ನಟ ಗಣೇಶ್‌ಗೆ 75 ಲಕ್ಷ ರೂ. ಪರಿಹಾರ
Team Udayavani, Apr 3, 2018, 11:41 AM IST
ಬೆಂಗಳೂರು: ಅನುಮತಿ ಇಲ್ಲದೇ ಪ್ರಚಾರಕ್ಕೆ ಪೋಟೋ ಬಳಸಿದ ಹಿನ್ನೆಲೆಯಲ್ಲಿ ನಟ ಗಣೇಶ್‌ಗೆ, ಮೋಕ್ಷ ಅಗರಬತ್ತಿ ಕಂಪನಿ 75 ಲಕ್ಷ ರೂ. ಪರಿಹಾರ ನೀಡುವಂತೆ 15ನೇ ಸಿಟಿವಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
2007ರಲ್ಲಿ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾ ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಮೋಕ್ಷ ಅಗರಬತ್ತಿ ಕಂಪನಿ ಜತೆ ಜಾಹಿರಾತು ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಸಿನಿಮಾದ ಚಿತ್ರಗಳನ್ನು ಅಗರಬತ್ತಿ ಜಾಹಿರಾತಿಗೆ ಬಳಸಿಕೊಳ್ಳಲಾಗಿತ್ತು.
ಆದರೆ ಚೆಲುವಿನ ಚಿತ್ತಾರ ಚಿತ್ರದ ಫೋಟೋಗಳ ಹೊರತಾಗಿ ಇತರೆ ಫೋಟೋಗಳನ್ನು ಅಗರಬತ್ತಿ ಕಂಪನಿ ಬಳಸಿಕೊಂಡಿದೆ ಎಂದು ಆರೋಪಿಸಿ 2008ರಲ್ಲಿ ನಟ ಗಣೇಶ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರ ಗಣೇಶ್‌ಗೆ ತೀರ್ಪು ಪ್ರಕಟವಾದ 60 ದಿನಗಳ ಒಳಗೆ 75 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ
ಮಳೆಯಬ್ಬರ ಎದುರಿಸಲು ಸಕಲ ಸಿದ್ಧತೆ : ಮುಂದಿನ ವಾರ 4 ಎನ್ಡಿಆರ್ಎಫ್ ತಂಡ ರಾಜ್ಯಕ್ಕೆ
ನಟಿ ಚೇತನಾ ಸಾವು: ಶಸ್ತ್ರಚಿಕಿತ್ಸೆ ಮಾಡಿದ್ದ ಆಸ್ಪತ್ರೆಗೆ ಬೀಗ
ಗುತ್ತಿಗೆದಾರರ ಬೇಜವಾಬ್ದಾರಿ, ಕಾಮಗಾರಿ ವಿಳಂಬದಿಂದ ಮನೆಗಳಿಗೆ ನೀರು :ಎಸ್.ಟಿ.ಸೋಮಶೇಖರ್ ಕಿಡಿ
ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧ ನಡೆಸಿದರೆ ಕ್ಷಮೆ ಇಲ್ಲ : ಗೃಹ ಸಚಿವ ಎಚ್ಚರಿಕೆ