ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಫುಲ ಅವಕಾಶ


Team Udayavani, Mar 10, 2019, 6:22 AM IST

bahyakasha.jpg

ಬೆಂಗಳೂರು: ಮುಂಬರುವ ದಿನಗಳಲ್ಲಿ ಅಮೆರಿಕ ಮತ್ತು ಭಾರತ ಬಾಹ್ಯಾಕಾಶ ಪರಿಶೋಧನೆಯಲ್ಲಿ ಪಾಲುದಾರರಾಗಿ ಒಟ್ಟಿಗೆ ಸಾಗುತ್ತವೆಂಬ ವಿಶ್ವಾಸ ನನಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌)ದಲ್ಲಿರುವ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಸಂಶೋಧನೆಗೆ ಇಸ್ರೋ ಮನವಿ ಮಾಡಿದರೆ ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ವಿಫುಲ ಅವಕಾಶಗಳಿವೆ ಎಂದು ಯುಎಸ್‌ ಬಾಹ್ಯಾಕಾಶ ಪ್ರತಿನಿಧಿ ಮತ್ತು ನಾಸಾ ಮಾಜಿ ಆಡಳಿತಾಧಿಕಾರಿ ಮೆ. ಜನರಲ್‌ ಚಾರ್ಲ್ಸ್‌ ಫ್ರಾಂಕ್‌ ಬೊಲ್ಡನ್‌ ತಿಳಿಸಿದರು.

ರಾಮಯ್ಯ ತಾಂತ್ರಿಕ ಮಹಾ ವಿದ್ಯಾಲಯ (ಆರ್‌ಐಟಿ) ಮತ್ತು ಚೆನ್ನೈ ಅಮೆರಿಕ ಕಾನ್ಸುಲೆಟ್‌ ಜನರಲ್‌ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಆರ್‌ಐಟಿ ಕ್ಯಾಂಪಸ್‌ನಲ್ಲಿ  ಆಯೋಜಿಸಿದ್ದ “ಎಂಜಿನಿಯರಿಂಗ್‌ ಚಾಲೆಂಜಸ್‌ ಲುಕಿಂಗ್‌ ಟು ಫ್ಯೂಚರ್‌ ಸ್ಪೇಸ್‌ಎಕ್ಸ್‌ಪ್ಲೊರೇಷನ್‌ ಮತ್ತು ಟ್ರಾವೆಲ್‌’ ಕುರಿತು ಮಾತನಾಡಿದರು. 

ಬಾಹ್ಯಾಕಾಶ ಕ್ಷೇತ್ರದಲ್ಲಿ ಗಗನಯಾತ್ರಿಯಾಗಲು ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿದ್ದು, ಇದನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಇಂದು ಸಾಮಾನ್ಯ ಪ್ರಜೆಯೂ ಗಗನಯಾತ್ರಿಯಾಗಬಹುದು. ಪ್ರಸ್ತುತ ಇಸ್ರೋ ಗಗನಯಾತ್ರಿಗಳ ಆಯ್ಕೆಗೆ ಮುಂದಾಗಿದ್ದು, ನಾಸಾದಲ್ಲೂ ಈ ಪ್ರಕ್ರಿಯೆ ನಡೆಯಲಿದೆ ಎಂದರು. ನಂತರ ಆರ್‌ಐಟಿ, ಆರ್‌ವಿಸಿಇ, ಬಿಎಂಎಸ್‌ಸಿಇ, ಬಿಎನ್‌ಎಂಐಟಿ, ಎನ್‌ಎಂಐಟಿ, ಪಿಇಎಸ್‌ ವಿವಿ, ರಾಮಯ್ಯ ವಿಶ್ವವಿದ್ಯಾಲಯ ಹಾಗೂ ವಿಟಿಯು ಅಧೀನದ ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳೊಡನೆ ನೇರ, ವಿಡಿಯೋ ಸಂವಾದ ನಡೆಸಿದರು.

ಗೋಕುಲ ಎಜುಕೇಷನ್‌ ಫೌಂಡೇಷನ್‌ನ ಗೌ.ಅಧ್ಯಕ್ಷ ಡಾ.ಎಂ.ಆರ್‌.ಜಯರಾಂ, ಆರ್‌ಐಟಿ ಗೌ.ಉಪಾಧ್ಯಕ್ಷ ಎಂ.ಆರ್‌.ಸೀತಾರಾಮ್‌, ಜಿಇಎಫ್‌ ಗೌ.ಕಾರ್ಯದರ್ಶಿ ಮತ್ತು ಆರ್‌ಐಟಿ ನಿರ್ದೇಶಕ ಎಂ.ಆರ್‌. ರಾಮಯ್ಯ, ರಾಮಯ್ಯ ಸಮೂಹದ ನಿರ್ದೇಶಕ ಆನಂದ ರಾಮ್‌, ಜಿಇಫ್‌ ಮುಖ್ಯ ಕಾರ್ಯನಿರ್ವಾಹಕ ಬಿ.ಎಸ್‌.ರಾಮಪ್ರಸಾದ್‌, ಆರ್‌ಐಟಿ ಪ್ರಿನ್ಸಿಪಾಲ್‌ ಡಾ. ಎನ್‌.ವಿ.ಆರ್‌. ನಾಯ್ಡು,

ಅಮೆರಿಕ ಕಾನ್ಸುಲೆಟ್‌ ಜನರಲ್‌ನ ಸಾರಾ ಗೀನ್‌ಗಾಸ್‌, ಸಿಟ ಫ್ಯಾರ್ರೆಲ್‌, ಚೆನ್ನೈ ಯುಎಸ್‌ ಕಾನ್ಸುಲೆಟ್‌ ಜನರಲ್‌ ಜಾರ್ಜ್‌ ಮ್ಯಾಥ್ಯೂ ಇತರರು ಭಾಗವಹಿಸಿದ್ದರು. ಈ ವೇಳೆ ಮೆ. ಜನರಲ್‌ ಚಾರ್ಲ್ಸ್‌ ಫ್ರಾಂಕ್‌ ಬೊಲ್ಡನ್‌ ಅವರಿಗೆ ಹಾಗೂ ಚೆನ್ನೈ ಯುಎಸ್‌ ಕಾನ್ಸುಲೆಟ್‌ ಜನರಲ್‌ ಅವರಿಗೆ ರಾಜ್ಯದ ಪರವಾಗಿ ಎಂ.ಆರ್‌.ಸೀತಾರಾಮ್‌ ಅವರು ಧನ್ಯವಾದ ತಿಳಿಸಿದರು.

ಟಾಪ್ ನ್ಯೂಸ್

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

rwytju11111111111

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangalore news

ಎನ್ ಪಿ ಎಸ್ ನೌಕರರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯಾಧ್ಯಕ್ಷ ಷಡಕ್ಷರಿ ವಿಫಲ: ಒಕ್ಕೂಟ ಆರೋಪ

ಭಾಗ್ಯವಂತರು ಮರು ಬಿಡುಗಡೆ

ಭಾಗ್ಯವಂತರು ಮರು ಬಿಡುಗಡೆ

The city police commissioner Kamalpant received the public’s plea

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

building

ಮಾಲೀಕರ ಅತಿ ಆಸೆ ಭವಿಷ್ಯದ ಆತಂಕಕೆ ಮೂಲ!

ಆರ್‌.ಕೆ.ಲಕ್ಷ್ಮಣ್‌ರ ವ್ಯಂಗ್ಯಚಿತ್ರಗಳ ಅನಾವರಣ

ಆರ್‌.ಕೆ.ಲಕ್ಷ್ಮಣ್‌ರ ವ್ಯಂಗ್ಯಚಿತ್ರಗಳ ಅನಾವರಣ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

4hdk

ಜಾತಿಗಣತಿ ವರದಿ ಸ್ವೀಕಾರಕ್ಕೆ ಎಚ್‌ಡಿಕೆ ಹಿಂದೇಟು

3temple

ಬಸವಲಿಂಗೇಶ್ವರ ಗದ್ದುಗೆಗೆ ಮಹಾ ರುದ್ರಾಭಿಷೇಕ

2law

ಪ್ರತಿ ವ್ಯಕ್ತಿಗೂ ಗುಣಮಟ್ಟದ ಕಾನೂನು ಕಾನೂನು ಖಾತ್ರಿಪಡಿಸಿ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

1school

ಇಂದಿನಿಂದ ಕಿರಿಯರೂ ಬರ್ತಾರೆ ಶಾಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.