ಬೇಡಿಕೆ ಇಲ್ಲದ ಕೋರ್ಸ್‌ಗೆ ಕತ್ತರಿ


Team Udayavani, Nov 2, 2017, 3:41 PM IST

university.jpg

ಬೆಂಗಳೂರು : ಬೇಡಿಕೆ ಇಳಿಮುಖವಾಗಿರುವ ಸ್ನಾತಕೋತ್ತರ ಕೋರ್ಸ್‌ಗಳ ಭವಿಷ್ಯ ನಿರ್ಧರಿಸಲು ಬೆಂಗಳೂರು ವಿಶ್ವವಿದ್ಯಾಲಯವು ಸಿಂಡಿಕೇಟ್‌ ಉಪ ಸಮಿತಿ ರಚಿಸಿದೆ. ಹಿಂದಿ, ಸಂಸ್ಕೃತ, ತೆಲಗು, ಫ್ರಂಚ್‌, ಡಾನ್ಸ್‌, ಲೈಫ್ಸೈನ್ಸ್‌ ಸೇರಿದಂತೆ ಸುಮಾರು 15 ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದೆ. ಪ್ರಸ್ತಕ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 15ಕ್ಕಿಂತ ಕಡಿಮೆ ದಾಖಲಾತಿಯಾಗಿರುವ ಕೋರ್ಸ್‌ಗಳನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ರದ್ದು ಮಾಡುವ ಅಥವಾ ಇನ್ನಷ್ಟು ಪರಿಣಾಮಕಾರಿಯಾಗಿ ಕೋರ್ಸ್‌ ನಡೆಸಬಹುದಾದ ಬಗ್ಗೆ ವರದಿ ಪಡೆಯಲು ಬೆಂವಿವಿ ಆಡಳಿತ ಮಂಡಳಿ ಮುಂದಾಗಿದೆ.

ಭವಿಷ್ಯ: ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರಲು ಕಾರಣ ಏನು ಎಂಬುದನ್ನು ತಿಳಿಯಲು ಸಿಂಡಿಕೇಟ್‌ ಉಪ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಅಧ್ಯಯನ ನಡೆಸಿ ವರದಿಯನ್ನು ಸಿಂಡಿಕೇಟ್‌ಗೆ ಒಪ್ಪಿಸಲಿದೆ. ಉಪ ಸಮಿತಿ ನೀಡುವ ಶಿಫಾರಸ್ಸಿನ ಆಧಾರದಲ್ಲಿ ಕೋರ್ಸ್‌ಗಳ ಭವಿಷ್ಯ ನಿರ್ಧರಿಸಲಾಗುತ್ತದೆ.

ವಿವಿಯ ಜ್ಞಾನಭಾರತಿ ಕ್ಯಾಂಪಸ್‌ ಸೇರಿದಂತೆ ಮಾನ್ಯತೆ ಪಡೆದ ಕಾಲೇಜುಗಳ ಸ್ನಾತಕೋತ್ತರ ಕೇಂದ್ರದಲ್ಲಿ ಉಪ ಸಮಿತಿಯು ಅಧ್ಯಯನ ನಡೆಸಲಿದೆ. ವಿವಿಧ ಸ್ನಾತಕೋತ್ತರ ವಿಷಯದ ದಾಖಲಾತಿ ಮತ್ತು ವಿದ್ಯಾರ್ಥಿಗಳ ಆಸಕ್ತಿಯ
ಆಧಾರದಲ್ಲಿ ವರದಿ ಸಿದ್ಧಪಡಿಸಲಿದೆ. ವಿವಿಯಿಂದ ಮಾನ್ಯತೆ ಪಡೆದಿರುವ ಕಾಲೇಜುಗಳ ನಿರ್ವಹಣೆ, ರೋಸ್ಟರ್‌ ಪದ್ಧತಿ ಅನುಸರಿಸುತ್ತಿರುವ ಬಗ್ಗೆಯೂ ವರದಿಯಲ್ಲಿ ಬೆಳಕು ಚೆಲ್ಲಲಿದೆ ಎಂದು ಬೆಂವಿವಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

2017-18ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಈಗಾಗಲೇ ಅಂತಿಮಗೊಂಡಿದೆ. ಕೆಲವೊಂದು ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆಯಾಗಿರುವುದು ವಿವಿ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. 

ಕಡಿಮೆ ವಿದ್ಯಾರ್ಥಿಗಳಿರುವ ಕೋರ್ಸ್‌ಗಳು: ಫ್ರೆಂಚ್‌,ಸ್ಪ್ಯಾನಿಶ್‌, ತೆಲಗು ವಿಭಾಗದಲ್ಲಿ ತಲಾ 2, ಸಂಸ್ಕೃತ ವಿಭಾಗದಲ್ಲಿ 7, ಆಡಿಯೋಲಜಿಯಲ್ಲಿ 5, ಸ್ಪೀಚ್‌ ಆ್ಯಂಡ್‌ ಲ್ಯಾಂಗುವೇಜ್‌ನಲ್ಲಿ 3, ಹಿಂದಿಯಲ್ಲಿ 10, ಕಾರ್ಪೋರೇಟ್‌ ಕಮ್ಯೂನಿಕೇಷನ್‌ 11, ಲೇಬರ್‌ ಎಂಪ್ಲಾಯಮೆಂಟ್‌ನಲ್ಲಿ 8, ಡಾನ್ಸ್‌ 12, , ಥಿಯೇಟರ್‌ ಮತ್ತು ಡ್ರಾಮದಲ್ಲಿ 11, ಜಿಯೋಗ್ರಪೀಕಲ್‌ ಇನ್‌ಫ‌ರ್ಮೆಷನ್‌, ಮ್ಯೂಸಿಕ್‌ ಹಾಗೂ ಲೈಫ್ಸೈನ್ಸ್‌ನಲ್ಲಿ ತಲಾ 13 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಟಾಪ್ ನ್ಯೂಸ್

ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ

ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ

ಬಸ್-ಲಾರಿ ನಡುವೆ ಭೀಕರ ಅಪಘಾತ: ಏಳು ಜನರ ದುರ್ಮರಣ; 28 ಜನರಿಗೆ ಗಾಯ

ಬಸ್-ಲಾರಿ ನಡುವೆ ಭೀಕರ ಅಪಘಾತ: ಎಂಟು ಜನರ ದುರ್ಮರಣ; 27 ಮಂದಿಗೆ ಗಂಭೀರ ಗಾಯ

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ

ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ

ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ

ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್‌ ಪವರ್‌; ಇಂದು ಗುಜರಾತ್‌-ರಾಜಸ್ಥಾನ್‌ ಮುಖಾಮುಖಿ

ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್‌ ಪವರ್‌; ಇಂದು ಗುಜರಾತ್‌-ರಾಜಸ್ಥಾನ್‌ ಮುಖಾಮುಖಿ

thumb 1

ಚೀನ ತಡೆಗೆ ಹೊಸ ವೇದಿಕೆ: ಅಮೆರಿಕ ನೇತೃತ್ವದಲ್ಲಿ ಐಪಿಇಎಫ್ ರಚನೆ

ಹೆಬ್ರಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಮತ್ತೆ ಸಂಕಷ್ಟ

ಹೆಬ್ರಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಮತ್ತೆ ಸಂಕಷ್ಟ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೊಮೆಟೋ ದರ ಮತ್ತೆ ಏರಿಸಿದ ಮಳೆ

ಟೊಮೆಟೋ ದರ ಮತ್ತೆ ಏರಿಸಿದ ಮಳೆ

ಬಾಡಿಗೆ ಮನೆ ಕೇಳುವ ನೆಪದಲ್ಲಿ ಮಾಲೀಕರ ಕೈ-ಕಾಲು ಕಟ್ಟಿ ಚಿನ್ನಾಭರಣ ಲೂಟಿ: ಮೂವರ ಬಂಧನ

ಬಾಡಿಗೆ ಮನೆ ಕೇಳುವ ನೆಪದಲ್ಲಿ ಮಾಲೀಕರ ಕೈ-ಕಾಲು ಕಟ್ಟಿ ಚಿನ್ನಾಭರಣ ಲೂಟಿ: ಮೂವರ ಬಂಧನ

ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

ಬೆಂಗಳೂರು: ಉಡುಗೊರೆ, ಲಾಟರಿ ನೆಪದಲ್ಲಿ ವಂಚನೆ

ಬೆಂಗಳೂರು: ಉಡುಗೊರೆ, ಲಾಟರಿ ನೆಪದಲ್ಲಿ ವಂಚನೆ

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ

ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ

ಬಸ್-ಲಾರಿ ನಡುವೆ ಭೀಕರ ಅಪಘಾತ: ಏಳು ಜನರ ದುರ್ಮರಣ; 28 ಜನರಿಗೆ ಗಾಯ

ಬಸ್-ಲಾರಿ ನಡುವೆ ಭೀಕರ ಅಪಘಾತ: ಎಂಟು ಜನರ ದುರ್ಮರಣ; 27 ಮಂದಿಗೆ ಗಂಭೀರ ಗಾಯ

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ

ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಬಿಡುಗಡೆ : 8,499 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ

ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ

ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ

ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್‌ ಪವರ್‌; ಇಂದು ಗುಜರಾತ್‌-ರಾಜಸ್ಥಾನ್‌ ಮುಖಾಮುಖಿ

ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್‌ ಪವರ್‌; ಇಂದು ಗುಜರಾತ್‌-ರಾಜಸ್ಥಾನ್‌ ಮುಖಾಮುಖಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.