Udayavni Special

ಒಡೆಯರ್‌ ಪ್ರತಿಮೆಗೆ ಇಲ್ಲ ಅನಾವರಣ ಭಾಗ್ಯ


Team Udayavani, Jul 24, 2018, 11:54 AM IST

wodeyar.jpg

ಬೆಂಗಳೂರು: ನಗರದ ರೇಸ್‌ಕೋರ್ಸ್‌ ವೃತ್ತದಲ್ಲಿ ಗಣ್ಯವ್ಯಕ್ತಿಯೊಬ್ಬರ ಪ್ರತಿಮೆ ನಿರ್ಮಾಣ ಮಾಡಿ ಒಂದೂವರೆ ವರ್ಷ ಕಳೆದಿದ್ದರೂ, ಅನಾವರಣ ಭಾಗ್ಯ ದೊರಕಿಲ್ಲ. ಪ್ರತಿಮೆಗೆ ನೀಲಿ ಬಣ್ಣದ ಪ್ಲಾಸ್ಟಿಕ್‌ ಹೊದಿಕೆ ಹಾಕಲಾಗಿದ್ದು, ಪ್ರತಿಮೆ ಯಾರದು ಎಂದು ಜನರು ಕುತೂಹಲದಿಂದ ನೋಡುವಂತಾಗಿದೆ. 

ಮಹಾನ್‌ ವ್ಯಕ್ತಿಗಳ ಸಾಧನೆ, ತತ್ವ ಗುಣಗಳನ್ನು ಗೌರವಿಸಿ ಜನರಿಗೆ ತಿಳಿಸುವ ಉದ್ದೇಶದಿಂದ ಅವರ ಪ್ರತಿಮೆ ಅಥವಾ ಪುತ್ಥಳಿಗಳನ್ನು ರಸ್ತೆ ಬದಿ, ಮುಖ್ಯ ವೃತ್ತಗಳಲ್ಲಿ ನಿರ್ಮಾಣ ಮಾಡುವುದು ಸಾಮಾನ್ಯ. ಅದರಂತೆಯೇ ರೇಸ್‌ಕೋರ್ಸ್‌ ವೃತ್ತದಲ್ಲಿ ಚಾಲುಕ್ಯ ಸರ್ಕಲ್‌ ಕಡೆಗೆ ಹೋಗುವ ರಸ್ತೆ ದಿಕ್ಕಿಗೆ ಪ್ರತಿಮೆಯೊಂದನ್ನು ನಿರ್ಮಿಸಿದ್ದಾರೆ. ಆದರೆ, ಅದನ್ನು ಅನಾವರಣಗೊಳಿಸುವ ಗೋಜಿಗೆ ಬಿಬಿಎಂಪಿಯಾಗಲಿ ಅಥವಾ ನಿರ್ಮಾಣ ಮಾಡಿದವರಾಗಲಿ ಹೋಗಿಲ್ಲ. 

ಇನ್ನು ಅನಾವರಣಗೊಳ್ಳದ ಈ ಪ್ರತಿಮೆಯನ್ನು ಸದಾ ನೀಲಿ ಬಣ್ಣದ ಪಾಸ್ಟಿಕ್‌ ಕವರ್‌ನಿಂದ ಮುಚ್ಚಿರುವುದರಿಂದ ವೃತ್ತದ ಮೂಲಕ ಹಾದು ಹೋಗುವವರು ಯಾವುದೋ ನಿರ್ಮಾಣ ಹಂತದಲ್ಲಿರುವ ಪ್ರತಿಮೆ ಎಂದು ಕೊಂಡು ಮುಂದೆ ಸಾಗುತ್ತಿದ್ದಾರೆ. ಆದರೆ, ಪ್ರತಿನಿತ್ಯ ಸಂಚರಿಸುವವ ಅದೆಷ್ಟೋ ಜನರಿಗೆ ಕಳೆದ ಒಂದು ವರ್ಷದಿಂದ ಇದು ಯಾರ ಪ್ರತಿಮೆ, ಯಾಕೆ ನಿರ್ಮಾಣ ಮಾಡಿ¨ªಾರೆ ಎಂಬು ಪ್ರಶ್ನೆಗಳು ಕಾಡತೊಡಗಿವೆ. ಇನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ಅನೇಕರಿಗೆ ಯಾರ ಪ್ರತಿಮೆ ಎಂದು ಗೊತ್ತೇ ಇಲ್ಲ. 

ಪರದೆಯ ಹಿಂದಿರುವ ಪ್ರತಿಮೆ ಯಾರದು: ಮೈಸೂರಿನ ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್‌ ಅವರು ರೇಸ್‌ಕೋರ್ಸ್‌ಗೆ ಉಚಿತವಾಗಿ ಜಾಗ ಕೊಟ್ಟಿದ್ದಾರೆ. ಅದರ ಸ್ಮರಣಾರ್ಥ ಕಳೆದ ವರ್ಷಾರಂಭದಲ್ಲಿ ಸರ್ಕಾರೇತರ ಸಂಸ್ಥೆಯೊಂದು ಜಯಚಾಮರಾಜೇಂದ್ರ ಒಡೆಯರ್‌ ಅವರ ಪ್ರತಿಮೆ ನಿರ್ಮಿಸಲು ಪಾಲಿಕೆಯಿಂದ ಒಪ್ಪಿಗೆ ಪಡೆದಿತ್ತು. ಆಗಿನ ಮೇಯರ್‌ ಜಿ.ಪದ್ಮಾವತಿಯವರು ಪ್ರತಿಮೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿ ಅಗತ್ಯ ಸಹಕಾರವನ್ನು ಒದಗಿಸಿದ್ದರು.

ಅದರಂತೆ ಸಂಸ್ಥೆಯವರು ಪ್ರತಿಮೆ ನಿರ್ಮಿಸಿ ವೃತ್ತದಲ್ಲಿ ಇರಿಸಿದ್ದಾರೆ. ಆದರೆ, ಈವರೆಗೆ ಪಾಲಿಕೆಯಾಗಲಿ, ಸಂಸ್ಥೆಯವರಾಗಲಿ ಪ್ರತಿಮೆ ಅನಾವರಣಗೊಳಿಸುವ ಗೋಜಿಗೆ ಹೋಗಿಲ್ಲ. ಪ್ರತಿಷ್ಠಿತ ರಸ್ತೆಯಲ್ಲಿ ಇರಿಸಲಾಗಿರುವ ಪ್ರತಿಮೆ ಸಾರ್ವಜನಿಕರ ಕಣ್ಣಿಗೆ ರಾಚುತ್ತಿದ್ದು, ನಾಡನ್ನು ಆಳಿದ ಒಡೆಯರಿಗೆ ಮಾಡುವ ಅವಮಾನ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. 

ಸರ್ಕಾರೇತರ ಸಂಸ್ಥೆಯೊಂದು ಒಡೆಯರ ಪ್ರತಿಮೆ ನಿರ್ಮಿಸುಲು ಅನುಮತಿ ಕೋರಿದಾಗ ಪಾಲಿಕೆಯಿಂದ ಒಪ್ಪಿಗೆ ನೀಡಲಾಗಿತ್ತು. ಸಂಸ್ಥೆಯವರೇ ಸ್ವಂತ ಖರ್ಚಿನಲ್ಲಿ ಪ್ರತಿಮೆ ನಿರ್ಮಿಸಿದ್ದು, ತಾವು ನಿರ್ಮಾಣ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಿದ್ದೇವೆ. ಆದರೆ, ಪ್ರತಿಮೆ ನಿರ್ಮಾಣಗೊಂಡ ಬಳಿಕ ಅನಾವರಣಗೊಳಿಸಲು ಯಾರು ಮುಂದಾಗದಿರುವುದು ಸರಿಯಲ್ಲ. 
-ಪದ್ಮಾವತಿ. ಮಾಜಿ ಮೇಯರ್‌

ಪ್ರತಿಮೆ ನಿರ್ಮಾಣವಾಗಿ ವರ್ಷವಾಗಿದ್ದರೂ, ಯಾರು ಅನಾವರಣಗೊಳಿಸಲು ಮುಂದಾಗಿಲ್ಲ. ಸದಾ ಪ್ಲಾಸ್ಟಿಕ್‌ ಚೀಲದಿಂದ ಮುಚ್ಚಿರುವುದರಿಂದ ದೃಷ್ಟಿಗೊಂಬೆಯಂತೆ ಭಾಸವಾಗುತ್ತದೆ. ಮಹತ್ಮರ ಪ್ರತಿಮೆ ನಿರ್ಮಿಸಿ ಅನಾವರಣಗೊಳಿಸದಿರುವುದು ಅವರಿಗೆ ಮಾಡುವ ಅವಮಾನವೇ ಸರಿ. 
-ಮಂಜಪ್ಪ, ಸಾರ್ವಜನಿಕರು 

ಪ್ರತಿಮೆ ನಿರ್ಮಾಣಕ್ಕೆ ಪಾಲಿಕೆಯಿಂದ ಅನುಮತಿ ಪಡೆದಂತಹ ಸಂಸ್ಥೆಯವನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಮುಂದಿನ ಹದಿನೈದು ದಿನಗಳಲ್ಲಿ ಸಂಸ್ಥೆಯವರು ಉದ್ಘಾಟಿಸದಿದ್ದರೆ, ಪಾಲಿಕೆಯಿಂದ ದಿನಾಂಕ ನಿಗದಿಗೊಳಿಸಿ ಪ್ರತಿಮೆ ಅನಾವರಣಗೊಳಿಸಲಾಗುವುದು. 
-ಆರ್‌.ಸಂಪತ್‌ರಾಜ್‌, ಮೇಯರ್‌ 

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

gfjfytfyjt

ಬೆಳಗಾವಿ:  ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾವು

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

gfgrr

ತಾಂತ್ರಿಕ ದೋಷ : ರನ್‍ವೇನಲ್ಲೆ ನಿಂತ ಏರ್‌ ಇಂಡಿಯಾ ವಿಮಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gfgrr

ತಾಂತ್ರಿಕ ದೋಷ : ರನ್‍ವೇನಲ್ಲೆ ನಿಂತ ಏರ್‌ ಇಂಡಿಯಾ ವಿಮಾನ

ftry5r

ಕೋವಿಡ್: ರಾಜ್ಯದಲ್ಲಿಂದು 889 ಹೊಸ ಪ್ರಕರಣ ಪತ್ತೆ|1080 ಜನ ಸೋಂಕಿತರು ಗುಣಮುಖ

5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!

ತಿಗರಪಾಳ್ಯ ಘಟನೆ: 5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

xfser4er4

ಪಾಕ್ ಪಿಎಂ ಈತನಿಗೆ ಗುಡ್ ಫ್ರೆಂಡ್|ಸಿಎಂ ಸ್ಥಾನಕ್ಕೆ ಸಿಧು ಆಯ್ಕೆಗೆ ನನ್ನ ವಿರೋಧ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.