ಎರಡು ದಿನ ಹಲವೆಡೆ ಭಾರೀ ಮಳೆ ಸಾಧ್ಯತೆ
Team Udayavani, May 24, 2019, 3:00 AM IST
ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಇನ್ನೂ ಎರಡು ದಿನ ಹಲವೆಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನಲ್ಲಿ ಉಂಟಾಗಿರುವ ಮೇಲ್ಮೆ„ ಸುಳಿಗಾಳಿಯಿಂದಾಗಿ ರಾಜ್ಯದಾದ್ಯಂತ ಮಳೆಯಾಗಿದ್ದು, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಹಲವೆಡೆಗಳಲ್ಲಿ ಭಾರೀ ಮಳೆಯಾಗಿದೆ.
ಇದೇ ರೀತಿ ವಾತಾವರಣ ಮುಂದಿನ 48 ಗಂಟೆಗಳು ಇರಲಿದ್ದು, ಕೆಲವೆಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುರುವಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಅದರಂತೆ ತುಮಕೂರು- 61, ಚಿತ್ರದುರ್ಗ- 40, ದಾವಣಗೆರೆ- 76, ಚಾಮರಾಜನಗರ- 44, ಮೈಸೂರು- 82, ಮಂಡ್ಯ- 31, ಬಳ್ಳಾರಿ- 61, ಕೊಪ್ಪಳ- 63, ರಾಯಚೂರು- 22, ಕಲಬುರಗಿ- 22, ಬೀದರ್- 15, ಬೆಳಗಾವಿ- 28, ಬಾಗಲಕೋಟೆ- 56,
ವಿಜಯಪುರ- 20, ಹಾವೇರಿ- 48, ಧಾರವಾಡ- 62, ಹಾಸನ- 42, ಚಿಕ್ಕಮಗಳೂರು- 45, ಕೊಡಗು- 43, ಉತ್ತರ ಕನ್ನಡ- 26, ಯಾದಗಿರಿ- 27, ಬೆಂಗಳೂರು ನಗರ- 22, ಬೆಂಗಳೂರು ಗ್ರಾಮಾಂತರ- 27 ಮಿಲಿ ಮೀಟರ್ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ