ಟೆಕ್ಕಿ ಅನುಮಾನಾಸ್ಪದ ಆತ್ಮಹತ್ಯೆ

Team Udayavani, Jan 7, 2018, 12:09 PM IST

ಬೆಂಗಳೂರು: ಮಂಗಳೂರು ಮೂಲದ ಟೆಕ್ಕಿಯೊಬ್ಬರು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಜಾಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರು ಮೂಲದ ಜೇಕಬ್‌ ವೆಯೋ(27) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಅಮೆರಿಕಾದಲ್ಲಿರುವ ಸಾಫ್ಟ್ವೇರ್‌ ಕಂಪೆನಿಯಲ್ಲಿ ಟೆಕ್ಕಿ ಆಗಿರುವ ಜೇಕಬ್‌ ವೆಯೋ ಕ್ರಿಸ್‌ಮಸ್‌ ಆಚರಣೆಗಾಗಿ ಡಿ.18ರಂದು ಬೆಂಗಳೂರಿಗೆ ಬಂದಿದ್ದರು.

ಜ.3ರಂದು ಅಮೆರಿಕಾಕ್ಕೆ ತೆರಳಲು ಏರ್‌ ಪೋರ್ಟ್‌ಗೆ ಬಂದಿದ್ದ ಜೇಕಬ್‌ ವೆಯೋ ಮತ್ತೆ ವಿಮಾನವೇರದೆ ವಾಪಸ್‌ ಬಂದು ಚಿಕ್ಕಜಾಲದಲ್ಲಿರುವ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನ ಜೇಕಬ್‌ ವೆಯೋ ಅವಿವಾಹಿತ, ಕ್ರಿಸ್‌ಮಸ್‌ ಆಚರಣೆಗಾಗಿ ಡಿ.18ರಂದು ಬೆಂಗಳೂರಿಗೆ ಬಂದು,
ನಂತರ ಮಂಗಳೂರಿಗೆ ಹೋಗಿದ್ದರು. ಕುಟುಂಬ ಸದಸ್ಯರ ಜತೆ ಸಂಭ್ರಮ ದಿಂದಲೇ ಹಬ್ಬ ಆಚರಣೆ ಮಾಡಿದ
ಜೇಕಬ್‌ ವೆಯೋ ಜ.3ರಂದು ಅಮೆರಿಕಕ್ಕೆ ಹೋಗಲು ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದು, ನಂತರ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಜೇಕಬ್‌ ವೆಯೋ ತಾಯಿಯೇ ಖುದ್ದು ಏರ್‌ಪೋರ್ಟ್‌ ವರೆಗೆ ಬಂದು ಮಗನಿಗೆ ಬೀಳ್ಕೊಡುಗೆ ಕೊಟ್ಟಿದ್ದರು.

ಆದರೆ, ತಾಯಿ ಎದುರೇ ಚೆಕ್‌ಇನ್‌ ಆದ ಜೇಕಬ್‌ ಕೆಲ ಸಮಯದ ನಂತರ ಇದ್ದಕ್ಕಿದ್ದಂತೆ ವಿಮಾನ ನಿಲ್ದಾಣದಿಂದ
ಹೊರಬಂದಿ ದ್ದಾರೆ. ನಂತರ ಏರ್‌ ಪೋರ್ಟ್‌ ಮುಖ್ಯರಸ್ತೆಯ ಲ್ಲಿರುವ ಹೌಸ್‌ಪಿಂಚ್‌ ಲಾಡ್ಜ್ನಲ್ಲಿ ರೂಮ್‌ ಬುಕ್‌ ಮಾಡಿಕೊಂಡು ಅಲ್ಲಿಯೇ ತಂಗಿದ್ದರು. ಜ.4ರಂದು ಬೆಳಗ್ಗೆ ಬಹಳ ಹೊತ್ತಾದರು ಜೇಕಬ್‌ ಕೊಠಡಿಯ ಬಾಗಿಲು ತೆಗೆದಿಲ್ಲ. ಹೋಟೆಲ್‌ ಸಿಬ್ಬಂದಿ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್ ಆಗಿತ್ತು. ಇದರಿಂದ ಅನುಮಾನ ಗೊಂಡ ಸಿಬ್ಬಂದಿ ಕೂಡಲೇ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. 

ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ ನೋಟ್‌ ಪತ್ತೆಯಾ ಗಿಲ್ಲ. ಇದುವರೆಗೂ ಆತ್ಮಹತ್ಯೆಗೆ ನಿಖರ ಕಾರಣ ಕೂಡ ತಿಳಿದು
ಬಂದಿಲ್ಲ. ಆದರೆ, ಅಮೆರಿಕಾದಲ್ಲಿ ಯುವತಿಯೊಬ್ಬಳನ್ನು ಜಾಕೇಬ್‌ ವೆಯೋ ಪ್ರೀತಿಸುತ್ತಿದ್ದ ಎಂಬ ಮಾಹಿತಿ ಯಿದೆ.

ಈ ಕುರಿತು ಕುಟುಂಬ ಸದಸ್ಯರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಇತ್ತ ತಾಯಿ ಕೂಡ ಮಗ ಚೆನ್ನಾಗಿಯೇ ಇದ್ದ, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಗೊತ್ತಿಲ್ಲ ಎಂದಿದ್ದಾರೆ ಎಂದು ಚಿಕ್ಕಜಾಲ ಠಾಣೆ ಪೊಲೀಸರು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ