
ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: 1:1ರ ಅನುಪಾತ; 13,351 ಅಭ್ಯರ್ಥಿಗಳ ಆಯ್ಕೆ
Team Udayavani, Feb 28, 2023, 8:05 AM IST

ಬೆಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಗೆ ಸಂಬಂಧಿಸಿ ಹೊಸ ತಾತ್ಕಾಲಿಕ ಪಟ್ಟಿಯನ್ನು ಶಿಕ್ಷಣ ಇಲಾಖೆ ಸೋಮವಾರ ಪ್ರಕಟಿಸಿದೆ. 15 ಸಾವಿರ ಹುದ್ದೆಗಳಲ್ಲಿ 1:1ರ ಅನುಪಾತದಲ್ಲಿ 13,351 ಅಭ್ಯರ್ಥಿ ಆಯ್ಕೆ ಮಾಡಲಾಗಿದೆ.
1.06 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿ, 68, 849 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 53,664 ಮಂದಿ ಅರ್ಹತೆ ಗಳಿಸಿದ್ದರು. 22,432 ಮಂದಿ 1:2 ಪರಿಶೀಲನ ಪಟ್ಟಿಗೆ ಆಯ್ಕೆ ಆಗಿದ್ದರು. ಈಗ ತಾತ್ಕಾಲಿಕ ಅಂತಿಮ ಪಟ್ಟಿಯಲ್ಲಿ 13,351 ಮಂದಿ ಸ್ಥಾನ ಪಡೆದಿದ್ದಾರೆ. ಜೀವ ವಿಜ್ಞಾನ ವಿಭಾಗದಲ್ಲಿ ಅಂಗವಿಕಲರಿಗೆ ಸಂಬಂಧಿಸಿದ 122 ಬ್ಯಾಕ್‌ಲಾಗ್ ಹುದ್ದೆಗಳು ಹಾಗೆಯೇ ಉಳಿದುಕೊಂಡಿವೆ.
ಕಲ್ಯಾಣ ಕರ್ನಾಟಕದ 5,000 ಹುದ್ದೆಗಳ ಭರ್ತಿಗೆ ಸರಕಾರ ಬಯಸಿತ್ತು. ಈಗ ಆಯ್ಕೆ ಪಟ್ಟಿಯಲ್ಲಿ 4,194 ಮಂದಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ 1,779 ಮಂದಿ ಪುರುಷರು ಮತ್ತು 2,414 ಮಂದಿ ಪುರುಷ ಅಭ್ಯರ್ಥಿಗಳಿದ್ದಾರೆ. ಒಬ್ಬರು ತೃತೀಯ ಲಿಂಗಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ರಾಜ್ಯದ ಇತರ ಭಾಗಗಳ 10,000 ಹುದ್ದೆಗಳಲ್ಲಿ 9,157 ಅಭ್ಯರ್ಥಿಗಳು ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪೈಕಿ 3,192 ಮಂದಿ ಪುರುಷರು ಮತ್ತು 5,963 ಮಂದಿ ಮಹಿಳೆಯರಿದ್ದಾರೆ. ಇಬ್ಬರು ತೃತೀಯ ಲಿಂಗಿಗಳಿಗೂ ಅವಕಾಶ ಲಭಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಕಾಂಗ್ರೆಸ್ ಪಕ್ಷ ಡಿಎಂಕೆಯ ಬಿ ಟೀಮ್: ಎಚ್‌ಡಿಕೆ

Karnataka: “ಗ್ಯಾರಂಟಿ” ಮೇಲೆ ಸಿಎಂ, ಡಿಸಿಎಂ, ಸಚಿವರ ಫೋಟೋ ಬೇಡ ಎಂದ ಅರ್ಜಿ ವಜಾ

Investment: ಹೂಡಿಕೆ ಅರಸಿ ಅಮೆರಿಕಕ್ಕೆ ತೆರಳಿದ ಕೈಗಾರಿಕ ಸಚಿವ ಎಂ.ಬಿ. ಪಾಟೀಲ್

Cow: ಹಸುಗಳಿಗೆ ಹೆಣ್ಣು ಭ್ರೂಣದ ಇಂಜೆಕ್ಷನ್ ಕೊಡಿಸಿ: ಸಚಿವ ಕೆ. ವೆಂಕಟೇಶ್

Mantralaya: ರಾಯರ ಮಠದ ಹುಂಡಿಯಲ್ಲಿ 3.82 ಕೋ. ರೂ. ಸಂಗ್ರಹ