ಬಸವನಗುಡಿಯ ಪಾರ್ಕ್‌ಗಳಲ್ಲಿ ತೇಜಸ್ವಿ ಸೂರ್ಯ ಪ್ರಚಾರ

Team Udayavani, Apr 10, 2019, 3:00 AM IST

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನು ಕಂಡಾಕ್ಷಣ ಪಾರ್ಕ್‌ಗಳಲ್ಲಿ ವಾಕಿಂಗ್‌, ಜಾಗಿಂಗ್‌ ಮಾಡುತ್ತಿದ್ದ ಬೆಂಬಲಿಗರು ಮೋದಿ, ಮೋದಿ ಎಂದು ಜಯಕಾರ ಹಾಕುತ್ತಾ ತೇಜಸ್ವಿ ಸೂರ್ಯರವರ ಬಳಿ ಬಂದು ಬೆಂಬಲ ಸೂಚಿಸಿದರು.

ಕೆಲವರು ಬಿಜೆಪಿ ಕರಪತ್ರಗಳನ್ನು ಪಡೆದು ತಾವು ಹಂಚಲು ಮುಂದಾಗಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದರು. ಬಸವನಗುಡಿ ಶಾಸಕ ರವಿಸುಬ್ರಮಣ್ಯ, ಹನುಮಂತನಗರ ಬಿಬಿಎಂಪಿ ಸದಸ್ಯ ಕೆಂಪೇಗೌಡ, ವಿದ್ಯಾಪೀಠದ ಬಿಬಿಎಂಪಿ ಸದಸ್ಯೆ ಶ್ಯಾಮಲ ಸಾಯಿಕುಮಾರ್‌, ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಉದ್ಯಾನವನಗಳಿಗೆ ಬೇಟಿ ನೀಡಿದ ತೇಜಸ್ವಿ ಸೂರ್ಯ ಮತದಾರರಲ್ಲಿ ಮತಯಾಚನೆ ನಡೆಸಿದರು.

ಆರಂಭದಲ್ಲಿ ದೊಡ್ಡ ಗಣಪತಿ ದೇವಸ್ಥಾನದ ಬಳಿಯ ಬ್ಯೂಗಲ್‌ ರಾಕ್‌ ಪಾರ್ಕ್‌, ನಂತರ ಹರಿಹರ ಗುಡ್ಡ ಪಾರ್ಕ್‌, ಅಲ್ಲಿಂದ ಚೆನ್ನಮ್ಮನ ಕೆರೆ ಪಾರ್ಕ್‌ ಗಳಿಗೆ ತೆರಳಿ ಪ್ರಚಾರ ನಡೆಸಿದರು. ಈ ವೇಳೆ ಪಾರ್ಕ್‌ನಲ್ಲಿದ್ದ ನಾಗರಿಕರನ್ನು ಬೇಟಿಯಾಗಿ ಸ್ವತ್ಛ ಮತ್ತು ಹಸಿರುಮಯ ಬೆಂಗಳೂರಿಗಾಗಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಬೇಕೆಂದು ಕೋರಿದರು. ಉದ್ಯಾನವನಗಳಲ್ಲಿ ಮತಯಾಚಿಸಿದ ನಂತರ ಬಿಜೆಪಿ ಕಾರ್ಯಕರ್ತರು, ಸ್ವಯಂಸೇವಕರಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬಿಜೆಪಿಯ ಸಂಕಲ್ಪ ಪತ್ರ ನೀಡಿ ಜಾಗೃತಿ ಮೂಡಿಸಲು ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಮಕ್ಕಳು ಬರುತ್ತಾರೆಂದು ಮನೆಮಂದಿಯೆಲ್ಲಾ ಆಸೆ ಕಣ್ಣುಗಳಿಂದ ನೋಡುತ್ತಿದ್ದರು. ಆದರೆ, ಗೂಡು ಸೇರಬೇಕಾದ ಅಂತಾರಾಜ್ಯ ಬಾಲಕಿಯರು ತಾತ್ಕಾಲಿಕವಾಗಿ ರಾಜ್ಯದ...

  • ಬೆಂಗಳೂರು: ರಾಜ್ಯದಲ್ಲಿ ಈಗ ಮದ್ಯ ಮಾರಾಟ ಮಾಡುವವರಿಗೆ ಮಾತ್ರ ಮಾಫಿ? ಹೌದು, ಅಗತ್ಯ ದಿನಸಿ ವಸ್ತುಗಳ ಖರೀದಿಗಾಗಿ ಜನ ರಸ್ತೆಗಿಳಿದರೆ, ಅಂತಹವರಿಗೆ ಪೊಲೀಸರು ಲಾಠಿ...

  • ಬೆಂಗಳೂರು: ನಗರದ ಕೆಲವೆಡೆ ಎಟಿಎಂಗಳಲ್ಲಿ ಹಣ ಲಭ್ಯವಾಗದ ಕಾರಣ ಮಂಗಳವಾರ ಜನ ಪರದಾಡುವಂತಾಯಿತು. ತಾಂತ್ರಿಕ ದೋಷ, ನೆಟ್‌ವರ್ಕ್‌ ಸಮಸ್ಯೆ ಜತೆಗೆ ಹಣದ ಅಲಭ್ಯತೆ ಕಾರಣಕ್ಕೆ...

  • ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಜಾರಿಯಿರುವ ನಿರ್ಬಂಧ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಗರ ಪೊಲೀಸ್‌ ಸಿಬ್ಬಂದಿ ಕಾರ್ಯವೈಖರಿಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ....

  • ಕೆಂಗೇರಿ: ಸಾರ್ವಜನಿಕರು ಎಚ್ಚೆತ್ತುಕೊಂಡು ಮನೆಯಲ್ಲಿಯೇ ಇರುವುದರ ಮೂಲಕ ಕೋವಿಡ್ 19 ಸೋಂಕು ಯಾರಿಗೂ ಹರಡದಂತೆ ಸಹಕರಿಸಬೇಕು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌...

ಹೊಸ ಸೇರ್ಪಡೆ