Udayavni Special

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ ಎಸಗಿದವರ ಬಂಧನ

Team Udayavani, Jul 29, 2018, 12:02 PM IST

arrest2.jpg

ಬೆಂಗಳೂರು: ಅಪ್ರಾಪ್ತೆಯನ್ನು ಅಪಹರಿಸಿ ಮಂಡ್ಯಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳನ್ನು ಹೆಬ್ಟಾಳ ಪೊಲೀಸರು ಬಂಧಿಸಿದ್ದಾರೆ.

ಹೆಬ್ಟಾಳದ ಸಂತೋಷ್‌ (25), ಸುಭಾಶ್‌ (26), ಜೋಸೆಫ್‌ (24) ಬಂಧಿತ ಆರೋಪಿಗಳು. ಜುಲೈ 23ರಂದು ಸಂಜೆ ಕೊಡಿಗೇಹಳ್ಳಿ ಪಾರ್ಕ್‌ನಲ್ಲಿ ಕುಳಿತಿದ್ದ ಸಂತ್ರಸ್ತೆಯನ್ನು ಅಪಹರಿಸಿದ ದುಷ್ಕರ್ಮಿಗಳು, ಮಂಡ್ಯದ ತೋಟದ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ಪೋಷಕರು ಈ ಮೊದಲು ಕೊಡಿಗೇಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇದೇ ವೇಳೆ ಸಂತ್ರಸ್ತೆಗೆ ಆರೋಪಿ ಜೋಸೆಫ್ ಪರಿಚಯವಾಗಿದ್ದ. ಇತ್ತೀಚೆಗೆ ಈಕೆಯ ಪೋಷಕರು ಕೊಡಿಗೇಹಳ್ಳಿಯಿಂದ ಹೆಬ್ಟಾಳಕ್ಕೆ ಮನೆ ಸ್ಥಳಾಂತರಿಸಿದ್ದರು.

ಜು.23ರಂದು ಸಂಜೆ 5 ಗಂಟೆ ಸುಮಾರಿಗೆ ಸ್ನೇಹಿತರನ್ನು ಭೇಟಿಯಾಗಲು ಸಂತ್ರಸ್ತೆ ಕೊಡಿಗೇಹಳ್ಳಿಯ ಪಾರ್ಕ್‌ಗೆ ಹೋಗಿದ್ದಾಗ ಜೋಸೆಫ್ ಸಿಕ್ಕಿದ್ದಾನೆ. ಕೆಲ ಹೊತ್ತಿನ ಬಳಿಕ ಇತರ ಆರೋಪಿಗಳು ಅಲ್ಲಿಗೆ ಬಂದಿದ್ದಾರೆ.

“ಈಗಾಗಲೇ ತಡವಾಗಿದೆ. ಇಂದು ರಾತ್ರಿ ಕೊಡಿಗೇಹಳ್ಳಿಯಲ್ಲೇ ಉಳಿದುಕೋ’ ಎಂದು ಸಂತ್ರಸ್ತೆಗೆ ಜೋಸೆಫ್ ಒತ್ತಾಯಿಸಿದ್ದಾನೆ. ಸಂತ್ರಸ್ತೆ ನಿರಾಕರಿಸಿದಾಗ ಆರೋಪಿಗಳು ಆಕೆಯ ಬಾಯಿಗೆ ಬಟ್ಟೆ ಇರಿಸಿ ಕಾರಿನೊಳಗೆ ಕೂರಿಸಿಕೊಂಡು ಅಪಹರಿಸಿದ್ದಾರೆ.

ಬಳಿಕ ಅದೇ ರಾತ್ರಿ ಆರೋಪಿ ಸಂತೋಷನ ಕಾರಿನಲ್ಲಿ ಕೊಡಿಗೇಹಳ್ಳಿಯಿಂದ ಹೊರಟ ಆರೋಪಿಗಳು, ಮರುದಿನ (ಜು.24) ಬೆಳಗ್ಗೆ 5 ಗಂಟೆ ಸುಮಾರಿಗೆ ಮಂಡ್ಯದ ಸ್ನೇಹಿತನ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಸಂತ್ರಸ್ತೆ ಹಾಗೂ ಈಕೆಯ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ಬಳಿಕ ಅಲ್ಲೇ ಇದ್ದ ಬಾಳೆತೋಟಕ್ಕೆ ಎಳೆದೊಯ್ದು ರಾತ್ರಿಯಿಡಿ ದೌರ್ಜನ್ಯವೆಸಗಿದ್ದಾರೆ. ಜು.25ರಂದು ಬೆಳಗ್ಗೆ ಸಂತ್ರಸ್ತೆಯನ್ನು ಆರೋಪಿಗಳು ಕೋಡಿಗೆಹಳ್ಳಿಯ ಪಾರ್ಕ್‌ ಬಳಿಯೇ ಬಿಟ್ಟು ಹೋಗಿದ್ದಾರೆ. ಪೋಷಕರ ಜತೆ ಠಾಣೆಗೆ ಬಂದ ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಪ್ರಮುಖ ಆರೋಪಿ ಜೋಸೆಫ್‌ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಸಂತೋಷ್‌ ಕ್ಯಾಬ್‌ ಚಾಲಕನಾಗಿದ್ದಾನೆ. ಸುಭಾಷ್‌ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇನ್ನು ಸಂತ್ರಸ್ತೆ ಕಾಣೆಯಾಗಿರುವ ಬಗ್ಗೆ ಜು.24ರಂದು ಬೆಳಗ್ಗೆಯೇ ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದರು. ಸಂತ್ರಸ್ತೆ ಅಪ್ರಾಪ್ತೆ ಆಗಿರುವುದರಿಂದ ಮಕ್ಕಳ ಆಯೋಗ ಹಾಗೂ ಕೋರ್ಟ್‌ ಎದುರು ಹೇಳಿಕೆ ದಾಖಲಿಸಲಾಗುವುದು.
-ಡಾ.ಚೇತನ್‌ ಸಿಂಗ್‌ ರಾಥೋಡ್‌, ಡಿಸಿಪಿ ಉತ್ತರ ವಿಭಾಗ

ಟಾಪ್ ನ್ಯೂಸ್

ವಿಜಯಪುರದಲ್ಲಿ ಆಸ್ಪತ್ರೆಯ ನರ್ಸ್ ಮೂಲಕ ಮಾರಾಟವಾಗಿದ್ದ ಶಿಶು ಹುಬ್ಬಳ್ಳಿಯಲ್ಲಿ ಪತ್ತೆ

ವಿಜಯಪುರದಲ್ಲಿ ಮಾರಾಟವಾಗಿದ್ದ ಶಿಶು ಹುಬ್ಬಳ್ಳಿಯಲ್ಲಿ ಪತ್ತೆ ; ಪ್ರಕರಣ ಸುಖಾಂತ್ಯ

ಈ ಹಿಂದೆ ಒಡೆದ ಎಲ್ಲಾ ದೇವಾಲಯಗಳನ್ನು ಬಿಜೆಪಿ ಪುನರ್ ನಿರ್ಮಾಣ ಮಾಡಲಿದೆ: ಶಾಸಕ ಸೋಮ್

ಈ ಹಿಂದೆ ಒಡೆದ ಎಲ್ಲಾ ದೇವಾಲಯಗಳನ್ನು ಬಿಜೆಪಿ ಪುನರ್ ನಿರ್ಮಾಣ ಮಾಡಲಿದೆ: ಶಾಸಕ ಸೋಮ್

ಅಸಾದುದ್ದೀನ್ ಒವೈಸಿ ಮನೆಗೆ ನುಗ್ಗಿ ದಾಂಧಲೆ, ಧ್ವಂಸ; ಹಿಂದೂ ಸೇನಾದ ಐವರ ಬಂಧನ

ಅಸಾದುದ್ದೀನ್ ಒವೈಸಿ ಮನೆಗೆ ನುಗ್ಗಿ ದಾಂಧಲೆ, ಧ್ವಂಸ; ಹಿಂದೂ ಸೇನಾದ ಐವರ ಬಂಧನ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26,964 ಪ್ರಕರಣ ಪತ್ತೆ : 34,167 ಮಂದಿ ಗುಣಮುಖ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26,964 ಕೋವಿಡ್ ಪ್ರಕರಣ ಪತ್ತೆ : 34,167 ಮಂದಿ ಗುಣಮುಖ

ಪ್ರೀತಿ ನಿರಾಕರಿಸಿ ಯುವತಿ ಫೋಟೋ ಅಶ್ಲೀಲವಾಗಿ ಎಡಿಟ್‌: ಆರೋಪಿ ಸೆರೆ

ಪ್ರೀತಿ ನಿರಾಕರಿಸಿದಳೆಂದು ಯುವತಿ ಫೋಟೋ ಅಶ್ಲೀಲವಾಗಿ ಎಡಿಟ್‌: ಆರೋಪಿ ಸೆರೆ

ghfhjkhhgfq

ದೀಪಿಕಾ ಪಡುಕೋಣೆ vs ಪಿವಿ ಸಿಂಧು : ಬ್ಯಾಡ್ಮಿಂಟನ್ ಆಡಿದ ತಾರೆಯರು

fsfhghgfdsa

ಮಂಗನ ಸೇಡು : 22 ಕಿ.ಮೀ ಬಿಟ್ಟು ಬಂದ್ರು ಲಾರಿಯಲ್ಲಿ ಮತ್ತೆ ಹುಡುಕಿಕೊಂಡು ಬಂದ ಕೋತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೀತಿ ನಿರಾಕರಿಸಿ ಯುವತಿ ಫೋಟೋ ಅಶ್ಲೀಲವಾಗಿ ಎಡಿಟ್‌: ಆರೋಪಿ ಸೆರೆ

ಪ್ರೀತಿ ನಿರಾಕರಿಸಿದಳೆಂದು ಯುವತಿ ಫೋಟೋ ಅಶ್ಲೀಲವಾಗಿ ಎಡಿಟ್‌: ಆರೋಪಿ ಸೆರೆ

hjyguy

ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

fgdfgtr

ಕೋವಿಡ್ : ರಾಜ್ಯದಲ್ಲಿಂದು 818 ಹೊಸ ಪ್ರಕರಣ | 1414 ಸೋಂಕಿತರು ಗುಣಮುಖ

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

protest

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ವಿಳಂಬ ಖಂಡಿಸಿ ಧರಣಿ

MUST WATCH

udayavani youtube

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

udayavani youtube

ವೀಳ್ಯದೆಲೆಯಿಂದ ಸುಂದರ ಹಾರ ತಯಾರಿಸಿ – ಈ ವಿಧಾನ ಅನುಸರಿಸಿ

udayavani youtube

ಬೆಂಗಳೂರಿನ ವಸತಿ ಸಮುಚ್ಚಯದಲ್ಲಿ ಬೆಂಕಿ ಅವಘಡ : ಕಣ್ಣೆದುರೇ ಮಹಿಳೆ ಸಜೀವ ದಹನ

udayavani youtube

ಮೈಮೇಲೆ ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

udayavani youtube

ವಿಧಾನಸಭೆ​ ಕಲಾಪ ನೇರ ಪ್ರಸಾರ : 21-09-2021| Afternoon Session

ಹೊಸ ಸೇರ್ಪಡೆ

ವಿಜಯಪುರದಲ್ಲಿ ಆಸ್ಪತ್ರೆಯ ನರ್ಸ್ ಮೂಲಕ ಮಾರಾಟವಾಗಿದ್ದ ಶಿಶು ಹುಬ್ಬಳ್ಳಿಯಲ್ಲಿ ಪತ್ತೆ

ವಿಜಯಪುರದಲ್ಲಿ ಮಾರಾಟವಾಗಿದ್ದ ಶಿಶು ಹುಬ್ಬಳ್ಳಿಯಲ್ಲಿ ಪತ್ತೆ ; ಪ್ರಕರಣ ಸುಖಾಂತ್ಯ

ಕೆರೆ ಹೆಬ್ಬಾರ್, ಮೋಹನ ಹೆಗಡೆ ಗೆ ನಮ್ಮನೆ ಪ್ರಶಸ್ತಿ : ವಿಭವ್ ಗೆ ನಮ್ಮನೆ ಯುವ ಪುರಸ್ಕಾರ

ಕೆರೆ ಹೆಬ್ಬಾರ್, ಮೋಹನ ಹೆಗಡೆ ಅವರಿಗೆ ನಮ್ಮನೆ ಪ್ರಶಸ್ತಿ : ವಿಭವ್ ಗೆ ನಮ್ಮನೆ ಯುವ ಪುರಸ್ಕಾರ

ಈ ಹಿಂದೆ ಒಡೆದ ಎಲ್ಲಾ ದೇವಾಲಯಗಳನ್ನು ಬಿಜೆಪಿ ಪುನರ್ ನಿರ್ಮಾಣ ಮಾಡಲಿದೆ: ಶಾಸಕ ಸೋಮ್

ಈ ಹಿಂದೆ ಒಡೆದ ಎಲ್ಲಾ ದೇವಾಲಯಗಳನ್ನು ಬಿಜೆಪಿ ಪುನರ್ ನಿರ್ಮಾಣ ಮಾಡಲಿದೆ: ಶಾಸಕ ಸೋಮ್

ಅಸಾದುದ್ದೀನ್ ಒವೈಸಿ ಮನೆಗೆ ನುಗ್ಗಿ ದಾಂಧಲೆ, ಧ್ವಂಸ; ಹಿಂದೂ ಸೇನಾದ ಐವರ ಬಂಧನ

ಅಸಾದುದ್ದೀನ್ ಒವೈಸಿ ಮನೆಗೆ ನುಗ್ಗಿ ದಾಂಧಲೆ, ಧ್ವಂಸ; ಹಿಂದೂ ಸೇನಾದ ಐವರ ಬಂಧನ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26,964 ಪ್ರಕರಣ ಪತ್ತೆ : 34,167 ಮಂದಿ ಗುಣಮುಖ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26,964 ಕೋವಿಡ್ ಪ್ರಕರಣ ಪತ್ತೆ : 34,167 ಮಂದಿ ಗುಣಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.