ಭಿನ್ನ ಕೋಮಿನ ದಂಪತಿಗೆ ರೂಂ ಇಲ್ಲ!; ಹೊಟೇಲ್ನಲ್ಲಿ ತೀವ್ರ ವಾಗ್ವಾದ
Team Udayavani, Jul 5, 2017, 11:31 AM IST
ಬೆಂಗಳೂರು: ಅನ್ಯ ಕೋಮಿನ ದಂಪತಿಗೆ ಹೊಟೇಲ್ ರೂಂ ನೀಡಲು ನಿರಾಕರಿಸಿದ್ದು ತೀವ್ರ ವಾಗ್ವಾದಕ್ಕೆ ಕಾರಣವಾದ ಘಟನೆ ಜೆ.ಸಿ.ರಸ್ತೆಯ ಸುಧಾಮನಗರದ ಲಾಡ್ಜ್ ವೊಂದರಲ್ಲಿ ನಡೆದಿದೆ.
ಕೇರಳದಿಂದ ಬೆಂಗಳೂರಿಗೆ ಇಂಟರ್ವ್ಯೂಗೆಂದು ಬಂದಿದ್ದ ಶಫೀಲ್ ಸುಬೈದಾ ಹಕಿಂ ಮತ್ತು ದಿವ್ಯಾ ದಂಪತಿ ಹೊಟೇಲ್ಗೆ ಆಗಮಿಸಿ ರೂಂ ಕೇಳಿದ್ದಾರೆ. ಈ ವೇಳೆ ಪೊಲೀಸರ ನಿಯಮದಂತೆ ರೂಂ ಪಡೆಯಲು ಹೊಟೇಲ್ ಸಿಬಂದಿ ಗುರುತಿನ ಚೀಟಿ ಕೇಳಿದ್ದಾರೆ.
ಇಬ್ಬರ ಗುರುತು ಚೀಟಿ ನೋಡಿದ ಬಳಿಕ ಇಬ್ಬರಿಗೂ ಒಂದೇ ರೂಂ ನೀಡಲು ನಿರಾಕರಿಸಿದ್ದಾರೆ. ಯಾಕೆ ಎಂದು ಕಾರಣ ಕೇಳಿದ್ದಕ್ಕೆ ನೀವಿಬ್ಬರು ಭಿನ್ನ ಕೋಮಿನ ದಂಪತಿಗಳು ಹೀಗಾಗಿ ಒಂದೇ ರೂಂ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಹೊಟೇಲ್ ಸಿಬಂದಿಯ ಹೇಳಿಕೆಯಿಂದ ಕೆಂಡಮಂಡಲವಾದ ದಂಪತಿಗಳು ತೀವ್ರ ವಾಗ್ವಾದ ನಡೆಸಿ ಗಲಾಟೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ಬಗ್ಗೆ ಯಾವುದೇ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ