ಸಿದ್ದು ಸರ್ಕಾರದಲ್ಲಿ ಭಾರೀ ಅವ್ಯವಹಾರ


Team Udayavani, Dec 7, 2018, 6:40 AM IST

sidda-kgaf-621x414livemint.jpg

ಬೆಂಗಳೂರು: ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ 2016-17ನೇ ಹಣಕಾಸು ವರ್ಷದಲ್ಲಿ ವೆಚ್ಚ ಹಾಗೂ ಸ್ವೀಕೃತಿಯಲ್ಲಿ ಶೇ. 19ರಷ್ಟು ಹಣ ಅಂದರೆ ಸುಮಾರು 35,000 ಕೋಟಿ ರೂ. ತಾಳೆಯಾಗದಿರುವುದು ಮಹಾಲೇಖಪಾಲರ ವರದಿಯಿಂದ ಬಯಲಾಗಿದ್ದು, ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಗಂಭೀರ ಆರೋಪ ಮಾಡಿದರು.

ಸಿಎಜಿ ವರದಿ ಆಧರಿಸಿ ರಾಜ್ಯ ಸರ್ಕಾರದಿಂದ ನಡೆದಿರುವ ಅಕ್ರಮ, ಅನುದಾನ ದುರ್ಬಳಕೆ, ದುಂದುವೆಚ್ಚ, ವಂಚನೆ ಕುರಿತಂತೆ ಆರ್ಥಿಕ ತಜ್ಞರೊಂದಿಗೆ ಅಧ್ಯಯನ ನಡೆಸಿ ಹೊರತಂದಿರುವ 36 ಪುಟಗಳ ಕೈಪಿಡಿಯನ್ನು ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇಶದ ಪ್ರತಿಷ್ಠಿತ ಆರ್ಥಿಕ ಮೌಲ್ಯಮಾಪನ ಸಂಸ್ಥೆಯಾದ ಮಹಾಲೇಖಪಾಲರು ಶೇ.19ರಷ್ಟು ಹಣದ ವಿವರ ತಾಳೆಯಾಗುತ್ತಿಲ್ಲ ಎಂಬುದಾಗಿ ವರದಿಯಲ್ಲಿ ಉಲ್ಲೇಖೀಸಿದ್ದಾರೆ. ಈ  ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ಆರೋಪಿಸಿ ಸೀದಾರೂಪಯ್ಯ ಎಂದು ಆರೋಪಿಸಿದ್ದರು. ಅವರ ಆರೋಪಕ್ಕೆ ಮಹಾಲೇಖಪಾಲರ ವರದಿ ಪುಷ್ಠಿ ನೀಡಿದೆ. ಅಲ್ಲದೇ ಸಿದ್ದರಾಮಯ್ಯ ಅವರ ಸರ್ಕಾರ 10 ಪರ್ಸೆಂಟ್‌ ಅಲ್ಲ 19 ಪರ್ಸೆಂಟ್‌ ಅಕ್ರಮದ ಸರ್ಕಾರ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ವಾಗ್ಧಾಳಿ ನಡೆಸಿದರು.

ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆಯಾಗಿರುವುದರಿಂದ ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ನಿಯಮ 61 ಹಾಗೂ ವಿಧಾನ ಪರಿಷತ್‌ನಲ್ಲಿ ನಿಯಮ 68ರ ಅಡಿ ಚರ್ಚೆಗೆ ಅವಕಾಶ ನೀಡಬೇಕು. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರ ಎಂದು ಆರೋಪಿಸಿದ್ದ ಎಚ್‌.ಡಿ.ಕುಮಾರಸ್ವಾಮಿಯವರು ನೈತಿಕತೆಯಿದ್ದರೆ ಸಿಎಜಿ ವರದಿ ಆಧರಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರು ಅಕ್ರಮ ನಡೆಸಿದ್ದಾರೆ ಎಂಬುದನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಬಹುಕೋಟಿ ಹಗರಣಗಳಾದ 2ಜಿ ಹಗರಣ, ಕಲ್ಲಿದ್ದಲು ಹಗರಣ, ಆದರ್ಶ ಹೌಸಿಂಗ್‌ ಹಗರಣ ಬಯಲಾಗಿದ್ದು ಸಿಎಜಿ ವರದಿಯಿಂದ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2016-17ನೇ ಸಾಲಿನಲ್ಲಿ 1.82 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದ್ದರು. ಆದರೆ ಇದರಲ್ಲಿ ಶೇ.19ರಷ್ಟು ಹಣಕ್ಕೆ ಸಂಬಂಧಪಟ್ಟಂತೆ ವೆಚ್ಚ ಮತ್ತು ಸ್ವೀಕೃತಿ ತಾಳೆಯಾಗುತ್ತಿಲ್ಲ. ಈ ಬಗ್ಗೆ ಜನರಿಗೆ ಸತ್ಯಾಂಶ ಗೊತ್ತಾಗಬೇಕು. ಇಷ್ಟೂ ಹಣವೂ ಭ್ರಷ್ಟಾಚಾರವಾಗಿದೆ ಎಂದು ಹೇಳುವುದಿಲ್ಲ. ಆದರೆ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಹಾಗಾಗಿ ಅಧಿವೇಶನದಲ್ಲಿ ಈ ಬಗ್ಗೆ ವಿಶೇಷ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಬಜೆಟ್‌ನಲ್ಲಿ ಅಭಿವೃದ್ಧಿಗೆ ಉಳಿದ ಹಣ ಒಟ್ಟು 42,980 ಕೋಟಿ ರೂ. ಮಾತ್ರ. ಅದರಲ್ಲಿ 27,351 ಕೋಟಿ ರೂ. ದುರ್ಬಳಕೆಯಾಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡದದ್ದಿರೆ ಸದನದ ಒಳಗೆ, ಹೊರಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸಹ ವಕ್ತಾರ ಎ.ಎಚ್‌.ಆನಂದ್‌ ಇತರರು ಉಪಸ್ಥಿತರಿದ್ದರು.

ಅಕ್ರಮವಾಗಿ ಗಡಿ ದಾಟುವುದು, ಸಮುದ್ರ ತೀರ ಹಾಗೂ ಸಮುದ್ರ ಮಾರ್ಗದಿಂದ ಅಪರಾಧ ಮಾಡುವುದರ ತಡೆಗೆ ಕರಾವಳಿ ಭದ್ರತಾ ಯೋಜನೆಯಡಿ (2005-06) ಕರಾವಳಿ ಪೊಲೀಸ್‌ ಠಾಣೆಗಳನ್ನು (ಸಿಪಿಎಸ್‌) ಸ್ಥಾಪಿಸಲಾಗಿತ್ತು. ರಾಜ್ಯಕ್ಕೆ ಮಂಜೂರಾದ 438 ಪೊಲೀಸ್‌ ಸಿಬ್ಬಂದಿಯಲ್ಲಿ ಕೇವಲ 170 ಮಂದಿ ಅಂದರೆ ಶೇ.39ರಷ್ಟು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. 9 ಸಿಪಿಎಸ್‌ಗಳ ಪೈಕಿ 4 ಸಿಪಿಎಸ್‌ಗಳಲ್ಲಿ ಗಸ್ತು ದೋಣಿಯೇ ಇರಲಿಲ್ಲ. ಉಳಿದ 5 ಸಿಪಿಎಸ್‌ಗಳಲ್ಲಿ 15 ದೋನಿಗಳು ಗಸ್ತಿಗಾಗಿ ಲಭ್ಯವಿದ್ದರೂ 3ರಿಂದ 11 ತಿಂಗಳ ವ್ಯಾಪ್ತಿಯ ಅವಧಿಯಲ್ಲಿ ದುರಸ್ತಿಯಲ್ಲಿದ್ದವು. ಪರಿಣಾಮವಾಗಿ ರಾಜ್ಯದ ಕರಾವಳಿ ಭದ್ರತೆ ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ ಎಂದು ಸಿಎಜಿಯಲ್ಲಿ ವರದಿಯಾಗಿದೆ.

ಪ್ರಮುಖ ಅಕ್ರಮಗಳ ವಿವರ
2016-17ನೇ ಸಾಲಿನಲ್ಲಿ 11,994 ಕೋಟಿ ರೂ. ಬಳಕೆಯಾಗಿಲ್ಲ. ಆದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಇಷ್ಟು ಮೊತ್ತದ ಹಣದ ಬಗ್ಗೆ 2017- 18ನೇ ಸಾಲಿನ ಬಜೆಟ್‌ನಲ್ಲಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಹಾಗಾದರೆ ಇಷ್ಟು ಬೃಹತ್‌ ಮೊತ್ತದ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ವರ್ಗಾಯಿಸದೆ ಯಾವ ಇಲಾಖೆ, ಅಧಿಕಾರಿ ಯಾರು ಯಾವ ಬ್ಯಾಂಕ್‌ನಲ್ಲಿ ಇಟ್ಟಿದ್ದರು ಎಂಬುದನ್ನು ಬಹಿರಂಗಪಡಿಸಬೇಕು.

ಲೋಕೋಪಯೋಗಿ, ಗೃಹ, ಕಾರ್ಮಿಕ, ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ 11 ಇಲಾಖೆಗಳಲ್ಲಿ ಒಟ್ಟು 18.11 ಕೋಟಿ ರೂ. ದುರುಪಯೋಗವಾಗುವ ಜತೆಗೆ ಗೃಹ, ಆರೋಗ್ಯ, ಕಾರ್ಮಿಕ ಇಲಾಖೆಗಳಲ್ಲಿ ಸರ್ಕಾರದ ಖಜಾನೆಯಿಂದ ಹಣ ಕಳವು ಮಾಡಿರುವುದು ಸಿಎಜಿಯಲ್ಲಿ ವರದಿಯಾಗಿದೆ. ಗೃಹ ಇಲಾಖೆಯಲ್ಲೇ ಹಣ ಕಳುವಾಗಿರುವುದು ಬಯಲಾಗಿದೆ. ಇಷ್ಟಾದರೂ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಖರೀದಿಸಿದ ಔಷಧಗಳ ಪೈಕಿ 7433 ಬ್ಯಾಚ್‌ ಔಷಧಗಳ (ಶೇ.52) ಗುಣಮಟ್ಟ ಪರೀಕ್ಷಿಸದೆ, ಖಾತಿಯಿಲ್ಲದೆ ರೋಗಿಗಳಿಗೆ ಪೂರೈಸಲಾಗಿದೆ. ಇದು ರಾಜ್ಯದ ಜನತೆಯೊಂದಿಗೆ ಚೆಲ್ಲಾಟವಾಡಿದಂತಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳದಿರುವುದು ಔಷಧ ಕಂಪೆನಿಗಳ ಆಮಿಷ ಕಾರಣವಿರಬಹುದು.

ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಒಟ್ಟು 47.45 ಲಕ್ಷ ವಿದ್ಯಾರ್ಥಿಗಳಿದ್ದರೆ, 52.73 ಲಕ್ಷ ಸಮವಸ್ತ್ರ ಖರೀಸಲಾಗಿದೆ. ಅಂದರೆ 5.27 ಲಕ್ಷ ಸಮವಸ್ತ್ರ ಹೆಚ್ಚುವರಿಯಾಗಿ ಖರೀದಿಸಲಾಗಿದ್ದು, 1.72 ಕೋಟಿ ರೂ.ದುರ್ಬಳಕೆಯಾಗಿದೆ.

788 ಕೆರೆಗಳಿಗೆ ನೀರು ತುಂಬಿಸದಿದ್ದರೂ 1,433 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಹಣ ಯಾರ ಜೇಬು ತುಂಬಿತೋ ಗೊತ್ತಾಗುತ್ತಿಲ್ಲ

ಅಲಂಬೂರು, ಶಿವಸಂದ್ರ, ಅಳಿಲುಘಟ್ಟ ಯೋಜನೆ ಮುಖಾಂತರ 137 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 35 ಕೆರೆಗಳನ್ನು ತುಂಬಿಸಲು 294.87 ಕೋಟಿ ರೂ. ವೆಚ್ಚವಾದರೂ ಕೆರೆಗಳಿಗೆ ನೀರು ಬಂದಿಲ್ಲ

ಆಡಳಿತಾತ್ಮಕ (ಕ್ಯಾಬಿನೆಟ್‌ ಅನುಮೋದನೆ), ತಾಂತ್ರಿಕ ಅನುಮೋದನೆ ಇಲ್ಲದೆ 7,378 ಕೋಟಿ ರೂ. ಮೊತ್ತದ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಶಾಸಕಾಂಗದ ಅನುಮೋದನೆ ಇಲ್ಲದೆ ಕಾರ್ಯನಿರ್ವಾಹಕ ಆದೇಶಗಳ ಮೂಲಕ 6057 ಕೋಟಿ ರೂ. ಬಿಡುಗಡೆ. ಇದರಿಂದ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸ್ವಹಿತಾಸಕ್ತಿಯಿಂದ ಹಣ ಬಿಡುಗಡೆಗೊಳಿಸಿ ಭ್ರಷ್ಟಾಚಾರ ನಡೆಸಿರುವ ಸಾಧ್ಯತೆ ಇದೆ. ಐದು ಪ್ರಕರಣಗಳಲ್ಲಿ 124 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಶಾಸಕಾಂಗದ ಅನುಮೋದನೆ ಇಲ್ಲದೆ ವೆಚ್ಚ ಮಾಡಲಾಗಿದೆ.

ರಾಜ್ಯದಲ್ಲಿ ಜನತೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಬಿಡುಗಡೆಯಾದ ಹಣವನ್ನು ಬಳಸದೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು 612 ಕೋಟಿ ರೂ. ಬಡ್ಡಿ ಪಡೆದು ಜನರಿಗೆ ಸೌಲಭ್ಯ ಕಲ್ಪಿಸದೆ ವಂಚಿಸಲಾಗಿದೆ. ಬಳಕೆಯಾಗದ ಅನುದಾನವನ್ನು ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಲ್ಲಿ ಸುಳ್ಳು ಬಿಲ್‌ ಸೃಷ್ಟಿಸುವ ಮೂಲಕ ವೆಚ್ಚವಾಗಿದೆ ಎಂದು ತೋರಿಸಲು ಪ್ರಯತ್ನಿಸಿರುವುದು ಕಂಡುಬಂದಿದೆ.

ಪೌರಾಡಳಿತ ನಿರ್ದೇಶಕರು 254.34 ಕೋಟಿ ರೂ. ಮೊತ್ತಕ್ಕೆ ಬಳಕೆ ಪ್ರಮಾಣ ಸಲ್ಲಿಸಿಲ್ಲ. ಆದರೂ ನಿರ್ದೇಶಕರ ವಿರುದ್ಧ ಕ್ರಮವಿಲ್ಲ.

ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಖರೀದಿಗಾಗಿ ಮೀಸಲಿಟ್ಟ 115.10 ಕೋಟಿ ರೂ. ಮೊತ್ತವನ್ನು ಮೊದಲ ತ್ತೈಮಾಸಿಕದಲ್ಲಿ ಬಳಸುವಂತೆ ಆದೇಶಿಸಿದ್ದರೂ 2017ರ ಜುಲೈವರೆಗೆ ಲ್ಯಾಪ್‌ಟಾಪ್‌ ವಿತರಿಸದೆ ವಂಚನೆ. ಉನ್ನತ ಶಿಕ್ಷಣ ಸಲಹಾ ಮಂಡಳಿ ತನ್ನ ಖಾತೆಯಲ್ಲೇ 115.10 ಕೋಟಿ ರೂ. ಉಳಿಸಿಕೊಂಡಿದ್ದು, ಯಾರ ಸೂಚನೆ ಮೇರೆಗೆ ಎಂಬುದನ್ನು ಬಹಿರಂಗಪಡಿಸಬೇಕು.

ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೋರೇಷನ್‌ಗೆ 1990-91ರಿಂದ ಈವರೆಗೆ 1.82 ಕೊಟಿ ರೂ. ಪಾವತಿಸದೆ ಹಾಗೆ ಉಳಿಸಿಕೊಂಡಿದ್ದರಿಂದ ಏಳು ಕೋಟಿ ರೂ. ಬಡ್ಡಿ ಪಾವತಿಸುವಂತಾಗಿದೆ.

ಕೇಂದ್ರ ಸರ್ಕಾರವು ರಾಜ್ಯ ಪೊಲೀಸ್‌ ವ್ಯವಸ್ಥೆ ಸುಧಾರಣೆಗಾಗಿ 357.35 ಕೋಟಿ ರೂ. ನಿಗದಿಪಡಿಸಿದ್ದು, ಅದರಲ್ಲಿ 290 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ರಾಜ್ಯ ಸರ್ಕಾರ 222 ಕೋಟಿ ರೂ. ಮಾತ್ರ ಬಿಡುಗಡೆಗೊಳಿಸಿದೆ. ಬಳಕೆ ಪ್ರಮಾಣ ಪತ್ರ ಸಲ್ಲಿಸದ ಕಾರಣ ಕೇಂದ್ರ ಸರ್ಕಾರದಿಂದ ಈವರೆಗೆ 66.37 ಕೋಟಿ ರೂ. ಪಡೆಯದೆ ನಿರ್ಲಕ್ಷ್ಯ ತೋರಿದೆ.

ಜಲಮಂಡಳಿಯಲ್ಲಿ 5625 ಬಿಲ್‌ಗ‌ಳಲ್ಲಿ ನೀರು ಬಳಕೆಯಾಗಿದ್ದರೂ ಬಿಲ್‌ ಮೊತ್ತ ಶೂನ್ಯ. ಮೀಟರ್‌ ಕಾರ್ಯ ನಿರ್ವಹಿಸುತ್ತಿದ್ದರೂ 2,777 ಬಳಕೆದಾರರ 4782 ಬಿಲ್‌ಗ‌ಳು ತಿಂಗಳ ಮೀಟರ್‌ ಶುಲ್ಕವನ್ನು ಶೂನ್ಯವೆಂದು ತೋರಿಸುತ್ತಿವೆ. 59 ಬಿಲ್‌ಗ‌ಳಲ್ಲಿ ಬಳಕೆದಾರರ ಹೆಸರು, ವಿಳಾಸಗಳೇ ಇಲ್ಲ.

2016-17ನೇ ಸಾಲಿನಲ್ಲಿ 7433 ಬ್ಯಾಚ್‌ ಔಷಧಗಳನ್ನು ಗುಣಮಟ್ಟ ಪರೀಕ್ಷಿಸದೆ ರೋಗಿಗಳಿಗೆ ಪೂರೈಸಿರುವುದು ಗಂಭೀರ ಲೋಪ. ಇದರಿಂದ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡಿದಂತಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು. ಆಗ ಆರೋಗ್ಯ ಸಚಿವರಾಗಿದ್ದ ಕೆ.ಆರ್‌. ರಮೇಶ್‌ ಕುಮಾರ್‌ ನನ್ನ ದೊಡ್ಡಪ್ಪನ ಮಗನಲ್ಲ. ಅವರಿಂದ ತಪ್ಪಾಗಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಪವಾಗಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು 
– ಎನ್‌.ರವಿಕುಮಾರ್‌ ಬಿಜೆಪಿ ವಿಧಾನ ಪರಿಷತ್‌ ಸದಸ್ಯ 

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.