ಬೆಂಗಳೂರು : ಶಾಪಿಂಗ್ ಮಾಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು
Team Udayavani, May 21, 2022, 10:25 PM IST
ಬೆಂಗಳೂರು : ಬ್ರಿಗೇಡ್ ರಸ್ತೆಯ ಫಿಪ್ತ್ ಅವೆನ್ಯೂ ಮಾಲ್ ಬಿಲ್ಡಿಂಗ್‌ನ 2ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ವಿದ್ಯಾರ್ಥಿನಿ, ಫ್ರೆಜರ್ ಟೌನ್ ಬಳಿಯ ಕಾಕ್ಸ್‌ಟೌನ್ ನಿವಾಸಿ ಲಿಯಾ ರೆಗಿನಾ (19) ಮೃತಪಟ್ಟಿದ್ದು, ಆಕೆಯ ಸ್ನೇಹಿತ, ಎಚ್‌ಎಎಲ್ 2ನೇ ಹಂತದ ನಿವಾಸಿ ಹೈದರಾಬಾದ್ ಮೂಲದ ಕ್ರಿಸ್ ಪೀಟರ್ (19) ಗಾಯಗೊಂಡಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ.
ಲಿಯಾ ಪ್ಯಾಸೇಜ್‌ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕಿಟಕಿ ಮೇಲೆ ಬಿದ್ದಿದ್ದಳು. ಆಕೆಯನ್ನು ರಕ್ಷಿಸಲು ಹೋದ ಕ್ರಿಸ್ ಕೂಡ ಆಕೆಯ ಪಕ್ಕದಲ್ಲೇ ಬಿದ್ದುಬಿಟ್ಟ. ಪರಿಣಾಮ ಕಿಟಕಿಯ ಗ್ಲಾಸ್ ತೆರೆದುಕೊಂಡು 2ನೇ ಮಹಡಿಯಿಂದ ಇಬ್ಬರೂ ನೆಲಕ್ಕೆ ಬಿದ್ದಿದ್ದಾರೆ. ಲಿಯಾ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡಿದ್ದಳು.
ಸ್ಥಳೀಯರು ಇಬ್ಬರನ್ನೂ ಕೂಡಲೇ ನಿಮ್ಹಾನ್ಸ್ ಆಸ್ಪತ್ರೆ ದಾಖಲಿಸುತ್ತಿದ್ದಾಗ ಮಾರ್ಗ ಮಧ್ಯೆ ಲಿಯಾ ಮೃತಪಟ್ಟಿದ್ದಾಳೆ. ಕ್ರಿಸ್ ಕಾಲಿನ ಮೂಳೆಗೆ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ : ಫ್ರಾನ್ಸ್ ನಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಶಿರಸಿಯ ಪ್ರೇರಣಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತ?
ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಶಿರೋಮಣಿ ಅಕಾಲಿದಳ ಬೆಂಬಲ: ರಾಗ ಬದಲಿಸಿದ ದೀದಿ
ರಾಜ್ಯ ಸಾರಿಗೆ ವ್ಯವಸ್ಥೆಗೆ ಸರ್ಕಾರ ವಿಷ ಕೊಟ್ಟು ಕೊಲ್ಲುತ್ತಿದೆ: ಸಿದ್ದರಾಮಯ್ಯ
ಒನ್ಪ್ಲಸ್ ನೋರ್ಡ್ 2ಟಿ 5ಜಿ ಬಿಡುಗಡೆ: 80 ವ್ಯಾಟ್ ಫಾಸ್ಟ್ ಚಾರ್ಜಿಂಗ್
ಏಕಬಳಕೆ ಪ್ಲಾಸ್ಟಿಕ್ ನಿಷೇಧ: ದಿಲ್ಲಿಯಲ್ಲಿ ಲಕ್ಷ ರೂ. ದಂಡ: ಸಚಿವ ಗೋಪಾಲ್ ರೈ