Udayavni Special

ಕ್ಷುಲ್ಲಕ ಕಾರಣಕ್ಕೆ ತಮ್ಮನ ಕೊಲೆ


Team Udayavani, Sep 19, 2018, 12:43 PM IST

murder.jpg

ಬೆಂಗಳೂರು: ಕುಡಿತದ ಅಮಲಿನಲ್ಲಿ ಬಂದು ಜಗಳವಾಡಿ ಕಾರಿನ ಗಾಜು ಪುಡಿ ಮಾಡಿದ್ದರಿಂದ ಆಕ್ರೋಶಗೊಂಡ ಅಣ್ಣ, ಸಿಮೆಂಟ್‌ ಇಟ್ಟಿಗೆಯನ್ನು ತಲೆಮೇಲೆ ಎತ್ತಿಹಾಕಿ ತಮ್ಮನನ್ನು ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಅಂಜನಾ ನಗರದ ಕೆಇಬಿ ಕಾಲೋನಿಯಲ್ಲಿ ನಡೆದಿದೆ. ಜಗದೀಶ್‌ (30)ಮೃತ ವ್ಯಕ್ತಿ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ತಮ್ಮನನ್ನು ಕೊಂದ ಆರೋಪಿ ಮುನಿರಾಜು (35) ಬಂಧನಕ್ಕೆ ಬಲೆ ಬೀಸಿದ್ದಾರೆ.

ನಿತ್ಯ ರಂಪಾಟ: ತಾವರೆಕೆರೆಯ ಹೊನ್ನಗನಹಟ್ಟಿಯ ನಿವಾಸಿಯಾದ ಜಗದೀಶ್‌ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಪ್ರೀತಿಸಿದ್ದ ಕಸುಮ ಎಂಬಾಕೆಯನ್ನು ವಿವಾಹವಾಗಿದ್ದು, ಇದಕ್ಕೆ ಅಣ್ಣ ಹಾಗೂ ತಾಯಿ ವಿರೋಧ ವ್ಯಕ್ತಪಡಿಸಿದ್ದರು. ಸ್ನೇಹಿತರ ಸಹಕಾರದಿಂದ ವಿವಾಹ ಮಾಡಿಕೊಂಡಿದ್ದ ಜಗದೀಶ್‌ ಪತ್ನಿಯನ್ನು ಮನೆಗೆ ಕರೆತಂದಿದ್ದು  ಒಟ್ಟಿಗೆ ವಾಸ ವಾಡುತ್ತಿದ್ದರು. ಇದೇ ವಿಚಾರಕ್ಕೆ ಅಣ್ಣನ ಜತೆ ಪದೇ ಪದೇ ಜಗಳವಾಗುತ್ತಿತ್ತು. ತಮ್ಮ ಮದುವೆಗೆ ಒಪ್ಪಲಿಲ್ಲ ಎಂಬ ವಿಚಾರವನ್ನೇ ಮುಂದಕ್ಕೆ ತರುತ್ತಿದ್ದ ಜಗದೀಶ್‌, ದಿನ ನಿತ್ಯ ಕುಡಿದು ರಂಪಾಟ ನಡೆಸುತ್ತಿದ್ದ.

ಇದರಿಂದ ಬೇಸತ್ತ ಮುನಿರಾಜು ಕಳೆದ 15ದಿನಗಳ ಹಿಂದೆ ಪತ್ನಿಯ ಜತೆಗೂಡಿ ಅಂಜನಾ ನಗರದ ಕೆಇಬಿ ಕಾಲೋನಿಯಲ್ಲಿರುವ ಅಕ್ಕ ಲಕ್ಷ್ಮಮ್ಮನ ಮನೆಗೆ ಬಂದು ಉಳಿದುಕೊಂಡಿದ್ದರು. ಸೋಮವಾರ ಹೊನ್ನಗನಹಟ್ಟಿಯ ಮನೆಗೆ ತೆರಳಿದ್ದ ಮುನಿರಾಜು ಪತ್ನಿಗೆ ನಿಂದಿಸಿದ್ದಾರೆ ಎಂದು ಆಕ್ರೋಶಗೊಂಡ ಜಗದೀಶ್‌ ಸಂಜೆ 6-30ರ ಸುಮಾರಿಗೆ ಕೆಇಬಿ ಕಾಲೋನಿಯಲ್ಲಿರುವ ಸಹೋದರಿ ಮನೆಯ ಹತ್ತಿರ ಬಂದು ಜಗಳವಾಡಿಕೊಂಡು ವಾಪಾಸಾಗಿದ್ದಾನೆ.

ಸ್ಥಳದಲ್ಲೇ ಸಾವು: ಮತ್ತೆ ರಾತ್ರಿ 11-30ರ ಸುಮಾರಿಗೆ ತನ್ನ ಜತೆ ಕೆಲಸ ಮಾಡುವ ಗಿರೀಶ್‌ ಎಂಬ ಹುಡುಗನನ್ನು ಕರೆದುಕೊಂಡು ಬಂದ ಜಗದೀಶ್‌, ಕಾರು ತೆಗೆದುಕೊಂಡು ಹೋಗುವ ವಿಚಾರಕ್ಕೆ ಮುನಿರಾಜು ಜೊತೆ ಮತ್ತೆ ಜಗಳವಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ನಾಲ್ಕನೇ ಮಹಡಿಯಲ್ಲಿರುವ ಮನೆಯಿಂದ ಕೆಳಗಡೆ ಇಳಿದು ಬಂದ ಜಗದೀಶ್‌ ಅಲ್ಲಿಯೇ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾನೆ.

ಇದನ್ನು ನಾಲ್ಕನೇ ಮಹಡಿಯಿಂದಲೇ ಗಮನಿಸಿದ ಮುನಿರಾಜು, ಕೋಪದಿಂದ ಸಿಮೆಂಟ್‌ ಇಟ್ಟಿಗೆ ಕೆಳಕ್ಕೆ ಎಸೆದಿದ್ದರಿಂದ ಅದು ಜಗದೀಶ್‌ ತಲೆಯ ಮೇಲೆಯೇ ಬಿದ್ದಿದೆ. ತಲೆಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವ ಉಂಟಾಗಿದ್ದರಿಂದ ಜಗದೀಶ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಘಟನೆಯನ್ನು ನೋಡಿದ ಗಿರೀಶ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮುನಿರಾಜು ಬಂಧನಕ್ಕೆ ಕ್ರಮ ವಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಭಾರತದ ಬಾಕ್ಸರ್‌ಗಳಿಗೆ ಕೋವಿಡ್ : ಫೈನಲ್‌ ಸ್ಪರ್ಧೆಯಿಂದ ಹಿಂದಕ್ಕೆ

ಭಾರತದ ಬಾಕ್ಸರ್‌ಗಳಿಗೆ ಕೋವಿಡ್ : ಫೈನಲ್‌ ಸ್ಪರ್ಧೆಯಿಂದ ಹಿಂದಕ್ಕೆ

Umapati

ಪೈರಸಿ ವಿರುದ್ಧ ಗುಡುಗಿದ ‘ರಾಬರ್ಟ್’ ನಿರ್ಮಾಪಕ ಉಮಾಪತಿ

ರೇಷನ್ ಕಾರ್ಡ್ ಇರುವ ಪ್ರತೀ ಗೃಹಿಣಿಗೂ ತಿಂಗಳಿಗೆ 1000 ರೂ : ಸ್ಟಾಲಿನ್

ಬೆಳಗಾವಿ:  ಅಕ್ರಮವಾಗಿ ಸಾಗಿಸುತ್ತಿದ್ದ 4 ಲಕ್ಷ ರೂ. ಮೌಲ್ಯದ ಸ್ಫೋಟಕ ವಶ

ಬೆಳಗಾವಿ:  ಅಕ್ರಮವಾಗಿ ಸಾಗಿಸುತ್ತಿದ್ದ 4 ಲಕ್ಷ ರೂ. ಮೌಲ್ಯದ ಸ್ಫೋಟಕ ವಶ, ನಾಲ್ವರ ಬಂಧನ

ಬೆಳ್ಳೂಟಿ ಗೇಟ್ ಬಳಿ ನೀಲಗಿರಿ ತೋಪಿನಲ್ಲಿ ಬೆಂಕಿ ಅವಘಡ

ಬೆಳ್ಳೂಟಿ ಗೇಟ್ ಬಳಿ ನೀಲಗಿರಿ ತೋಪಿನಲ್ಲಿ ಬೆಂಕಿ ಅವಘಡ : ಬೆಂಕಿ ನಂದಿಸಲು ಹರಸಾಹಸ

Modi

ಮಂಗಳೂರು ವೈದ್ಯ ಪದ್ಮನಾಭ್ ಕಾಮತ್ ಜನಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ…!   

ದಿನೇಶ್‌ ವಿರುದ್ಧ ಸುಮೊಟೋ ದೂರು ದಾಖಲಿಸಿ: ಎಚ್‌.ಡಿ.ಕುಮಾರಸ್ವಾಮಿ ಒತ್ತಾಯ

ದಿನೇಶ್‌ ವಿರುದ್ಧ ಸುಮೊಟೋ ದೂರು ದಾಖಲಿಸಿ: ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ

ಬಿಜೆಪಿ ಕುಟುಂಬ ಸೀಮಿತ ಪಕ್ಷವಲ್ಲ, ಅದು ಸರ್ವವ್ಯಾಪಿ: ಸಚಿವ ಅರವಿಂದ್ ಲಿಂಬಾವಳಿ

ಬಿಜೆಪಿ ಕುಟುಂಬ ಸೀಮಿತ ಪಕ್ಷವಲ್ಲ, ಅದು ಸರ್ವವ್ಯಾಪಿ: ಸಚಿವ ಅರವಿಂದ್ ಲಿಂಬಾವಳಿ

fire incident

ಬೆಂಕಿ ತಗುಲಿ ರಾಗಿ ಬಣವೆ ಭಸ್ಮ: ರೈತನಿಗೆ ನಷ್ಟ

na-laxmi

 ಕಾವ್ಯ ಬರೆದ ಭಟ್ಟರು ಕ್ಯಾಸೆಟ್ಟೂ ಮಾರಿದ್ದ ಕಥೆ!

Karnataka Fine Arts Academy for Giri people

ಗಿರಿ ಜನರೆಡೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ

MUST WATCH

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

ಹೊಸ ಸೇರ್ಪಡೆ

ಭಾರತದ ಬಾಕ್ಸರ್‌ಗಳಿಗೆ ಕೋವಿಡ್ : ಫೈನಲ್‌ ಸ್ಪರ್ಧೆಯಿಂದ ಹಿಂದಕ್ಕೆ

ಭಾರತದ ಬಾಕ್ಸರ್‌ಗಳಿಗೆ ಕೋವಿಡ್ : ಫೈನಲ್‌ ಸ್ಪರ್ಧೆಯಿಂದ ಹಿಂದಕ್ಕೆ

ಟೋಕಿಯೊ ಒಲಿಂಪಿಕ್ಸ್ : ವಿನೇಶ್‌ ಸ್ವರ್ಣ ವಿಜಯ; ಸಿಂಧು ಪರಾಜಯ

Umapati

ಪೈರಸಿ ವಿರುದ್ಧ ಗುಡುಗಿದ ‘ರಾಬರ್ಟ್’ ನಿರ್ಮಾಪಕ ಉಮಾಪತಿ

ರೇಷನ್ ಕಾರ್ಡ್ ಇರುವ ಪ್ರತೀ ಗೃಹಿಣಿಗೂ ತಿಂಗಳಿಗೆ 1000 ರೂ : ಸ್ಟಾಲಿನ್

ಕೇಲ್ದೋಡಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪತ್ತೆ.!

ಕೇಲ್ದೋಡಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪತ್ತೆ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.