ಮಗು ನಾಪತ್ತೆ ಸಿಬಿಐ ತನಿಖೆ ತಾಯಿ ದೂರಿಗೆ ಹೈ ಸ್ಪಂದನೆ


Team Udayavani, Jan 20, 2018, 6:00 AM IST

High-court-Karnataka.jpg

ಬೆಂಗಳೂರು: “ಆರು ದಿನ ನನ್ನ ಮುದ್ದಾದ ಮಗುವಿಗೆ ಎದೆಹಾಲು ಉಣಿಸಿದ್ದೆ, ಆ ನಂತರ ಏನಾಯೊ¤à ಗೊತ್ತಿಲ್ಲ ಮಗು ಸತ್ತೋಯ್ತು ಅಂತ ಆಸ್ಪತ್ರೆ ವೈದ್ಯರು ಹೇಳ್ತಿದಾರೆ. ನನ್ನ ಮನಸ್ಸು ಹೇಳ್ತಿದೆ ಮಗು ಬದುಕಿದೆ, ದಯವಿಟ್ಟು ಹುಡುಕಿಸಿಕೊಡಿ’ ಎಂದು ಮಹಿಳೆಯೊಬ್ಬರು ನ್ಯಾಯಾಲಯ ಮೆಟ್ಟಿಲೇರಿದ್ದ ಪ್ರಕರಣ ಇದೀಗ ಸಿಬಿಐ ಅಂಗಳ ತಲುಪಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್‌ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ನಾಪತ್ತೆ ಪ್ರಕರಣ ಧಾರವಾಡ ಹೈಕೋರ್ಟ್‌ ಪೀಠದಲ್ಲಿ ವಿಚಾರಣೆ ನಡೆದು ನ್ಯಾಯಮೂರ್ತಿ ಎಸ್‌. ಸುಜಾತ ಹಾಗೂ ನ್ಯಾಯಮೂರ್ತಿ ಎಚ್‌.ಬಿ ಪ್ರಭಾಕರ ಶಾಸ್ತ್ರೀ ಅವರಿದ್ದ ವಿಭಾಗೀಯ ಪೀಠ, ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಲಿ ಎಂದು ತೀರ್ಪು ನೀಡಿದೆ.

“ಮಗು ಮೃತಪಟ್ಟಿತ್ತು, ಆ ಮಗುವಿನ ಮೃತದೇಹ ಪಡೆಯಲು ತಾಯಿ ನಿರಾಕರಿಸಿದಳು.ಹೀಗಾಗಿ, ನಾವು ಅದನ್ನು ತ್ಯಾಜ್ಯ ಸಂಸ್ಕರಣ ಘಟಕಕ್ಕೆ ರವಾನಿಸಿದೆವು. ಅಲ್ಲಿ ಸುಟ್ಟು ಹಾಕಿದ್ದಾರೆ’ ಎಂಬುದು ಆಸ್ಪತ್ರೆ ಅಧಿಕಾರಿಗಳ ವಾದ. ಆದರೆ, ನನಗೆ ಮಗುವಿನ ಮುಖವನ್ನೇ ತೋರಿಸಲಿಲ್ಲ, ನನಗೂ ನನ್ನ ಪತಿಗೂ ವೈಮನಸ್ಯ ಇದ್ದು, ವೈದ್ಯರೊಂದಿಗೆ ಶಾಮೀಲಾಗಿ ನನ್ನ ಮಗುವನ್ನು ಕದ್ದಿರಬಹುದು ಎಂಬುದು ತಾಯಿಯ ಅಳಲಾಗಿದೆ.

ಈ ಬಗ್ಗೆ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲಿಲ್ಲ. ಹೀಗಾಗಿ, ಪೊಲೀಸರು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಶಾಮೀಲಾದ ಶಂಕೆಯೂ ವ್ಯಕ್ತವಾಗುತ್ತಿದೆ ಎಂದಿರುವ ನ್ಯಾಯಾಲಯ ಪ್ರಕರಣದ ತನಿಖೆ ಸಿಬಿಐ ನಡೆಸಲಿ ಎಂದು ಹೇಳಿದೆ.

ಆಗಿದ್ದೇನು?: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ರಕ್ಕಸಗಿ ತಾಲೂಕಿನ ಶಂಕರಮ್ಮ ಪೂಜಾರಿ ಹಾಗೂ ವೀರೇಶ್‌ ಎಂಬುವರು ಕಳೆದ ಎಂಟು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿ ದ್ದರು. ಆದರೆ, ಕೆಲ ವರ್ಷಗಳ ಬಳಿಕ ದಾಂಪತ್ಯದಲ್ಲಿ ವೈಮನಸ್ಸು ಮೂಡಿದ್ದು, ವಿರೇಶ್‌ ಪತ್ನಿಯನ್ನು ದೂರವಿಡಲು ಯತ್ನಿಸುತ್ತಿದ್ದ. ಈ ಮಧ್ಯೆ ಗರ್ಭವತಿ ಯಾಗಿದ್ದ ಶಂಕರಮ್ಮ 2016 ನವೆಂಬರ್‌ 9ರಂದು ಹೆರಿಗೆನೋವಿನಿಂದ ಇಳಕಲ್‌ ಪಟ್ಟಣದಲ್ಲಿರುವ ಕಠಾರೆ ನರ್ಸಿಂಗ್‌ ಹೋಮ್‌ ಅಂಡ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ರಾತ್ರಿ 8-30ಕ್ಕೆ ಸುಮಾರಿಗೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ತಾಯಿ ಹಾಗೂ ಮಗು ಜೊತೆಯಲ್ಲಿಯೇ ಆರೋಗ್ಯವಾಗಿದ್ದರು. ಈ ಮಧ್ಯೆ, ಪತಿ ವಿರೇಶ್‌ ಹಾಗೂ ಆತನ ಮನೆಯವರು ಆಸ್ಪತ್ರೆಗೆ ಬಂದು ಪತ್ನಿಯ ಜೊತೆ ಜಗಳವಾಡಿಕೊಂಡು ಹೋಗಿದ್ದರು. ಈ
ಘಟನೆ ಬಳಿಕ ನ.13ರಂದು ಮಗು ಮೃತಪಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ಶಂಕರಮ್ಮನಿಗೆ ತಿಳಿಸಿದ್ದಾರೆ.

ಮಗುವಿನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದ ಶಂಕರಮ್ಮ ಈ ವಿಚಾರ ಒಪ್ಪಿರಲಿಲ್ಲ. ನನ್ನ ಮಗು ನನಗೆ ಬೇಕು ಕೊಡಿ ಎಂದು ಹಠಮಾಡಿದ್ದರೂ ನ. 14ರಂದು ವೈದ್ಯರು ಆಸ್ಪತ್ರೆಯಿಂದ ಬಲವಂತವಾಗಿ ಡಿಸಾರ್ಜ್‌ ಮಾಡಿದ್ದರು.

ಮಗುವನ್ನು ಕೊಡಿಸುವಂತೆ ಮನವಿ ಮಾಡಿ ಪತಿ ಹಾಗೂ ಆಸ್ಪತ್ರೆ ವಿರುದ್ಧ ದೂರು ನೀಡಿದರೂ ಹುನಗುಂದ ಪೊಲೀಸ್‌ ಠಾಣೆಯಲ್ಲಿ ದೂರು ಸ್ವೀಕರಿಸಲಿಲ್ಲ. ಬಾಗಲಕೋಟೆ ಎಸ್ಪಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬೆಳವಣಿಗೆಗಳಿಂದ ನೊಂದ ಶಂಕರಮ್ಮ ಕಡೆಗೆ, ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸುವ ಮೂಲಕ ಮಗುವನ್ನು ಕೊಡಿಸುವಂತೆ ಹೈಕೋರ್ಟ್‌ ಮೊರೆ ಹೋಗಿದ್ದರು.

ಆಸ್ಪತ್ರೆ ವಾದ ಏನಾಗಿತ್ತು? : ಶಂಕರಮ್ಮ ಜನ್ಮ ನೀಡಿದ ಹೆಣ್ಣುಮಗು ಸೋಂಕಿನಿಂದ ನ.13ರಂದು ಸಾಯಂಕಾಲ ಮೃತಪಟ್ಟಿತ್ತು. ಆಕೆಗೆ ಹೇಳಿದರೂ ವಾಪಾಸ್‌ ತೆಗೆದುಕೊಳ್ಳಲಿಲ್ಲ. ಆಕೆಯ ಸಂಬಂಧಿಕರು ಬರದಿದ್ದರಿಂದ ಅನಿವಾರ್ಯವಾಗಿ ತ್ಯಾಜ್ಯಸಂಸ್ಕರಣ ಘಟಕಕ್ಕೆ ನೀಡಲಾಗಿತ್ತು. ನ.14 ರಂದು ಮಗುವನ್ನು ಸುಡಲಾಗಿತ್ತು ಎಂದು ಖಾಸಗಿ ಆಸ್ಪತ್ರೆ ವಾದಿಸಿದ್ದರು.

ಈ ವಾದ ತಳ್ಳಿಹಾಕಿರುವ ನ್ಯಾಯಪೀಠ, ಮಗು ಸತ್ತಿದೆ ಎಂಬುದಕ್ಕೆ ರೆಕಾರ್ಡ್‌ ಇಲ್ಲ. ಮಗುವನ್ನು ಮೃತಪಟ್ಟಿದೆ ಎಂಬುದಕ್ಕೆ ಮೂರನೇ ವ್ಯಕ್ತಿಯ ಸಹಿ ಏಕೆ ತೆಗೆದುಕೊಳ್ಳಲಾಗಿತ್ತು. ತ್ಯಾಜ್ಯ ಸಂಸ್ಕರಣದಲ್ಲಿ ಕೆಲಸ ಮಾಡುವವರು ಪ್ಲಾಸ್ಟಿಕ್‌ ಚೀಲದಲ್ಲಿ ಏನಿತ್ತು ಎಂಬುದನ್ನು ನೋಡಿಲ್ಲ ಎಂಬ ಭಿನ್ನ ಹೇಳಿಕೆಗಳು ಹಲವು ಅನುಮಾನಗಳು ಹುಟ್ಟುಹಾಕಿದೆ ಎಂದು ನ್ಯಾಯಪೀಠ ತಿಳಿಸಿದೆ.

ವೈದ್ಯ ಸಿಬ್ಬಂದಿ ಮೇಲೆ ಶಂಕೆ
ವಿಚಾರಣೆ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ತನಿಖೆ ಹಾಗೂ ಆಸ್ಪತ್ರೆ ವೈದ್ಯ ಸಿಬ್ಬಂದಿ ಮೇಲೆಯೂ ನ್ಯಾಯಪೀಠ ಅನುಮಾನ ವ್ಯಕ್ತಪಡಿಸಿದೆ.ಮಗುವಿನ ತಾಯಿಗೆ ಸೂಕ್ತ ವಾಗಿ ಮನವರಿಕೆ ಮಾಡಿ ಕೊಡದೇ ಮಾನವೀಯವಾಗಿ ತ್ಯಾಜ್ಯ ತುಂಬುವ ರೀತಿಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ಮಗುವಿನ ಮೃತದೇಹ ಕಳುಹಿಸಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸುಡಲಾಗಿದೆ ಎಂಬ ಖಾಸಗಿ ಆಸ್ಪತ್ರೆಯ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಪ್ರಕರಣ ತನಿಖೆ ಅಸಮರ್ಪಕ
ಪ್ರಕರಣದ ಬಗ್ಗೆ ಪೊಲೀಸರು ಸಮರ್ಪಕವಾಗಿ ತನಿಖೆಯನ್ನು ನಡೆಸಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ತನಿಖಾ ವರದಿಯನ್ನು ಗಮನಿಸಿದರೆ ಪೊಲೀಸರು ಸತ್ಯಾಸತ್ಯತೆ ಬಯಲಿ ಗೆಳೆಯಲು ಸಂಪೂರ್ಣ ವಿಫ‌ಲರಾಗಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಭಿನ್ನ ಹೇಳಿಕೆಗಳು ಹಲವು ಅನುಮಾನ ಹುಟ್ಟು ಹಾಕುತ್ತಿದೆ. ಇಡೀ ಪ್ರಕರಣ ಮುಚ್ಚಿಹಾಕುವ ಯತ್ನ ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದಿದೆ. 

– ಮಂಜುನಾಥ್‌ ಲಘುಮೇನಹಳ್ಳಿ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.