ಕುಖ್ಯಾತ ರೌಡಿಶೀಟರ್‌ ಕುಣಿಗಲ್‌ ಗಿರಿ ಬಂಧನ

ಪಾತಕ ಲೋಕದಲ್ಲಿ ಆ್ಯಕ್ಟೀವ್‌ ಆಗಿದ್ದ ಗಿರಿ ಕೊಲೆ ಕೇಸ್‌ನಲ್ಲಿ ಅರೆಸ್ಟ್‌

Team Udayavani, Dec 8, 2020, 11:54 AM IST

ಕುಖ್ಯಾತ ರೌಡಿಶೀಟರ್‌ ಕುಣಿಗಲ್‌ ಗಿರಿ ಬಂಧನ

ಬೆಂಗಳೂರು: ಹಳೆ ವೈಷಮ್ಯಕ್ಕೆ ಮಂಜುನಾಥ್‌ ಎಂಬಾತನ ಕೊಲೆ ಪ್ರಕರಣದಲ್ಲಿ ನಟೋರಿಯಸ್‌ ರೌಡಿಶೀಟರ್‌ ಕುಣಿಗಲ್‌ ಗಿರಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್‌ನಲ್ಲಿ ನಡೆದಿದ್ದ ಮಂಜುನಾಥ್‌ ಕೊಲೆ ಪ್ರಕರಣದ ತನಿಖೆ ವೇಳೆ ಕುಣಿಗಲ್‌ ಗಿರಿ ಪಾತ್ರವೂ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದು, ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಒಂದು ವಾರ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಮಂಜುನಾಥ್‌ ಕೂಲೆ ‌ ಕಳ್ಳತನ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕೆಲವೊಮ್ಮೆ ಸ್ನೇಹಿತರ ಬಳಿ “ಕುಣಿಗಲ್‌ ಗಿರಿಯನ್ನು ಮುಗಿಸಬೇಕು’ ಎಂದು ಹೇಳಿಕೊಂಡು ತಿರುಗಾಡಿದ್ದ. ಈ ವಿಚಾರ ‌ ಗಿರಿಗೆ ಗೊತ್ತಾಗಿತ್ತು. ಬಳಿಕಗಿರಿಯ ಸಹ‌ಚರ ಲಕ್ಷ್ಮಣ್‌ ಅಲಿಯಾಸ್‌ ಸುಳಿಯನ್ನು ಕೊಲೆ ಮಾಡಲು ಮಂಜುನಾಥ್‌ ಸಂಚು ರೂಪಿಸಿ ಕಾಯುತ್ತಿದ್ದ.

ಈ ವಿಚಾರಗಳಿಂದ ಲಕ್ಷ್ಮಣ್‌  ಕೂಡ ಮಂಜನ ಹತ್ಯೆಗೆ ಕಾಯುತ್ತಿದ್ದ.ಈ ವಿಚಾರವನ್ನು ಆತನ ‌ ಸ್ನೇಹಿತ ವಿಶ್ವ ಅಲಿಯಾಸ್‌ ಸೈಕೋ ಹತ್ತಿರ ಚರ್ಚಿಸಿದ್ದ. ಬಳಿಕ ಆರೋಪಿಗಳು ಸಂಚು ರೂಪಿಸಿ, ನ ‌.7ರಂದು ಮಂಜನನ್ನು ತಲಘಟ್ಟಪುರಕ್ಕೆ ಕರೆಸಿಕೊಂಡು ಹಲ್ಲೆ ನಡೆಸಿ ಕೂಲೆ ಮಾಡಿ ಮೃತದೇಹವನ್ನು ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ತಂದು ಹಾಕಿದ್ದರು.

ಇದನ್ನೂ ಓದಿ : ಭಾರತ್ ಬಂದ್ : ಹಾವೇರಿ, ರಾಮನಗರ, ದಾವಣಗೆರೆಯಲ್ಲಿ ನೀರಸ ಪ್ರತಿಕ್ರೀಯೆ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೆಲದಿನಗಳ ಹಿಂದೆ ಆರೋಪಿ ಸೈಕೋನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಈ ವೇಳೆ ಪ್ರಾಣರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ಪ್ರಶಾಂತ್‌, ಸೈಕೋ ಕಾಲಿಗೆ ಗುಂಡು ಹೊಡೆದಿದ್ದರು. ಆರೋಪಿಗಳ ವಿಚಾರಣೆ ಹಾಗೂ ಪ್ರಕರಣದ ತನಿಖೆಯಲ್ಲಿ ಅಂತಿಮವಾಗಿ ಕುಣಿಗಲ್‌ ಗಿರಿ ಪಾತ್ರವಿರುವುದು ಗೊತ್ತಾಗಿ,ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಫಾರ್ಮ್ ಹೌಸ್‌ಒಡೆಯ ಗಿರಿ  :

ದುಷ್ಕೃತ್ಯಗಳನ್ನು ಮಾಡಿಸಿ ಹಣ ಮಾಡುವ ಗಿರಿ ಇತ್ತೀಚೆಗೆ ರೈತನಾಗಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ. ಕುಣಿಗಲ್‌ನ ಸ್ವಂತಊರಲ್ಲಿ ಸುಮಾರು 15 ಎಕರೆಗೂ ಅಧಿಕಜಾಗದಲ್ಲಿ ಫಾರ್ಮ್ ಹೌಸ್‌ ಮಾಡಿಕೊಂಡಿದ್ದಾನೆ. ತೆಂಗು, ಅಡಿಕೆ ಸೇರಿದಂತೆ ಹಲವು ಗಿಡಗಳನ್ನು ಬೆಳೆಸಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಚುನಾವಣೆಗೆ ಸಜ್ಜಾಗಿದ್ದ ಗಿರಿ :  ರೌಡಿಶೀಟರ್‌ ಗಿರಿ ಕುಣಿಗಲ್‌ನ ತಾಲೂಕಿನ ಸ್ವಂತ ಹೊಸೂರಿನಲ್ಲಿ ರಾಜಕೀಯ ಪ್ರಾಬಲ್ಯ ಉಳಿಸಿಕೊಳ್ಳಲು ನಿರ್ಧರಿಸಿದ್ದ. ಹೀಗಾಗಿ ಗ್ರಾಪಂ ಚುನಾವಣೆಯಲ್ಲಿ ತಮ್ಮ ತಂದೆ ಅಥವಾ ತಾನೇಕಣಕ್ಕಿಳಿಸಲು ನಿರ್ಧರಿಸಿ ಅದಕ್ಕೆ ಬೇಕಾದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದ. ತಮ್ಮಕುಟುಂಬದವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದುಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದ ಇತರರಿಗೆ ಬೆದರಿಕೆ ಒಡ್ಡಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವ್ಯಾಟ್ಸಾಪ್‌ ಹಾಗೂಮೆಸೆಂಜರ್‌ ಕಾಲ್‌ಗ‌ಳಲ್ಲಿಯೇ ಡೀಲ್‌’ : ರಾಬರಿ, ಡಕಾಯಿತಿ,ಕೊಲೆ,ಕೊಲೆಯತ್ನ ಸೇರಿದಂತೆ ಹಲವು ಅಪರಾಧ ಕೃತ್ಯಗಳು ಸೇರಿದಂತೆ ಒಟ್ಟು 108 ಪ್ರಕರಣಗಳುಕುಣಿಗಲ್‌ ಗಿರಿಯ ಮೇಲಿವೆ. ಬೆಂಗಳೂರು, ಬೆಂ. ಗ್ರಾಮಾಂತರ, ತುಮಕೂರು, ಕುಣಿಗಲ್‌ ಸೇರಿದಂತೆ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಆತ ಆರೋಪಿಯಾಗಿದ್ದಾನೆ. ಹತ್ತಾರು ಬಾರಿ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಗಡೆ ಬಂದಿದ್ದಾನೆ.ತನ್ನ ಸಹಚರರ ಮೂಲಕ ಇಸ್ಪೀಟ್‌ಕ್ಲಬ್‌ಗಳ ಮೇಲೆ ದಾಳಿ ನಡೆಸಿ ಸುಲಿಗೆ ಮಾಡುವುದು. ರಾಬರಿ ಕೃತ್ಯಗಳನ್ನು ಮಾಡಿಸಿ ಹಣ ಮಾಡುವುದರಲ್ಲಿಕುಖ್ಯಾತಿ ಪಡೆದಿರುವ ಗಿರಿ ಇತ್ತೀಚೆಗೆ ಪೊಲೀಸರಿಗೆ ಸಿಕ್ಕಿಬೀಳಬಾರದು ಸಾಕ್ಷ್ಯಗಳು ಲಭ್ಯವಾಗಬಾರದು ಎಂಬ ಉದ್ದೇಶದಿಂದ ತನ್ನ ಹೊಸ ತಂತ್ರಗಳನ್ನು ಬಳಸುತ್ತಿದ್ದಾನೆ. ತನ್ನ ಸಹಚರರಿಗೆವ್ಯಾಟ್ಸಾಪ್‌ ಹಾಗೂ ಮೆಸೆಂಜರ್‌ನಲ್ಲಿ ಮಾತ್ರವೇಕರೆ ಮಾಡುತ್ತಾನೆ. ಜತೆಗೆ,  ದುಷ್ಕೃತ್ಯಗಳಿಗೆ ಸೂಚನೆಗಳನ್ನು ನೀಡುತ್ತಾನೆ. ಬಳಿಕ ತನ್ನ ಪಾಡಿಗೆ ತಾನಿರುತ್ತಾನೆ. ಮಂಜುನಾಥ್‌ಕೊಲೆ ಪ್ರಕರಣದಲ್ಲಿಯೂ ಸೈಕೋ ಹಾಗೂ ಲಕ್ಷ್ಮಣನ ಜತೆ ಹಲವು ಬಾರಿ ಮಾತನಾಡಿದ್ದಾನೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

ಟಾಪ್ ನ್ಯೂಸ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

10-uv-fusion

Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.