Udayavni Special

ನಾಲ್ಕು ವಿದೇಶಿ ಭಾಷೆಗಳ ಹೊಸ ಕೋರ್ಸ್‌ ಆರಂಭ


Team Udayavani, Jun 9, 2018, 11:59 AM IST

4videshi.jpg

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಹಿಬ್ರೂ, ಪೊಲೀಶ್‌, ಡಚ್‌ ಮತ್ತು ಥಾಯ್‌ ಭಾಷೆಗಳ ಕೋರ್ಸ್‌ಗಳು ಆರಂಭಗೊಳ್ಳಲಿವೆ. ಎರಡು ತಿಂಗಳ ಅವಧಿಯ ಈ ಎಲ್ಲ ಕೋರ್ಸ್‌ಗಳು ಮೂಲ ಕಲಿಕಾ ಹಂತದ ಕೋರ್ಸ್‌ಗಳಾಗಿವೆ.

ಈ ಭಾಷಿಕರೊಂದಿಗೆ ಮಾತನಾಡಲು ಅವಶ್ಯವಿರುವ ಕಲಿಕೆಯನ್ನು ಹೇಳಿಕೊಡಲಾಗುವುದು. ಪ್ರತಿ ಕೋರ್ಸ್‌ಗಳನ್ನು ಆರಂಭಿಸಲು ಕನಿಷ್ಠ ಹತ್ತು ವಿದ್ಯಾರ್ಥಿಗಳು ದಾಖಲಾಗಬೇಕು ಎಂದು ವಿವಿಯ ಜಾಗತಿಕ ಭಾಷೆಗಳ ಕೇಂದ್ರದ ಮುಖ್ಯಸ್ಥೆ ಜ್ಯೋತಿ ವೆಂಕಟೇಶ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪ್ರಾಥಮಿಕ ಕಲಿಕಾ ಅವಧಿಯ ಕೋರ್ಸ್‌ಗಳಾದ ಪ್ರಮಾಣ ಪತ್ರ 1 ಮತ್ತು 2, ಡಿಪ್ಲೊಮಾ 1 ಮತ್ತು 2ರ ಕಲಿಕಾ ಭಾಷೆ ಕೋರ್ಸ್‌ಗಳಾದ ಜರ್ಮನ್‌, ಸ್ಪ್ಯಾನಿಷ್‌, ಕೋರಿಯನ್‌, ರಷ್ಯನ್‌, ಚೈನೀಸ್‌, ಇಟಾಲಿಯನ್‌ ಮತ್ತು ಅರೇಬಿಕ್‌ ತರಗತಿಗಳ ಕಲಿಕಾ ಅವಧಿಯನ್ನು ಎಂಟು ತಿಂಗಳಿನಿಂದ ನಾಲ್ಕು ತಿಂಗಳಿಗೆ ಕಡಿತಗೊಳಿಸಲಾಗಿದೆ.

ಉನ್ನತ ಕಲಿಕಾ ಕೋರ್ಸ್‌ಗಳಾದ ಹೈಯರ್‌ ಡಿಪ್ಲೊಮ ಮತ್ತು ಅಡ್ವಾನ್ಸ್‌ ಡಿಪ್ಲೊಮಾ ತರಗತಿಗಳು ಎಂದಿನಂತೆ ಎಂಟು ತಿಂಗಳಿನಲ್ಲಿಯೇ ಮುಂದುವರಿಯಲಿವೆ ಎಂದು ಹೇಳಿದರು. ಅಲ್ಲದೆ, ಪ್ರಸಕ್ತ ಸಾಲಿನಿಂದ ಫ್ರೆಂಚ್‌, ಸ್ಪ್ಯಾನಿಷ್‌ ಮತ್ತು ಜರ್ಮನ್‌ ಭಾಷೆಗಳ ಎಂಎ ಸಂಯೋಜಿತ ಕೋರ್ಸ್‌ಗಳನ್ನು ಆರಂಭಿಸುವ ಚಿಂತನೆ ಇದೆ. ಇವು ಎರಡು ವರ್ಷದ ಅವಧಿಯ ಕೋರ್ಸ್‌ಗಳಾಗಿವೆ ಎಂದರು.

ಇಂದು ಪುಸ್ತಕ ಬಿಡುಗಡೆ: ಹೋಟೆಲ್‌ ಮ್ಯಾನೇಜ್‌ಮೆಂಟ್‌ನ ಫ್ರೆಂಚ್‌ ಕೋರ್ಸ್‌ಗಳಿಗೆ ಸಹಕಾರಿಯಾಗುವ “ಬೆನ್‌ ಸೆಜೋರ್‌’ ಪಠ್ಯಪುಸ್ತಕ ಶನಿವಾರ ಸಂಜೆ 4ಕ್ಕೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಿಡುಗಡೆ ಆಗಲಿದೆ. ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ. ಎಸ್‌. ಜಾಫೆಟ್‌ ಬಿಡುಗಡೆ ಮಾಡಲಿದ್ದಾರೆ.

ಬೆಂಗಳೂರು ವಿವಿ ಕುಲಪತಿ ಪ್ರೊ.ಐ.ಎಸ್‌. ಶಿವಕುಮಾರ್‌, ಫ್ರೆಂಚ್‌ ರಾಯಭಾರ ಕಚೇರಿಯ ಡಾ.ಜೆರೋಮ್‌ ಬೋವೆ, ಕುಲಸಚಿವರಾದ ಪ್ರೊ.ಬಿ.ಕೆ. ರವಿ, ಪ್ರೊ.ಎಂ. ರಾಮಚಂದ್ರಗೌಡ ಭಾಗವಹಿಸಲಿದ್ದಾರೆ. ಲೇಖಕರಾದ ಡಾ.ಸುಮನ್‌ ವೆಂಕಟೇಶ್‌ ಮತ್ತು ಸಂತಾನ ಕೃಷ್ಣನ್‌ ಸಹಯೋಗದಲ್ಲಿ ಈ ಪುಸ್ತಕ ರಚನೆ ಆಗಿದೆ. 

ಟಾಪ್ ನ್ಯೂಸ್

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಆತ್ಮಹತ್ಯಾ ದಾಳಿಕೋರರ ಕುಟುಂಬಕ್ಕೆ ತಾಲಿಬಾನ್‌ ಸಹಾಯ

ಆತ್ಮಹತ್ಯಾ ದಾಳಿಕೋರರ ಕುಟುಂಬಕ್ಕೆ ತಾಲಿಬಾನ್‌ ಸಹಾಯ

ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್‌

ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್‌

ಭಾರತಕ್ಕೆ ಆಗಮಿಸುವ ಈ ಹನ್ನೊಂದು ದೇಶಗಳ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಭಾರತಕ್ಕೆ ಆಗಮಿಸುವ ಈ ಹನ್ನೊಂದು ದೇಶಗಳ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಹಾಡಹಗಲೇ ಒಂಟಿ ಮಹಿಳೆಯ ಭೀಕರ ಕೊಲೆ : 17ಕ್ಕೂ ಹೆಚ್ಚು ಬಾರಿ ಇರಿದ ದುಷ್ಕರ್ಮಿಗಳು

ಹಾಡಹಗಲೇ ಒಂಟಿ ಮಹಿಳೆಯ ಭೀಕರ ಕೊಲೆ : 17ಕ್ಕೂ ಹೆಚ್ಚು ಬಾರಿ ಇರಿದಿದ್ದ ದುಷ್ಕರ್ಮಿ

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸ್ತೆ ಗುಂಡಿ ಮುಚ್ಚಲು ಆರಕ್ಷಕರು ಬದ್ಧ

ರಸ್ತೆ ಗುಂಡಿ ಮುಚ್ಚಲು ಆರಕ್ಷಕರು ಬದ್ಧ

metro

ದಶಕ ಪೂರೈಸಿದ ನಮ್ಮ ಮೆಟ್ರೋ

ಬ್ಯಾಂಕ್‌ ಆಫ್ ಬರೋಡದಿಂದ ರೈತ ದಿವಸ್‌

ಬ್ಯಾಂಕ್‌ ಆಫ್ ಬರೋಡದಿಂದ ರೈತ ದಿವಸ್‌

Harassment of officers when issuing a license

ಪರವಾನಗಿ ನೀಡುವಾಗ ಅಧಿಕಾರಿಗಳ ಕಿರುಕುಳ ಸಲ್ಲದು

ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ „ ಅನುಮತಿ ವೇಳೆ ಸಮಸ್ಯೆ ನಿವಾರಣೆಗೆ ಒತ್ತು

ಕನ್ನಡ ಚಿತ್ರಗಳ ಪೈರಸಿ ತಡೆಗೆ ಕ್ರಮ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

hunasooru news

ಲಸಿಕಾಕರಣಕ್ಕೆ ಟಮಟೆ ಬಾರಿಸಿ, ಮೈಕ್ ಮೂಲಕ  ಜಾಗೃತಿ

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಆತ್ಮಹತ್ಯಾ ದಾಳಿಕೋರರ ಕುಟುಂಬಕ್ಕೆ ತಾಲಿಬಾನ್‌ ಸಹಾಯ

ಆತ್ಮಹತ್ಯಾ ದಾಳಿಕೋರರ ಕುಟುಂಬಕ್ಕೆ ತಾಲಿಬಾನ್‌ ಸಹಾಯ

ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್‌

ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.