ಹಣ ಕೊಟ್ಟಿದ್ದಕ್ಕೆ ದಾಖಲೆಗಳಿವೆ

Team Udayavani, Jul 22, 2019, 3:06 AM IST

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಮತ್ತೂಮ್ಮೆ ರಾಜಕೀಯ ಮುಖಂಡರು ಮತ್ತು ಸರ್ಕಾರಿ ಅಧಿಕಾರಿಗಳ ಹೆಸರು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇ.ಡಿ ವಿಚಾರಣೆ ಸಂದರ್ಭದಲ್ಲಿ ಆರೋಪಿ, ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲ ರಾಜಕೀಯ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳು ತನ್ನಿಂದ ಹಣ ಪಡೆದುಕೊಂಡಿದ್ದು, ಅದಕ್ಕೆ ಪೂರಕವಾದ ದಾಖಲೆಗಳಿವೆ ಎಂದಿದ್ದಾನೆ. ಇದರಿಂದ ಅಚ್ಚರಿಗೊಂಡ ತನಿಖಾಧಿಕಾರಿಗಳು ಆರೋಪಿತ ವ್ಯಕ್ತಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮನ್ಸೂರ್‌ ಖಾನ್‌ಗೂ ಆ ವ್ಯಕ್ತಿಗಳಿಗೂ ಯಾವ ರೀತಿಯ ವ್ಯವಹಾರ ನಡೆದಿದೆ ಎಂಬ ಬಗ್ಗೆ ತಿಳಿದುಕೊಳ್ಳಬೇಕಿದ್ದು, ನಂತರ ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್‌ ಕೊಟ್ಟು ವಿಚಾರಣೆ ನಡೆಸಲಾಗುತ್ತದೆ. ಅಲ್ಲದೆ, ಮನ್ಸೂರ್‌ಗೆ ದುಬೈನಲ್ಲಿ ಆಶ್ರಯ ನೀಡಿದ್ದ ಆತನ ಆಪ್ತ ಅಬ್ಟಾಸ್‌ ಜತೆ ಕೂಡ ವ್ಯವಹಾರ ಹೊಂದಿದ್ದಾನೆ. ಆತನಿಗೂ ನೋಟಿಸ್‌ ಕೊಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಮತ್ತೆ ಎದೆ ನೋವಿನ ನಾಟಕ: ದುಬೈನಲ್ಲಿ ಕುಳಿತೇ ವಿಡಿಯೋ ಬಿಡುಗಡೆ ಮಾಡಿದ್ದ ಮನ್ಸೂರ್‌, ತನಗೆ ಎದೆ ನೋವು ಉಂಟಾಗಿದ್ದು, ಹೃದಯದಲ್ಲಿ ಮೂರು ರಂಧ್ರಗಳಿವೆ ಎಂದು ಸುಳ್ಳು ಹೇಳಿದ್ದ. ಇದೀಗ ಭಾನುವಾರ ರಾತ್ರಿ ಆರೋಪಿಯನ್ನು ಇಡಿ ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಾಗಲೂ ತನಗೆ ತುಂಬ ಎದೆ ನೋವು ಬರುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಆತಂಕಗೊಂಡ ತನಿಖಾಧಿಕಾರಿಗಳು ಕೂಡಲೇ ಇಸಿಜಿ ಮಾಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ