ಗಂಗಾಧರನಿಗೆ ಸೂರ್ಯ ನಮನ

Team Udayavani, Jan 15, 2018, 11:41 AM IST

ಬೆಂಗಳೂರು: ಸಂಕ್ರಾಂತಿ ಪ್ರಯುಕ್ತ ಗುಟ್ಟಹಳ್ಳಿಯ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಕ್ರಾಂತಿಯ ವಿಶೇಷ ಪೂಜೆ ನಡೆಯಿತು. ಸಂಜೆ ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶಿಸಿದವು. ಈ ವೇಳೆ ದೇವಾಲಯ ಮತ್ತು ಮುಂಜಾನೆಯಿಂದ ರಾತ್ರಿವರೆಗೆ ವಿವಿಧ ಪೂಜೆ ಪುನಸ್ಕಾರಗಳು ನೆರವೇರಿದವು. ಮುಂಜಾನೆಯೇ ಭಕ್ತಲೋಕ ಮಹಾದೇವನ ದರ್ಶನ ಪಡೆದು ಪುನೀತವಾಯಿತು.

ಅಪೂರ್ವ ಕ್ಷಣ: ಸಂಜೆ ವೇಳೆ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯನ ರಶ್ಮಿ ಈಶ್ವರನ ಲಿಂಗದ ಮೇಲೆ
ಬೀಳುವ ಹಿನ್ನೆಲೆಯಲ್ಲಿ ಇದನ್ನು ಕಣ್ತುಂಬಿ ಕೊಳ್ಳಲು ಕಾತರುರರಾಗಿದ್ದ ಭಕ್ತರ ಸಂಖ್ಯೆ ದೊಡ್ಡ ಸಾಲಿನಲ್ಲಿ ನಿಂತಿತ್ತು. ಬೆಳಗ್ಗೆ ಬೆರಳೆಣಿಕೆಯಷ್ಟಿದ್ದ ಭಕ್ತರ ಸಂಖ್ಯೆ ಮಧ್ಯಾಹ್ನವಾಗು  ತ್ತಿದಂತೆ ಹೆಚ್ಚಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಆಗಮನವಾಗುವ ನಿರೀಕ್ಷೆ ಯಿದ್ದ ಹಿನ್ನೆಲೆಯಲ್ಲಿ ಸುಗಮ ದರ್ಶನಕ್ಕಾಗಿ ಎಲ್ಲಾ ರೀತಿಯಲ್ಲೂ ಸಿದ್ಧವಾಗಿತ್ತು.

 ಹಲವರು ಸರದಿಯ ಸಾಲಿನಲ್ಲಿ ನಿಂತು ಹತ್ತಿರದಿಂದಲೇ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವುದನ್ನು ಕಣ್ತುಂಬಿಕೊಂಡರೆ. ಇನ್ನೂ ಕೆಲವರು ದೊಡ್ಡ ಟಿವಿ ಪರದೆಯ ಮೇಲೆ ಮೂಡಿ ಬರುತ್ತಿದ ದೃಶ್ಯಗಳನ್ನು ನೋಡಿ ಪುನೀತರಾದರು. 

ಉತ್ತರಾಯಣ ಪುಣ್ಯಕಾಲ: ಈ ವರ್ಷ ಸಂಕ್ರಾಂತಿ ಜನವರಿ 15ಕ್ಕೆ ಇದೆ. ಆದರೆ ಸೂರ್ಯನ ಕಿರಣ ಪ್ರತಿವರ್ಷದಂತೆ ಜ.14 ರಂದೇ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಸ್ಪರ್ಶವಾಯಿತು. ಸಂಜೆ 5.20ರ ವೇಳೆ ಸೂರ್ಯನ ಕಿರಣಗಳು ದೇವಸ್ಥಾನದ ದಕ್ಷಿಣ ಕಿಟಕಿಯ ಮೂಲಕ ಹಾದು ಬಸವಣ್ಣನ ಕೋಡುಗಳ ಮಧ್ಯದಿಂದ ಶಿವ ನನ್ನು ಸ್ಪರ್ಶಿಸಿದವು.ಈ ಅಪರೂಪದ ಕ್ಷಣವನ್ನು ಉತ್ತರಾಯಣ ಪುಣ್ಯಕಾಲ ಪ್ರಾರಂಭವೆಂದು ತಿಳಿಯಲಾಗುವುದು.

ಇದೊಂದು ಅಪರೂಪದ ಕ್ಷಣ ಇದನ್ನು ಕಣ್ತುಂಬಿಕೊಂಡರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ದೇವರ ದರ್ಶನ ಪಡೆಯಲು ಬಂದಿದ್ದೇವೆ.
●ಹನುಮಂತರಾಯಪ್ಪ, ಬನ್ನೇರುಘಟ್ಟದ ನಿವಾಸಿ

ನನಗೆ ಸಂಜೆ ವೇಳೆ ಮಾರುದ್ದ ಸಾಲಿನಲ್ಲಿ ನಿಲ್ಲಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರೆ ಜೊತೆಗೆ ಬೆಳಗ್ಗೆಯೇ ಈಶ್ವರನ ದರ್ಶನ ಪಡೆಯಲು ಬಂದಿದ್ದೇನೆ.
●ರುಕ್ಷ್ಮೀಣಮ್ಮ , ಹನುಮಂತನ ನಗರದ ಹಿರಿಯ ವೃದ್ಧೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಅಂಗನವಾಡಿ ದಾಖಲಾತಿ, ಮಕ್ಕಳ ಅಪೌಷ್ಠಿಕತೆಯ ನಿಖರ ಸಂಖ್ಯೆ, ಟಿ.ಟಿ ಚುಚ್ಚುಮದ್ದು ಸೇರಿ ವಿವಿಧ ಮಾಹಿತಿ ನೀಡಲು ಅನುಕೂಲವಾಗಲೆಂದು ಮಹಿಳಾ ಮತ್ತು ಮಕ್ಕಳ...

  • ಬೆಂಗಳೂರು: ಯೋಜನೆ ಇರುವುದು "ಡಬಲ್‌ ಡೆಕರ್‌'. ಆದರೆ, ಆಗುತ್ತಿರುವುದು ಟ್ರಿಪಲ್‌ ಡೆಕರ್‌! ಹೌದು, ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವೆ ರಸ್ತೆ ಕಂ ರೈಲು ಮಾರ್ಗ...

  • ಬೆಂಗಳೂರು: ಅಕ್ಟೋಬರ್‌ನಲ್ಲಿ ನಡೆಯುವ ನಾಡಹಬ್ಬ ಮೈಸೂರು ದಸರಾಕ್ಕೆ ದೇಶ-ವಿದೇಶಿಗರನ್ನು ಆಕರ್ಷಿಸಲು ಏಪ್ರಿಲ್‌ ತಿಂಗಳಿನಿಂದ ಸಿದ್ಧತೆ ಆರಂಭಿಸಲಾಗುವುದು ಎಂದು...

  • ಬೆಂಗಳೂರು: ನಗರದಲ್ಲಿ ವಾಸವಿರುವ ಮಂಗಳಮುಖೀಯರ ಶ್ರೇಯೋಭಿವೃದ್ಧಿ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ...

  • ಬೆಂಗಳೂರು: ಒತ್ತಡ ನಿವಾರಣೆಗಾಗಿ ಈಶಾನ್ಯ ಪೊಲೀಸರಿಗೆ ಮೂರುದಿನಗಳ ಕಾಲ "ಜುಂಬಾ' ನೃತ್ಯ ತರಬೇತಿ ನೀಡಿದ್ದು ಪೊಲೀಸ್‌ ಸಿಬ್ಬಂದಿ ಕುಣಿದು ಕುಪ್ಪಳಿಸಿರುವ ವಿಡಿಯೋ...

ಹೊಸ ಸೇರ್ಪಡೆ