ಗೆಳತಿ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರ ಬಂಧನ

Team Udayavani, Jan 19, 2017, 11:58 AM IST

crime1-cc-camera.jpg

ಬೆಂಗಳೂರು: ಕುಡಿದ ಅಮಲಿನಲ್ಲಿದ್ದ ತಮ್ಮ ಗೆಳತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೂರಿನ ಮೇಲೆ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಆಪಾದನೆಯ ನೈಜತೆ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಯಮನ್‌ ದೇಶದ ಅಯೂಬ್‌ ಖಾನ್‌ ಹಾಗೂ ರಿಕ್ಕಿ ಅಲಿಯಾಸ್‌ ತಿಮ್ಮಣ್ಣ ಉತ್ತಪ್ಪ ಬಂಧಿತರು. 

ಐದು ದಿನಗಳ ಹಿಂದೆ ಎಂ.ಜಿ.ರಸ್ತೆ ಹತ್ತಿರದ ಫ್ಯೂಷನ್‌ ಬಾರ್‌ನಲ್ಲಿ ಸಂತ್ರಸ್ತ ಯುವತಿ ಜತೆ ಕಂಠಪೂರ್ತಿ ಮದ್ಯಸೇವಿಸಿದ ಬಳಿಕ ಆಕೆಯನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವಿದೆ. ಯುವತಿ ನೀಡಿದ ದೂರಿನ ಮೇಲೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಬಾರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಸಂತ್ರಸ್ತೆ ಪಾನಮತ್ತಳಾಗಿ ತೂರಾಡುತ್ತಿರುವ ಹಾಗೂ ಆಕೆಯನ್ನು ಯುವಕರಿಬ್ಬರು ಕರೆದುಕೊಂಡು ಹೋಗಿದ್ದ ಕಾರಿನ ಸಂಖ್ಯೆ ಪತ್ತೆಯಾಗಿತ್ತು. ಈ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಿರುವುದಾಗಿ  ಹೇಳಿದ್ದಾರೆ. 

ತಾನೇ ಕರೆ ಮಾಡಿಸಿ ಕರೆಸಿಕೊಂಡಿದ್ದಳು: ಜ. 13 ರಂದು ತನ್ನ ಗೆಳೆಯನೊಬ್ಬನಿಗೆ ಕರೆ ಮಾಡಿದ ಸಂತ್ರಸ್ತ ಯುವತಿ ರಾತ್ರಿ ಪಾರ್ಟಿಗೆ ಕರೆದಿದ್ದಳು. ಆ ಸ್ನೇಹಿತ ಬಾರದ ಕಾರಣ ಅಯೂಬ್‌ಖಾನ್‌ ಮತ್ತು ರಿಕ್ಕಿಗೆ ಕರೆ ಮಾಡಿ ಎಂ.ಜಿ.ರಸ್ತೆಯ ಫ್ಯೂಷನ್‌ ಬಾರ್‌ಗೆ ಕರೆಸಿಕೊಂಡಿದ್ದಳು. ಗೆಳೆಯರ ಜತೆ ಮೂರು ಪೆಗ್‌ ಟೆಕಿಲಾ ಸೇವಿಸಿದ ಆಕೆ, ಕೆಲ ನಿಮಿಷದಲ್ಲೇ ಬಾರ್‌ನಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಳು. ಆಗ ಜತೆಯಲ್ಲಿದ್ದ ಸ್ನೇಹಿತರು, ಆಕೆಯನ್ನು ಬಾರ್‌ನಿಂದ ಕರೆತಂದು ನಂತರ ಕಾರಿನಲ್ಲಿ ಕೂರಿಸಿಕೊಂಡು ಆಕೆಯನ್ನು ಪಿಜಿಗೆ ಕರೆದೊಯ್ದಿದ್ದರು.  

ಯುವತಿ ಜೆ.ಪಿ.ನಗರಕ್ಕೆ ವಾಸ್ತವ್ಯ ಬದಲಿಸದ ಮಾಹಿತಿ ಇಲ್ಲದ ಗೆಳೆಯರು ಮೊದಲು ಆಕೆಯನ್ನು ಹಿಂದೆ ವಾಸವಿದ್ದ ಕಮ್ಮನಹಳ್ಳಿಯ ಪಿಜಿಗೆ ಕರೆತಂದಿದ್ದರು. ಅಲ್ಲಿಂದ ಆಕೆಯನ್ನು ಖಾಲಿ ಮಾಡಿಸಿದ್ದ ವಿಷಯ ತಿಳಿದು  ಮದ್ಯ ಸೇವಿಸಿ ಮೈಮೇಲೆ ಪರಿಜ್ಞಾನವಿಲ್ಲದ ಯುವತಿಗೆ ಆಶ್ರಯ ನೀಡುವಂತೆ  ಸ್ಥಳೀಯರಲ್ಲಿ  ಮನವಿ ಮಾಡಿ ಬಿಟ್ಟು ಹೋಗಿದ್ದರು ಎನ್ನಲಾಗಿದೆ.

ಸಂತ್ರಸ್ತೆ ದೂರಿನಲ್ಲೇನಿದೆ?
ಜ.13 ರ ರಾತ್ರಿ ತಾನು ಎಂ.ಜಿ.ರಸ್ತೆಯ ಪ್ಯೂಷನ್‌ ಬಾರ್‌ಗೆ ಹೋಗಿದ್ದೆ. ಅಲ್ಲಿ ಪಾನಮತ್ತಳಾದ ಬಳಿಕ ನಿಯಂತ್ರಣ ಕಳೆದುಕೊಂಡೆ. ಆಗ ಬಾರ್‌ನಿಂದ ನನ್ನನ್ನು ಇಬ್ಬರು ಅಪರಿಚಿತರು ಕಮ್ಮನಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟಿದ್ದಾರೆ. ಅಲ್ಲಿ ನನ್ನ ಪರಿಸ್ಥಿತಿ ಗಮನಿಸಿದ ಸ್ಥಳೀಯ ಮಹಿಳೆಯೊಬ್ಬರು ಆಶ್ರಯ ನೀಡಿದರು. ಮರು ದಿನ ಎಚ್ಚರವಾದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿಯಿತು ಎಂದು ತಿಳಿಸಿದ್ದಾಳೆ.

“ಪಾರ್ಟಿ’ ಸ್ನೇಹ
ಯಮನ್‌ ದೇಶದ ಅಯೂಬ್‌, ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾನೆ. ನಗರದ ಖಾಸಗಿ ಕಾಲೇಜಿನಲ್ಲಿ ಬಿಸಿಎ ಮುಗಿಸಿದ ಆತ, ಪ್ರಸುತ್ತ ಖಾಸಗಿ ಕಂಪನಿಯೊಂದಲ್ಲಿ ಉದ್ಯೋಗದಲ್ಲಿದ್ದಾನೆ. ಮತ್ತೂಬ್ಬ ಆರೋಪಿ ರಿಕ್ಕಿ ಎಂಜಿನಿಯರಿಂಗ್‌ ಪದವೀಧರನಾಗಿದ್ದು, ಕಾಲ್‌ಸೆಂಟರ್‌ ಉದ್ಯೋಗಿಯಾಗಿದ್ದಾನೆ. ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದ ಯುವತಿಗೆ ಆರೋಪಿಗಳೊಂದಿಗೆ ಆರು ತಿಂಗಳ ಹಿಂದೆ ಬಾರ್‌ವೊಂದಲ್ಲಿ ಸ್ನೇಹವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 

ಕಮ್ಮನಹಳ್ಳಿ ಘಟನೆ ಬಳಿಕ ಮನೆ ಖಾಲಿ 
ಸಂತ್ರಸ್ತ ಯುವತಿ ಮೊದಲು ಕಮ್ಮನಹಳ್ಳಿ ಬಳಿ ಪಿಜಿಯೊಂದರಲ್ಲಿ ನೆಲೆಸಿದ್ದು ಪ್ರತಿ ದಿನ ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದಳು. ಕಮ್ಮನಹಳ್ಳಿ ಬಳಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬಳಿಕ ಪಿಜಿ ಮಾಲಿಕರು ಆಕೆಯನ್ನು ಅಲ್ಲಿಂದ ತೆರವು ಮಾಡಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಟಾಪ್ ನ್ಯೂಸ್

ಸ್ಕೂಟಿಗೆ ಕಾರು ಢಿಕ್ಕಿ: ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತೀವ್ರ ಗಾಯ

ಸ್ಕೂಟಿಗೆ ಕಾರು ಢಿಕ್ಕಿ: ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತೀವ್ರ ಗಾಯ

1-fdffds

ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ

ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ

ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ

ಪೆಗಾಸಸ್‌ ಪ್ರಕರಣ: 29 ಮೊಬೈಲ್‌ ಫೋನ್‌ಗಳ ಪರಿಶೀಲನೆ

ಪೆಗಾಸಸ್‌ ಪ್ರಕರಣ: 29 ಮೊಬೈಲ್‌ ಫೋನ್‌ಗಳ ಪರಿಶೀಲನೆ

ಗುಜರಾತ್‌, ಹಿಮಾಚಲದಲ್ಲೂ ಕಾಂಗ್ರೆಸ್‌ ಸೋಲು ಖಚಿತ: ಪ್ರಶಾಂತ್‌ ಕಿಶೋರ್‌

ಗುಜರಾತ್‌, ಹಿಮಾಚಲದಲ್ಲೂ ಕಾಂಗ್ರೆಸ್‌ ಸೋಲು ಖಚಿತ: ಪ್ರಶಾಂತ್‌ ಕಿಶೋರ್‌

ಬಿಜೆಪಿ ಸರ್ಕಾರದಿಂದ ಮಹಿಳಾ ವಿರೋಧಿ ನೀತಿ: ಪುಷ್ಪಾ ಅಮರನಾಥ್‌

ಬಿಜೆಪಿ ಸರ್ಕಾರದಿಂದ ಮಹಿಳಾ ವಿರೋಧಿ ನೀತಿ: ಪುಷ್ಪಾ ಅಮರನಾಥ್‌

ಚಿತ್ರಾ ರಾಮಕೃಷ್ಣ ಕೇಸ್‌: ಸಿಬಿಐಗೆ ನೋಟಿಸ್‌ ನೀಡಿದ ದೆಹಲಿ ಹೈಕೋರ್ಟ್‌

ಚಿತ್ರಾ ರಾಮಕೃಷ್ಣ ಕೇಸ್‌: ಸಿಬಿಐಗೆ ನೋಟಿಸ್‌ ನೀಡಿದ ದೆಹಲಿ ಹೈಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadada

ಬೆಂಗಳೂರು: ನಾಲ್ವರು ಪಾದಚಾರಿಗಳಿಗೆ ಗುದ್ದಿದ ಕಾರು; ಓರ್ವ ಬಲಿ

6

ಕೆಎಂಎಫ್: ದಾಖಲೆ ಪ್ರಮಾಣದ ಹಾಲು ಉತ್ಪಾದನೆ

5

ಎಲ್ಲಾ ಮಕ್ಕಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಮಳೆಯಬ್ಬರ ಎದುರಿಸಲು ಸಕಲ ಸಿದ್ಧತೆ : ಮುಂದಿನ ವಾರ 4 ಎನ್‌ಡಿಆರ್‌ಎಫ್ ತಂಡ ರಾಜ್ಯಕ್ಕೆ

ಮಳೆಯಬ್ಬರ ಎದುರಿಸಲು ಸಕಲ ಸಿದ್ಧತೆ : ಮುಂದಿನ ವಾರ 4 ಎನ್‌ಡಿಆರ್‌ಎಫ್ ತಂಡ ರಾಜ್ಯಕ್ಕೆ

MUST WATCH

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

ಹೊಸ ಸೇರ್ಪಡೆ

ಸ್ಕೂಟಿಗೆ ಕಾರು ಢಿಕ್ಕಿ: ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತೀವ್ರ ಗಾಯ

ಸ್ಕೂಟಿಗೆ ಕಾರು ಢಿಕ್ಕಿ: ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತೀವ್ರ ಗಾಯ

1-fdffds

ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ

ಭಟ್ಕಳ : ತಾಲೂಕಿನಾದ್ಯಂತ ಭಾರಿ ಮಳೆ, ಹಲವು ಮನೆಗಳಿಗೆ ಹಾನಿ

ಭಟ್ಕಳ : ತಾಲೂಕಿನಾದ್ಯಂತ ಭಾರಿ ಮಳೆ, ಹಲವು ಮನೆಗಳಿಗೆ ಹಾನಿ

ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ

ಕಟಪಾಡಿ : ರಾತ್ರಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದ ವಿವಾಹಿತ ನಾಪತ್ತೆ

ಪೆಗಾಸಸ್‌ ಪ್ರಕರಣ: 29 ಮೊಬೈಲ್‌ ಫೋನ್‌ಗಳ ಪರಿಶೀಲನೆ

ಪೆಗಾಸಸ್‌ ಪ್ರಕರಣ: 29 ಮೊಬೈಲ್‌ ಫೋನ್‌ಗಳ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.