ಪ್ರಯಾಣಿಕರ ಸೋಗಿನಲ್ಲಿ ದರೋಡೆ


Team Udayavani, Oct 13, 2018, 2:54 PM IST

blore-5.jpg

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿದ ದುಷ್ಕರ್ಮಿಗಳಿಬ್ಬರು ಆಟೋ ಚಾಲಕನನ್ನು ದರೋಡೆ ಮಾಡಿದಲ್ಲದೆ, ಆತನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆ ವಿವೇಕನಗರದ ಓಆರ್‌ಸಿ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ರಿಚ್‌ಮಂಡ್‌ ಟೌನ್‌ ನಿವಾಸಿ ಮೊಹಮ್ಮದ್‌ ಆಸೀಫ್ (28) ದರೋಡೆಗೊಳಗಾದ ಆಟೋ ಚಾಲಕ. ಬೆಂಕಿ ಹಚ್ಚಿದ ಕಾರಣ
ಆಸೀಫ್ ಅವರ ಎಡಗೈಗೆ ಗಂಭೀರವಾದ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಮೊಹಮ್ಮದ್‌ ಆಸೀಫ್, ಗುರುವಾರ ರಾತ್ರಿ 1 ಗಂಟೆಗೆ ವಿಕ್ಟೋರಿಯಾ ಲೇಔಟ್‌ ಬಳಿ ಆಟೋ ನಿಲ್ಲಿಸಿ, ಅದರಲ್ಲೇ ಮಲಗಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳು, ಈಜಿಪುರ ವೃತ್ತಕ್ಕೆ ಹೋಗಬೇಕೆಂದು ಹೇಳಿ ಆಟೋ ಹತ್ತಿದ್ದಾರೆ. ವಿವೇಕನಗರದ ಓಆರ್‌ಸಿ ರಸ್ತೆಯಲ್ಲಿ ಹೋಗುತ್ತಿದ್ದಂತೆ ಆಟೋ ಚಾಲಕನಿಂದಲೇ ಸಿಗರೇಟ್‌ ಸೇದಲು ಬೆಂಕಿಪಟ್ಟಣ ಪಡೆದುಕೊಂಡಿದ್ದಾರೆ. 

ಬಳಿಕ ಸ್ವಲ್ಪ ದೂರ ಹೋಗುತ್ತಿದ್ದಂತೆ ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸುವಂತೆ ಹೇಳಿದ ದುಷ್ಕರ್ಮಿಗಳು, ಆಸೀಫ್ ಜೇಬಿನಲ್ಲಿದ್ದ ಹಣ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಆಸೀಫ್, ಆರೋಪಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಆಸೀಫ್ನನ್ನು ಥಳಿಸಿ, 500 ರೂ. ನಗದು, ಮೊಬೈಲ್‌ ಹಾಗೂ ಪರ್ಸ್‌ ಕಿತ್ತುಕೊಂಡಿದ್ದಾರೆ. ನಂತರ ತೀವ್ರರಕ್ತಸ್ರಾವ ದಿಂದ ಕುಸಿದು ಬಿದ್ದ ಆಸೀಫ್ನನ್ನು ಆಟೋ ದಲ್ಲಿ ತಳ್ಳಿ ಸ್ಥಳದಿಂದ
ಪರಾರಿಯಾಗಲು ಮುಂದಾಗಿದ್ದಾರೆ. 

ಪೆಟ್ರೋಲ್‌ ಕಳ್ಳರು: ಗಾಯಗೊಂಡ ಆಸೀಫ್ ಹೇಳುವ ಪ್ರಕಾರ ಆರೋಪಿಗಳ ಬ್ಯಾಗ್‌ನಲ್ಲಿ ಎರಡು ಪೆಟ್ರೊಲ್‌ ಬಾಟಲಿಗಳಿದ್ದವು. ಈ ಹಿನ್ನೆಲೆಯಲ್ಲಿ ಹತ್ತಿರದಲ್ಲೇ ಪೆಟ್ರೋಲ್‌ ಕಳವು ಮಾಡಿ ವಾಪಸ್‌ ಹೋಗುವಾಗ ದರೋಡೆ ಮಾಡಲು ಸಂಚು ರೂಪಿಸಿರುವ ಸಾಧ್ಯತೆಯಿದೆ. ಹೀಗಾಗಿ ಘಟನಾ ಸ್ಥಳ ಮತ್ತು ವಿಕ್ಟೋರಿಯಾ ಲೇಔಟ್‌ ಸುತ್ತ ಇರುವ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದು, ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೈ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು!
ತನ್ನನ್ನು ಆಟೋಗೆ ತಳ್ಳಿ ಆರೋಪಿಗಳು ಪರಾರಿಯಾಗುವುದನ್ನು ಗಮನಿಸಿದ ಆಸೀಫ್, “ಬೆಳಗ್ಗೆಯಿಂದ ಸಂಪಾದನೆ ಮಾಡಿದ ಹಣ ಕಣೊ, ವಾಪಸ್‌ ಕೊಡ್ರೋ’ ಎಂದು ಅಂಗಲಾಚಿದಲ್ಲದೆ, ಆರೋಪಿಗಳ ಮೇಲೆ ಮತ್ತೂಮ್ಮೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳ ಪೈಕಿ ಒಬ್ಟಾತ ತನ್ನ ಬ್ಯಾಗ್‌ನಲ್ಲಿದ್ದ ಪೆಟ್ರೋಲ್‌ ಬಾಟಲಿ ತೆಗೆದು ಆಸೀಫ್ನ ಎಡಗೈ ಮೇಲೆ ಸುರಿದು, ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇತ್ತ ತೀವ್ರ ಸುಟ್ಟ ಗಾಯಗಳಿಂದ ಆಸೀಫ್ ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದು, ಸ್ಥಳೀಯರು ನೆರವಿಗೆ ಧಾವಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸೀಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು. ಪ್ರಕರಣ ವಿವೇಕನಗರ ಠಾಣೆಯಲ್ಲಿ ದಾಖಲಾಗಿದೆ.

ಟಾಪ್ ನ್ಯೂಸ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

monette dias

ಮದುವೆಯಾಗುವ ಖಯಾಲಿ: 11ನೇ ದಾಂಪತ್ಯ ಮುಗಿಸಿ, 12ನೇ ಮದುವೆಗೆ ಸಿದ್ಧಳಾದ ಮಹಿಳೆ!

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

s-r-patil

ಎಸ್.ಆರ್. ಪಾಟೀಲ್ ಮನವೊಲಿಕೆಗೆ ಕೈ ನಾಯಕರ ಕಸರತ್ತು!

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cyber crime

ಸಾಲದ ಕಂತು ಕಡಿಮೆ ಮಾಡುವ ನೆಪದಲ್ಲಿ ವಂಚನೆ

gawraw gupta

ದ.ಆಫ್ರಿಕಾದವರ ಮೇಲೆ ವಿಶೇಷ ನಿಗಾ..!

“ಅನಾಥ’ ವಾಹನಗಳ ವಿರುದ್ಧ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರಿಂದ ಜಂಟಿ ಆಪರೇಷನ್‌

“ಅನಾಥ’ ವಾಹನಗಳ ವಿರುದ್ಧ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರಿಂದ ಜಂಟಿ ಆಪರೇಷನ್‌

ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿ, ಅಧಿಕಾರಿಗಳ ಆಡಳಿತ

ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿ, ಅಧಿಕಾರಿಗಳ ಆಡಳಿತ

omicron

ಬೆಂಗಳೂರಿನಲ್ಲಿ ಕ‌ಠಿಣ ನಿರ್ಬಂಧಕ್ಕೆ ಚಿಂತನೆ; ನಿತ್ಯವೂ 30 ಸಾವಿರ ಕೊರೊನಾ ಟೆಸ್ಟ್ 

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

4govt-employee

ಸರಕಾರಿ ನೌಕರರಿಗೆ ಸೂಕ್ತ ರಕ್ಷಣೆ ಕಲ್ಪಿಸಲು ಮನವಿ

3party

ಪಕ್ಷ ಸಂಘಟನೆಗೆ ಯುವ ಶಕ್ತಿ ಅವಶ್ಯ

cyber crime

ಸಾಲದ ಕಂತು ಕಡಿಮೆ ಮಾಡುವ ನೆಪದಲ್ಲಿ ವಂಚನೆ

2campain

ಖಂಡ್ರೆ ಪರ ಸಚಿವ ಚವ್ಹಾಣ ಪ್ರಚಾರ

1crop

ಜೋಯಿಡಾ: ಆನೆ ದಾಳಿ-ಬೆಳೆ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.