ಚಂದ್ರನ ಕುರಿತು ತಿಳಿಯಲು ಶಿಕ್ಷಕರ ನಿರಾಸಕ್ತಿ

ನೆಹರು ತಾರಾಲಯ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಒಬ್ಬ ಶಿಕ್ಷಕ ಮಾತ್ರ ಹಾಜರು | ಕಾರ್ಯಕ್ರಮ ರದ್ದು

Team Udayavani, Jul 19, 2019, 8:10 AM IST

ಬೆಂಗಳೂರು: ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಮಾಹಿತಿ ನೀಡಿ, ಬೋಧನೆ ಮಾಡಿ ವಿದ್ಯಾರ್ಥಿ ಗಳನ್ನು ವೈಜ್ಞಾನಿಕವಾಗಿ ಸಜ್ಜುಗೊಳಿಸಬೇಕಾದ ಶಿಕ್ಷಕರೇ ವಿಸ್ಮಯ, ಕೌತುಕದ ಬಗೆಗಿನ ಕಾರ್ಯಾ ಗಾರದಲ್ಲಿ ಪಾಲ್ಗೊಳ್ಳಲು ನಿರಾಸಕ್ತಿ ತೋರಿದ್ದಾರೆ.

ನೆಹರು ತಾರಾಲಯದಲ್ಲಿ ಜು.18ರಂದು ಶಿಕ್ಷರಿಗೆ ಚಂದ್ರಯಾನ ಕುರಿತ ವೈಜ್ಞಾನಿಕ ವಿಚಾರ ವಿನಿಮಯ ಕಾರ್ಯಾಗಾರ ಆಯೋಜಿಸಲಾಗಿತ್ತು. ಆದರೆ, ಬಂದದ್ದು ಒಬ್ಬ ಶಿಕ್ಷಕ. ಸರ್ಕಾರಿ ಮತ್ತು ಖಾಸಗಿ ಶಾಲೆ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಆದರೆ, ಇಂತಹ ಬಹುಮುಖ್ಯ ಕಾರ್ಯಾಗಾರದಲ್ಲಿ ಶಿಕ್ಷಕರನ್ನು ತೊಡಗಿಸಲು ಆಸಕ್ತಿ ತೋರಬೇಕಿದ್ದ ಶಿಕ್ಷಣ ಇಲಾ ಖೆಯೂ ಗಮನಹರಿಸಿಲ್ಲ. ಪರಿಣಾಮ, ತಾರಾ ಲಯ, ಕಾರ್ಯಾಗಾರವನ್ನೇ ರದ್ದು ಮಾಡಿದೆ.

ಕಾರ್ಯಗಾರ ಕುರಿತು ಇನ್ನೊಮ್ಮೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಆಹ್ವಾನ ಕಳುಹಿಸಲಾಗುವುದು. ನಿರೀಕ್ಷಿತ ಸಂಖ್ಯೆ ಶಿಕ್ಷಕರು ಬಂದರೆ ಕಾರ್ಯಾಗಾರ ನಡೆಸುತ್ತೇವೆ ಎಂದು ನೆಹರು ತಾರಾಲಯದ ನಿರ್ದೇಶಕ ಪ್ರಮೋದ್‌ ಜಿ. ಗಲಗಲಿ ಮಾಹಿತಿ ನೀಡಿದರು.

ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ಮಕ್ಕಳಿಗೆ ವೈಜ್ಞಾನಿಕ ಹಾಗೂ ಉತ್ಕೃಷ್ಟ ಮಟ್ಟದ ಮಾಹಿತಿ ನೀಡುವ ಉದ್ದೇಶದಿಂದ ತಾರಾಲಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಕಾರ್ಯಕ್ರಮದ ಪಟ್ಟಿಯನ್ನು ವರ್ಷದ ಆರಂಭ ದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತದೆ. ಆದರೆ, ಕಾರ್ಯಗಾರಗಳಲ್ಲಿ ಶಿಕ್ಷಕರು ಭಾಗವಹಿಸ ದಿರುವುದು ಬೇಸರ ತರಿಸಿದೆ ಎಂದು ಪ್ರಮೋದ್‌ ಗಲಗಲಿ ಬೇಸರ ವ್ಯಕ್ತಪಡಿಸಿದರು.

ಚಂದ್ರಗ್ರಹಣ ಕುರಿತು ಭರಪೂರ ಮಾಹಿತಿ: ಬಾಹ್ಯಾಕಾಶದ ವಿಸ್ಮಯಗಳ ಬಗ್ಗೆ ತಿಳಿವಳಿಕೆ ನೀಡಲೆಂದೇ ಕಾರ್ಯನಿರ್ವಹಿಸುತ್ತಿರುವ ನೆಹರು ತಾರಾಲಯದಲ್ಲಿ ಭರಪೂರ ಮಾಹಿತಿ ಲಭ್ಯವಿದೆ. ಎರಡು ದಿನಗಳ ಹಿಂದಷ್ಟೇ ನಡೆದ ಚಂದ್ರಗ್ರಹಣ ವೀಕ್ಷಣೆಗೆ ತಾರಾಲಯ ಮುಕ್ತ ಅವಕಾಶ ಕಲ್ಪಿಸಿತ್ತು. ಆದರೆ, ಮುಂಗಾರು ಮಾರುತಗಳು ಆಗಸವನ್ನು ಮರೆಮಾಚಿದ್ದರಿಂದ ಎಲ್ಲರಿಗೂ ವಿಸ್ಮಯ ವೀಕ್ಷಿಸುವ ಅವಕಾಶ ಸಿಗಲಿಲ್ಲ ಎಂದು ನಿರ್ದೇಶಕರು ವಿವರಿಸಿದರು.

ಆ.30ರಿಂದ ವಾರಾಂತ್ಯದ ತರಗತಿ: ತಾರಾ ಯಲಯದಲ್ಲಿ ಆ.30ರಿಂದ ಸೆ.1ರವರೆಗೆ ಮತ್ತು ನ.29ರಿಂದ ಡಿ.1ರವರೆಗೆ ವಿಜ್ಞಾನ ವಿಸ್ಮಯಗಳು, ಕೌತುಕಗಳನ್ನು ವಿಶ್ಲೇಷಿಸಿ ಮನದಟ್ಟು ಮಾಡುವ ವಾರಾಂತ್ಯ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಪ್ರೌಢಶಾಲಾ ವಿದ್ಯಾರ್ಥಿಗಳು ತರಗತಿಗಳಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ 40 ಮಂದಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ.

ವಿಜ್ಞಾನ ಪಾರ್ಕ್‌ನಲ್ಲಿ ಮಕ್ಕಳ ಜಾತ್ರೆ: ಮಕ್ಕಳಲ್ಲಿ ವೈಜ್ಞಾನಿಕ ಜ್ಞಾನ ಬೆಳೆಸುವ ಉದ್ದೇಶದಿಂದ ತಾರಾಲಯದ ವಿಜ್ಞಾನ ಪಾರ್ಕ್‌ಗೆ ಶಾಲಾ ಮಕ್ಕಳನ್ನು ಕರೆತರಲಾಗುತ್ತದೆ. ಹೀಗಾಗಿ ಈ ಪಾರ್ಕ್‌ ತುಂಬಾ ಮಕ್ಕಳದ್ದೇ ಆಟ. ಪಾರ್ಕ್‌ನ ಒಳ ಭಾಗದಲ್ಲಿ ಹಾಕಿರುವ ಬಾಹ್ಯಾಕಾಶ, ಭೌಗೋಳಿಕ ಚಲನವಲನ, ವಿಸ್ಮಯ, ಕೌತುಕಗಳ ಬಗ್ಗೆ ಭಿತ್ತರಿಸಿರುವ ಮಾಹಿತಿ ಫ‌ಲಕಗಳತ್ತ ಮಕ್ಕಳ ಕಣ್ಣಾಡಿಸುತ್ತಾ ಪಾರ್ಕ್‌ ತುಂಬೆಲ್ಲಾ ಓಡಾಡಿ ಖುಷಿಪಡುವುದು ಇಲ್ಲಿ ಸಾಮಾನ್ಯ.

ತಿಂಗಳಿಗೊಮ್ಮೆ ಚಿತ್ರ ಪ್ರದರ್ಶನ: ತಾರಾಲಯವು ತಿಂಗಳಿಗೊಮ್ಮೆ ವಿಜ್ಞಾನ ಕುರಿತ ಚಲನಚಿತ್ರ ಪ್ರದರ್ಶಿಸುತ್ತದೆ. ಜು.21ರಂದು, 1969ರಲ್ಲಿ ಅಮೆರಿಕದ 11 ಗಗನ ಯಾತ್ರಿಗಳು ಚಂದ್ರನ ಮೇಲೆ ಪಾದಾರ್ಪಣೆ ಮಾಡಿ, ಸುರಕ್ಷಿತವಾಗಿ ಹಿಂದಿರುಗಿನ ಘಟನೆ ಆಧರಿಸಿದ, ‘ಫಾರ್‌ ಆಲ್ ಮ್ಯಾನ್‌ ಕೈಂಡ್‌’ ಚಿತ್ರವನ್ನು ಪ್ರದರ್ಶಿಸುತ್ತಿದೆ. ಜತೆಗೆ ಮಕ್ಕಳ ತರಗತಿ ಪಠ್ಯಕ್ಕೆ ಅಗತ್ಯವಿರುವ ಚಲನಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ.

ದೂರದರ್ಶಕ ತಯಾರಿಕೆ ಕಮ್ಮಟ: ನಭದಲ್ಲಿ ನಡೆಯುವ ವಿಸ್ಮಯಗಳನ್ನು ಕುಳಿತಲ್ಲೇ ಕಣ್ತುಂ ಬಿಕೊಳ್ಳಲು ಬೇಕಾದ ದೂರದರ್ಶಕ ಯಂತ್ರ ತಾರಾಲಯದಲ್ಲಿದೆ. ದೂರದರ್ಶಕ ಯಂತ್ರ ಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ತಾರಾಲಯವು ಸಾರ್ವಜನಿಕರು ಮತ್ತು ವಿದ್ಯಾ ರ್ಥಿಗಳಿಗೆ ಸುಲಭವಾಗಿ ಕಲಿಸುತ್ತದೆ. ಇದಕ್ಕಾಗಿ ಜು.30ರಿಂದ ನಾಲ್ಕು ದಿನ ದೂರದರ್ಶಕ ತಯಾರಿಸುವ ಕಮ್ಮಟ ಆಯೋಜಿಸಿದೆ.

 

● ಪುಷ್ಪಲತಾ ಜೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಭಾರತೀಯ ಪಾರಂಪರಿಕ ಶಿಕ್ಷಣ ಪದ್ಧತಿ ಜತೆಗೆ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆಯಲು ಬೆಂಗಳೂರಿನ ಬಸವೇಶ್ವರ ನಗರದ ಬಿಇಎಂಎಲ್ ಬಡಾವಣೆಯ ಮ್ಯಾಕ್ಸ್‌ಮುಲ್ಲರ್‌...

  • ಬೆಂಗಳೂರು: ಬೆಂಗಳೂರು ಉತ್ತರ ತಾಲೂಕು, ಕಾಚೋಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳಿಂದ ಶಾಲಾ ಶೌಚಾಲಯ ಶುಚಿಗೊಳಿಸಿರುವ ವಿಷಯ ಶನಿವಾರ...

  • ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಭಯೋತ್ಪಾದಕರು ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ...

  • ಕೆಂಗೇರಿ: ನಗರದಲ್ಲಿ ಹೆಚ್ಚುತ್ತಿರುವ ಪಿಒಪಿ ಗಣೇಶಮೂರ್ತಿ ತಯಾರಿಕೆ ಘಟಕಗಳ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ಅವರ...

  • ಬೆಂಗಳೂರು: ನಗರ ಪೊಲೀಸ್‌ ಆಯುಕ್ತರ ಹುದ್ದೆ ವಿಚಾರದಲ್ಲಿ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳ ಕಾನೂನು ಸಂಘರ್ಷ ಅಂತ್ಯಗೊಂಡಿದೆ. ಎಡಿಜಿಪಿ ಭಾಸ್ಕರ್‌ ರಾವ್‌...

ಹೊಸ ಸೇರ್ಪಡೆ