್ಕೆ 2 ವರ್ಷ: ಖುಷಿ ಹಂಚಿಕೊಂಡ ಸಿಎಂ

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನ ಬಂಧನ

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನ ಬಂಧನ

ವೈನ್‌ ಆರ್ಡರ್‌ ಮಾಡಿದ ನಟಿ ಖಾತೆಯಿಂದ 3 ಲಕ್ಷ ಕದ್ದ ಖದೀಮರು

ವೈನ್‌ ಆರ್ಡರ್‌ ಮಾಡಿದ ನಟಿ ಖಾತೆಯಿಂದ 3 ಲಕ್ಷ ಕದ್ದ ಖದೀಮರು

ಆಕ್ಸ್‌ಫ‌ರ್ಡ್‌ ವಿವಿ ಪದವೀಧರೆಯಾದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ

ಆಕ್ಸ್‌ಫ‌ರ್ಡ್‌ ವಿವಿ ಪದವೀಧರೆಯಾದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ

ಸಿಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಐದನೆ ಆವೃತ್ತಿಯಲ್ಲಿ ವ್ಹಿ.ಕೆ.ಟೈಗರ್ಸ್ ಪ್ರಥಮ

ಸಿಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಐದನೆ ಆವೃತ್ತಿಯಲ್ಲಿ ವ್ಹಿ.ಕೆ. ಟೈಗರ್ಸ್ ಪ್ರಥಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.