- Wednesday 11 Dec 2019
ಮೂರು ಸಾವಿರ ಪೊಲೀಸರ ಕಣ್ಗಾವಲು
Team Udayavani, Dec 3, 2019, 2:10 PM IST
ಬೆಂಗಳೂರು: ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಭಾರೀ ಪೊಲೀಸ್ ಬಂದೋಬಸ್ತ್ನಿ ಯೋಜಿಸಲಾಗಿದ್ದು, ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.
ಈ ಕುರಿತು ಸೋಮವಾರ ಮಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಗರ ಕಮಿಷನರೇಟ್ ವ್ಯಾಪ್ತಿಗೆ ಬರುವ ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ 28 ಪೊಲೀಸ್ ಠಾಣೆಗಳು ಬರಲಿದ್ದು, ಈ ವ್ಯಾಪ್ತಿಯಲ್ಲಿ ಡಿ.3ರಂದು ಸಂಜೆ 6 ಗಂಟೆಯಿಂದ ಡಿ.6ರಂದು ಸಂಜೆ 6ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಹಾಗೇ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಈ ಕ್ಷೇತ್ರಗಳಲ್ಲಿ ಡಿ.5ರಂದು ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ಮತದಾನ ನಡೆಯಲಿದ್ದು, ಪೊಲೀಸ್ ಭದ್ರತೆ ನೀಡಲಾಗಿದೆ. 7 ಮಂದಿ ಡಿಸಿಪಿಗಳು, 14 ಎಸಿಪಿಗಳು, 30 ಇನ್‌ಸೆಕ್ಟರ್, 68 ಸಬ್‌ಇನ್ ಸ್ಪೆಕ್ಟರ್, 160 ಎಎಸ್‌ಐ, ಸಿಬ್ಬಂದಿ 1,666, ಗೃಹರಕ್ಷಕ ದಳದ 951 ಮಂದಿ ನಿಯೋಜಿಸಲಾಗಿದೆ. ಜತೆಗೆ 10 ಸಿಎಪಿಎಫ್, 38 ಕೆಎಸ್‌ಆರ್‌ಪಿ, 40 ಸಿಎಆರ್, 4 ಆರ್‌ಐವಿ ಹಾಗೂ 3 ಕ್ಯೂಆರ್‌ಟಿತಂಡಗಳ ಸಿಬ್ಬಂದಿ ಕೂಡ ಕರ್ತವ್ಯ
ನಿರ್ವಹಿಸಲಿದ್ದಾರೆ.
ಅಲ್ಲದೆ, 26 ಫ್ಲೈಯಿಂಗ್‌ಸ್ಕ್ವಾಡ್, 22 ಎಸ್‌ಎಸ್‌ಟಿ ಸ್ಕ್ವಾಡ್ ಇರಲಿವೆ. ನಾಲ್ಕು ಕ್ಷೇತ್ರಗಳಲ್ಲಿ 1064 ಮತಕೇಂದ್ರ ಗಳಿದ್ದು, ಈ ಪೈಕಿ 826 ಸಾಮಾನ್ಯ ಹಾಗೂ 238 ಸೂಕ್ಷ್ಮ ಕೇಂದ್ರಗಳು ಇರಲಿವೆ. ಕೆ.ಆರ್.ಪುರಂನಲ್ಲಿ 28 ಮತ್ತು ಶಿವಾಜಿನಗರದಲ್ಲಿ 8ಹಾಗೂ ಈಶಾನ್ಯ ವಿಭಾಗದಲ್ಲಿ ಐದು ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆದು ಗುರುತಿಸಲಾಗಿದ್ದು, ಇಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಹಾಗೇ ಈ ವ್ಯಾಪ್ತಿಯಲ್ಲಿ ಪರವಾನಗಿ ಪಡೆದಿರುವ 2331 ಶಸ್ತ್ರಾಸ್ತ್ರಗಳಿದ್ದು, ಈ ಪೈಕಿ 2028 ಜಮೆ ಮಾಡಿಸಿಕೊಳ್ಳಲಾಗಿದೆ. 291ಕ್ಕೆ ವಿನಾಯಿತಿ ನೀಡಲಾಗಿದೆ. ಇದೇ ವೇಳೆ ಈ ವ್ಯಾಪ್ತಿಯ 620 ಮಂದಿ ರೌಡಿಶೀಟರ್‌ಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದು, ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ ಎಂದು ಹೇಳಿದರು.
15.92 ಲಕ್ಷ ನಗದು ಜಪ್ತಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಇದುವರೆಗೂ 27 ಪ್ರಕರಣಗಳು ದಾಖಲಾಗಿವೆ.15,92,855 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಭಾಸ್ಕರ್ ರಾವ್ ಹೇಳಿದರು.ಮತ ಎಣಿಕೆ ಕೇಂದ್ರಗಳಲ್ಲೂ ಭದ್ರತೆ: ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ವಸಂತನಗರದಲ್ಲಿಮೌಂಟ್ ಕಾರ್ಮೆಲ್ ಪಿಯು ಮಹಿಳಾ ಕಾಲೇಜು, ಕೆ.ಆರ್.ಪುರಂ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಅಶೋಕನಗರದ ಸೇಂಟ್‌ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತುಯಶವಂತಪುರ ಕ್ಷೇತ್ರದ ಮೈಸೂರು ರಸ್ತೆಯಲ್ಲಿರುವ ಆರ್.ವಿ. ಎಂಜಿನಿಯರಿಂಗ್‌ಕಾಲೇಜು ಹಾಗೂ ಹೊಸಕೋಟೆ ಕ್ಷೇತ್ರದಮತ ಎಣಿಕೆ ದೇವನಹಳ್ಳಿಯ ಆಕಾಶ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ನಡೆಯಲಿದ್ದು, ಶಸ್ತ್ರ ಸಜ್ಜಿತ ಸ್ಥಳೀಯ ಪೊಲೀಸರ ಜತೆಗೆ ಕೇಂದ್ರ ಸೇನಾ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಒಟ್ಟಾರೆ 2031ರ ವೇಳೆಗೆ ನಗರದಲ್ಲಿ 803 ಕಿ.ಮೀ. ಉದ್ದದ ಸಮೂಹ ಸಾರಿಗೆ ಮಾರ್ಗ ನಿರ್ಮಾಣ, ಇದರಲ್ಲಿ 317 ಕಿ.ಮೀ. ಉದ್ದದಲ್ಲಿ ಮೆಟ್ರೋ ಮತ್ತು 202 ಕಿ.ಮೀ. ಬಸ್ ಆದ್ಯತಾ...
-
ಬೆಂಗಳೂರು: ನಗರದಲ್ಲಿ ಉದ್ದಿಮೆ ಹಾಗೂ ವ್ಯಾಪಾರ ಮಳಿಗೆಗಳು ಡಿಸೆಂಬರ್ ಅಂತ್ಯದೊಳಗೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಳವಡಿಸದಿದ್ದಲ್ಲಿ ಪರವಾನಗಿ ರದ್ದು...
-
ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ ರಾಷ್ಟ್ರೀಯಾ ಹೆದ್ದಾರಿ ಪ್ರಾಧಿಕಾರದ ಆದಾಯವನ್ನು 1 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಕೇಂದ್ರ ಭೂ ಸಾರಿಗೆ...
-
ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದ ಪರಿಣಾಮ ಮನೆಗಳಿಗೆ ನೀರು ನುಗ್ಗಿ ಆಧಾರ್ ಕಾರ್ಡ್, ಮತದಾನ ಗುರುತಿನ ಚೀಟಿ ಸೇರಿ ಇತರೆ ಸರ್ಕಾರಿ ದಾಖಲೆಗಳನ್ನು ಕಳೆದುಕೊಂಡ...
-
ಬೆಂಗಳೂರು: ಬಹುಮಹಡಿ ಕಟ್ಟಡದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇ-ಆಡಳಿತ ವಿಭಾಗದ ಸಲಹೆಗಾರರಾದ ಬೇಳೂರು ಸುದರ್ಶನ ಅವರ ಕೊಠಡಿಯಲ್ಲಿ ಶಾರ್ಟ್...
ಹೊಸ ಸೇರ್ಪಡೆ
-
ಶರತ್ ಭದ್ರಾವತಿ ಶಿವಮೊಗ್ಗ: ತಮಿಳುನಾಡು ಬಾಳೆ ಜಿಲ್ಲೆಗೆ ಕಾಲಿಟ್ಟ ಕಾರಣ ಗ್ರಾಹಕರ ಜೇಬಿಗೆ ಹೊರೆಯಾಗಿದ್ದು ಪುಟ್ಟ ಬಾಳೆ (ಏಲಕ್ಕಿ ಬಾಳೆ) ಈಗ ಭಾರೀ ಇಳಿಕೆಯಾಗಿದ್ದು...
-
ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಕೆರೆ ಕೋಡಿ ಒಡೆದಿದ್ದು, ಅಪಾರ ಪ್ರಮಾಣದಲ್ಲಿ ಕೆರೆ ನೀರು ಪೋಲಾಗುತ್ತಿದೆ. ಮಾಚಿಹಳ್ಳಿ ಕೊರಚರಹಟ್ಟಿ...
-
ಸುರಪುರ: ತಾಲೂಕಿನ ಯಕ್ತಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿ ಅಂಕಪಟ್ಟಿ ತಿದ್ದುಪಡಿ ಮಾಡಿದ ಪ್ರಧಾನ ಶಿಕ್ಷಕರ...
-
ದೇಶ ಕಾಯುವ ಯೋಧರು ನಮ್ಮನ್ನು ಶತ್ರುಗಳಿಂದ ರಕ್ಷಿಸಿದರೆ, ಹೊಲ ಉಳುವ ರೈತ ನಮಗೆಲ್ಲಾ ಅನ್ನದಾತ, ಹಸಿವಿನಿಂದ ನಮ್ಮನ್ನು ರಕ್ಷಿಸುವ ದೇವದೂತ. ಅಂತಹ ರೈತರನ್ನು ಸ್ಮರಿಸುವುದು...
-
ಚಂದ್ರಶೇಖರ ಯರದಿಹಾಳ ಸಿಂಧನೂರು: ಸಿಂಧನೂರು ನಗರದ ಪ್ರಮುಖ ರಸ್ತೆಗಳಲ್ಲಿರುವ ವಿವಿಧ ಸರ್ಕಾರಿ ಕಚೇರಿ, ಬ್ಯಾಂಕ್ಗಳ ಎದುರು ಸವಾರರು ಅಡ್ಡಾದಿಡ್ಡಿ ಬೈಕ್ ನಿಲುಗಡೆ...