ಸಿಎಂ ಸ್ಥಾನ ಸಿಗದಿದ್ದಕ್ಕೆ  ಹತ್ತಾರು ಬಾರಿ ಬೇಸರವಾಗಿತ್ತು !

Team Udayavani, Jun 27, 2021, 7:54 PM IST

The position of the CM

ರಾಜ್ಯ ಕಾಂಗ್ರೆಸ್‌ನಲ್ಲಿ ಕೂಸು ಹುಟ್ಟುವ ಮುನ್ನ ಕುಲಾವಿಎಂಬಂತೆ ಇದ್ದಕ್ಕಿದ್ದಂತೆ ಮುಂದಿನ ಮುಖ್ಯಮಂತ್ರಿ ಯಾರು ಎಂಬಕುರಿತು ಚರ್ಚೆ ಶುರುವಾಗಿದೆ.ಬಣಗಳ ಸ್ವರೂಪವನ್ನೂ ಪಡೆದಿದೆ. ಈ ಕುರಿತು ಏಳುವರ್ಷಗಳ ಸುದೀರ್ಘ‌ ಅವಧಿ ಕೆಪಿಸಿಸಿ ಅಧ್ಯಕ್ಷರಾಗಿದ್ದ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಉದಯವಾಣಿಜತೆ ನೇರಾ-ನೇರಾ ಮಾತುಗಳನ್ನಾಡಿದ್ದು ಹೀಗೆ…

 ನೀವೂ ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದಿದ್ದೀರಿ…

ಹೌದು, ಅದರಲ್ಲಿ ತಪ್ಪೇನಿದೆ. ನಾನೂಮುಖ್ಯಮಂತ್ರಿ ಆಕಾಂಕ್ಷಿಯೇ. ಆದರೆ, ಆವಿಚಾರಹಾದಿ ಬೀದಿಯಲ್ಲಿ ಚರ್ಚಿಸುವುದಲ್ಲ.ಅಂತಹ ಸಮಯವೂ ಈಗ ಬಂದಿಲ್ಲ.ಸಮಯ ಬಂದಾಗ ಪಕ್ಷ ಹೈಕಮಾಂಡ್‌ಶಾಸಕರು ಆ ತೀರ್ಮಾನ ಮಾಡುತ್ತಾರೆ.

ಚುನಾವಣೆಗೆ ಇನ್ನೂ ಎರಡು ವರ್ಷಗಳಿವೆ.ಇಷ್ಟುಬೇಗ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ, ಹಪಾಹಪಿ…. ಏನಿದೆಲ್ಲ?

ಬೇಕಿರಲಿಲ್ಲ, ಈ ಸಮಯದಲ್ಲಿ ಅದರ ಅಗತ್ಯವೂ ಇರಲಿಲ್ಲ. ರಾಜಕೀಯದಲ್ಲಿ ಕೆಲವೊಮ್ಮೆ ಏನೇನೋ ಲೆಕ್ಕಾಚಾರಗಳು ದಿಢೀರ್‌ ತೇಲಿ ಬರುತ್ತವೆ. ‌ ಎಲ್ಲವೂ ಆಗುತ್ತೆಎಂದೇನಿಲ್ಲ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಿಜೆಪಿಯಂತೆ ಗುಂಪುಗಾರಿಕೆ ಶುರುವಾಗುತ್ತಾ? ಇದೆಲ್ಲ ಅದರ ಸೂಚನೆನಾ?

ನೋಡಿ 2013ರಲ್ಲಿ ನಾವು ಸಾಮೂಹಿಕನಾಯಕತ್ವದಲ್ಲಿ ಚುನಾವಣೆ ಎದುರಿಸಿದೆವು.ಪಕ್ಷಅಧಿಕಾರಕ್ಕೆ ಬಂತು, ಸಿದ್ದರಾಮಯ್ಯ ಅವರುಮುಖ್ಯಮಂತ್ರಿಯಾದರು. ಐದು ವರ್ಷಉತ್ತಮ ಆಡಳಿತ ಕೊಟ್ಟರು. ನಾವೂ ಎಲ್ಲರೂಸಹಕರಿಸಿದೆವು. ಒಂದು ದಿನ ವಾದರೂ ನಮ್ಮಲ್ಲಿ ನಾಯಕತ್ವ ಬದಲಾವಣೆ ಕೂಗುಕೇಳಿ ಬಂತಾ?ಸ್ಥಿರ ಸರ್ಕಾರ ಕೊಡಲಿಲ್ಲವಾ? ನಮ್ಮಲ್ಲಿಹೈಕಮಾಂಡ್‌ ಗಟ್ಟಿಯಿದೆ, ಯಾವಗುಂಪುಗಾರಿಕೆಯೂ ನಡೆಯಲ್ಲ.

 ಮತ್ತೇಕೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ನಡುವೆ ಶೀತಲ ಸಮರ?

ಆ ರೀತಿ ಏನೂ ಇಲ್ಲ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಗೋ ಸಾಮರ್ಥ್ಯಇರುವವರುಒಂದು ಡಜನ್‌ನಾಯಕರಿದ್ದಾರೆ. ಒಬ್ಬೊಬ್ಬರೂ ಅವರದೇ ಆದಶಕ್ತಿಸಾಮರ್ಥ್ಯ,ಸಂಘಟನಾಪ್ರಭಾವಹೊಂದಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಹೋದರೆಮಾತ್ರ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಾಧ್ಯ.ಪ್ರತಿಯೊಬ್ಬ ನಾಯಕರಿಗೂ ವೈಯಕ್ತಿಕ ಹಾಗೂಸಾಮುದಾಯಿಕವಾಗಿಯೂಒಂದೊಂದು ಶಕ್ತಿಇದೆ.

ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗಪಕ್ಷದ ನಾಯಕರಲ್ಲಿ ಹೊಂದಾಣಿಕೆ ಇಲ್ಲ ಎಂದು ಅನಿಸುತ್ತಿಲ್ಲವೇ?

ನನಗೇನೂ ಹಾಗೆ ಅನಿಸುತ್ತಿಲ್ಲ. ಕೆಲವೊಮ್ಮೆಯಾರಿಗೂ ಬರದ ಅನುಮಾನ ಮಾಧ್ಯಮದವರಿಗೆ ಬಂದುಬಿಡುತ್ತೆ. ಏನು ಮಾಡೋಣ?ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ನಡುವೆಹೊಂದಾಣಿಕೆ ಚೆನ್ನಾಗಿದೆ.

ಇಷ್ಟುದಿನ ಸುಮ್ಮನಿದ್ದ ನೀವು, ದಿಢೀರಾಗಿ ಮೊನ್ನೆ ಕೆಪಿಸಿಸಿ ಅಧ್ಯಕ್ಷರೇ ಸುಪ್ರೀಂ ಎಂದು ಹೇಳಿದಿರಿ. ಏನಿದರ ಮರ್ಮ?

ಹೌದು, ಪಕ್ಷದ ವಿಚಾರ ಬಂದರೆ ಅಧ್ಯಕ್ಷರು,ಶಾಸಕಾಂಗ ಪಕ್ಷದ ವಿಚಾರ ಬಂದರೆ ಶಾಸಕಾಂಗಪಕ್ಷದ ನಾಯಕರೇ ಸುಪ್ರೀಂ. ಎಲ್ಲರೂ ಪಕ್ಷದಶಿಸ್ತಿಗೆ ಬದ್ಧರು. ನಾನು ಅÐà ಹೆr ೇಳಿದ್ದು.

 ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಎಂದು ಶಿವಕುಮಾರ್‌ ಪದೇ ಪದೆ ಯಾಕೆ ಹೇಳ್ತಾರೆ? ಯಾರು ಅವರ ಟಾರ್ಗೆಟ್‌?

ಅವರು ಹೇಳುವುದು ಸರಿಯಾಗಿದೆ. ಪಕ್ಷದಅಧ್ಯಕ್ಷರಾಗಿ ಅವರ ಕರ್ತವ್ಯ ಅವರು ಮಾಡುತ್ತಾರೆ. ಪಕ್ಷವೇ ಎಲ್ಲರಿಗಿಂತ ಮುಖ್ಯ ಅಲ್ಲವೇ.

 ಹಿಂದೊಮ್ಮೆ ಅವಕಾಶ ಇದ್ದರೂ ಸಿಎಂ ಹುದ್ದೆಕೈ ತಪ್ಪಿದ ಬಗ್ಗೆ ಬೇಸರ ಇಲ್ಲವೇ?

ಖಂಡಿತಾ ಇದೆ. ಅನೇಕ ಸಂದರ್ಭಗಳಲ್ಲಿಒಂದಲ್ಲ, ಹತ್ತಾರು ಬಾರಿ ಬೇಸರ ಆಗಿದೆ.ಯಾಕಪ್ಪಾ ಹೀಗಾಗುತ್ತದೆ ಎಂದು ಅನಿಸಿದೆ.ಯಾವ ಮಾನದಂಡ, ಏನು ಕೊರತೆ ಎಂದುಯೋಚಿಸಿದ್ದೂ ಇದೆ. ಅಂತಿಮವಾಗಿ ಪಕ್ಷದತೀರ್ಮಾನ, ಆಯಾ ಸಮಯ ಸಂದರ್ಭದಅನಿವಾರ್ಯತೆಗೆ ತಲೆಬಾಗಬೇಕಾಗುತ್ತದೆ.ಇದೆಲ್ಲ ಒಂದು ರೀತಿ ಗೇಮ್‌. ಪಾಲಿಟಿಕ್ಸ್‌ನಲ್ಲಿಹೀಗೇ ಆಗುತ್ತೆ ಎಂದು ಹೇಳಲಾಗದು. ಇಲ್ಲಿಪಾಯಿಂಟ್ಸ್‌, ಸ್ಕೋರ್‌ ಮುಖ್ಯ. ಸೋತೋರು,ಗೆಧ್ದೋರು. ರಾಜಕೀಯ ಪರಿಸ್ಥಿತಿ ಹೀಗೆಏನೇನೋ ಲೆಕ್ಕಾಚಾರ ಆಗುತ್ತೆ.

 ಸಿದ್ದು ಸಿಎಂ ಎಂಬ  ಶಾಸಕರ ಅಭಿಪ್ರಾಯ ಪಕ್ಷದೊಳಗಿನ ಧ್ವನಿಯೇ ಅಲ್ಲವೇ?

ಇಲ್ಲ, ಶಾಸಕರು ವೈಯಕ್ತಿಕವಾಗಿಅಭಿಪ್ರಾಯ ಪ್ರೀತಿಯಿಂದ ಅಭಿಮಾನದಿಂದಹೇಳಬಹುದು. ಆದರೆ, ಅದೇ ಪಕ್ಷದ ಧ್ವನಿಎಂದಾಗುವುದಿಲ್ಲ. ಈವಿಚಾರದಲ್ಲಿಯಾರಿಗೂವೈಯಕ್ತಿಕ ಪ್ರತಿಷ್ಠೆ ಇರಬಾರದು.

ಮುಂದಿನ ಮುಖ್ಯಮಂತ್ರಿ ಕುರಿತ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್‌ ಆಗುತ್ತದೆಎಂದು ನಿಮ್ಮ ಪಕ್ಷದ ಹಿರಿಯರಿಗೆ ತಿಳಿದಿಲ್ವಾ?

ಹೌದು, ತಳಮಟ್ಟದ ಕಾರ್ಯಕರ್ತ‌ ರುಹಾಗೂ ಮುಖಂಡರಲ್ಲಿ ಗೂಂೆ ದಲಉಂಟಾಗುತ್ತ ‌ ದೆ. ನಮ್ಮ ನಮ್ಮ ಫಾಲೋವರ್ಇರುತ್ತಾರೆ. ನಮ್ಮ ಜತೆಯಲ್ಲಿಗುರುತಿಸಿಕೊಳ್ಳೋರು ಇರುತ್ತಾರೆ. ಅವರೆಲ್ಲಾಬೇರೆ ಬೇರೆ ತರಾ ಆಗುತ್ತಾರೆ. ಅದಕೇ ® R ಾವುಸಾಮೂಹಿಕ ನಾಯಕತ್ವದಲ್ಲಿ ಹೋಗೋಣಎಂದು ಹೇಳುತ್ತಿರುವುದು. ಸಿದ್ದರಾಮಯ್ಯ ಅವರೇಯಾರೂ ಮಾತನಾಡಬಾರದುಎಂದು ಹೇಳಿದ್ದಾರಲ್ಲಾ ಅಲ್ಲಿಗೆ ವಿಷಯ ಮುಕ್ತಾಯ ಅಷ್ಟೇ.

ಸಿದ್ದರಾಮಯ್ಯ ಅವರು ಹೇಳಿದ್ದು ತಡವಾಗಲಿಲ್ಲವಾ?

ವಿವಾದಭುಗಿಲೆದ್ದಮೇಲೆಹೇಳಿದರು ಅವರು.ತಡ ಅಂತೇನೂ ಇಲ್ಲ. ಸಿದ್ದರಾಮಯ್ಯನವರು ಬಹಳ ಸೂಕ್ತವಾಗಿ ಕರೆಕ್ಟ್ ಆಗಿಹೇಳಿದ್ದಾರೆ. ಇ®à¾ೆ ಲೆ ಮಾತನಾಡಿದರೆ ಪಕ್ಷದಶಿಸ್ತು ಸಮಿತಿ ನೋಡಿಕೊಳ್ಳುತ್ತದೆ.

  ಪಕ್ಷದ ಹಿರಿಯ ನಾಯಕರಾಗಿ,ಕೆಪಿಸಿಸಿ ಮಾಜಿ ಅಧ್ಯಕ್ಷರಾಗಿ ನೀವು ಶಾಸಕರಿಗೆ ಕಿವಿಮಾತು ಹೇಳಬಹುದಲ್ಲವೇ ?

ನನ್ನ ಸಲಹೆ ಏನೆಂದರೆ ಈ ಬಗ್ಗೆಸಾರ್ವಜನಿಕವಾಗಿ ಚಚì Ê ೆ ‌Þಡದೆ ಪಕ್ಷಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹೆಚ್ಚುಚರ್ಚೆಯಾಗಬೇಕು. ಎಲ್ಲ ಕಾರ್ಯತಂತ್ರಮೋಡೋಣ,ತಪ್ಪುಒಪ್ಪುಸರಿಪಡಿಸಿಕೊಳ್ಳೋಣ.ಸಾಮೂಹಿಕ ನಾಯಕತ್ವ¨ಲ್ಲಿ ‌ ಹೋಗೋಣನಮ್ಮ ನಮ್ಮಲ್ಲಿ ವ್ಯತ್ಯಾಸ ಇದ್ದರೆಸರಿಪಡಿಸಿಕೊಳ್ಳೋಣ.

ಎಸ್‌.ಲಕ್ಷ್ಮೀನಾರಾಯಣ

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.