ಮಲೀನ ನೀರು ರಸೆಗೆ ಹರಿಯದಂತೆ ಕ್ರಮವಹಿಸಿ

ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವಗುಪ್ತ ಸೂಚನೆ

Team Udayavani, Oct 17, 2021, 12:25 PM IST

9

ಬೆಂಗಳೂರು: ಮಳೆಯ ಸಂದರ್ಭದಲ್ಲಿ ಮ್ಯಾನ್‌ ಹೋಲ್‌ ಮಲೀನ ನೀರು ರಸ್ತೆಯ ಮುಖಾಂತರ ಬಡಾವಣೆಯಲ್ಲಿ ಹರಿಯುವುದನ್ನು ತಡೆಯಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಬಿಬಿ ಎಂಪಿ ಮುಖ್ಯ ಆಯುಕ್ತ ಗೌರವಗುಪ್ತ ಸೂಚಿಸಿದರು. ಶನಿವಾರ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಬಿಡಿಎ ಸಂಕೀರ್ಣದ ವಲಯ ಕಚೇರಿ ಯಲ್ಲಿ ಶಾಸಕರು, ಬಿಬಿಎಂಪಿ ಹಾಗೂ ಜಲಮಂಡಳಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮಳೆಯ ಸಂದರ್ಭದಲ್ಲಿ ಹೆಚ್ಚು ನೀರು ರಾಜಕಾಲುವೆಗಳಲ್ಲಿ ಹರಿಯುವ ಜೊತೆಗೆ ಕೆಲ ವಾಸ ಪ್ರದೇಶ/ ಬಡಾವಣೆಗಳಲ್ಲಿ ನೀರು ಹರಿಯಲಿದ್ದು, ಆ ಅನಾಹುತಗಳು ತಪ್ಪಿಸುವ ಸಲುವಾಗಿ ಜಂಟಿಯಾಗಿ ಸಭೆ ನಡೆಸಿ ತುರ್ತು ಅಗತ್ಯ ಕ್ರಮ ಜರೂರು ವಹಿಸಲು ಸೂಚಿಸಿದರು.

ಬಿಬಿಎಂಪಿ ವತಿಯಿಂದ ರಾಜ ಕಾಲುವೆಯ ಸಾಂದ್ರತೆ ಹೆಚ್ಚಿಸಲು ಮತ್ತು ಅವಶ್ಯಕತೆ ಇರುವ ಕಡೆ ಪರ್ಯಾಯ ಕಿರು ಕಾಲುವೆಯ ನಿರ್ಮಾಣ, ನೀರು ಸರಾಗವಾಗಿ ಹರಿಯಲು ಕಾಲಕಾಲಕ್ಕೆ ಹೊಳು ತೆಗೆದು ನೀರು ಹರಿಯುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ.

ಜತೆಗೆ ಸ್ವಚ್ಚತೆ ಹಾಗೂ ಸುರಕ್ಷತಾ ಕ್ರಮ ವಹಿಸುವುದು. ಜಲಮಂಡಳಿ ವತಿಯಿಂದ ಅವಶ್ಯಕತೆ ಇರುವ ಸ್ಥಳಗಳಲ್ಲಿ ತ್ಯಾಜ್ಯ ನೀರು ಸಂಸ್ಕ ರಣಾ (ಎಸ್‌ಟಿಪಿ) ಘಟಕಗಳ ಸ್ಥಾಪನೆ ಆ ಮುಖಾಂತರ ಅಯಾ ಬಡಾವಣೆಯ ಮಲೀನ ನೀರನ್ನು ರಾಜ ಕಾಲುವೆಗೆ ಹರಿಸದೆ ಪ್ರತ್ಯೇಕವಾಗಿ ಎಸ್‌ಟಿಪಿ ಘಟಕಗಳ ಮೂಲಕ ಶುದ್ದೀಕರಣ ಗೊಳಿಸಿ ಮರುಬಳಕೆ ಯೋಗ್ಯ ನೀರನ್ನು ಹತ್ತಿರದ ಕೆರೆಗೆ ಹರಿಸುವ ಕಾರ್ಯ ಜರೂರಾಗಿ ತೆಗೆದುಕೊಳ್ಳುಬೇಕು ಎಂದು ಸೂಚಿಸಿದರು.

ಇದನ್ನೂ ಓದಿ:- ಒಂದೇ ಹೋಟೆಲ್ ನಲ್ಲಿದ್ದರೂ ಪರಸ್ಪರ ಭೇಟಿಯಾಗದ ಸಿಎಂ-ಮಾಜಿ ಸಿಎಂ!

 ಜೆಎಸ್‌ಎಸ್‌ ಜಂಕ್ಷನ್‌ ರಾಜಕಾಲುವೆ ಪರಿಶೀಲನೆ: ಜೆಎಸ್‌ಎಸ್‌ ಜಂಕ್ಷನ್‌ ರಾಜಕಾಲುವೆ ಯಲ್ಲಿ ಮಳೆಯ ಅವಧಿಯಲ್ಲಿ ಹೆಚ್ಚು ನೀರು ರಭಸವಾಗಿ ಒಮ್ಮೆಲೆ ಹರಿಯುವುದರಿಂದ ರಸ್ತೆ ಮೇಲೆ ಹಾಗೂ ಅಕ್ಕ ಪಕ್ಕದ ಬಡವಾಣೆ ನೀರಿನಿಂದ ಅವೃತ್ತವಾಗಲಿದೆ. ಪಕ್ಕದವರೇ ಎಸ್‌.ಟಿ.ಪಿ ಘಟಕವಿದ್ದರೂ ಸಹ ಪ್ರಯೋಜನ ವಾಗುತ್ತಿಲ್ಲ, ಅದ್ದರಿಂದ ಪಕ್ಕದ ತಡೆಗೊಡೆ ಹೆಚ್ಚಿಸಲು ಕ್ರಮ ಹಾಗೂ ಸಂಬಂದಿಸಿದ ಬಡಾವಣೆಯಲ್ಲಿ ಎಸ್.ಟಿ.ಪಿ ಘಟಕಗಳ ಸೂಕ್ತ ನಿರ್ವಹಣೆ ಹಾಗೂ ಅನುಷ್ಠಾನಕ್ಕೆ ಒತ್ತು ನೀಡುವಂತೆ ತಿಳಿಸಿದರು.‌

 ಅಗರ ಕೆರೆ ಅಭಿವೃದ್ಧಿ ಕಾಮಗಾರಿಗೆ ಸೂಚನೆ: ಅಗರ ಕೆರೆ ಯನ್ನು ವೀಕ್ಷಿಸಿ ಸದರಿ ಕೆರೆ ಅಭಿವೃದ್ಧಿ ಪಡಿಸಲು 5 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿದ್ದು, ಸದರಿ ಅಭಿವೃದ್ಧಿಯ ಕಾಮಗಾರಿಯನ್ನು ಕೂಎಲೇ ಪ್ರಾರಂಭಿಸುವಂತೆ ಸೂಚಿಸಿ ದರು. ಸಿಲ್ಕ್ ಬೋರ್ಡ್‌ ಜಂಕ್ಷನ್‌ – ಹೊಸರು ರಸ್ತೆಯ ಅಕ್ಸಫ‌ರ್ಡ್‌ ಕಾಲೇಜು ಮುಂಭಾಗದ ಹತ್ತಿರ ರಾಜಕಾಲುವೆ ಪರಿಶೀಲನೆ ನಡೆಸಿದರು. ಶಾಸಕ ಸತೀಶ್‌ ಮಾತನಾಡಿ, ಎಚ್‌.ಆರ್‌ ಎಸ್‌ ಬಡಾವಣೆಯ 5ನೇ ಮುಖ್ಯ ರಸ್ತೆ ಯಿಂದ 9ನೇ ಮುಖ್ಯ ರಸ್ತೆ ಯ ವರೆಗೆ ಮಳೆಗಾಲದಲ್ಲಿ ರಾಜಕಾಲುವೆ ಮತ್ತು ಮ್ಯಾನ್‌ಹೋಲ್‌ ಗಳಿಂದ ನೀರು ರಭಸವಾಗಿ ಹರಿದು ಬಡಾವಣೆಯಲ್ಲಿ ಭಾರಿ ಅನಾಹುತ ಸಂಭವಿಸುವುದು ವಾಡಿಕೆಯಾಗಿದೆ.

ಶಾಶ್ವತ ಪರಿಹಾರ ವಾಗಿ ಸಮಾನಾಂತರ ಕಿರುಕಾಲುವೆ ನಿರ್ಮಿಸುವುದು ಅವಶ್ಯಕ ಹಾಗೂ ಸದರಿ ಪ್ರದೇಶವು ತಗ್ಗಿನಿಂದ ಕೊಡಿರುವುದರಿಂದ ರಾಜಕಾಲುವೆಯ ಎತ್ತರವನ್ನು ನಿರ್ಮಿಸಿ ನೀರು ರಸ್ತೆಗೆ ಹೊರಬರದಂತೆ ತಡೆಗಟ್ಟಲು ಪರ್ಯಾಯ ಕಾಮಗಾರಿಯ ಯೋಜನೆ ಸಿದ್ದಪಡಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು. ಪಾಲಿಕೆಯ ಹಾಗೂ ಜಲಮಂಡಳಿಯ ಹಿರಿಯ ಅಧಿಕಾರಿಗಳು ಪರಿಶೀಲನೆ ವೇಳೆ ಹಾಜರಿದ್ದರು.

ಅಭಿವೃದ್ಧಿ ಕಾರ್ಯಗಳ ವೀಕ್ಷಣೆ-

ಮಡಿವಾಳ ಕೆರೆಯ ಹಿಂಭಾಗದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಸದರಿ ಕೆರೆಯ ಪಕ್ಕದಲ್ಲಿ ಬೃಹತ್‌ ರಾಜಕಾಲುವೆ ನಿರ್ಮಿಸಿರುವುದರಿಂದ, ರಾಜಕಾಲುವೆಯ ನೀರು ಕೆರೆಗೆ ಹರಿಯದೆ ಪ್ರತ್ಯೇಕವಾಗಿ ಹರಿಯುತ್ತಿದ್ದು, ಕರೆಯ ನೀರು ಮಲಿನಗೊಳ್ಳದೆ ಶುದ್ಧೀಕರಣವಾಗಿದೆ.

ಕೆರೆ ಏರಿ ಆಗಲದ ವಿಸ್ತೀರ್ಣ ಸಂಬಂಧ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಕೆರೆಯ ಹತ್ತಿರ ಎಸ್‌.ಟಿ.ಪಿ ಘಟಕ ಹೆಚ್ಚಿನ ಸಾಮಾರ್ಥ್ಯದೊಂದಿಗೆ ಜರೂರು ಸ್ಥಾಪಿಸಲು ಜಲಮಂಡಳಿಯು ಕ್ರಮವಹಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಕೋರಿದರು.

ಟಾಪ್ ನ್ಯೂಸ್

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ತಲಪಾಡಿ : ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ, ಆರೋಪಿ ಪರಾರಿ

ತಲಪಾಡಿ :ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ, ಆರೋಪಿಗಾಗಿ ಶೋಧಕಾರ್ಯ

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದರೆ ಬಿಗಿ ಕ್ರಮ ಖಚಿತ: ಆರ್.ಅಶೋಕ್

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದರೆ ಬಿಗಿ ಕ್ರಮ ಖಚಿತ: ಆರ್.ಅಶೋಕ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ತೆರೆಮರೆಗೆ ಸರಿದ ಕ್ರೀಡಾಪ್ರತಿಭೆ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಚಾಲಕ ವೃತ್ತಿವರೆಗೆ

ತೆರೆಮರೆಗೆ ಸರಿದ ಕ್ರೀಡಾಪ್ರತಿಭೆ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಚಾಲಕ ವೃತ್ತಿವರೆಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

riksha benglore

ಆಟೋ ಬಾಡಿಗೆ ದರ ಏರಿಕೆ..!

high court

ಸಿಡಿ ತನಿಖಾ ವರದಿ ಅನುಮೋದಿಸಿದ ಎಸ್‌ಐಟಿ

ಪರಾಪ್ಪನ ಅಗ್ರಹಾರ

ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ..!

BGML ಜಮೀನು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸಚಿವ ‌ನಿರಾಣಿ ಸೂಚನೆ

BGML ಜಮೀನು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸಚಿವ ‌ನಿರಾಣಿ ಸೂಚನೆ

ಬಿಡಿಎಗೆ 15 ಸಾವಿರ ಕೋಟಿ ಸಂಗ್ರಹದ ಗುರಿ: ವಿಶ್ವನಾಥ್

ಬಿಡಿಎಗೆ 15 ಸಾವಿರ ಕೋಟಿ ಸಂಗ್ರಹದ ಗುರಿ: ವಿಶ್ವನಾಥ್

MUST WATCH

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

ಹೊಸ ಸೇರ್ಪಡೆ

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ತಲಪಾಡಿ : ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ, ಆರೋಪಿ ಪರಾರಿ

ತಲಪಾಡಿ :ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ, ಆರೋಪಿಗಾಗಿ ಶೋಧಕಾರ್ಯ

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದರೆ ಬಿಗಿ ಕ್ರಮ ಖಚಿತ: ಆರ್.ಅಶೋಕ್

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದರೆ ಬಿಗಿ ಕ್ರಮ ಖಚಿತ: ಆರ್.ಅಶೋಕ್

riksha benglore

ಆಟೋ ಬಾಡಿಗೆ ದರ ಏರಿಕೆ..!

ಗುಂಡಿನ ದಾಳಿ ನಡೆಸಿದ ಹೈಸ್ಕೂಲ್ ವಿದ್ಯಾರ್ಥಿ; ಮೂವರು ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ

ಗುಂಡಿನ ದಾಳಿ ನಡೆಸಿದ ಹೈಸ್ಕೂಲ್ ವಿದ್ಯಾರ್ಥಿ; ಮೂವರು ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.