Udayavni Special

ಮೆಟ್ರೋ ಸಿಬ್ಬಂದಿಗೆ ರೊಟೇಷನ್‌ ಪದ್ಧತಿ

ವಾರದಲ್ಲಿ ಮೂರು ದಿನಗಳು ಮಾತ್ರ ಡ್ಯೂಟಿ

Team Udayavani, Jul 12, 2020, 9:03 AM IST

ಮೆಟ್ರೋ ಸಿಬ್ಬಂದಿಗೆ ರೊಟೇಷನ್‌ ಪದ್ಧತಿ

ಬೆಂಗಳೂರು: ಬಿಎಂಟಿಸಿ ಮಾದರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದಲ್ಲೂ ರೊಟೇಷನ್‌ ಪದ್ಧತಿ ಅಳವಡಿಸಲಾಗಿದೆ. ಹಾಗಾಗಿ, ಒಟ್ಟಾರೆ ಸಿಬ್ಬಂದಿ ಪೈಕಿ ನಿತ್ಯ ಶೇ. 50ರಷ್ಟು ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಮಾನವ ಸಂಪನ್ಮೂಲ, ರೋಲಿಂಗ್‌ ಸ್ಟಾಕ್‌, ಸಿಗ್ನಲಿಂಗ್‌ ಸೇರಿದಂತೆ ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಬರುವ ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿಗೆ ರೊಟೇಷನ್‌ ಪದ್ಧತಿ ಪರಿಚಯಿಸಲಾಗಿದೆ. ಈ ಪದ್ಧತಿಯಲ್ಲಿ ಒಟ್ಟಾರೆ ಸಿಬ್ಬಂದಿಯಲ್ಲಿ ಶೇ. 50 ನಿತ್ಯ ಕಾರ್ಯನಿರ್ವಹಣೆ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ. ಅಂದರೆ, ಸಿಬ್ಬಂದಿಗೆ ವಾರದಲ್ಲಿ ಮೂರು ದಿನಗಳು ಮಾತ್ರ “ಡ್ಯೂಟಿ’ ಇರುತ್ತದೆ. ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಸುಮಾರು 1,200 ಕಾಯಂ ನೌಕರರಿದ್ದು, 300ಕ್ಕೂ ಅಧಿಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, ಹೌಸ್‌ಕೀಪಿಂಗ್‌, ಭದ್ರತೆ ಒಳಗೊಂಡಂತೆ ಹೊರಗುತ್ತಿಗೆಯಲ್ಲಿ ಅಂದಾಜು ನಾಲ್ಕು ಸಾವಿರ ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿ ಮೊದಲ ಹಂತದಲ್ಲಿ ಬರುವ ಒಂದು ಇಂಟರ್‌ಚೇಂಜ್‌ ಸೇರಿ 40 ನಿಲ್ದಾಣಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಇವರೆಲ್ಲರೂ ಒಟ್ಟಿಗೆ ಕೆಲಸ ಮಾಡುವುದರಿಂದ ದಟ್ಟಣೆ ಉಂಟಾಗಿ, ಸೋಂಕು ತಗಲುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಾಳಿಯಲ್ಲಿ ವಾರದಲ್ಲಿ ಮೂರು ದಿನ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಕಳೆದ ಮೂರು ತಿಂಗಳಿಂದ “ನಮ್ಮ ಮೆಟ್ರೋ’ ವಾಣಿಜ್ಯ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಜನದಟ್ಟಣೆ ಕೂಡ ಇಲ್ಲ. ಕೇವಲ ವಿದ್ಯುತ್‌ ನಿರ್ವಹಣೆ ಮತ್ತಿತರ ತಾಂತ್ರಿಕ ಕಾರಣಗಳಿಗಾಗಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಮಾತ್ರ ರೈಲು ಕಾರ್ಯಾಚರಣೆ ಮಾಡುತ್ತಿದೆ. ಈ ಮಧ್ಯೆ ಕೋವಿಡ್  ಹಾವಳಿಯೂ ನಗರದಲ್ಲಿ ತೀವ್ರವಾಗಿದೆ. ಮತ್ತೂಂದೆಡೆ ವಿವಿಧೆಡೆಯಿಂದ ಆಗಮಿಸುವ ಸಿಬ್ಬಂದಿ ಒಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಸೋಂಕು ತಗುಲಬಹುದು. ಈ ಹಿನ್ನೆಲೆಯಲ್ಲಿ ರೊಟೇಷನ್‌ ವ್ಯವಸ್ಥೆ ಅಳವಡಿಸಲಾಗಿದೆ. ವೇತನ ಕಡಿತ, ಆರ್ಥಿಕ ಹೊರೆಯಂಥ ಕಾರಣಗಳೂ ಇದರ ಹಿಂದಿಲ್ಲ. ಯೋಜನಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಯಾವುದೇ ರೊಟೇಷನ್‌ ಪದ್ಧತಿ ಇಲ್ಲ. ಎಂದಿ ನಂತೆ ಎಲ್ಲ ಸಿಬ್ಬಂದಿ ನಿತ್ಯ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್‌ಗೂ ಅನುಮಾನ: ಈ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ ಮೂರನೇ ಹಂತದಲ್ಲಿ ಅಂದರೆ ಜುಲೈ 3 ಅಥವಾ ನಾಲ್ಕನೇ ವಾರದಲ್ಲಿ ಮೆಟ್ರೋ ಸೇವೆ ಪುನರಾರಂಭಗೊಳ್ಳಲಿದೆ ಎಂದು ಹೇಳಲಾಗಿತ್ತು. ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಆಗಸ್ಟ್‌ ನಲ್ಲೂ ಕಾರ್ಯಾಚರಣೆ ಅನುಮಾನ ಎಂದು ಕಾರ್ಯಾ ಚರಣೆ ವಿಭಾಗದ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಮೆಟ್ರೋ ಸಿಬ್ಬಂದಿ ಕೋವಿಡ್‌-19 ಡ್ಯೂಟಿಗೆ :  ಕೋವಿಡ್‌-19 ಪ್ರಕರಣಗಳು ವ್ಯಾಪಕವಾಗುತ್ತಿದ್ದು, ಇದರ ಕಾರ್ಯಾಚರಣೆಗೆ “ನಮ್ಮ ಮೆಟ್ರೋ’ದ 340ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಿಬಿಎಂಪಿಯಿಂದ ನಡೆಯುತ್ತಿರುವ ಕಾರ್ಯಾ ಚರಣೆಯಲ್ಲಿ ಬಿಎಂಆರ್‌ಸಿಎಲ್‌ನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಜನ ಅಧಿಕಾರಿಗಳು ಸೇರಿದಂತೆ 305 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದೇ ರೀತಿ, 35 ಜನ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಹೊರಗಿನಿಂದ ಬಂದಿಳಿಯುವವರ ಮೇಲೆ ನಿಗಾ ಇಡುವುದು, ಕ್ವಾರಂಟೈನ್‌ ಮಾಡುವುದು ಮತ್ತಿತರ ಕೆಲಸ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೋಗಿಗಳಿಗೆ ತ್ವರಿತವಾಗಿ ಸ್ಯಾನಿಟೈಸ್‌ ವ್ಯವಸ್ಥೆ :  ಮೆಟ್ರೋ ಕಾರ್ಯಾಚರಣೆ ಪುನಾರಂಭಗೊಂಡಾಗ, ಬೋಗಿಗಳಿಗೆ ತ್ವರಿತವಾಗಿ ಸ್ಯಾನಿಟೈಸ್‌ ಮಾಡಲು ಹವಾನಿಯಂತ್ರಿತ ವ್ಯವಸ್ಥೆಯನ್ನು ಬಳಸಿಕೊಳ್ಳುವ ಆಲೋಚನೆಯೂ ಮೆಟ್ರೋ ಮಂಡಳಿ ಮುಂದಿದೆ. ಪ್ರತಿ ಟ್ರಿಪ್‌ಗೆ ಮ್ಯಾನ್ಯುವಲ್‌ ಆಗಿ ಸ್ಯಾನಿಟೈಸರ್‌ ಮಾಡಲು ಸಾಕಷ್ಟು ಸಮಯ ಹಿಡಿಯುತ್ತದೆ. ಕೊನೆಯ ನಿಲ್ದಾಣ ತಲುಪಿದಾಗೊಮ್ಮೆ ಸಿಂಪಡಣೆ ಮಾಡಲು ನಾಲ್ಕಾರು ನಿಮಿಷ ಬೇಕು. ಇದು ಕಾರ್ಯಾಚರಣೆ ಮೇಲೆ ಪ್ರಭಾವ ಬೀರಲಿದ್ದು, ಫ್ರೀಕ್ವೆನ್ಸಿ ಕಡಿತಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾನಿಯಂತ್ರಿತ ಯಂತ್ರಗಳ ಮೂಲಕವೇ ಸ್ಯಾನಿಟೈಸ್‌ ಸಿಂಪಡಣೆ ಸಾಧ್ಯವೇ ಎಂಬುದರ ಬಗ್ಗೆ ಚಿಂತನೆ ನಡೆದಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೇಶದಲ್ಲಿ 17 ಲಕ್ಷ ಮೀರಿದ ಗುಣಮುಖರು; 24 ಗಂಟೆಗಳಲ್ಲಿ 64,553 ಮಂದಿಗೆ ಕೋವಿಡ್ ಸೋಂಕು ದೃಢ

ದೇಶದಲ್ಲಿ 17 ಲಕ್ಷ ಮೀರಿದ ಗುಣಮುಖರು; 24 ಗಂಟೆಗಳಲ್ಲಿ 64,553 ಮಂದಿಗೆ ಕೋವಿಡ್ ಸೋಂಕು ದೃಢ

ಶಿಕ್ಷಕರು, ಕೌಶಲ ತರಬೇತಿಗೆ ಪೆನ್ಸಿಲ್ವೇನಿಯಾ ಸಹಭಾಗಿತ್ವ: ಡಿಸಿಎಂ ಅಶ್ವತ್ಥನಾರಾಯಣ ಘೋಷಣೆ

ಶಿಕ್ಷಕರು, ಕೌಶಲ ತರಬೇತಿಗೆ ಪೆನ್ಸಿಲ್ವೇನಿಯಾ ಸಹಭಾಗಿತ್ವ: ಡಿಸಿಎಂ ಅಶ್ವತ್ಥನಾರಾಯಣ ಘೋಷಣೆ

ಕೋವಿಡ್ ಕಳವಳ-ಆಗಸ್ಟ್ 14: 7908 ಹೊಸ ಪ್ರಕರಣ ; 6940 ಡಿಸ್ಚಾರ್ಜ್ ; 104 ಸಾವು

ಕೋವಿಡ್ ಕಳವಳ-ಆಗಸ್ಟ್ 14: 7908 ಹೊಸ ಪ್ರಕರಣ ; 6940 ಡಿಸ್ಚಾರ್ಜ್ ; 104 ಸಾವು

Darshan-01

ವಿನಯ್ ಡೈರಿಯಲ್ಲಿ ‘ಯಜಮಾನ’ನ ಭರ್ಜರಿ ಬಂಡಿ ಸವಾರಿ

ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಇಲ್ಲ ; ಇಲ್ಲಿದೆ ಸರಕಾರದ ಮಾರ್ಗಸೂಚಿ

ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಇಲ್ಲ ; ಇಲ್ಲಿದೆ ಸರಕಾರದ ಮಾರ್ಗಸೂಚಿ

ಹುತಾತ್ಮ ಪೊಲೀಸ್ ಸಿಬ್ಬಂದಿಗಳ ಸ್ಮಾರಕ ಅಭಿವೃದ್ಧಿಗೆ ಸೂಕ್ತ ಕ್ರಮ: ಸುರೇಶ್ ಕುಮಾರ್ ಭರವಸೆ

ಹುತಾತ್ಮ ಪೊಲೀಸ್ ಸಿಬ್ಬಂದಿಗಳ ಸ್ಮಾರಕ ಅಭಿವೃದ್ಧಿಗೆ ಸೂಕ್ತ ಕ್ರಮ: ಸುರೇಶ್ ಕುಮಾರ್ ಭರವಸೆ

covid-beedr

ಬೀದರ್: ಇಂದು 97 ಜನರಿಗೆ ಕೋವಿಡ್ ಪಾಸಿಟಿವ್: 1 ಸಾವು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು  ನೀಡಲು ಸೂಚನೆ

ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲು ಸೂಚನೆ

ಕಾಲಮಿತಿಯಲಿ ಕಾಮಗಾರಿ ಪೂರ್ಣಗೊಳಿಸಿ: ಅಶ್ವತ ನಾರಾಯಣ

ಕಾಲಮಿತಿಯಲಿ ಕಾಮಗಾರಿ ಪೂರ್ಣಗೊಳಿಸಿ: ಅಶ್ವತ ನಾರಾಯಣ

ಏರ್‌ಪೋರ್ಟ್‌ ಕಾರ್ಗೊ ಶೇ. 15.3 ಪ್ರಗತಿ

ಏರ್‌ಪೋರ್ಟ್‌ ಕಾರ್ಗೊ ಶೇ. 15.3 ಪ್ರಗತಿ

K.G.ಹಳ‍್ಳಿ ಗಲಭೆ: ಗೋಲಿಬಾರಿನಲ್ಲಿ ಸತ್ತವರನ್ನು ಅಮಾಯಕರೆಂದ ಶಾಸಕ ಜಮೀರ್ ನಡೆಯೇ ಸಂಶಯಾಸ್ಪದ

K.G.ಹಳ‍್ಳಿ ಗಲಭೆ: ಗೋಲಿಬಾರಿನಲ್ಲಿ ಸತ್ತವರನ್ನು ಅಮಾಯಕರೆಂದ ಶಾಸಕ ಜಮೀರ್ ನಡೆಯೇ ಸಂಶಯಾಸ್ಪದ

ಬೆಳೆ ಸಮೀಕ್ಷೆ ರಾಜ್ಯದ ಉತ್ಸವವಾಗಬೇಕು : ಕೃಷಿ ಸಚಿವ ಬಿ‌.ಸಿ.ಪಾಟೀಲ್

ಬೆಳೆ ಸಮೀಕ್ಷೆ ರಾಜ್ಯದ ಉತ್ಸವವಾಗಬೇಕು : ಅಧಿಕಾರಿಗಳ ಜೊತೆ ಕೃಷಿ ಸಚಿವರ ವಿಡಿಯೋ ಸಂವಾದ

MUST WATCH

udayavani youtube

ಬೆಂಗಳೂರು ಗಲಭೆ: ಹತ್ತಾರು ಪ್ರಶ್ನೆಗಳು !

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naikಹೊಸ ಸೇರ್ಪಡೆ

ದೇಶದಲ್ಲಿ 17 ಲಕ್ಷ ಮೀರಿದ ಗುಣಮುಖರು; 24 ಗಂಟೆಗಳಲ್ಲಿ 64,553 ಮಂದಿಗೆ ಕೋವಿಡ್ ಸೋಂಕು ದೃಢ

ದೇಶದಲ್ಲಿ 17 ಲಕ್ಷ ಮೀರಿದ ಗುಣಮುಖರು; 24 ಗಂಟೆಗಳಲ್ಲಿ 64,553 ಮಂದಿಗೆ ಕೋವಿಡ್ ಸೋಂಕು ದೃಢ

ಧಾರವಾಡ: 219 ಹೊಸ ಕೋವಿಡ್ 19 ಪ್ರಕರಣಗಳು: ಒಟ್ಟು 4528 ಜನ ಗುಣಮುಖ

ಧಾರವಾಡ: 219 ಹೊಸ ಕೋವಿಡ್ 19 ಪ್ರಕರಣಗಳು: ಒಟ್ಟು 4528 ಜನ ಗುಣಮುಖ

ಕಾಸರಗೋಡು: ಶುಕ್ರವಾರ 49 ಮಂದಿಗೆ ಸೋಂಕು; ಕೊಡಗು: ಓರ್ವ ಸಾವು; 43 ಪಾಸಿಟಿವ್‌ ಪ್ರಕರಣ

ಕಾಸರಗೋಡು: ಶುಕ್ರವಾರ 49 ಮಂದಿಗೆ ಸೋಂಕು; ಕೊಡಗು: ಓರ್ವ ಸಾವು; 43 ಪಾಸಿಟಿವ್‌ ಪ್ರಕರಣ

ಉಡುಪಿ ಜಿಲ್ಲೆ: ಆಗಸ್ಟ್ 14; ಕೋವಿಡ್ ನಿಂದ 6 ಸಾವು, 322 ಪಾಸಿಟಿವ್‌; 2,262 ನೆಗೆಟಿವ್‌

ಉಡುಪಿ ಜಿಲ್ಲೆ: ಆಗಸ್ಟ್ 14; ಕೋವಿಡ್ ನಿಂದ 6 ಸಾವು, 322 ಪಾಸಿಟಿವ್‌; 2,262 ನೆಗೆಟಿವ್‌

ದ.ಕ.: ಶುಕ್ರವಾರ 307 ಮಂದಿಗೆ ಕೋವಿಡ್ ದೃಢ; 6 ಸಾವು ; ಮೃತರ ಸಂಖ್ಯೆ 256ಕ್ಕೇರಿಕೆ

ದ.ಕ.: ಶುಕ್ರವಾರ 307 ಮಂದಿಗೆ ಕೋವಿಡ್ ದೃಢ; 6 ಸಾವು ; ಮೃತರ ಸಂಖ್ಯೆ 256ಕ್ಕೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.