ಗೌರಿ ಹತ್ಯೆ ನಕ್ಸಲರಿಂದಾಗಿಲ್ಲ: ಮಾಜಿ ನಕ್ಸಲರ ಸ್ಪಷ್ಟನೆ

Team Udayavani, Sep 12, 2017, 6:10 AM IST

170911kpn88.jpg

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ಹಿಂದೆ ಸಂಘಪರಿವಾರದ ಕೈವಾಡವಿರಬಹುದೇ ಹೊರತು ನಕ್ಸಲರು ಈ ಕೃತ್ಯವೆಸಗಲು ಸಾಧ್ಯವಿಲ್ಲ ಎಂದು ನಕ್ಸಲ್‌ ಚಟುವಟಿಕೆಗಳಿಂದ ಮುಖ್ಯವಾಹಿನಿಗೆ ಬಂದಿರುವ ನೂರ್‌ ಶ್ರೀಧರ್‌ ಮತ್ತು ಸಿರಿಮನೆ ನಾಗರಾಜ್‌ ಹೇಳಿದರು.

ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್‌ ಹತ್ಯೆಯನ್ನು ಯಾರು ಸಂಭ್ರಮಿಸುತ್ತಿದ್ದರೋ, ಕೊಲೆ ಬೆದರಿಕೆ ಯಾರು ಹಾಕುತ್ತಿದ್ದರೋ, ಗೌರಿ ಹತ್ಯೆಯ ಕುರಿತು ಸಾರ್ವಜನಿಕರಲ್ಲಿ ಸಂದೇಹ-ಗೊಂದಲ ಮೂಡಿಸುತ್ತಿರುವವರು, ದಿಕ್ಕು ತಪ್ಪಿಸುತ್ತಿರುವವರೇ ಗೌರಿಯನ್ನು ಕೊಂದಿದ್ದಾರೆ ಎಂದು 
ಆರೋಪಿಸಿದರು.

ನಕ್ಸಲ್‌ ಮತ್ತು ಗೌರಿ ಲಂಕೇಶ್‌ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ. ಪ್ರಮುಖವಾಗಿ ಈ ಹಿಂದೆ ನಕ್ಸಲ್‌ ಮುಖಂಡ ಸಾಕೇತ್‌ ರಾಜನ್‌ ಜತೆ ಗೌಪ್ಯ ಪ್ರತಿಕಾಗೋಷ್ಠಿ ನಡೆಸಿದ್ದ ಗೌರಿ, ನಕ್ಸಲರ ಸಾಮಾಜಿಕ-ರಾಜಕೀಯ ಗ್ರಹಿಕೆ, ಕಾಳಜಿ, ನಿಷ್ಠೆ ಮತ್ತು ಬದ್ಧತೆಯಿಂದ ಪ್ರಭಾವಿತರಾಗಿದ್ದರು. ಇದೇ ವೇಳೆ ಸಶಸ್ತ್ರ ಹೋರಾಟ ಕರ್ನಾಟಕಕ್ಕೆ ಅಗತ್ಯವಿಲ್ಲ ಎಂದು ನೇರವಾಗಿಯೇ ರಾಜನ್‌ಗೆ ತಿಳಿ ಹೇಳಿದ್ದರು ಎಂದು ಅವರು ವಿವರಿಸಿದರು.

ಮೊದಲ ಆದ್ಯತೆ ಆರ್‌ಆರ್‌ಎಸ್‌
ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಆಧಾರ ರಹಿತವಾಗಿವೆ. ಹತ್ಯೆ ಬಗ್ಗೆ  ತನಿಖೆ ನಡೆಸುವ ಅಧಿಕಾರಿಗಳು ಸಂಘ ಪರಿವಾರದ ಮುಖಂಡರ ವಿಚಾರಣೆ ನಡೆಸಿದರೆ ಆರೋಪಿಗಳ ಸುಳಿವು ಸಿಗುತ್ತದೆ. ತನಿಖೆಯ ಮೊದಲ ಆದ್ಯತೆ ನಕ್ಸಲ್‌ ಮಾರ್ಗ ಅಲ್ಲ. ಆರ್‌ಎಸ್‌ಎಸ್‌, ಸಂಘಪರಿವಾರದ ಕಚೇರಿಯಿಂದಲೇ ತನಿಖೆ ಆರಂಭಿಸಿದರೆ ದುಷ್ಕರ್ಮಿಗಳು ಪತ್ತೆಯಾಗುತ್ತಾರೆ. ಕೇಂದ್ರ ಸರ್ಕಾರ(ಸಚಿವ ರವಿಶಂಕರ್‌ ಪ್ರಸಾದ್‌)ದಿಂದಲೇ ನಕ್ಸಲ್‌ ಮೇಲಿನ ಆರೋಪ ಶುರುವಾಗಿದೆ. ಇದೇ ಮುಂದುವರಿದರೆ, ಅನಗತ್ಯ ಆರೋಪ ಮಾಡುತ್ತಿರುವ ಮಾಧ್ಯಮಗಳು, ಸಂಘಟನೆಗಳು, ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

2004ರಲ್ಲಿ ಪೊಲೀಸರಿಂದ ನಕ್ಸಲ್‌ ಕೂಂಬಿಂಗ್‌ ನಿಲ್ಲಿಸಲಾಯಿತಾದರೂ ಸರ್ಕಾರ ನಕಲಿ ಎನ್‌ಕೌಂಟರ್‌ ಹೆಸರಿನಲ್ಲಿ ಸಾಕೇತ್‌ ರಾಜನ್‌ ಸೇರಿ ಕೆಲ ನಕ್ಸಲೀಯರುಗಳನ್ನು ಹತ್ಯೆಗೈದರು. ಇದನ್ನು ಗೌರಿ ಲಂಕೇಶ್‌ ಬಲವಾಗಿ ಖಂಡಿಸಿದ್ದರು. ಆಗ ಸಂಘಪರಿವಾರ ಗೌರಿ ಅವರಿಗೆ ನಕ್ಸಲ್‌ ಬೆಂಬಲಿಗ ಎಂಬ ಹಣೆಪಟ್ಟಿಕಟ್ಟಿದ್ದರು. ಹೀಗಾಗಿ ಗೌರಿ ಅಂತಹ ವಿಚಾರವಾದಿಗಳನ್ನು ನಕ್ಸಲರು ಹತ್ಯೆಗೈಯಲು ಸಾಧ್ಯವಿಲ್ಲ ಎಂದರು.

ನಕ್ಸಲೀಯರ ಬಗ್ಗೆಯೂ ತನಿಖೆ ನಡೆಸಿ
ತನಿಖಾಧಿಕಾರಿಗಳು ಯಾವ ಪಿಸ್ತೂಲ್‌ನಿಂದ ಗುಂಡು ಬಂದಿದೆ ಎಂದು ಪತ್ತೆ ಮಾಡುತ್ತಿದ್ದಾರೆ. ಆದರೆ, ಅದರ ಹಿಂದಿನ ಕೈ ಯಾವುದು. ಅವರ ಸಿದ್ಧಾಂತಗಳು ಏನೆಂದು ಪತ್ತೆ ಹಚ್ಚಬೇಕು. ಅವರ ಹಿಂದಿನ ಶಕ್ತಿಗಳು ಯಾವುದು. ಈ ಅಂಶವನ್ನು ಸರ್ಕಾರ ಬಹಿರಂಗ ಪಡಿಸಬೇಕು. ಆದರೆ, ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆಯಿಂದಾಗಿ ಆ ಕಾರ್ಯ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಗೌರಿ ಲಂಕೇಶ್‌ ಪತ್ರಿಕೆಯಲ್ಲಿ ಕಳೆದ 12 ತಿಂಗಳಲ್ಲಿ ಪ್ರಕಟವಾಗಿರುವ ವರಿದಿಗಳನ್ನಾಧರಿಸಿ ತನಿಖೆ ಮುಂದುವರೆಸಬೇಕು. ತನಿಖಾಧಿಕಾರಿಗಳ ಮೇಲೆ ಯಾವುದೇ ರೀತಿ ಒತ್ತಡ ಹೇರಬಾರದು. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಬೇಕು. ಸೈದ್ಧಾಂತಿಕ ವಿಚಾರಗಳನ್ನು ಮುಂದಾಗಿಸಿ ತನಿಖೆ ನಡೆಸಿ, ಬಲವಾದ ಸಾûಾ$Âಧಾರವಿದ್ದರೆ ನಕ್ಸಲೀಯರ ಕುರಿತೂ ತನಿಖೆ ನಡೆಯಲಿ. ಆದರೆ, ಸಂಪೂರ್ಣವಾಗಿ ತನಿಖೆ ನಡೆಸದೆ ಅನಗತ್ಯ ಆರೋಪ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದರು.

ವಿಕ್ರಂಗೌಡ ಅಮಾಯಕ
ಹತ್ಯೆ ಪ್ರಕರಣದಲ್ಲಿ ಆದಿವಾಸಿಗಳ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿರುವ ವಿಕ್ರಂ ಗೌಡನ‌ ಹೆಸರು ಕೇಳಿ ಬಂದಿರುವುದು ಖಂಡನೀಯ. ಪ್ರಕರಣದಲ್ಲಿ ಅವರ ಕೈವಾಡ ಇಲ್ಲ. ನಕ್ಸಲರು ಇದುವರೆಗೂ ಯಾವುದೇ ಪತ್ರಕರ್ತರನ್ನು ಹತ್ಯೆ ಮಾಡಿರುವ ಉದಾಹರಣೆ ಇಲ್ಲ. ಕೆಲ ಸಂದರ್ಭಗಳಲ್ಲಿ ಕೆಲವರ ಮುಂಗೋಪದಿಂದ ಹತ್ಯೆ ನಡೆದಿರುತ್ತದೆ. ಅಂತಹ ಸಂದರ್ಭದಲ್ಲಿ ನಕ್ಸಲರು ಕ್ಷಮಾಪಣೆ ಕೇಳುತ್ತಾರೆ. ಆದರೆ, ಗೌರಿ ಲಂಕೇಶ್‌ ಹತ್ಯೆಯ ನಂತರ ಈ ರೀತಿ ಯಾವುದೇ ಘಟನೆಗಳು ನಡೆದಿಲ್ಲ ಎಂದು ಹೇಳಿದರು.

ನಮಗೂ ಬೆದರಿಕೆಯಿದೆ
ನಮಗೂ ಬೆದರಿಕೆ ಕರೆಗಳು ಬರುತ್ತಿವೆ. ನಿಮಗೂ ನಿಮ್ಮ ನಾಯಕರಿಗೂ ಸಾವು ಗ್ಯಾರಂಟಿ ಎಂದು ಕೇರಳ ಸೇರಿದಂತೆ ಕೆಲವು ಕಡೆಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಆದರೆ, ನಾವು ಯಾವುದೇ ಬೆದರಿಕೆಗೂ  ಬಗ್ಗುವುದಿಲ್ಲ ಎಂದು ನೂರ್‌ ಶ್ರೀಧರ್‌, ಸಿರಿಮನೆ ನಾಗರಾಜ್‌ ಹೇಳಿದರು.

ಟಾಪ್ ನ್ಯೂಸ್

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.