Udayavni Special

ನದಿ ಜೋಡಣೆಗೆ ವೈಜ್ಞಾನಿಕ ದೃಷ್ಟಿಕೋನ ಬೇಕು


Team Udayavani, Aug 30, 2018, 12:35 PM IST

nadi-jodane.jpg

ಬೆಂಗಳೂರು: ನದಿ ಜೋಡಣೆ ಹಾಗೂ ನೀರು ಹಂಚಿಕ ಕುರಿತು ವಿಜ್ಞಾನಿ ಮತ್ತು ಜನಪ್ರತಿನಿಧಿಗಳು ಒಗ್ಗೂಡಿ ವೈಜ್ಞಾನಿಕ ದೃಷ್ಟಿಕೋನದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು. ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಕುರಿತು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಇದನ್ನು ಸ್ವಹಿತಾಸಕ್ತಿಗೆ ಬಳಸಿಕೊಳ್ಳುತ್ತಿವೆ.

ಸಂಸದ ವೀರಪ್ಪ ಮೊಯ್ಲಿ ಯೋಜನೆ ಜಾರಿಯಾಗಬೇಕೆಂದು ಹೇಳುತ್ತಿದ್ದರೆ, ಕರಾವಳಿ ಭಾಗದವರು ಬೇಡ ಎನ್ನುತ್ತಿದ್ದಾರೆ. ಹೀಗಾಗಿ, ಇಂತಹ ವಿಚಾರವಾಗಿ ರಾಜಕೀಯ ಹಿತಾಸಕ್ತಿ ಬಿಟ್ಟು ಜನಪರವಾದ ಕಾಳಜಿಯಿಂದ ಯೋಜನೆ ಅನುಷ್ಠಾನದ ಸಾಧಕ ಭಾದಕಗಳನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿಯೇ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕೊಡಗಿಗೆ ನೆರವು: ಅವೈಜ್ಞಾನಿಕ ಯೋಜನೆಗಳ ಜಾರಿ ಮತ್ತು ಅರಣ್ಯನಾಶದಿಂದ ಕೊಡಗು, ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಪ್ರಕೃತಿ ವಿಕೋಪ ಉಂಟಾಗಿದೆ. ಚಾತುರ್ಮಾಸ್ಯ ಮುಗಿದ ನಂತರ ಕೊಡಗಿಗೆ ಭೇಟಿ ನೀಡುತ್ತೇನೆ. ಮಠದ ಟ್ರಸ್ಟ್‌ ವತಿಯಿಂದ ಪರಿಹಾರ ನಿಧಿಗೆ 20 ಲಕ್ಷ ರೂ. ನೀಡಲಾಗುವುದು ಎಂದರು.

ಕಸ್ತೂರಿರಂಗನ್‌ ವರದಿ ಜಾರಿ ಕುರಿತು ಪರ- ವಿರೋಧ ಕೇಳಿಬರುತ್ತಿವೆ. ಪರಿಸರ ಸಂರಕ್ಷಣೆ ಆಗದೆ ಇದ್ದರೆ ಭವಿಷ್ಯದ ಪೀಳಿಗೆ ತೀವ್ರ ಆತಂಕದ ದಿನಗಳನ್ನು ಎದುರಿಸಲಿದೆ. ಹೀಗಾಗಿ, ವರದಿ ಜಾರಿ ಬಗ್ಗೆ ಸರ್ಕಾರ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರವೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ವಿವಿಧ ಯೋಜನೆ ಆರಂಭ: ಉಡುಪಿಯ ಪೇಜಾವರಮಠದಿಂದ ರಾಜ್ಯದ ನಾಲ್ಕೂ ಭಾಗಗಳಲ್ಲಿ ಶಿಕ್ಷಣ, ವೈದ್ಯಕೀಯ ಸೇವೆಯನ್ನು ಒದಗಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಮಧ್ವಾಚಾರ್ಯರ ಅವತಾರಭೂಮಿ ಪಾಜಕ ಕ್ಷೇತ್ರದಲ್ಲಿ ಆನಂದತೀರ್ಥ ಮಹಾವಿದ್ಯಾಲಯ ಸ್ಥಾಪನೆ ಕಾರ್ಯ ನಡೆದಿದೆ. 40 ಎಕರೆ ಪ್ರದೇಶದಲ್ಲಿ ವಸತಿ ಸಹಿತ ಕಾಲೇಜು ನಿರ್ಮಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಹಿಂದು ಧರ್ಮದ ಕುರಿತು ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನ ಮಾರತಹಳ್ಳಿಯಲ್ಲಿ ಸರ್ಕಾರ ನೀಡಿದ್ದ ಎರಡು ಎಕರೆ  ಜಾಗದಲ್ಲಿ 28 ಕೋಟಿ.ರೂ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ 15 ಕೋಟಿ ವೆಚ್ಚ ಮಾಡಲಾಗಿದ್ದು, ಉಳಿದ ಹಣಕ್ಕೆ ದಾನಿಗಳ ನಿರೀಕ್ಷೆಯಲ್ಲಿದ್ದೇವೆ. ಹುಬ್ಬಳ್ಳಿಯಲ್ಲಿ ಸರ್ಕಾರ ನೀಡಿರುವ ಜಾಗದಲ್ಲಿ ಏಳು ಕೋಟಿ ವೆಚ್ಚದಲ್ಲಿ ಪದವಿ ಕಾಲೇಜು ಆರಂಭ, ಶಿವಮೊಗ್ಗದಲ್ಲಿ ಬಡವರು ಹಾಗೂ ಹಿಂದುಳಿದ ವರ್ಗಗಳ ವಿಧ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPL

ಕೀಡಾಕ್ಷೇತ್ರದಲ್ಲಿ ದಾಖಲೆ ಬರೆದ ಐಪಿಎಲ್‌ ಉದ್ಘಾಟನಾ ಪಂದ್ಯ; 20 ಕೋಟಿ ವೀಕ್ಷಣೆ !

Gilirama

Viral Video: ದೈತ್ಯ ಗಿಳಿಯ ಫುಟ್ಬಾಲ್ ಮೋಹ ; ಆಟಗಾರ್ತಿಯ ತಲೆಯೇರಿದ್ದೇಕೆ ಗಿಣಿರಾಮ?

paytm

ಗೂಗಲ್‌ ಪ್ಲೇ ಸ್ಟೋರ್‌ V/S ಪೇಟಿಎಂ; ಅಷ್ಟಕ್ಕೂ Paytm ಜೂಜಿನ ಆ್ಯಪ್‌‌ ಆಗಿದ್ದು ಹೇಗೆ?

hunasur

ಹುಣಸೂರು: ಜಮೀನಿನಲ್ಲಿ ಗಾಂಜಾ ಬೆಳೆ; ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

sucide

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಚ್ಚಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ !

ರಿಯಾಗಿಲ್ಲ ರಿಲೀಫ್ ; ನ್ಯಾಯಾಂಗ ಬಂಧನ ವಿಸ್ತರಣೆ

ರಿಯಾಗಿಲ್ಲ ರಿಲೀಫ್ ; ನ್ಯಾಯಾಂಗ ಬಂಧನ ವಿಸ್ತರಣೆ

dhoni

ಚೆನ್ನೈ- ರಾಜಸ್ಥಾನ್ ಕಾಳಗ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಧೋನಿಪಡೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿ.ಜೆ.ಹಳ್ಳಿ ಪ್ರಕರಣ: ಎನ್‌ಐಎ ಪ್ರವೇಶ

ಡಿ.ಜೆ.ಹಳ್ಳಿ ಪ್ರಕರಣ: ಎನ್‌ಐಎ ಪ್ರವೇಶ

bng-tdy-3

ಉಂಗುರ ಖರೀದಿಗೆ ಬಂದು,ಕೆ.ಜಿ.ಗಟ್ಟಲೆ ಚಿನ್ನ ಲೂಟಿ

ಶ್ವಾನಗಳಿಗೆ ರೇಬಿಸ್ ‌ಲಸಿಕೆ ದಾಖಲೆಗೆ ಆ್ಯಪ್‌

ಶ್ವಾನಗಳಿಗೆ ರೇಬಿಸ್ ‌ಲಸಿಕೆ ದಾಖಲೆಗೆ ಆ್ಯಪ್‌

ಬೆಂಗಳೂರು ಸ್ಫೋಟ ಪ್ರಕರಣ: 12 ವರ್ಷದ ಬಳಿಕ ಆರೋಪಿ ಸೆರೆ

ಬೆಂಗಳೂರು ಸ್ಫೋಟ ಪ್ರಕರಣ: 12 ವರ್ಷದ ಬಳಿಕ ಆರೋಪಿ ಸೆರೆ

ಬೆಂಗಳೂರು ರೋಸ್ ಆನಿಯನ್ ರಫ್ತು ನಿರ್ಭಂದ ತೆಗೆಯುವಂತೆ ಕೇಂದ್ರಕ್ಕೆ ಪತ್ರ

ಬೆಂಗಳೂರು ರೋಸ್ ತಳಿಯ ಈರುಳ್ಳಿ ರಫ್ತು ನಿರ್ಭಂದ ತೆಗೆಯುವಂತೆ ಕೇಂದ್ರಕ್ಕೆ ಪತ್ರ

MUST WATCH

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

IPL

ಕೀಡಾಕ್ಷೇತ್ರದಲ್ಲಿ ದಾಖಲೆ ಬರೆದ ಐಪಿಎಲ್‌ ಉದ್ಘಾಟನಾ ಪಂದ್ಯ; 20 ಕೋಟಿ ವೀಕ್ಷಣೆ !

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

ರೋಗ ನಿರೋಧಕ-ಕರಿಬೇವು

ರೋಗ ನಿರೋಧಕ-ಕರಿಬೇವು

josh-tdy-1

ಹೇಳ್ರೀ ನನ್ನ ಕಂಡ್ರೆ ನಿಮಗೇನನ್ನಿಸುತ್ತೆ?

Gilirama

Viral Video: ದೈತ್ಯ ಗಿಳಿಯ ಫುಟ್ಬಾಲ್ ಮೋಹ ; ಆಟಗಾರ್ತಿಯ ತಲೆಯೇರಿದ್ದೇಕೆ ಗಿಣಿರಾಮ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.