Udayavni Special

ಸಿಬ್ಬಂದಿ ಮೇಲೆ ಹಲ್ಲೆ: 24 ಲಕ್ಷ ದರೋಡೆ

Team Udayavani, Dec 12, 2018, 12:33 PM IST

sibbandi.jpg

ಬೆಂಗಳೂರು: ನಗರದ ವಿವಿಧೆಡೆ ಇರುವ ವಾಣಿಜ್ಯ ಮಳಿಗೆಗಳಿಂದ ಲಕ್ಷಾಂತರ ರೂ. ಹಣ ಸಂಗ್ರಹಿಸಿ ಕೊಂಡೊಯ್ಯುತ್ತಿದ್ದ ರೈಟರ್‌ ಸೇಫ್ಗಾರ್ಡ್‌ ಸಂಸ್ಥೆಯ ಇಬ್ಬರು ಸಿಬ್ಬಂದಿಯನ್ನು ಅಡ್ಡಗಟ್ಟಿದ ಆರು ಮಂದಿ ದುಷ್ಕರ್ಮಿಗಳು 24ಲಕ್ಷ ರೂ. ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ವಿಲ್ಸನ್‌ಗಾರ್ಡ್‌ನ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಶಿವಾಜಿನಗರ ನಿವಾಸಿ ದೇವೇಂದ್ರ ಮತ್ತು ವಿಲ್ಸನ್‌ಗಾರ್ಡ್‌ನ್‌ ನಿವಾಸಿ ಮಂಜುನಾಥ್‌ ಹಲ್ಲೆಗೊಳಗಾದವರು. ಕಳೆದ ಐದು ವರ್ಷಗಳಿಂದ ರೈಟರ್‌ ಸೇಫ್ಗಾರ್ಡ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ದೇವೇಂದ್ರ ಮತ್ತು ಮಂಜುನಾಥ್‌, ಪ್ರತಿ ನಿತ್ಯ ನಗರದ ವಿವಿಧೆಡೆ ಇರುವ ಔಷಧಿ ಮಳಿಗೆಗಳು, ಬಟ್ಟೆ ಅಂಗಡಿಗಳು ಸೇರಿ ವಿವಿಧ ವಾಣಿಜ್ಯ ಮಳಿಗೆಗಳಿಂದ ಲಕ್ಷಾಂತರ ರೂ. ಹಣ ಸಂಗ್ರಹಿಸಿ ಸಂಸ್ಥೆಗೆ ಜಮೆ ಮಾಡುತ್ತಿದ್ದರು.

ಸೋಮವಾರ ಕೂಡ ರಾಜಾಜಿನಗರ, ಕೆ.ಜಿ.ಹಳ್ಳಿ ಸೇರಿದಂತೆ ವಿವಿಧೆಡೆಯ ವ್ಯಾಪಾರ ಮಳಿಗೆಗಳಿಂದ 24 ಲಕ್ಷ ರೂ. ಹಣ ಸಂಗ್ರಹಿಸಿದ್ದಾರೆ. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಸರ್ವೀಸ್‌ ರಸ್ತೆಯಲ್ಲಿ ಹೋಗುತ್ತಿದ್ದರು. ಇದೇ ವೇಳೆ ಮೂರು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದ ಆರು ಮಂದಿ ದುಷ್ಕರ್ಮಿಗಳು, ದೇವೇಂದ್ರ ಮತ್ತು ಮಂಜುನಾಥ್‌ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ.

ನಂತರ ಹೆಲ್ಮೆಟ್‌ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬ್ಯಾಗ್‌ನಲ್ಲಿದ್ದ 24 ಲಕ್ಷ ರೂ. ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದ್ದು, ಪರಿಚಯಸ್ಥರೇ ಕೃತ್ಯವೆಸಗಿರುವ ಸಾಧ್ಯತೆಯಿದೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ವಿಲ್ಸನ್‌ಗಾರ್ಡ್‌ನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇವಾ ಶುಲ್ಕ: ಪ್ರಸ್ತುತ ದಿನಗಳಲ್ಲಿ ಲಕ್ಷಾಂತರ ರೂ. ವ್ಯಾಪಾರ ನಡೆಸುವ ಅಂಗಡಿ ಮಾಲೀಕರು ಅಭದ್ರತೆ ದೃಷ್ಟಿಯಿಂದ ನೇರವಾಗಿ ತಮ್ಮ ಬ್ಯಾಂಕ್‌ ಖಾತೆಗಳಿಗೆ ಹಣ ಪಾವತಿಸಲು ಹಿಂದೇಟು ಹಾಕುತ್ತಾರೆ. ಅಂತಹ ವ್ಯಾಪಾರಿಗಳು ಪ್ರತಿನಿತ್ಯದ ವಹಿವಾಟಿನ ಹಣವನ್ನು ಈ ಸಂಸ್ಥೆ ಸಿಬ್ಬಂದಿ ಕೊಟ್ಟು, ಸ್ವೀಕೃತಿ ರಸೀದಿ ಪಡೆಯುತ್ತಾರೆ. ಬಳಿಕ ಈ ಸಂಸ್ಥೆ ಮರು ದಿನ ಅಥವಾ ಅದೇ ದಿನ ನಿರ್ದಿಷ್ಟ ವ್ಯಾಪಾರಿ ಖಾತೆಗೆ ಹಣ ಜಮೆ ಮಾಡುತ್ತದೆ. ಇದಕ್ಕೆ ಸಂಸ್ಥೆ ಇಂತಿಷ್ಟು ಸೇವಾ ಶುಲ್ಕ ವಿಧಿಸುತ್ತದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸ್ತೆ ಗುಂಡಿ ಮುಚ್ಚಲು ಆರಕ್ಷಕರು ಬದ್ಧ

ರಸ್ತೆ ಗುಂಡಿ ಮುಚ್ಚಲು ಆರಕ್ಷಕರು ಬದ್ಧ

metro

ದಶಕ ಪೂರೈಸಿದ ನಮ್ಮ ಮೆಟ್ರೋ

ಬ್ಯಾಂಕ್‌ ಆಫ್ ಬರೋಡದಿಂದ ರೈತ ದಿವಸ್‌

ಬ್ಯಾಂಕ್‌ ಆಫ್ ಬರೋಡದಿಂದ ರೈತ ದಿವಸ್‌

Harassment of officers when issuing a license

ಪರವಾನಗಿ ನೀಡುವಾಗ ಅಧಿಕಾರಿಗಳ ಕಿರುಕುಳ ಸಲ್ಲದು

ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ „ ಅನುಮತಿ ವೇಳೆ ಸಮಸ್ಯೆ ನಿವಾರಣೆಗೆ ಒತ್ತು

ಕನ್ನಡ ಚಿತ್ರಗಳ ಪೈರಸಿ ತಡೆಗೆ ಕ್ರಮ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.