ಕೋವಿಡ್‌ ಸಂಕಷ್ಟಕ್ಕೆ ಮಿಡಿವ ಹೃದಯಗಳು


Team Udayavani, Apr 23, 2021, 1:15 PM IST

social service

ಬೆಂಗಳೂರು: ಕೋವಿಡ್‌ ಸಂಕಷ್ಟದ ಸಮಯದಲ್ಲಿ ಹಲವುಸಂಘ ಸಂಸ್ಥೆಗಳು ಸಂಕಷ್ಟದಲ್ಲಿದರ ಕಣ್ಣೋರೆಸಿವೆ. ಜಾತಿ-ಧರ್ಮಮರೆತು ಹಸಿವಿನಲ್ಲಿದ್ದವರಿಗೆ ಅನ್ನನೀಡಿ ಆಸರೆ ಆಗಿವೆ. ಬೀದಿಬದಿಯಲ್ಲೆ ನೋವಿನಲ್ಲಿ ಕಣ್ಣೀರು ಸುರಿಸುತ್ತಿದ್ದವರಿಗೆ ಆರೋಗ್ಯದಆರೈಕೆ ಜತೆಗೆ ಅನಾಥ ಭಾವನೆಯನ್ನು ದೂರ ಮಾಡಿವೆ.

ಕೋವಿಡ್‌ ಸಂಕಷ್ಟದಲ್ಲಿ ಮಿಡಿದಿದ್ದ ಹಲವು ಸಂಸ್ಥೆಗಳು ಈಗಲೂಆ ಅನುಪಮ ಸೇವೆಯನ್ನು ಮುಂದುವರಿಸಿವೆ. ಇನ್ನೂ ಕೆಲವುಸಂಸ್ಥೆಗಳು ಬಡವರ ಹಾಗೂ ಕಷ್ಟದಲ್ಲಿದ್ದರ ಕಣ್ಣೀರು ಒರೆಸುವಕಾಯಕದಲ್ಲಿ ನಿರತವಾಗಿವೆ.ಅಂಥ ಸಂಸ್ಥೆಗಳ ಬಗ್ಗೆ ಒಂದುಕಿರುನೋಟ ಇಲ್ಲಿದೆ”

ಆಸರೆಯಿಲ್ಲದವರಿಗೆ ಆಶ್ರಯ‘: ನೊಂದವರ ಬಾಳಿಗೆ ಆಸರೆಯಾಗಲು ಸಲುವಾಗಿಯೇ 1996ರಲ್ಲಿಲೇಖಕಿ ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್‌ ಫೌಂಡೇಷನ್‌ಆರಂಭವಾಯಿತು. ಅಂದಿನಿಂದ ಇಂದಿನ ವರೆಗೂ ಕಷ್ಟದಲ್ಲಿದ್ದವರಕಣ್ಣೀರು ಒರೆಸುವಲ್ಲಿ ಹೆಸರುವಾಸಿಯಾಗಿದೆ. ನಿರ್ಗತಿಕರಿಗೆಹಲವು ರೀತಿಯಲ್ಲಿ ಆಸರೆಯಾಗಿದೆ. ಈಗಾಗಲೇ ಕೋವಿಡ್‌ -19ವಿರುದ್ಧ ಹೋರಾಟಕ್ಕೆ ಸುಮಾರು 100 ಕೋಟಿ ರೂ. ದೇಣಿಗೆನೀಡಿದೆ.

ಆರ್ಥಿಕವಾಗಿ ದುರ್ಬಲರಾಗಿರುವ ರೋಗಿಗಳಆರೈಕೆಗೂ ಆಸರೆ. ಜತೆಗೆ ವೆಂಟಿಲೇಟರ್‌, ಪರೀûಾ ಕಿಟ್‌, ಮಾಸ್ಕ್ಸೇರಿದಂತೆ ಇನ್ನಿತರ ಪರಿಕರಗಳನ್ನು ಆರೋಗ್ಯ ಸಿಬ್ಬಂದಿಗೆ ನೀಡಿಆಸರೆಯಾಗಿದೆ. ಬೆಂಗಳೂರಿ ನಲ್ಲಿ ಕೋವಿಡ್‌ -19 ರೋಗಿಗಳಚಿಕಿತ್ಸೆಗೆಂದೇ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಗೆ ನೆರವು ಘೋಷಣೆಮಾಡಿತ್ತು. ಈಗಾಗಲೇ ಹಲವು ಸೇವೆಗಳನ್ನುಮುಂದುವರಿಸಿರುವ ಈ ಫೌಂಡೇಷನ್‌ ಕೋವಿಡ್‌ಸೇರಿದಂತೆ ಇನ್ನಿತರ ಆರೋಗ್ಯರಕ್ಷಣೆಯಲ್ಲಿತೊಡಗಿರುವ ಸಂಸ್ಥೆಗಳು ನೆರವು ಬಯಸಿದ್ದಲ್ಲಿ  [email protected] ಅನ್ನುಸಂಪರ್ಕಿಸಬಹುದಾಗಿದೆ”

ನಿತ್ಯ ಅನ್ನದಾನ ಸೇವೆ

ಕಷ್ಟದಲ್ಲಿದ್ದರ ಬಗ್ಗೆ ಸದಾ ಮಿಡಿಯುವ, ಹಸಿವಿನಲ್ಲಿದ್ದರ ಬಗ್ಗೆಮರುಗುವ ಡಾ.ತೇಜಸ್ವಿನಿ ಅನಂತಕುಮಾರ್‌ ನೇತೃತ್ವದ “ಅದಮ್ಯಚೇತನ ಸಂಸ್ಥೆ’ ಕಳೆದ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲಿಸುಮಾರು 7 ಲಕ್ಷ ಜನರಿಗೆ ಊಟ ನೀಡಿ ಹಸಿವು ನೀಗಿಸಿದೆ. ಪ್ರತಿದಿನ ಸುಮಾರು 23 ಸಾವಿರ ಜನರಿಗೆ ಅವರು ಎಲ್ಲೆಲ್ಲಿ ಇದ್ದರೊ ಆಸ್ಥಳಕ್ಕೆ ಊಟ ಸರಬರಾಜು ಮಾಡುವ ಮೂಲಕ ತಾಯಿಯಆಶ್ರಯ ನೀಡಿದೆ.ಹಾಗೆಯೇ 23 ಸಾವಿರಕ್ಕೂ ಅಧಿಕ ಫ‌ುಡ್‌ಕಿಟ್‌ಗಳನ್ನು ವಿತರಿಸಿ ಸಂತ್ರಸ್ತರಿಗೆ ಆಸರೆಯಾಗಿದೆ. ಯಶವಂತಪುರರೈಲ್ವೆ ನಿಲ್ದಾಣದಿಂದ ಉತ್ತರ ಭಾರತ ರಾಜ್ಯಕ್ಕೆ ಹೊರಡ ಬೇಕಾಗಿದ್ದರೈಲು ಸ್ಥಗಿತಗೊಂಡಾಗ ಸುಮಾರು 3 ಸಾವಿರಕ್ಕೂ ಅಧಿಕ ಮಂದಿಹಸಿವಿನಿಂದ ಪರದಾಡಿದರು. ಆಗ ಅವರಿಗೆಲ್ಲ ಊಟ ನೀಡಿದ್ದೆಅದಮ್ಯ ಚೇತನ ಸಂಸ್ಥೆ. ಬಡವರಿಗಾಗಿ ಸದಾ ಮಿಡಿಯುವ ಈಸಂಸ್ಥೆ ಈಗ ಕಡು ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗಾಗಿ ಈಗಮತ್ತೆ ದಿ.ಅನಂತ ಕುಮಾರ್‌ ಹೆಸರಿನಲ್ಲಿ “ನಿತ್ಯ ಅನ್ನದಾನ ಸೇವೆ’ಆರಂಭಿಸಿ ಹಸಿವು ನೀಗಿಸುತ್ತಿದೆ.ನೆರವು ಸೇರಿದಂತೆ ಇನ್ನಿತರಮಾಹಿತಿಗಾಗಿ ಮೊ. 8904623967ಅನ್ನು ಸಂಪರ್ಕಿಸಬಹುದು.

ಹಸಿದವರಿಗೆ ಅನ್ನ ನೀಡುವ ಬಾಂಧವ

ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎನ್‌.ನಾಗರಾಜ್‌ನೇತೃತ್ವದಲ್ಲಿ ಜಯನಗರದಲ್ಲಿಕಾರ್ಯ ನಿರ್ವಹಿಸುತ್ತಿರುವಬಾಂಧವ ಸ್ವಯಂ ಸೇವಾ ಸಂಸ್ಥೆನಗರದಲ್ಲಿ ಊಟವಿಲ್ಲದೆಪರಿತಪ್ಪಿಸುತ್ತಿರುವ ಜನರಿಗೆ ಅನ್ನದಾನಸೇವೆ ನೀಡುತ್ತ ಆಸರೆ ಆಗಿದೆ.

ಹಸಿದವರಿಗೆ ಅನ್ನನೀಡುವ ಈ ಕಾರ್ಯವನ್ನುಜಯನಗರದ ಸಂಜಯ್‌ ಗಾಂಧಿ ಹಾಸ್ಪಿಟಲ್‌ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಲೂಕೂಡ ಮುಂದುವರಿಸಿದೆ.ನೆರವಿಗಾಗಿ ಆಸಕ್ತರುಮೊ. 966385999 ಅನ್ನು ಸಂಪರ್ಕಿಸಬಹುದು.

ಗ್ರಾಮೀಣ ಮಕ್ಕಳಿಗೆ ಉಚಿತ ವೈಫೈ

ಡಾ.ಸ್ನೇಹ ರಾಕೇಶ್‌ ನೇತೃತ್ವದಲ್ಲಿ ಸಮಗ್ರ ಅಭಿವೃದ್ಧಿ ಸಂಸ್ಥೆ 2017ರಿಂದಕಾರ್ಯನಿರ್ವಹಿಸುತ್ತಿದೆ. ಕೋವಿಡ್‌ ಸಂಕಷ್ಟವನ್ನು ಕೇಂದ್ರಿಕರಿಸಿಯೇಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಆನ್‌ಲೈನ್‌ಮೂಲಕ ಶಾಲಾ ಕಾಲೇಜುಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸಿದಾಗಗ್ರಾಮೀಣ ಪ್ರದೇಶದ ಮಕ್ಕಳು ಸಂಕಷ್ಟಕ್ಕೆ ಸಿಲುಕಿದರು.

ಗ್ರಾಮೀಣ ಭಾಗದವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತವೈಫೈ ಇಂಟರ್ನೆಟ್‌ ಸೇವೆಯನ್ನು ನೀಡಿ ಆಸರೆಯಾಗಿದೆ. ಗ್ರಾಮೀಣ ಪ್ರದೇಶಪಿಯು ವಿದ್ಯಾರ್ಥಿಗಳಿಗೆ ಹಾಗೂ ಎಸ್ಸೆಸ್ಸೆಲ್ಸಿ ಓದಿದ ವಿದ್ಯಾರ್ಥಿಗಳಿಗೆಉಚಿತವಾಗಿ ನೀಡಿ ವಿದ್ಯಾರ್ಥಿಯ ಓದಿಗೆ ಆಶ್ರಯ ನೀಡಿದೆ. ಜತೆಗೆಕಷ್ಟದಲ್ಲಿರುವ ಕಾರ್ಮಿಕರಿಗೆ ಉದ್ಯೋಗದ ತರಬೇತಿ ಹಾಗೂ ಮ್ಯಾಕ್ಸ್‌ವತಿಯಿಂದ ಉದ್ಯೋಗ ತರಬೇತಿ, ಆನ್‌ ಲೈನ್‌ ಕೌಶಲ್ಯಅಭಿವೃದ್ಧಿ ತರಬೇತಿಹಾಗೂ ಇನ್ನಿತರ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಅಲ್ಲದೆವಿದ್ಯಾರ್ಥಿಗಳಿಗೆ ಉಚಿತ ವೈಪೈ ನೀಡುವ ವ್ಯವಸ್ಥೆಯನ್ನುಮುಂದುವರಿಸಿದೆ.ನೆರವು ಸೇರಿದಂತೆ ಇನ್ನಿತರ ಮಾಹಿತಿಗಾಗಿಸಂಪರ್ಕಿಸಬೇಕಾದ ಸಂಖ್ಯೆ 080-26618661.

ಕೊಳೆಗೇರಿ ನಿವಾಸಿಗಳಿಗೆ ಲಸಿಕೆ

ನಮ್ಮ ಬೆಂಗಳೂರು ಪ್ರತಿಷ್ಠಾನ ಕೂಡ ಕೊಳಗೆ ನಿವಾಸಿಗಳ ಜನರನ್ನುಕೇಂದ್ರೀಕರಿಸಿ ಕೋವಿಡ್‌ ಲಸಿಕಾ ಅಭಿಯಾನ ಆರಂಭಿಸಿದೆ. ಕೊಳೆಗೇರಿನಿವಾಸಿಗಳು ಲಸಿಕೆ ಬಗ್ಗೆ ಭಯಪಡುತ್ತಿದ್ದಾರೆ. ಹೀಗಾಗಿ ಅವರಿರುವ ಜಾಗಕ್ಕೆತೆರಳಿ ನಮ್ಮ ಬೆಂಗಳೂರು ಪ್ರತಿಷ್ಠಾನಕೋವಿಡ್‌-19 ಲಸಿಕೆ ನೀಡುತ್ತಿದೆ. ರೋಟರಿಬೆಂಗಳೂರು ಸೇರಿದಂತೆ ಹಲವು ಸಂಸ್ಥೆಗಳಸಹಯೋಗದಲ್ಲಿ ಹೆಗಡೆ ನಗರ ಸೇರಿದಂತೆಇನ್ನಿತರ ಕೊಳಚೆ ಪ್ರದೇಶಗಳಿಗೆ ತೆರಳಿಲಸಿಕೆ ನೀಡುವ ಅಭಿಯಾನ ಆರಂಭಿಸಿದೆ. ಅಪಾರ್ಟ್‌ಮೆಂಟ್‌ಗಳನ್ನು ಕೇಂದ್ರೀಕರಿಸಿ ಲಸಿಕೆ ಅಭಿಯಾನ ಕೂಡ ಕೈಗೊಂಡಿದೆ.ಆಸಕ್ತರು ಸಂಪರ್ಕಿಸ ಬೇಕಾದ ಮೊ. 9591143888,7349737737 ಸಂಪರ್ಕಿಸಬಹುದು.

ಕಷ್ಟಕಾಲದಲ್ಲಿ ವೈದ್ಯರ ಮನೆ ಭೇಟಿ

ಕೋವಿಡ್‌ ಸಂಕಷ್ಟ ಕಾಲದಲ್ಲಿ ವಿಜಯನಗರದ ಆರ್ಯ ಬ್ರೈಟ್‌ ಕೇರ್‌ಹೊಸ ಆರೋಗ್ಯ ಸೇವೆಗೆ ಮುನ್ನುಡಿ ಬರೆದಿದೆ. “ವೈದ್ಯರ ಮನೆ ಭೇಟಿ’ಎಂಬ ಸೇವೆ ಆರಂಭಿಸಿದ್ದು ಕೋವಿಡ್‌ ಲಕ್ಷಣಗಳು ಇರುವವರಿಗೆಮತ್ತು ಕೋವಿಡ್‌ ಪಾಸಿಟಿವ್‌ ರೋಗಿಗಳ ಆರೈಕೆ ಮಾಡಲಿದೆ.ಕೋವಿಡ್‌ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಜನರು ಸಕಾಲಕ್ಕೆಆಸ್ಪತ್ರೆಗೆ ಹೋಗಲು ಆಗುವುದಿಲ್ಲ.

ಕೆಲವು ಸಲ ಮನೆಯಲ್ಲಿವಯಸ್ಸಾದವರು ಒಬ್ಬರೆ ಇರುತ್ತಾರೆ.ಅಂತವರಿಗೆ ಅನುಕೂಲವಾಗಲಿ ಎಂಬಸದುದ್ದೇಶದಿಂದ ಆರ್ಯ ಬ್ರೈಟ್‌ ಕೇರ್‌ ಈಸೇವೆಯನ್ನು ಆರಂಭಿಸಿದೆ.

ಆರ್ಯ ಬ್ರೈಟ್‌ಕೇರ್‌ನಲ್ಲಿ ಐವರು ವೈದ್ಯರಿದ್ದಾರೆ.ಎಲ್ಲಾವೈದ್ಯರು ಬೆಳಗ್ಗೆ 10 ಗಂಟೆಯಿಂದ ರಾತ್ರಿ12ಗಂಟೆವರೆಗೂ ರೋಗಿಗಳನ್ನು ಸಂಪರ್ಕಿಸಿಆರೋಗ್ಯ ವಿಚಾರಿಸುತ್ತಾರೆ. ವಾರದ ಎಲ್ಲಾ ದಿನಗಳಲ್ಲೂ ಕೂಡ ವೈದ್ಯರಸಂಪರ್ಕ ಮಾಡಬಹುದಾಗಿದೆ ಎಂದು ಆರ್ಯ ಬ್ರೇಟ್‌ ಕೇರ್‌ನಸಂಯೋಜಕ ಶಶಿಧರ್‌ ರಾಜು ಮಾಹಿತಿ ನೀಡಿದ್ದಾರೆ.ಮಾಹಿತಿಗಾಗಿಮೊ. 7411065301ಅನ್ನು ಸಂಪರ್ಕಿಸಬಹುದು.

ಕೋವಿಡ್ಸಹಾಯವಾಣಿ

ರಾಷ್ಟ್ರೀಯ ಸ್ವಂಯ ಸೇವಕ ಸಂಘ ಮತ್ತು ಸೇವಾ ಭಾರತಿ ಬೆಂಗಳೂರುಕೋವಿಡ್‌ ಸಹಾಯವಾಣಿ ಸಂಖ್ಯೆಯನ್ನುಆರಂಭಿಸಿದೆ.ಕೋವಿಡ್‌ ಸಂಬಂಧಿಸಿದಸಹಾಯಕ್ಕಾಗಿ ಮೊ. 9343751434,99800 00993 ಮತ್ತು 9845564432ಅನ್ನು ಸಂಪರ್ಕಿಸಬಹುದಾಗಿದೆ.ಹಾಗೆಯೇ ಕೋವಿಡ್‌ ಸಂಬಂಧಿಸಿದಲಸಿಕೆ ಸಹಾಯಕ್ಕಾಗಿ ಮೊ. 9972541621,9902122122 ಅನ್ನು ಸಂಪರ್ಕಿಸಬಹುದಾಗಿದೆ.

ಜತೆಗೆಆಂಬ್ಯುಲೆನ್ಸ್‌ ಸೇವೆಗಾಗಿ ಮೊ.9886598870, 9620615965 ಅನ್ನುಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ

ಕೋವಿಡ್ವೆಚ್ಚ ಭರಿಸುವ ಸಂಸ್ಥೆ

ದೇಶದಲ್ಲಿ ಡಿಜಿಟಲ್‌ ಇಂಡಿಯಾ ಮತ್ತು ಆತ್ಮನಿರ್ಭರ್‌ ಭಾರತ್‌ಯೋಜನೆಗೆ ಪೂರಕವಾಗಿ ದೇಶದಲ್ಲಿ ಹೈμÅàಕ್ವೆನ್ಸಿ ಮತ್ತು ಹೈ ಡೆನ್ಸಿಟಿಇಂಟರ್‌ಕನೆಕ್ಟ್ ಪ್ರಿಂಟೆಡ್‌ ಸಕ್‌ಯೂìಟ್‌ ಬೋರ್ಡ್‌ಗಳನ್ನು ಮೊಟ್ಟಮೊದಲಿಗೆ ತಯಾರಿಸಿದ ಹೆಗ್ಗಳಿಕೆಯುಳ್ಳನಂಜನಗೂಡಿನ ಎಟಿ-ಎಸ್‌ ಇಂಡಿಯಾಸಂಸ್ಥೆ ಈಗ ನಂಜನಗೂಡು ಪರಿಸರದ2000 ನಿವಾಸಿಗಳಿಗೆ ನೀಡಲಾಗುವಕೋವಿಡ್‌-19 ಲಸಿಕೆಯ ಸಂಪೂರ್ಣವೆಚ್ಚವನ್ನು ಭರಿಸುವುದಾಗಿ ಘೋಷಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆಯವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ ಆರ್‌.ಎಸ್‌.ಸಿಂಹ, ಕಂಪೆನಿಯು ತನ್ನ ಚಟುವಟಿಕೆಗಳನ್ನು ನಡೆಸುತ್ತಿರುವನಂಜನಗೂಡು ಪ್ರದೇಶದ ಜನರಿಗೆ ಋಣಿಯಾಗಿದೆ ಎಂದುಹೇಳಿದ್ದಾರೆ.ಆಸಕ್ತರು ಉಚಿತ ಲಸಿಕೆ ಸೇರಿದಂತೆ ಇನ್ನಿತರ ಮಾಹಿತಿಗಾಗಿಮೊ. 9871180201 ಸಂಪರ್ಕಿಸಬಹುದು.

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.