ನಗರದಲ್ಲಿ ಧಾರಾಕಾರ ಮಳೆ: ಧರೆಗುರುಳಿದ ಮರಗಳು

Team Udayavani, May 8, 2019, 3:05 AM IST

nagarada

ಬೆಂಗಳೂರು: ಫೋನಿ ಚಂಡಮಾರುತ ಬಳಿಕ ನಗರದಲ್ಲಿ ಪೂರ್ವಮುಂಗಾರಿನ ಮತ್ತೂಂದು ಮಳೆಯ ಆರ್ಭಟ ಶುರುವಾಗಿದೆ. ಅಲ್ಪಾವಧಿಯಲ್ಲಿ ಗಂಟೆಗೆ ಕೆಲವೆಡೆ ತೀವ್ರವಾಗಿ ಮಳೆ ಸುರಿದ ಪರಿಣಾಮ ಹತ್ತಾರು ಮರಗಳು ನೆಲಕಚ್ಚಿದವು. ಆಯ್ದ ಭಾಗಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಹೊರವಲಯದ ದೇವನಹಳ್ಳಿಯಲ್ಲಿ ಸಿಡಿಲು ಬಡಿದು 12 ಕುರಿಗಳು ಸಾವಿಗೀಡಾದ ಘಟನೆ ವರದಿಯಾಗಿದೆ. ಮಾಗಡಿ ರಸ್ತೆಯಲ್ಲಿ ಹಲವು ಮನೆಗಳು, ಬಸವೇಶ್ವರನಗರದ ನಂದಿನಿ ಚಿತ್ರಮಂದಿರದ ಬಳಿ, ವಾಣಿ ವಿಲಾಸ ಆಸ್ಪತ್ರೆಯ 3ನೇ ಹಂತದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.

ಪ್ರಮುಖ ಜಂಕ್ಷನ್‌ಗಳು, ಅಂಡರ್‌ಪಾಸ್‌ಗಳಲ್ಲಿ ಎರಡು-ಮೂರು ಅಡಿ ನೀರು ತುಂಬಿಕೊಂಡಿದ್ದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಬಸವೇಶ್ವರನಗರದಲ್ಲಿ ಮಳೆಯ ಹೊಡೆತಕ್ಕೆ ಮರವೊಂದು ರಸ್ತೆ ಬದಿ ನಿಲ್ಲಿಸಿದ್ದ ಕಾರು ಮತ್ತು ಬೈಕ್‌ ಮೇಲೆ ಬಿದ್ದಿದೆ. ಕಾರು ಚಾಲಕ ಅದೃಷ್ಟವಶಾತ್‌ ಪಾರಾಗಿದ್ದಾನೆ.

ಮರಗಳು ಧರೆಗೆ: ರಾಜಾಜಿನಗರದ ಭಾಷ್ಯಂ ವೃತ್ತ, ಶೇಷಾದ್ರಿಪುರದ ಗಾಯತ್ರಿನಗರ, ಎಚ್‌ಎಂಟಿ ಲೇಔಟ್‌, ಲಕ್ಷ್ಮೀದೇವಿ, ಗೊರುಗುಂಟೆಪಾಳ್ಯದ ಆರ್‌ಸಿಎಂ ಲೇಔಟ್‌, ಆರ್‌.ಟಿ. ನಗರದ ಎಚ್‌ಎಂಟಿ ಮೈದಾನ, ಭದ್ರಪ್ಪ ಲೇಔಟ್‌, ಸಂಜಯನಗರ, ಸುಬ್ಬಯ್ಯ ವೃತ್ತದಲ್ಲಿ ತಲಾ ಒಂದು ಮರಗಳು ಧರೆಗುರುಳಿವೆ. ಶಿವಾನಂದ ವೃತ್ತದಲ್ಲಿ ಮರ ಬಿದ್ದು ಕಾರೊಂದು ಜಖಂಗೊಂಡಿದೆ.

ಈ ಮಧ್ಯೆ ಮಲ್ಲೇಶ್ವರದ ಲಿಂಕ್‌ ರಸ್ತೆಯಲ್ಲಿ ಬಿದ್ದ ಮರ ತೆರವುಗೊಳಿಸುವಂತೆ ಸಹಾಯವಾಣಿಗೆ ಕರೆ ಮಾಡಿದರೂ ಸ್ಥಳಕ್ಕೆ ಧಾವಿಸಿಲ್ಲ ಎಂದು ಆರೋಪಿಸಿ, ಸ್ಥಳೀಯರು ಆಕ್ರೋಶಗೊಂಡರು. ಎಲೆಕ್ಟ್ರಾನಿಕ್‌ ಸಿಟಿಯ ವೀರಸಂದ್ರ ಗೇಟ್‌ ಬಳಿಯ ರಸ್ತೆ, ಓಕಳೀಪುರ, ಹೆಬ್ಟಾಳ, ಮೆಜೆಸ್ಟಿಕ್‌, ಶಿವಾನಂದ ವೃತ್ತದ ಮಾರ್ಗಗಳಲ್ಲಿ ಬರುವ ಜಂಕ್ಷನ್‌ಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ಆಮೆಗತಿಯಲ್ಲಿ ಸಾಗಿತ್ತು.

ಸಂಚಾರದಟ್ಟಣೆಯೂ ಹೆಚ್ಚಿತ್ತು. ಬಸ್‌ಗಳ ಕಾರ್ಯಾಚರಣೆಯಲ್ಲೂ ಇದು ಪರಿಣಾಮ ಬೀರಿತು. ಇದರಿಂದ ಸಕಾಲದಲ್ಲಿ ಬಸ್‌ಗಳು ನಿಗದಿತ ಸ್ಥಳಕ್ಕೆ ಬಾರದ್ದರಿಂದ ಪ್ರಯಾಣಿಕರು ಪರದಾಡಿದರು.

ಬಸವನಗುಡಿ, ಸಂಜಯ್‌ ನಗರದ ಡಾಲರ್ಸ್‌ ಕಾಲೊನಿ, ಪೀಣ್ಯ ಕೈಗಾರಿಕಾ ಪ್ರದೇಶ, ಹೆಗ್ಗವನಹಳ್ಳಿ, ಜಯನಗರ 4 ಟಿ ಬ್ಲಾಕ್‌, ನವರಂಗ ಮಲ್ಲೇಶ್ವರ, ಸೌಂತ್‌ ಎಂಡ್‌ ಸರ್ಕಲ್‌, ರಾಜಾಜಿನಗರ, ದೇವಗೌಡ ಪೆಟ್ರೋಲ್‌ ಬ್ಯಾಂಕ್‌, ಎಚ್‌ಎಸ್‌ಆರ್‌ ಲೇಔಟ್‌, ಪದ್ಮನಾಭನಗರ ಮತ್ತಿತರ ಕಡೆಗಳಲ್ಲಿ ಮಳೆ ಜೋರಾಗಿತ್ತು.

ಸಂಚಾರ ದಟ್ಟಣೆ: ಭಾರೀ ಮಳೆಯಿಂದಾಗಿ ರಸ್ತೆ ಮೇಲೆ ನೀರು ನುಗಿದ ಪರಿಣಾಮ ನಾಯಂಡಹಳ್ಳಿ ಜಂಕ್ಷನ್‌ ಸಮೀಪದ ಮೇಲು ಸೇತುವೆ ಬಳಿ ಸಂಚಾರ ದಟ್ಟಣೆ ಉಂಟಾಗಿತ್ತು. ಮಳೆಯಿಂದ ಈ ಸ್ಥಳದಲ್ಲಿ ನಿರಂತರವಾಗಿ ನೀರು ನಿಂತುಕೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ಸಂಬಂಧ ಬಿಬಿಎಂಪಿಗೆ ಹಲವಾರು ಬಾರಿ ದೂರು ನೀಡಿದರು ಪ್ರಯೋಜನವಾಗಿಲ್ಲ ಎಂದು ಸಂಚಾರ ಪೊಲೀಸರು ಆರೋಪಿಸಿದ್ದಾರೆ.

ಇನ್ನೂ ಎರಡು ದಿನ ಮಳೆ?: ಮಳೆ ಅಬ್ಬರ ನಗರದ ಹೃದಯಭಾಗದಲ್ಲಿಗಿಂತ ಹೊರವಲಯದಲ್ಲಿ ಹೆಚ್ಚಾಗಿತ್ತು. ಪೂರ್ವಮುಂಗಾರು ಮಳೆ ಇದಾಗಿದ್ದು, ಇನ್ನೂ ಎರಡು ದಿನಗಳು ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ (ಮಿ.ಮೀ.ಗಳಲ್ಲಿ): ಹಾಲನಾಯಕನಹಳ್ಳಿ 118, ಸೊಂಡೆಕೊಪ್ಪ 102, ಬೊಮ್ಮನಹಳ್ಳಿ 100, ಬಸವನಗುಡಿ 98, ಗಾಳಿ ಆಂಜನೇಯ ದೇವಸ್ಥಾನ 88, ಆರ್‌.ಆರ್‌. ನಗರ 82, ದೊಡ್ಡಬಿದರಕಲ್ಲು 76, ಹೇರೋಹಳ್ಳಿ 78, ಪೀಣ್ಯ ಕೈಗಾರಿಕಾ ಪ್ರದೇಶ 69, ಮಾದಾವರ 69, ರಾಧಾಕೃಷ್ಣ ದೇವಾಲಯ 52, ಸಾರಕ್ಕಿ 56, ಸಿದ್ದವನಹಳ್ಳಿ 65.5, ಮಾಡೊಹಳ್ಳಿ 82, ದಾಸನಪುರ 96, ನೆಲಮಂಗಲ 66.5ರಷ್ಟು ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಟಾಪ್ ನ್ಯೂಸ್

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.