ಮಲ್ಯ ಆಸ್ಪತ್ರೆ ನವೀಕರಣ; ಈಗ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

Team Udayavani, Jun 2, 2022, 1:42 PM IST

1-adsad

ಬೆಂಗಳೂರು: ಹಳೆ ಮಲ್ಯ ಆಸ್ಪತ್ರೆಯನ್ನು ಉತ್ಕೃಷ್ಟ ಮಟ್ಟದಲ್ಲಿ ನವೀಕರಿಸಿ, ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾನ್ನಾಗಿ‌ ಅಭಿವೃದ್ಧಿಪಡಿಸಿದ್ದು ಅದನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ಉದ್ಘಾಟಿಸಿದರು.

ವೈದೇಹಿ ಆಸ್ಪತ್ರೆಗಳ ಸಮೂಹ ಈ ಆಸ್ಪತ್ರೆಯನ್ನು ನಿರ್ವಹಣೆ ಮಾಡಲಿದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಪ್ರೇಮಾ ಕೃಷ್ಣ ಸೇರಿದಂತೆ ಇತರರು ಇದ್ದರು.

ಸಚಿವರು ಮಾತನಾಡಿ, `ಕೊರೋನಾ ಸಾಂಕ್ರಾಮಿಕ ಸಮಾಜವನ್ನು ಕಾಡಿದ ನಂತರ, ಗುಣಮಟ್ಟದ ಆಸ್ಪತ್ರೆಗಳ ಅಗತ್ಯ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರು ನಗರದ ಜನರಿಗೆ ಇಂತಹ ಆಸ್ಪತ್ರೆಗಳ ಜರೂರಿದೆ. ನಗರದ ಹೃದಯ ಭಾಗದಲ್ಲೇ ಈ ಆಸ್ಪತ್ರೆ ತಲೆಯೆತ್ತಿರುವುದು ಒಳ್ಳೆಯದು’ ಎಂದರು.

`ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಮತ್ತು ಇನ್ನಿತರ ಸೇವೆಗಳು ಕೈಗೆಟುಕುವ ದರದಲ್ಲಿ ಸಿಗುವಂತಾಗಬೇಕು ಎನ್ನುವುದು ಪ್ರತಿಯೊಬ್ಬನ ನಿರೀಕ್ಷೆಯಾಗಿದೆ. ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇದು ಸಾಕಾರಗೊಳ್ಳಬೇಕು. ಜತೆಗೆ, ಸಂಶೋಧನೆಗೆ ಒತ್ತು ಕೊಡುವ ಮೂಲಕ ವಿನೂತನ ಚಿಕಿತ್ಸಾ ಪದ್ಧತಿಗಳನ್ನು ವೈದ್ಯಕೀಯ ಸಮುದಾಯ ಆವಿಷ್ಕರಿಸಬೇಕು’ ಎಂದು ಅವರು ಆಶಿಸಿದರು.

ಕೊರೋನಾದಂತಹ ಪಿಡುಗು ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಇದು ಜಗತ್ತನ್ನೇ ಅಲ್ಲೋಲಕಲ್ಲೋಲಗೊಳಿಸಿತು. ಇದರ ಜತೆಗೆ ಆಧುನಿಕ ಜೀವನ ಶೈಲಿಯ ಸಂಕೀರ್ಣತೆ ಮತ್ತು ಅದು ಸೃಷ್ಟಿಸುತ್ತಿರುವ ಆತಂಕ ಹಾಗೂ ಒತ್ತಡಗಳಿಂದಾಗಿ ಕಂಡುಕೇಳರಿಯದಂತಹ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಇಂತಹ ಕಾಯಿಲೆಗಳ ನಿವಾರಣೆಗೆ ವೈದ್ಯರು ಶ್ರಮಿಸಬೇಕು ಎಂದು ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ಆರೋಗ್ಯ ವಲಯಕ್ಕೆ ಸಾಕಷ್ಟು ಮಹತ್ವ ಕೊಟ್ಟಿದ್ದು, ರಾಜ್ಯದಲ್ಲಿ ಅಂದಾಜು 11 ಕೋಟಿ ಕರೋನಾ ಲಸಿಕೆಗಳನ್ನು ಕೊಡಲಾಗಿದೆ. ಹಾಗೆಯೇ, ದೇಶದ ಮಟ್ಟದಲ್ಲಿ 192 ಕೋಟಿಗೂ ಹೆಚ್ಚು ಡೋಸ್ ಕೊಡಲಾಗಿದೆ. ಇವುಗಳ ಜತೆಗೆ, ಖಾಸಗಿ ಆಸ್ಪತ್ರೆಗಳು ಕೂಡ ಸಾಮಾಜಿಕ ಕಳಕಳಿಯೊಂದಿಗೆ ಕೈಜೋಡಿಸಿ, ಜನ ಸಮುದಾಯಗಳ ಸಬಲೀಕರಣಕ್ಕೆ ಇಂಬು ನೀಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವೈದೇಹಿ ಆಸ್ಪತ್ರೆಗಳ ಸಮೂಹದ ಕಲ್ಪಜಾ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

doller money news

ಡಾಲರ್ ಎದುರು ರೂಪಾಯಿ ಮೌಲ್ಯ 82.33ಕ್ಕೆ ಇಳಿಕೆ: ಸಾರ್ವಕಾಲಿಕ ಕನಿಷ್ಠ

1-adad

ದಾಖಲೆಗಳನ್ನು ಸಲ್ಲಿಸಲು ನಾನು ಒಪ್ಪಿದ್ದೇನೆ: ಇಡಿ ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್

ಏಷ್ಯಾಕಪ್: ಪಾಕಿಸ್ಥಾನ ವಿರುದ್ಧ ಸೋತ ಭಾರತ ವನಿತಾ ತಂಡ

ಏಷ್ಯಾಕಪ್: ಪಾಕಿಸ್ಥಾನ ವಿರುದ್ಧ ಸೋತ ಭಾರತ ವನಿತಾ ತಂಡ

BJP V/s AAP: ಸಾಮೂಹಿಕ ಮತಾಂತರ; ಬೌದ್ಧ ಧರ್ಮ ಸ್ವೀಕರಿಸಿದ ಆಪ್ ಸಚಿವ ಗೌತಮ್ ವಿಡಿಯೋ ವೈರಲ್

BJP V/s AAP: ಸಾಮೂಹಿಕ ಮತಾಂತರ; ಬೌದ್ಧ ಧರ್ಮ ಸ್ವೀಕರಿಸಿದ ಆಪ್ ಸಚಿವ ಗೌತಮ್ ವಿಡಿಯೋ ವೈರಲ್

1-adadsad

ಬುಮ್ರಾ ಗೆ ಮಿಸ್ ಆದರೂ ಟಿ 20 ವಿಶ್ವಕಪ್ ನಲ್ಲಿ ಭಾಗಿಯಾಗಲಿರುವ ಪತ್ನಿ

thumb news cm gujarath

21 ವರ್ಷಗಳ ಹಿಂದೆ ಸಿಎಂ ಆಗಿ ಮೊದಲ ಬಾರಿ ಮೋದಿ ಪ್ರಮಾಣ ವಚನ ಸ್ವೀಕಾರ

ದೀಪಕ ಪಟದಾರಿ ಹತ್ಯೆ ಕೇಸ್: ಮತ್ತಿಬ್ಬರನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು

ದೀಪಕ ಪಟದಾರಿ ಹತ್ಯೆ ಕೇಸ್: ಮತ್ತಿಬ್ಬರನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಏರ್ಪೋರ್ಟ್ ರಸ್ತೆ ದಟ್ಟಣೆ ತಡೆಗೆ 3 ಹಂತದ ಯೋಜನೆ

ಏರ್ಪೋರ್ಟ್ ರಸ್ತೆ ದಟ್ಟಣೆ ತಡೆಗೆ 3 ಹಂತದ ಯೋಜನೆ; ಮಹಾಲಕ್ಷ್ಮೀ ಜಂಕ್ಷನ್ ಬಳಿ ಮೇಲ್ಸೇತುವೆ

ದಕ್ಷಿಣದಲ್ಲಿ ಮತ್ತೆ ರಾಜಕೀಯ ಧ್ರುವೀಕರಣ

ದಕ್ಷಿಣದಲ್ಲಿ ಮತ್ತೆ ರಾಜಕೀಯ ಧ್ರುವೀಕರಣ

ಎಂಜಿನಿಯರಿಂಗ್‌ ಸೀಟು ಮ್ಯಾಟ್ರಿಕ್ಸ್‌ ಪ್ರಕಟ : ಇಲ್ಲಿದೆ ಮಾಹಿತಿ

ಎಂಜಿನಿಯರಿಂಗ್‌ ಸೀಟು ಮ್ಯಾಟ್ರಿಕ್ಸ್‌ ಪ್ರಕಟ : ಇಲ್ಲಿದೆ ಮಾಹಿತಿ

ರಾಜ್ಯೋತ್ಸವ ಪ್ರಯುಕ್ತ ಅ.28ಕ್ಕೆ ಕೋಟಿ ಕಂಠ ಗಾಯನ : ಸಚಿವ ಸುನಿಲ್‌ಕುಮಾರ್‌

ರಾಜ್ಯೋತ್ಸವ ಪ್ರಯುಕ್ತ ಅ.28ಕ್ಕೆ ಕೋಟಿ ಕಂಠ ಗಾಯನ : ಸಚಿವ ಸುನಿಲ್‌ಕುಮಾರ್‌

ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ : ಚುನಾವಣೆಗಳು ಸೇರಿ ಹಲವು ವಿಚಾರಗಳ ಕುರಿತು ಚಿಂತನ-ಮಂಥನ

ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ : ಚುನಾವಣೆಗಳು ಸೇರಿ ಹಲವು ವಿಚಾರಗಳ ಕುರಿತು ಚಿಂತನ-ಮಂಥನ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

doller money news

ಡಾಲರ್ ಎದುರು ರೂಪಾಯಿ ಮೌಲ್ಯ 82.33ಕ್ಕೆ ಇಳಿಕೆ: ಸಾರ್ವಕಾಲಿಕ ಕನಿಷ್ಠ

1-adad

ದಾಖಲೆಗಳನ್ನು ಸಲ್ಲಿಸಲು ನಾನು ಒಪ್ಪಿದ್ದೇನೆ: ಇಡಿ ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್

ಏಷ್ಯಾಕಪ್: ಪಾಕಿಸ್ಥಾನ ವಿರುದ್ಧ ಸೋತ ಭಾರತ ವನಿತಾ ತಂಡ

ಏಷ್ಯಾಕಪ್: ಪಾಕಿಸ್ಥಾನ ವಿರುದ್ಧ ಸೋತ ಭಾರತ ವನಿತಾ ತಂಡ

BJP V/s AAP: ಸಾಮೂಹಿಕ ಮತಾಂತರ; ಬೌದ್ಧ ಧರ್ಮ ಸ್ವೀಕರಿಸಿದ ಆಪ್ ಸಚಿವ ಗೌತಮ್ ವಿಡಿಯೋ ವೈರಲ್

BJP V/s AAP: ಸಾಮೂಹಿಕ ಮತಾಂತರ; ಬೌದ್ಧ ಧರ್ಮ ಸ್ವೀಕರಿಸಿದ ಆಪ್ ಸಚಿವ ಗೌತಮ್ ವಿಡಿಯೋ ವೈರಲ್

25

ಕಾಡು ಪ್ರಾಣಿಗಳಿಂದ ಅಪಾರ ಬೆಳೆ ನಷ್ಟ : ತಪ್ಪದ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.