ನಿವೇಶನ ಕೊಡಿಸುವುದಾಗಿ ವಂಚಿಸಿದವನ ಸೆರೆ


Team Udayavani, Jun 16, 2018, 11:35 AM IST

arrest3.jpg

ಬೆಂಗಳೂರು: ಬಿಡಿಎ ನಿವೇಶನ ನೀಡುವುದಾಗಿ ಹತ್ತಾರು ಮಂದಿಗೆ ವಂಚಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಅರವಿಂದ್‌ ಕಶ್ಯಪ್‌ (50) ಬಂಧಿತ. ಕ್ಯಾಬ್‌ ಚಾಲಕ ಶಿವರಾಜ್‌ ಎಂಬುವವರಿಗೆ ನಿವೇಶನ ಕೊಡಿಸುವುದಾಗಿ ಹೇಳಿ ಆರೋಪಿ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜ.2ರಂದು ಆರೋಪಿ ಅರವಿಂದ್‌ ಕಾರ್ಪೊರೇಶನ್‌ ವೃತ್ತದಿಂದ ಆರ್‌.ಆರ್‌.ನಗರಕ್ಕೆ ಹೋಗಲು ಓಲಾ ಕ್ಯಾಬ್‌ಬುಕ್‌ ಮಾಡಿದ್ದ. ಈ ವೇಳೆ ಕ್ಯಾಬ್‌ನಲ್ಲಿ ಆರೋಪಿ ಬೇರೆ ವ್ಯಕ್ತಿಗಳೊಂದಿಗೆ ನಿವೇಶನಗಳ ಬಗ್ಗೆ ಮಾತನಾಡುತ್ತಿದ್ದ. ಇದನ್ನು ಕೇಳಿಸಿಕೊಂಡ ಶಿವರಾಜ್‌, ತನಗೂ ಒಂದು ಸೈಟ್‌ ಕೊಡಿಸುವಂತೆ ಕೇಳಿಕೊಂಡಿದ್ದ. ಈ ವೇಳೆ ಪರಿಚಯವಾದ ಆರೋಪಿ ಹೊಸಕೆರೆಹಳ್ಳಿ ಬಳಿ ಬಿಡಿಎ ನಿವೇಶನ ಕೊಡಿಸುತ್ತೇನೆ.

1.68 ಲಕ್ಷ ರೂ. ಕಟ್ಟಬೇಕು. 15 ಲಕ್ಷ ಲೋನ್‌ ಕೊಡಿಸುತ್ತೇನೆ. ಇಎಂಐ ಕಟ್ಟಿಕೊಂಡು ಹೋದರೆ ಸಾಕು ಎಂದು ಶಿವರಾಜ್‌ಗೆ ತಿಳಿಸಿದ್ದ. ಸಾಲ ಕೊಡಿಸಲೆಂದು ಶಿವರಾಜ್‌ರ ಪಾಸ್‌ಪೋರ್ಟ್‌, ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಸೇರಿ ಕೆಲ ದಾಖಲೆಗಳನ್ನು ಪಡೆದುಕೊಂಡು, ಸೈಟ್‌ಗೆ ಡ್ವಾನ್ಸ್‌ ಹಣ ಕೊಡಬೇಕು, ವಕೀಲರಿಗೆ ಹಣ ನೀಡಬೇಕು ಎಂದು ಹೇಳಿದ್ದ.

ಆರೋಪಿಯ ಮಾತಿಗೆ ಮರುಳಾಗಿ ಶಿವರಾಜ್‌ ಹಂತ ಹಂತವಾಗಿ ತನ್ನ ಬ್ಯಾಂಕ್‌ ಖಾತೆಯಿಂದ ಆರೋಪಿ ಬ್ಯಾಂಕ್‌ ಖಾತೆಗೆ 81 ಸಾವಿರ ರೂ. ವರ್ಗಾವಣೆ ಮಾಡಿದ್ದರು. ಬಳಿಕ ನಿವೇಶನ ಕೊಡಿಸದೆ ವಂಚಿಸಿದ್ದ. ಈ ಸಂಬಂಧ ಶಿವರಾಜ್‌ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

ಭದ್ರತಾ ಪಡೆ ಎನ್ ಕೌಂಟರ್ ಗೆ ಜೈಶ್ ಕಮಾಂಡರ್, ಐಇಡಿ ತಜ್ಞ ಸೇರಿ ಇಬ್ಬರು ಉಗ್ರರು ಬಲಿ

ಭದ್ರತಾ ಪಡೆ ಎನ್ ಕೌಂಟರ್ ಗೆ ಜೈಶ್ ಕಮಾಂಡರ್, ಐಇಡಿ ತಜ್ಞ ಸೇರಿ ಇಬ್ಬರು ಉಗ್ರರು ಬಲಿ

farmer

78,303 ರೈತರ ಆತ್ಮಹತ್ಯೆ;ತೋಮರ್ ಸರ್, ವೈಫಲ್ಯ ಮರೆಮಾಡಬೇಡಿ ಎಂದ ಸುರ್ಜೆವಾಲಾ

ಪರಿಷತ್ ಫೈಟ್: ಹುಬ್ಬಳ್ಳಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕರ ನಡುವೆ ಹೊಯ್ ಕೈ!

ಪರಿಷತ್ ಫೈಟ್: ಹುಬ್ಬಳ್ಳಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕರ ನಡುವೆ ಹೊಯ್ ಕೈ!

ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೂ ಇಲ್ಲ: ಕೇಂದ್ರ

ರೈತರ ಸಾವಿನ ಅಂಕಿಅಂಶ ನಮ್ಮ ಬಳಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೂ ಇಲ್ಲ: ಕೇಂದ್ರ

ಐಪಿಎಲ್ ನ ಹರಾಜು ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕಿದೆ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ

ಐಪಿಎಲ್ ನ ಹರಾಜು ಪ್ರಕ್ರಿಯೆ ಸರಿಯಾಗಿಲ್ಲ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಅಸಮಾಧಾನ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

1-sfdsf

ಮಣಿಪಾಲ: ಹಲ್ಲೆಗೊಳಗಾದ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಗಳ ಅನುಮಾನಾಸ್ಪದ ಸಾವು

ಕೋತಿಗಳ ಅನುಮಾನಾಸ್ಪದ ಸಾವು..!

ಸಿದ್ದು ವಿರುದ್ಧ ದೂರು

ಸಿದ್ದು, ಲಾಡ್‌ ವಿರುದ್ಧ ಪೊಲೀಸರಿಗೆ ದೂರು

NEP discussion

ಎನ್‌ಇಪಿ: ಶಿಕ್ಷಣ ಸುಧಾರಣೆಗೆ ಮಹತ್ವ

riksha benglore

ಆಟೋ ಬಾಡಿಗೆ ದರ ಏರಿಕೆ..!

high court

ಸಿಡಿ ತನಿಖಾ ವರದಿ ಅನುಮೋದಿಸಿದ ಎಸ್‌ಐಟಿ

MUST WATCH

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

ಹೊಸ ಸೇರ್ಪಡೆ

ಆನೆಗಳ ಹಿಂಡು

ಆನೇಕಲ್‌ನಲ್ಲಿ ಕಾಡಾನೆ ಹಿಂಡು ದಾಳಿ: ರಾಗಿ ಬೆಳೆ ನಾಶ

ಭದ್ರತಾ ಪಡೆ ಎನ್ ಕೌಂಟರ್ ಗೆ ಜೈಶ್ ಕಮಾಂಡರ್, ಐಇಡಿ ತಜ್ಞ ಸೇರಿ ಇಬ್ಬರು ಉಗ್ರರು ಬಲಿ

ಭದ್ರತಾ ಪಡೆ ಎನ್ ಕೌಂಟರ್ ಗೆ ಜೈಶ್ ಕಮಾಂಡರ್, ಐಇಡಿ ತಜ್ಞ ಸೇರಿ ಇಬ್ಬರು ಉಗ್ರರು ಬಲಿ

farmer

78,303 ರೈತರ ಆತ್ಮಹತ್ಯೆ;ತೋಮರ್ ಸರ್, ವೈಫಲ್ಯ ಮರೆಮಾಡಬೇಡಿ ಎಂದ ಸುರ್ಜೆವಾಲಾ

aids victims in benglore rural

ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 3,771 ಮಂದಿ ಏಡ್ಸ್‌ ಪೀಡಿತರು..

ಪರಿಷತ್ ಫೈಟ್: ಹುಬ್ಬಳ್ಳಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕರ ನಡುವೆ ಹೊಯ್ ಕೈ!

ಪರಿಷತ್ ಫೈಟ್: ಹುಬ್ಬಳ್ಳಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕರ ನಡುವೆ ಹೊಯ್ ಕೈ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.