ಎಚ್‌ಡಿಕೆ ಆರೋಗ್ಯ ವಿಚಾರಿಸಿದ ಶಿವಣ್ಣ
Team Udayavani, Oct 13, 2017, 7:20 AM IST
ಬೆಂಗಳೂರು: ನಟ ಶಿವರಾಜಕುಮಾರ್ ಅವರು ಹೃದಯ ಚಿಕಿತ್ಸೆಗೊಳಗಾಗಿ ವಿಶ್ರಾಂತಿಯಲ್ಲಿರುವ ಮಾಜಿ ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿಯವರ ಆರೋಗ್ಯ ವಿಚಾರಿಸಿದರು.
ಶಾಸಕ ಮಧು ಬಂಗಾರಪ್ಪ ಅವರೊಂದಿಗೆ ಜೆಪಿ ನಗರ ನಿವಾಸಕ್ಕೆ ಗುರುವಾರ ಆಗಮಿಸಿದ ಶಿವರಾಜ್‌ಕುಮಾರ್,
ಕುಮಾರಸ್ವಾಮಿಯವರ ಆರೋಗ್ಯ ವಿಚಾರಿಸಿ ಮತ್ತಷ್ಟು ವಿಶ್ರಾಂತಿ ಪಡೆಯಿರಿ ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಸಕ್ತ ಚಲನಚಿತ್ರರಂಗದ ವಿದ್ಯಮಾನಗಳ ಬಗ್ಗೆಯೂ ಅರ್ಧ ಗಂಟೆ ಕಾಲ ಶಿವರಾಜ್‌ಕುಮಾರ್ ಹಾಗೂ ಕುಮಾರಸ್ವಾಮಿ ಮಾತುಕತೆ ನಡೆಸಿದರು.