ಪತ್ನಿಯನ್ನು ಕೊಂದಿದ್ದವನ ಶವ ಆಂಧ್ರದಲ್ಲಿ ಪತ್ತೆ..!


Team Udayavani, Nov 29, 2021, 11:07 AM IST

ಪತ್ನಿಯನ್ನು ಕೊಂದಿದ್ದವನ ಶವ ಆಂಧ್ರದಲ್ಲಿ ಪತ್ತೆ

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್‌ ಸುರಿದು ಪತಿ ಹತ್ಯೆಗೈದಿರುವ ಘಟನೆ ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮತ್ತೂಂದೆಡೆ ಕೃತ್ಯ ಎಸಗಿದ ಆರೋಪಿ ಪತಿ ಆಂಧ್ರಪ್ರದೇಶದ ಪೆನ್ನಗೊಂಡ ಬಳಿ ಶವವಾಗಿ ಪತ್ತೆ ಯಾಗಿದ್ದಾನೆ. ಆಡುಗೋಡಿಯ ರಾಜೇಂದ್ರನಗರ ನಿವಾಸಿ ಆಯೇಷಾ(45) ಕೊಲೆಯಾದ ಮಹಿಳೆ. ‌

ಈಕೆಯ ಪತಿ ನಾಸೀರ್‌(54)ನ ಮೃತಹೇದ ಆಂಧ್ರಪ್ರದೇಶದ ಪೆನ್ನಗೊಂಡ ಬಳಿ ಪತ್ತೆಯಾಗಿದೆ. ನಾಸೀರ್‌ ನ.19ರಂದು ರಾಜೇಂದ್ರನಗರದ ಮನೆಯಲ್ಲಿ ಪತ್ನಿ ಆಯೇಷಾ ಮೇಲೆ ಪೆಟ್ರೋಲ್‌ ಸುರಿದು ಹತ್ಯೆಗೈದಿದ್ದ ಎಂದು ಪೊಲೀಸರು ಹೇಳಿದರು. ದರ್ಗಾ ಮತ್ತು ಮಸೀದಿಗಳ ಅಭಿವೃದ್ಧಿಗೆ ಚಂದಾ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದ ನಾಸೀರ್‌ 25 ವರ್ಷಗಳ ಹಿಂದೆ ಆಯೇಷಾ ಎಂಬವರನ್ನು ಮದುವೆ ಯಾಗಿದ್ದ.

ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳು ಇದ್ದಾರೆ. ಈ ಇಬ್ಬರಿಗೂ ಮದುವೆ ಯಾಗಿದ್ದು, ಪುತ್ರ ಕುಟುಂಬ ಸಮೇತ ಬೇರೆಡೆ ವಾಸವಾಗಿದ್ದಾನೆ. ಹೀಗಾಗಿ ನಾಸೀರ್‌ ದಂಪತಿ ಪುತ್ರಿಯ ಮಗುವಿನ ಜತೆ ರಾಜೇಂದ್ರನಗರದಲ್ಲಿ ವಾಸವಾಗಿದ್ದರು. ಈ ಮಧ್ಯೆ ಪತ್ನಿ ಆಯೇಷಾಳ ಶೀಲ ಶಂಕಿಸಿ ನಿತ್ಯ ಗಲಾಟೆ ಮಾಡುತ್ತಿದ್ದ ನಾಸೀರ್‌, ಆಕೆಯ ಹತ್ಯೆಗೆ ಸಂಚು ರೂಪಿಸಿದ್ದ.

ಅದಕ್ಕಾಗಿ ನ.18ರಂದು ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಖರೀದಿಸಿ ಮನೆ ಯಲ್ಲಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಮಗು ಮನೆಯಲ್ಲಿದ್ದರೆ ಕೃತ್ಯ ಎಸಗಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿ, ನ.19ರಂದು ಅಳಿಯನಿಗೆ ಕರೆ ಮಾಡಿ ನೀಲಸಂದ್ರದ ಸಂಬಂಧಿಕರ ಮನೆಗೆ ಕಳುಹಿಸಿದ್ದ. ಪತ್ನಿಯ ಸಾವನ್ನು ಸಹಜ ಎಂದು ಬಿಂಬಿಸಲು ಮೊದಲೆ ಸಂಚು ರೂಪಿಸಿದ್ದ. ಅದರಂತೆ ಪೆಟ್ರೋಲ್‌ ಖರೀದಿಸಿ ಮನೆಗೆ ಬಂದಿದ್ದಾನೆ.

ಇದನ್ನೂ ಓದಿ;- 600ರ ಕೋಳಿಗೆ 463ರೂ. ಟಿಕೆಟ್ ತೆತ್ತು ಕರೆತಂದ ಮಾಲಿಕ

ನಂತರ ಮನೆಯಲ್ಲಿ ಒಬ್ಬರೇ ಇದ್ದ ಆಯೇಷಾರ ಬಾಯಿ ಕಟ್ಟಿ, ಆಕೆ ಮೇಲೆ ಪೆಟ್ರೋಲ್‌ ಸುರಿದಿದ್ದಾನೆ. ನಂತರ ಕೋಣೆಯ ಬಾಗಿಲು ಮತ್ತು ಕಿಟಕಿ ಹಾಕಿಕೊಂಡು ಹೊರಗಡೆ ಹೋಗಿದ್ದು, ಕಿಟಕಿಯ ಗಾಜನ್ನು ಒಡೆದು ಹೊರಗಡೆಯಿಂದಲೇ ಬೆಂಕಿ ಹಚ್ಚಿ ಪರಾರಿ ಯಾಗಿದ್ದ. ಪರಿಣಾಮ ಬೆಂಕಿಯ ಸ್ಫೋಟಕ್ಕೆ ಬಾಗಿಲು ಒಡೆದುಹೋಗಿದೆ. ಸ್ಫೋಟದ ಶಬ್ಧಕ್ಕೆ ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಆತ ಪರಾರಿಯಾಗಿದ್ದ.

ಘಟನೆ ಯಲ್ಲಿ ಆತನಿಗೂ ಗಾಯಗಳಾಗಿದ್ದರೂ ಚಿಕಿತ್ಸೆ ಪಡೆ ಯದೇ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ಹೇಳಿ ದರು. ಬೆಂಕಿ ನಂದಿಸಿದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಆಯೇಷಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಸಿಗದೆ ತಡರಾತ್ರಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆಡುಗೋಡಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಆಗಾಗ್ಗೆ ಪುತ್ರ ಮನ್ಸೂರ್‌ಗೆ ಕರೆ ಮಾಡಿ ನೆರೆ ರಾಜ್ಯದಲ್ಲಿರುವುದಾಗಿ ಹೇಳಿ ಫೋನ್‌ ಸ್ವಿಚ್ಚ್ ಆಫ್ ಮಾಡಿಕೊಳ್ಳು ತ್ತಿದ್ದ. ಸ್ಥಳ ಬದಲಾಯಿಸಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

 ಪೆನ್ನಗೊಂಡದಲ್ಲಿ ಸಾವು

ಎರಡು ದಿನಗಳ ಹಿಂದೆ ನಾಸೀರ್‌ ಪುತ್ರನಿಗೆ ಕರೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆಂಧ್ರಪ್ರದೇಶದ ಪೆನ್ನಗೊಂಡದಲ್ಲಿರುವ ಆತನ ಬಂಧನಕ್ಕೆ ತೆರಳಿದ್ದರು. ಆದರೆ, ಆತನ ಸುಳಿವು ಸಿಗದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಆತನ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ, ಸ್ಥಳೀಯರು ಕರೆ ಸ್ವೀಕರಿಸಿ ಮೃತ ಪಟ್ಟಿ ರುವುದನ್ನು ದೃಢಪಡಿಸಿದ್ದಾರೆ.

ಅಲ್ಲದೆ, ಸ್ಥಳೀಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ಕೊಂಡು ಮರಣೋತ್ತರ ಪರೀಕ್ಷೆ ನಡೆಸಿ, ಆಡುಗೋಡಿ ಠಾಣೆ ಪೊಲೀಸರ ಸಮ್ಮುಖದಲ್ಲಿಯೇ ಕಾನೂನು ಪ್ರಕ್ರಿಯೆ ಮುಗಿಸಿ ಅವರ ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

araga

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ಧ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

ಅಮೃತ ನಗರೋತ್ಥಾನ: ವೈಟ್‌ ಟಾಪಿಂಗ್‌ಗೆ ಗರಿಷ್ಠ ಮೊತ್ತ?

ಅಮೃತ ನಗರೋತ್ಥಾನ: ವೈಟ್‌ ಟಾಪಿಂಗ್‌ಗೆ ಗರಿಷ್ಠ ಮೊತ್ತ?

ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ

ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.