ಸರವಣ ಪರ ಸೋಮಣ್ಣ, ಜಗ್ಗೇಶ್‌ ಪ್ರಚಾರ

Team Udayavani, Dec 1, 2019, 9:34 AM IST

ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಮತ್ತು ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್‌ ಅವರು ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಎಂ.ಸರವಣ ಪರವಾಗಿ ಜಯಮಹಲ್‌ ವ್ಯಾಪ್ತಿಯಲ್ಲಿ ಶನಿವಾರ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರಸರ್ಕಾರದಿಂದ ಜನ ಬೇಸತ್ತು ಯಡಿಯೂರಪ್ಪನೇತೃತ್ವದ ಸರಕಾರ ತಂದಿದ್ದಾರೆ. ಸಮ್ಮಿಶ್ರ ಸರಕಾರ ದಿಂದ ಬೇಸತ್ತು 15 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ ಅವರೆಲ್ಲರೂ ಬಹುಮತದಿಂದ ಗೆಲ್ಲುವುದು ನಿಶ್ಚಿತ ಎಂದರು. ಶಿವಾಜಿನಗರದಲ್ಲಿ ಅಲ್ಪಸಂಖ್ಯಾತರು, ಹಿಂದು ಗಳು ಸೇರಿ ಎಲ್ಲಾ ಜಾತಿ ಧರ್ಮದವರು ಸಮಾನರಾಗಿದ್ದಾರೆ. ಈ ಭಾಗದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಶಿವಾಜಿನಗರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು. ಎಂ.ಸರವಣ ಅವರು ಪಾಲಿಕೆ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರಿಗೆ ಶಾಸಕ ರಾಗಿ ನಿಮ್ಮ ಸೇವೆ ಮಾಡುವ ಅವಕಾಶ ನೀಡಬೇಕು.

ಶಿವಾಜಿನಗರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಅವಕಾಶ ನೀಡಬೇಕು ಎಂದು ಹೇಳಿದರು.ನಟ ಜಗ್ಗೇಶ್‌ ಮಾತನಾಡಿ, ಜನಸಾಮಾನ್ಯರುಬುದ್ಧಿವಂತರಾಗಿದ್ದಾರೆ. ಒಂದು ರಾಜ್ಯದಲ್ಲಿ ಒಂದೇ ಪಕ್ಷ ಪೂರ್ಣ ಬಹುಮತದಿಂದ ಇದ್ದಲ್ಲಿ ಮಾತ್ರ ಆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ. ಜೆಡಿಎಸ್‌-ಕಾಂಗ್ರೆಸ್‌ನವರು ಕೇವಲ ಅವರ ಅಂಕಿಹೆಚ್ಚಿಸಿಕೊಳ್ಳಲಷ್ಟೇ ಮತ ಕೇಳುತ್ತಿದ್ದಾರೆ. ಜನ ಯೋಚಿಸಿ ಮತ ಹಾಕಬೇಕು. ಬಹಳ ವರ್ಷದ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಸ್ತಿತ್ವಕ್ಕೆ ಬಂದಿದೆ. ಈ ಸರಕಾರವನ್ನು ಉಳಿಸುವ ಜವಾಬ್ದಾರಿ ಜನರ ಮೇಲಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ